ಇತ್ತೀಚೆಗೆ ಈ ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಾರಿ ಪೊಲೀಸರ (Traffic Police) ಬಗ್ಗೆ ತುಂಬಾನೇ ಪೋಸ್ಟ್ ಗಳು ಹರಿದಾಡುತ್ತಿವೆ. ಮೊನ್ನೆ ಮೊನ್ನೆ ಕೇರಳದ ಸಂಚಾರಿ ಪೊಲೀಸರು ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಮಾಲೀಕನಿಗೆ ವಾಯುಮಾಲಿನ್ಯ ನಿಯಂತ್ರಣ ಪ್ರಮಾಣಪತ್ರವನ್ನು ತೋರಿಸಿಲ್ಲ ಅಂತ ಕಾರಣ ನೀಡಿ ಚಲನ್ ನೀಡಿರುವ ಪೋಸ್ಟ್ ಆಗಿರಬಹುದು ಅಥವಾ ದ್ವಿಚಕ್ರ ವಾಹನದಲ್ಲಿ ಬೇಕಾಗಿರುವಷ್ಟು ಪೆಟ್ರೋಲ್ ಇಲ್ಲ (Petrol) ಅಂತ ವಿಚಿತ್ರ ಕಾರಣ ಚಲನ್ ನಲ್ಲಿ ನೀಡಿ ವಾಹನ ಚಾಲಕನಿಗೆ ದಂಡ ವಿಧಿಸಲಾಗಿತ್ತು. ಈ ಘಟನೆಗಳು ಸಾಮಾಜಿಕ ಮಾಧ್ಯಮಗಳಲ್ಲಿ (Social media) ನೆಟ್ಟಿಗರಿಗೆ ಒಂದು ರೀತಿಯಲ್ಲಿ ನಗು ತರಿಸಿದರೇ, ಇನ್ನೊಂದು ಕಡೆಯಲ್ಲಿ ಜನರು ‘ಈ ಪೊಲೀಸರು ಹೀಗೇಕೆ ವಿಚಿತ್ರ ಕಾರಣಗಳನ್ನು ನೀಡಿ ದಂಡ ವಿಧಿಸಿ ವಾಹನ ಚಾಲಕರಿಗೆ ಚಲನ್ ನೀಡುತ್ತಿದ್ದಾರೆ’ ಅಂತ ಚಿಂತಿತರಾಗಿದ್ದಾರೆ.
ಈಗ ವೈರಲ್ ಆಗಿರುವ ವಿಷಯವೇನು ನೋಡಿ
ಇದೆಲ್ಲವನ್ನು ಹೊರತು ಪಡಿಸಿದರೆ, ಇನ್ನೊಂದು ಒಳ್ಳೆಯ ಕಾರಣಕ್ಕೂ ಸಹ ಈ ಪೊಲೀಸರು ಸುದ್ದಿಯಲ್ಲಿದ್ದಾರೆ. ಅದೇನೆಂದರೆ ಮುಂಬೈ ಪೊಲೀಸರು ಸಾರ್ವಜನಿಕರಿಗೆ ಈ ಟ್ರಾಫಿಕ್ ನಿಯಮಗಳನ್ನು ಪಾಲಿಸಲು ಹೇಳುವ ಸೂಚನೆಗಳು ಅಥವಾ ವಿಷಯವನ್ನು ಜನರಿಗೆ ಚೆನ್ನಾಗಿ ಮನದಟ್ಟಾಗಲು ಚಲನಚಿತ್ರಗಳ ಹೆಸರು ಮತ್ತು ಡೈಲಾಗ್ ಗಳನ್ನು ಬಳಸಿಕೊಂಡು ಜನರಿಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುತ್ತಿದ್ದಾರೆ.
ಈ ಪೋಸ್ಟ್ ಅನ್ನು ಅಲಿಯಾ ಭಟ್ ಕೂಡ ಶೇರ್ ಮಾಡಿಕೊಂಡಿದ್ದಾರಂತೆ
ಸಂಚಾರ ನಿಯಮಗಳ ಪರಿಪಾಲನೆಯ ವಿಚಾರಗಳನ್ನು ಹೀಗೆ ಚಲನಚಿತ್ರಗಳ ಹೆಸರುಗಳನ್ನು, ಡೈಲಾಗ್ ಗಳನ್ನು ಬಳಸಿಕೊಂಡು ನೀಡುತ್ತಿರುವುದು ಇದೇನು ಮೊದಲನೇ ಸಲ ಅಲ್ಲ ಬಿಡಿ. ಇಂತಹ ವಿಷಯವನ್ನು ಮಂಥನ ಮಾಡುವ ವಿಷಯಕ್ಕೆ ಬಂದಾಗ ಮುಂಬೈ ಪೊಲೀಸರು ಯಾವಾಗಲೂ ಒಂದು ಹೆಜ್ಜೆ ಮುಂದೆ ಇರುವುದನ್ನು ನಾವು ನೋಡಬಹುದು.
ಇದನ್ನೂ ಓದಿ: Kerala: ಎಲೆಕ್ಟ್ರಿಕ್ ಸ್ಕೂಟರ್ ಮಾಲೀಕನಿಗೆ ದಂಡ! ಕಾರಣ ಕೇಳಿದ್ರೆ ನಗೋದು ಪಕ್ಕಾ
ಚಲನಚಿತ್ರಗಳು ಮತ್ತು ಟಿವಿ ವೆಬ್ ಸಿರೀಸ್ ಗಳಿಂದ ಎರವಲು ಪಡೆದ ಟೆಂಪ್ಲೇಟ್ ಗಳೊಂದಿಗೆ ಇಲಾಖೆ ಆಸಕ್ತಿದಾಯಕ ಸಲಹಾ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತದೆ ಮತ್ತು ಅವರ ಇತ್ತೀಚಿನ ಪೋಸ್ಟ್ ಇದಕ್ಕಿಂತ ಭಿನ್ನವಾಗಿಲ್ಲ. ಈ ಪೋಸ್ಟ್ ಎಷ್ಟು ಆಸಕ್ತಿದಾಯಕವಾಗಿದೆಯೆಂದರೆ ಖುದ್ದು ನಟಿ ಆಲಿಯಾ ಭಟ್ ಸಹ ಅದನ್ನು ತಮ್ಮ ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಹ ಹಂಚಿಕೊಂಡಿದ್ದಾರೆ.
ಈ ವೈರಲ್ ಪೋಸ್ಟ್ ನಲ್ಲಿ ಏನಿದೆ
ಮುಂಬೈ ಪೊಲೀಸರು ಟ್ರಾಫಿಕ್ ಸಲಹಾ ಪೋಸ್ಟ್ ಅನ್ನು ಹಂಚಿಕೊಳ್ಳಲು ಈ ಬಾರಿ ‘ಬ್ರಹ್ಮಾಸ್ತ್ರ’ ಚಿತ್ರದ ಸಹಾಯವನ್ನು ಪಡೆದಿದ್ದಾರೆ. ವಾನರ್ ಅಸ್ತ್ರ ಮತ್ತು ನಂದಿ ಅಸ್ತ್ರದ ಸಹಾಯದಿಂದ, ಅವರು ಜೇವಾಕಿಂಗ್ ಅಥವಾ ದುಡುಕಿನ ಚಾಲನೆಯನ್ನು ಮಾಡಬೇಡಿ ಎಂದು ಜನರನ್ನು ವಿನಂತಿಸಿದ್ದಾರೆ ನೋಡಿ.
View this post on Instagram
"'ಜುನೂನ್' ಮತ್ತು 'ರಫ್ತಾರ್' ನಿಮ್ಮ 'ಯೂನಿವರ್ಸ್' ಅನ್ನು ಅಪಾಯಕ್ಕೆ ಸಿಲುಕಿಸಬಹುದು. ಸುರಕ್ಷಿತವಾಗಿ ವಾಹನ ಚಲಾಯಿಸುವುದು ಎಂದೆಂದಿಗೂ ಅತಿದೊಡ್ಡ 'ಅಸ್ತ್ರ' ಆಗಿದೆ" ಎಂದು ಈ ಪೋಸ್ಟ್ ನ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಎಂದರೆ ಇದರರ್ಥ ಅತಿ ಉತ್ಸಾಹದಿಂದ ಮತ್ತು ವೇಗದಿಂದ ವಾಹನ ಚಲಾಯಿಸಿದರೆ ನಿಮಗೂ ತೊಂದರೆ ಮತ್ತು ನಿಮ್ಮ ಇಡೀ ಸಮಾಜಕ್ಕೆ ತೊಂದರೆ, ಹಾಗಾಗಿ ಸುರಕ್ಷಿತವಾಗಿ ವಾಹನ ಚಲಾಯಿಸುವುದು ಸುರಕ್ಷತೆಯ ಅಸ್ತ್ರ ಎಂದು ಬ್ರಹ್ಮಾಸ್ತ್ರ ಚಿತ್ರದ ಹೆಸರಿನ ಕೊನೆಯ ಪದ ‘ಅಸ್ತ್ರ’ ವನ್ನು ಬಳಸಿಕೊಂಡಿದ್ದಾರೆ ಎಂದು ಹೇಳಬಹುದು. ಆಲಿಯಾ ಭಟ್ ಕೂಡ ತಮ್ಮ ಇನ್ ಸ್ಟಾಗ್ರಾಮ್ ಪೇಜಿನಲ್ಲಿ ಈ ಪೋಸ್ಟ್ ಅನ್ನುಹಂಚಿಕೊಂಡು ಎಪಿಕ್ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Anand Mahindra: PUC ಪ್ರಮಾಣಪತ್ರ ತೋರಿಸದ್ದಕ್ಕೆ ಮಾಲೀಕನಿಗೆ ದಂಡ! ಆನಂದ್ ಮಹಿಂದ್ರಾ ಹೇಳಿದ್ದೇನು?
ಈ ಪೋಸ್ಟ್ 40,000 ಕ್ಕೂ ಹೆಚ್ಚು ಲೈಕ್ ಗಳನ್ನು ಮತ್ತು ಅನೇಕ ಕಾಮೆಂಟ್ ಗಳನ್ನು ಗಳಿಸಿದೆ. ಬ್ರಹ್ಮಾಸ್ತ್ರ ಚಿತ್ರದ ನಟಿ ಆಲಿಯಾ ಭಟ್ ಕೂಡ ಈ ಪೋಸ್ಟ್ ಅನ್ನು ಸಂಬಂಧಿತವೆಂದು ಕಂಡುಕೊಂಡರು. ಅವರು ಅದನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ "ಎಪಿಕ್" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಬ್ರಹ್ಮಾಸ್ತ್ರ ಚಿತ್ರದಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್, ತೆಲುಗು ನಟ ನಾಗಾರ್ಜುನ ಮತ್ತು ಮೌನಿ ರಾಯ್ ನಟಿಸಿದ್ದಾರೆ ಮತ್ತು ಸೆಪ್ಟೆಂಬರ್ 9 ರಂದು ಬಿಡುಗಡೆಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ