news18-kannada Updated:June 16, 2020, 9:36 AM IST
ನಟ ಸುಶಾಂತ್
ಬಾಲಿವುಡ್ನಲ್ಲಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ವಿಚಾರ ಅನೇಕರಿಂದ ಅರಗಿಸಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ. ಈ ಮಧ್ಯೆ ಅವರ ಸಾವಿರ ಸುತ್ತ ಸಾಕಷ್ಟು ಅನುಮಾನಗಳು ಕೂಡ ಹುಟ್ಟಿಕೊಂಡಿದ್ದವು. ಆದರೆ, ಮರಣೋತ್ತರ ಪರೀಕ್ಷೆಯ ವರದಿ ಎಲ್ಲ ಅನುಮಾನುಗಳಿಗೆ ತೆರೆ ಎಳೆದಿದೆ. ಇನ್ನು, ಸುಶಾಂತ್ ಸಾಯುವುದಕ್ಕೂ 12 ಗಂಟೆ ಮೊದಲು ಏನೆಲ್ಲ ಮಾಡಿದ್ದರು, ಯಾರ್ಯಾರಿಗೆ ದೂರವಾಣಿ ಕರೆ ಮಾಡಿದ್ದರು ಎನ್ನುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಮುಂಜಾನೆ 1:47 ಗಂಟೆಗೆ ಸುಶಾಂತ್ ಆಪ್ತ ಗೆಳತಿ ರಿಯಾ ಚಕ್ರವರ್ತಿಗೆ ದೂರವಾಣಿ ಕರೆ ಮಾಡಿದ್ದರು. ಆದರೆ, ಅವರು ಕರೆ ಎತ್ತಿರಲಿಲ್ಲ. ಇದಾದ ಕೆಲವೇ ಕ್ಷಣಗಳಲ್ಲಿ ಗೆಳೆಯ ಹಾಗೂ ನಟ ಮಹೇಶ್ ಶೆಟ್ಟಿಗೆ ಸುಶಾಂತ್ ಕರೆ ಮಾಡಿದ್ದರು. ಆದರೆ, ಅವರು ಕೂಡ ಕರೆ ಸ್ವೀಕರಿಸರಲಿಲ್ಲ.
ಸುಶಾಂತ್ ಸಾಯುವುದಕ್ಕೂ ಕೆಲವೇ ಗಂಟೆ ಮೊದಲು ಮಹೇಶ್ ಮೊಬೈಲ್ ನೋಡಿದ್ದರು. ಸುಶಾಂತ್ ಮಿಸ್ಕಾ ಲ್ ನೋಡಿ ಕಾಲ್ ಬ್ಯಾಕ್ ಮಾಡಿದ್ದರು. ಈ ವೇಳೆ ಸುಶಾಂತ್ ಕರೆ ಸ್ವೀಕರಿಸಿರಲಿಲ್ಲ. 9:30ಸುಮಾರಿಗೆ ಮಹೇಶ್ಗೆ ಕರೆ ಮಾಡಲು ಸುಶಾಂತ್ ಪ್ರಯತ್ನ ಪಟ್ಟಿದ್ದರು. ಆದರೆ, ಕರೆ ಕನೆಕ್ಟ್ ಆಗಿರಲಿಲ್ಲ.
ಇದನ್ನೂ ಓದಿ: ತೆರೆಮೇಲೆ ನಗಿಸಿದ್ದ ಸ್ಯಾಂಡಲ್ವುಡ್ ನಟನಿಗೂ ಕಾಡಿತ್ತು ಖಿನ್ನತೆ: ಸುಶಾಂತ್ ಸಿಂಗ್ ಸಾವಿನ ಬೆನ್ನಲ್ಲೇ ಬಹಿರಂಗ!
ಸುಶಾಂತ್ ತಿಂಡಿ ತಿನ್ನುವುದಕ್ಕೂ ಮೊದಲು ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿದಿದ್ದರು. ಊಟದ ಮೆನು ಬಗ್ಗೆ ಕೇಳಲು 10:25ಕ್ಕೆ ಸುಶಾಂತ್ ಉಳಿದಿದ್ದ ರೂಮಿನ ಬಾಗಿಲನ್ನು ಬಾಣಸಿಗ ನೀರಜ್ ತಟ್ಟಿದ್ದರು. ಆದರೆ, ಯಾವುದೇ ಉತ್ತರ ಬಂದಿಲ್ಲ. ಈ ವೇಳೆ ಅದೇ ಮನೆಯಲ್ಲಿದ್ದ ಸುಶಾಂತ್ ಗೆಳೆಯ 11 ಗಂಟೆಗೆ ಎದ್ದು ಸುಶಾಂತ್ ಬಗ್ಗೆ ವಿಚಾರಿಸಿದ್ದರು. ಅವರು ಕೂಡ ಬಾಗಿಲು ತಟ್ಟಿದ್ದರೂ ಯಾವುದೇ ಉತ್ತರ ಬಂದಿರಲಿಲ್ಲ.
ಈ ವೇಳೆ ಸುಶಾಂತ್ ಮೊಬೈಲ್ ರಿಂಗ್ ಆಗುವ ಶಬ್ದ ಕೇಳುತ್ತಿತ್ತು. ಆದರೆ, ಸುಶಾಂತ್ ಅದಕ್ಕೆ ಉತ್ತರಿಸಿರುತ್ತಿರಲಿಲ್ಲ. ಇದರಿಂದ ಆತಂಕಗೊಂಡ ಗೆಳೆಯ ಸುಶಾಂತ್ ಸಹೋದರಿ ರೀತುಗೆ ಈ ಬಗ್ಗೆ ಮಾಹಿತಿ ನೀಡಲಾಯಿತು. ಈ ವೇಳೆ ಕೀ ಮೇಕರ್ಗಳು ಕೂಡ ಆಗಮಿಸಿದ್ದರು. ಮಧ್ಯಾಹ್ನ 12:25ಕ್ಕೆ ಬೆಡ್ರೂಂ ತೆಗೆದಾಗ ಸುಶಾಂತ್ ನೇಣು ಬಿಗಿದ ಸ್ಥಿತಿಯಲ್ಲಿದ್ದರು. ನಂತರ ವೈದ್ಯರು ಬಂದು ಪರಿಶೀಲಿಸಿದಾಗ ಆತ ಮೃತಪಟ್ಟಿರುವುದು ಖಚಿತವಾಗಿತ್ತು.
First published:
June 16, 2020, 9:34 AM IST