Munawar Faruqui : ದ್ವೇಷ ಗೆದ್ದಿದೆ, ಕಲಾವಿದ ಸೋತಿದ್ದಾನೆ ಎಂದ ಸ್ಟ್ಯಾಂಡ್ ಅಪ್ ಕಾಮಿಡಿಯನ್

ಇಂದು ಸಂಜೆ ಬೆಂಗಳೂರು ಕಾರ್ಯಕ್ರಮವನ್ನು ರದ್ದುಗೊಳಿಸಿದ ನಂತರ ಇನ್‌ಸ್ಟಾಗ್ರಾಮ್​​ನಲ್ಲಿ ಪೋಸ್ಟ್ ಮಾಡಿದ ಫರೂಕಿ , “ನಫ್ರತ್ ಜೀತ್ ಗಯೀ ಆರ್ಟಿಸ್ಟ್ ಹಾರ್ ಗಯಾ (hate has won, artist has lost)(ದ್ವೇಷ ಗೆದ್ದಿದೆ ಕಲಾವಿದ ಸೋತ) I’m done, goodbye. Injustice.” ಎಂದು ಬರೆದುಕೊಂಡು ಅಸಮಾಧಾನ ಹೊರಹಾಕಿದ್ದಾರೆ..

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಸದ್ಯ ಸ್ಟ್ಯಾಂಡ್ ಅಪ್ ಕಾಮಿಡಿಯನ್(Standup comedian) ಶೋಗಳು ಭಾರಿ ಟ್ರೆಂಡ್‌ ಹುಟ್ಟುಹಾಕಿರುವ ಕಾರ್ಯಕ್ರಮಗಳಾಗಿವೆ. ಸಾಮಾಜಿಕ ಜಾಲತಾಣದಲ್ಲಂತೂ ಇದಕ್ಕೆ ದೊಡ್ಡ ಬಳಗವೇ ಇದೆ. ಇದೀಗ ಅಂತಹ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಕಲಾವಿದ ಮುನಾವರ್ ಫರೂಖಿ (Munawar Faruqui’)ಬೆಂಗಳೂರಿನಲ್ಲಿ ಇಂದು ಸಂಜೆ ನಡೆಸಬೇಕಿದ್ದ ಕಾರ್ಯಕ್ರಮವೊಂದಕ್ಕೆ ಪೊಲೀಸರು ಅನುಮತಿ ನಿರಾಕರಿಸಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದರಿಂದ ಬೇಸತ್ತ ಕಲಾವಿದ ಇನ್ಮೇಲೆ ಯಾವುದೇ ಪ್ರದರ್ಶನಗಳನ್ನು ನೀಡುವುದಿಲ್ಲ ಎಂದು ಪೋಸ್ಟ್‌ ಮಾಡಿ ಅಸಮಾಧಾನ ಹೊರಹಾಕಿದ್ದಾರೆ. ಹೌದು ನವದೆಹಲಿ (new delhi)ಮೂಲದ ಕರ್ಟೈನ್ ಕಾಲ್ ಇವೆಂಟ್ಸ್‌ನ ವಿಶೇಷ್ ಧೂರಿಯಾ ಅವರಿಗೆ ಬರೆದಿರುವ ಪತ್ರದಲ್ಲಿ ಅಶೋಕನಗರ ಪೊಲೀಸರು, ತಮ್ಮ ಠಾಣಾ ವ್ಯಾಪ್ತಿಯಲ್ಲಿರುವ ಗುಡ್ ಶೆಫರ್ಡ್ ಸಭಾಂಗಣದಲ್ಲಿ(Good Shepherd Auditorium ) ಇಂದು ಸಂಜೆ ಹಮ್ಮಿಕೊಂಡಿದ್ದ 'ಡೊಂಗ್ರಿ ಟು ನೋವೇರ್'(Dongri to Nowhere’) ಕಾರ್ಯಕ್ರಮ ರದ್ದುಗೊಳಿಸಲು ಸೂಚಿಸಿದ್ದಾರೆ.

  ಇದನ್ನು ಓದಿ:ಹಿಂದೂ ದೇವತೆಗಳ ಅಪಹಾಸ್ಯ ಪ್ರಕರಣ; ಆರೋಪಿ ಮುನಾವರ್​ಗೆ ಜಾಮೀನು ಮಂಜೂರು, ಆದರೂ ಇಲ್ಲ ಬಿಡುಗಡೆ ಭಾಗ್ಯ!

  ಈ ವರ್ಷದ ಆರಂಭದಲ್ಲಿ ಅವರ ಹಾಸ್ಯ ಕಾರ್ಯಕ್ರಮವೊಂದರಲ್ಲಿ “ಹಿಂದೂ ದೇವರು ಮತ್ತು ದೇವತೆಗಳನ್ನು ಅವಮಾನಿಸಿದ” ಆರೋಪದ ಮೇಲೆ ಫರೂಕಿ ಒಂದು ತಿಂಗಳ ಕಾಲ ಜೈಲು ವಾಸ ಅನುಭವಿಸಿದ್ದರು. ಹಾಗಾಗಿ ಇತರೆ ಧರ್ಮ ಮತ್ತು ದೇವರುಗಳ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಮನಾವರ್ ಫರೂಖಿ ವಿವಾದಾಸ್ಪದ ವ್ಯಕ್ತಿಯಾಗಿರುವುದು ತಿಳಿದಿದೆ. ಅನೇಕ ರಾಜ್ಯಗಳು ಅವರ ಹಾಸ್ಯ ಕಾರ್ಯಕ್ರಮಗಳನ್ನು ರದ್ದುಗೊಳಿಸಿವೆ. ಹಾಗಾಗಿ ನಗರದಲ್ಲೂ ಕಾರ್ಯಕ್ರಮ ರದ್ದತಿಗೆ ಸೂಚಿಸಲಾಗಿದೆ.

  ಅಸಮಾಧಾನ ಹೊರಹಾಕಿದ ಕಲಾವಿದ
  ಹಲವಾರು ಸಂಸ್ಥೆಗಳು ಈ ಸ್ಟ್ಯಾಂಡ್‌ಅಪ್ ಕಾಮಿಡಿ ಶೋವನ್ನು ವಿರೋಧ ವ್ಯಕ್ತಪಡಿಸುವ ಹಿನ್ನಲೆಯಲ್ಲಿ ಹಾಗೂ ಅವ್ಯವಸ್ಥೆಯನ್ನು ಉಂಟುಮಾಡಿ, ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರಬಹುದು. ಇದು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ನಂಬಲರ್ಹವಾದ ಮಾಹಿತಿಯಿದೆ ಎಂದು ಪತ್ರದಲ್ಲಿ ಹೇಳಿದೆ. ಹಲಾವಾರು ಸಂಘ ಸಂಸ್ಥೆ, ಕೆಲ ಗುಂಪುಗಳ ಬೆದರಿಕೆಗಳಿಂದಾಗಿ ಕಳೆದ ಎರಡು ತಿಂಗಳಲ್ಲಿ ಕನಿಷ್ಠ 12 ಕಾರ್ಯಕ್ರಮಗಳನ್ನು ರದ್ದುಗೊಳಿಸಿದ ಮುನಾವರ್ ಫರೂಕಿ ಇನ್ನುಮುಂದೆ ಯಾವುದೇ ಪ್ರದರ್ಶನಗಳನ್ನು ಮಾಡುವುದಿಲ್ಲ ಎಂದು ಹೇಳಿದ್ದಾರೆ.

  ಇಂದು ಸಂಜೆ ಬೆಂಗಳೂರು ಕಾರ್ಯಕ್ರಮವನ್ನು ರದ್ದುಗೊಳಿಸಿದ ನಂತರ ಇನ್‌ಸ್ಟಾಗ್ರಾಮ್​​ನಲ್ಲಿ ಪೋಸ್ಟ್ ಮಾಡಿದ ಫರೂಕಿ , “ನಫ್ರತ್ ಜೀತ್ ಗಯೀ ಆರ್ಟಿಸ್ಟ್ ಹಾರ್ ಗಯಾ (hate has won, artist has lost)(ದ್ವೇಷ ಗೆದ್ದಿದೆ ಕಲಾವಿದ ಸೋತ) I’m done, goodbye. Injustice.” ಎಂದು ಬರೆದುಕೊಂಡು ಅಸಮಾಧಾನ ಹೊರಹಾಕಿದ್ದಾರೆ. ಇದು ಅನ್ಯಾಯ ಎಂದು ಹೇಳಿದ್ದಾರೆ.

  ಧಾರ್ಮಿಕ ನಂಬಿಕೆ ಅವಮಾನ ಆರೋಪ
  ಅನೇಕ ರಾಜ್ಯಗಳು ಅವರ ಪ್ರದರ್ಶನಗಳನ್ನು ನಿಷೇಧಿಸಿವೆ. ನಿರ್ದಿಷ್ಟ ಧರ್ಮದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಅವರನ್ನು ನಿಷೇಧಿಸಲಾಗಿದೆ. ಆಯೋಜಕರು ನವೆಂಬರ್ 15 ರಂದು ಪ್ರದರ್ಶನಕ್ಕಾಗಿ ಪೊಲೀಸ್ ರಕ್ಷಣೆ ಕೋರಿ ಪತ್ರವನ್ನು ನೀಡಿದ್ದರು , ಅದನ್ನು ರದ್ದುಗೊಳಿಸಲಾಗಿದೆ ಎನ್ನಲಾಗಿದೆ.

  ಮಧ್ಯಪ್ರದೇಶದ ಇಂದೋರ್‌ನಲ್ಲಿನ ತುಕೊಗಂಜ್ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಐಪಿಸಿ ಸೆಕ್ಷನ್ 295ಎ ಅಡಿ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಬಯಕೆಯ ಉದ್ದೇಶಪೂರ್ವಕ ಹಾಗೂ ಕೇಡಿನ ಉದ್ದೇಶದ ಕೃತ್ಯದ ಪ್ರಕರಣವನ್ನು ದಾಖಲಿಸಲಾಗಿದೆ. ಇನ್ನೂ ಅನೇಕ ರಾಜ್ಯಗಳಲ್ಲಿ ಅವರ ವಿರುದ್ಧ ಇದೇ ರೀತಿಯ ಪ್ರಕರಣಗಳು ದಾಖಲಾಗಿವೆ.

  ಇದನ್ನು ಓದಿ:ಬಳ್ಳಾರಿಯ ಮುನಾವರ್ ಬಿರಿಯಾನಿಗೆ ಮನಸೋಲದವರಿಲ್ಲ; ಫಿದಾ ಆಗಿದ್ಧಾರೆ ಬಾಲಿವುಡ್ ದಿಗ್ಗಜರು

  700 ಟಿಕೆಟ್‌ ಮಾರಾಟ
  ವಿವಾದಾತ್ಮಕ ಹಾಸ್ಯ ಕಲಾವಿದ ಮುನಾವರ್ ಫರೂಕಿ ಅವರು ಇಂದು ಸಂಜೆ ನಡೆಸಿಕೊಡಲಿದ್ದ ಕಾರ್ಯಕ್ರಮಕ್ಕೆ ಸುಮಾರು 700 ಟಿಕೆಟ್‌ ಗಳು ಮಾರಾಟಗೊಂಡಿದ್ದವು ಎನ್ನಲಾಗಿದೆ.  ಕಾರ್ಯಕ್ರಮ ರದ್ದಾದ ಹಿನ್ನಲೆಯನ್ನು ಟಿಕೆಟ್‌ ಕೆಲ ಕಾರ್ಯಕರ್ತರು ಬೇಸರ ವ್ಯಕ್ತಪಡಿಸದ್ದಾರೆ.

  ಏತನ್ಮಧ್ಯೆ, ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಪೊಲೀಸರು ಸಂಘಟಕರ ಮೇಲೆ ಒತ್ತಡ ಹೇರುತ್ತಿರುವುದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ಕಾರ್ಯಕರ್ತ ವಿನಯ್ ಶ್ರೀನಿವಾಸ್ ಹೇಳಿದ್ದಾರೆ.
  Published by:vanithasanjevani vanithasanjevani
  First published: