Viral Photo: ಹಾಲಿವುಡ್​ ನಟಿ ಫೋಟೋ ಬಳಸಿಕೊಂಡು ಮೆಸೇಜ್​ ಕೊಟ್ಟ ಮುಂಬೈ ಪೊಲೀಸ್​! ಏನ್​ ಟ್ಯಾಲೆಂಟ್​ ಅಂತೀರಾ

ಮುಂಬೈ (Mumbai) ನಗರದಿಂದ ಸಾವಿರಾರು ಮೈಲಿ ದೂರದಲ್ಲಿ ನಡೆದಂತಹ ಮೆಟ್ ಗಾಲಾ 2022 (Met Gala 2022) ಭವ್ಯವಾದ ಕಾರ್ಯಕ್ರಮದಲ್ಲಿ ನಡೆದಂತಹ ಹಲವಾರು ವಿಷಯಗಳು ಜನರಲ್ಲಿ ಸಂಚಲನವನ್ನು ಸೃಷ್ಟಿಸಿದವು ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಮುಂಬೈ ಪೊಲೀಸರು ಹಂಚಿಕೊಂಡ ಫೋಟೋ

ಮುಂಬೈ ಪೊಲೀಸರು ಹಂಚಿಕೊಂಡ ಫೋಟೋ

  • Share this:
ಕೆಲವೊಮ್ಮೆ ಎಲ್ಲೋ ದೂರದಲ್ಲಿ ನಡೆದ ಒಂದು ಘಟನೆಯಿಂದ ಯಾರೋ ಪ್ರೇರೇಪಿತರಾಗಿರುತ್ತಾರೆ ಅಥವಾ ಯಾರೋ ಮಾಡಿದ ತಪ್ಪನ್ನು ನೋಡಿ, ಇನ್ನ್ಯಾರೋ ಪಾಠ ಕಲಿತಿರುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇಲ್ಲಿಯೂ ಸಹ ಇಂತಹದೇ ಒಂದು ಘಟನೆ ನಡೆದಿದೆ ನೋಡಿ. ಅದರಲ್ಲೂ ಮುಂಬೈ (Mumbai) ನಗರದಿಂದ ಸಾವಿರಾರು ಮೈಲಿ ದೂರದಲ್ಲಿ ನಡೆದಂತಹ ಮೆಟ್ ಗಾಲಾ 2022 (Met Gala 2022) ಭವ್ಯವಾದ ಕಾರ್ಯಕ್ರಮದಲ್ಲಿ ನಡೆದಂತಹ ಹಲವಾರು ವಿಷಯಗಳು ಜನರಲ್ಲಿ ಸಂಚಲನವನ್ನು ಸೃಷ್ಟಿಸಿದವು ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಲೌರಿ ಕುಂಬೋ ಪ್ರಪೋಸ್​ ಮಾಡಿದ ಬಾಬಿ ಡಿಜಿ!

ಇತ್ತೀಚೆಗೆ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ (Metropolitan Museum of Art) ನ ರೆಡ್ ಕಾರ್ಪೆಟ್‌ನಿಂದ ಅಲಂಕೃತಗೊಂಡ ಆ ಮೆಟ್ಟಿಲುಗಳನ್ನು ಏರುವಾಗ ನ್ಯೂಯಾರ್ಕ್ (Newyork) ನಗರದ ಸಾಂಸ್ಕೃತಿಕ ವ್ಯವಹಾರಗಳ ಆಯುಕ್ತರಾದ ಲೌರಿ ಕುಂಬೋ ಅವರಿಗೆ ತಮ್ಮ ಪ್ರಿಯಕರನಾದ ಬಾಬಿ ಡಿಜಿ ಒಲಿಸಾ ಅವರು ತಮ್ಮ ಪ್ರೀತಿಯನ್ನು ಹೇಳಿಕೊಂಡು ಪ್ರಪೋಸ್ ಮಾಡಲು ತಮ್ಮ ಮೊಣಕಾಲನ್ನು ಮೆಟ್ಟಿಲುಗಳ ಮೇಲೆ ಊರಿ ಕುಳಿತರು. ಈ ಪ್ರಪೋಸಲ್ ಗೆ ಲೌರಿ ಅವರು ತಮ್ಮ ಒಪ್ಪಿಗೆಯನ್ನು ಸಹ ಸೂಚಿಸಿದರು.

ಮೆಟ್ ಗಾಲಾದಿಂದ ಹೊರ ಬಿತ್ತು ಮತ್ತೊಂದು ಸುದ್ದಿ!

ಇದೇ ಸಂದರ್ಭದಲ್ಲಿ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿಯೇ ತಮ್ಮ ನಿಶ್ಚಿತಾರ್ಥವನ್ನು ಸಹ ಮಾಡಿಕೊಂಡ ಈ ಜೋಡಿಯ ಎರಡು ಫೋಟೋಗಳನ್ನು ಖುದ್ದು ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಅದ್ಭುತ ಕಥೆಯೊಂದಿಗೆ ಹಂಚಿ ಕೊಂಡಿದ್ದು ನಮಗೆಲ್ಲಾ ಗೊತ್ತೇ ಇದೆ. ಈ ವಿಷಯವನ್ನು ಮರೆಯುವಷ್ಟರಲ್ಲಿಯೇ ಇನ್ನೊಂದು ವಿಷಯ ಮೆಟ್ ಗಾಲಾದಿಂದ ಹೊರ ಬಿದ್ದಿದೆ ನೋಡಿ.

ಇದನ್ನೂ ಓದಿ: ಒಂದೇ ದಿನ ಇಬ್ಬರು ದಿಗ್ಗಜರ ವಿವಾಹ ವಾರ್ಷಿಕೋತ್ಸವ! ಜ್ಯೂ.ಎನ್​ಟಿಆರ್​ ಮನೆಯಲ್ಲಿ ಹೀಗಿತ್ತು ನೋಡಿ ಸಂಭ್ರಮ

ಈಗ ಸುದ್ದಿಯಲ್ಲಿರುವುದು ಬ್ಲೇಕ್ ಲೈವ್ಲಿಯ ನಂಬಲಾಗದ ಆ ಉಡುಗೆಯ ರೂಪಾಂತರದ ಬಗ್ಗೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ನಟಿ ಮೊದಲು ರೋಸ್ ಗೋಲ್ಡ್ ಗೌನ್ ಧರಿಸಿದ್ದರು ಹಾಗೂ ಈ ಉಡುಗೆಯ ಹಿಂಭಾಗದಲ್ಲಿ ನಾಟಕೀಯವಾಗಿ ನಿರ್ಮಿಸಲಾದಂತಹ ಒಂದು ಹೂವಿನಾಕಾರದ ಗಂಟಿತ್ತು. ಯಾವಾಗ ಆ ಗಂಟನ್ನು ಬಿಚ್ಚಲಾಯಿತೋ ನೀಲವರ್ಣದ ಬಟ್ಟೆಯೊಂದು ಆ ಮೊದಲಿನ ಬಟ್ಟೆಯೊಂದಿಗೆ ಸಮ್ಮಿಳಿತವಾಗಿ ಅಲ್ಲಿದ್ದವರು ಅಚ್ಚರಿ ಪಡುವಂತಾಯಿತು. ಇದಕ್ಕೂ ಮುಂಬೈ ಪೊಲೀಸರಿಗೂ ಯಾವ ರೀತಿಯ ಸಂಬಂಧವಿದೆ ಎಂದು ನಿಮಗೆ ಪ್ರಶ್ನೆಯೊಂದು ಮೂಡಬಹುದು.

ನಟಿ ಫೋಟೋನಾ ಹೆಗ್​ ಬಳಸಿಕೊಂಡಿದ್ದಾರೆ ನೋಡಿ!

ಮುಂಬೈ ಪೊಲೀಸರು ಈಗ ತಮ್ಮ ಇತ್ತೀಚಿನ ಪಾಸ್‌ವರ್ಡ್-ಸಂಬಂಧಿತ ಸಲಹೆಯನ್ನು ಹಂಚಿಕೊಳ್ಳಲು ಈ ನಟಿಯ ನಾಟಕೀಯ ಉಡುಗೆ ರೂಪಾಂತರದಿಂದ ಸ್ಫೂರ್ತಿ ಪಡೆದಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. "ನಿಮ್ಮ ಪಾಸ್‌ವರ್ಡ್ ಗಳನ್ನು 'ಲೈವ್ಲಿ' ಎಂದು ಇರಿಸಿಕೊಳ್ಳಿರಿ, ಅವುಗಳನ್ನು ಆಗಾಗ್ಗೆ ಬದಲಾಯಿಸಿಕೊಳ್ಳಿ" ಎಂದು ಅವರು ತಮ್ಮ ಸಾಮಾಜಿಕ ಮಾಧ್ಯಮದ ಪೋಸ್ಟ್ ನಲ್ಲಿ ಬರೆದಿದ್ದಾರೆ. ರೂಪಾಂತರದ ಮೊದಲು ಮತ್ತು ನಂತರ ನಟಿಯ ಉಡುಪನ್ನು ಪ್ರದರ್ಶಿಸುವ ಫೋಟೋವನ್ನು ಸಹ ಅವರು ಹಂಚಿಕೊಂಡಿದ್ದಾರೆ. ಇಲಾಖೆಯು ಸೈಬರ್ ಸೇಫ್ಟಿ, ಮೆಟ್ ಗಾಲಾ ಮತ್ತು ಮೆಟ್ ಗಾಲಾ 2022 ಅಂತಹ ಹ್ಯಾಶ್ ಟ್ಯಾಗ್ ಗಳೊಂದಿಗೆ ತಮ್ಮ ಪೋಸ್ಟ್ ಅನ್ನು ಮುಕ್ತಾಯಗೊಳಿಸಿದ್ದಾರೆ.ಇದನ್ನೂ ಓದಿ: ಕೊನೆಗೂ ಆಮಿರ್​ ಖಾನ್​ ಆಂತಕ ನಿಜವಾಯ್ತು, ರಾಕಿ ಭಾಯ್ ಅಬ್ಬರಕ್ಕೆ ದಂಗಲ್​ ದಾಖಲೆ ಧೂಳಿಪಟ!

ಈ ಪೋಸ್ಟ್ ಅನ್ನು ಸುಮಾರು 15 ಗಂಟೆಗಳ ಹಿಂದೆ ಹಂಚಿ ಕೊಳ್ಳಲಾಗಿದೆ ಮತ್ತು ಇದನ್ನು ಹಂಚಿ ಕೊಂಡಾಗಿನಿಂದ, ಇಲ್ಲಿಯವರೆಗೆ 35,000ಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ ಮತ್ತು ಈ ಸಂಖ್ಯೆಗಳು ನಿಮಿಷ ನಿಮಿಷಕ್ಕೂ ಹೆಚ್ಚುತ್ತಿವೆ ಎಂದು ಹೇಳಬಹುದು. ಇದು ವಿವಿಧ ಕಾಮೆಂಟ್ ಗಳನ್ನು ಪೋಸ್ಟ್ ಮಾಡಲು ಜನರನ್ನು ಪ್ರೇರೇಪಿಸಿದೆ. ಅನೇಕರು ಜೋರಾಗಿ ನಗುವ ಎಮೋಟಿಕಾನ್ ಗಳನ್ನು ಹಾಕುವ ಮೂಲಕ ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತ ಪಡಿಸಿದ್ದಾರೆ.
Published by:Vasudeva M
First published: