Ganesh Acharaya: `ಹೂಂ ಅಂತೀಯಾ’ ಅಂತ ಕುಣಿಸಿದ್ದ ಡ್ಯಾನ್ಸ್ ಮಾಸ್ಟರ್​ ವಿರುದ್ಧ ಕೇಸ್​! ಲೈಂಗಿಕ ಕಿರುಕುಳ ಕೊಟ್ರಾ ಗಣೇಶ್​?

ಗಣೇಶ್ ಆಚಾರ್ಯ ಮತ್ತು ಅವರ ಸಹಾಯಕರ ವಿರುದ್ಧ ಸೆಕ್ಷನ್ 354-ಎ (ಲೈಂಗಿಕ ಕಿರುಕುಳ), 354-ಸಿ, 354-ಡಿ (ಹಿಂಬಾಲಿಸುವಿಕೆ), 509 (ಮಹಿಳೆಗೆ ಅವಮಾನ), 323 (ನೋವು), 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಅವಮಾನ), 506 (ಅಪರಾಧ ಬೆದರಿಕೆ)ದ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.

ಅಲ್ಲು ಅರ್ಜುನ್​, ಸಮಂತಾ, ಗಣೇಶ್​ ಆಚಾರ್​​

ಅಲ್ಲು ಅರ್ಜುನ್​, ಸಮಂತಾ, ಗಣೇಶ್​ ಆಚಾರ್​​

  • Share this:
ಲೈಂಗಿಕ ಕಿರುಕುಳ(Sexual Harassment) ಆರೋಪದ ಮೇರೆಗೆ ಬಾಲಿವುಡ್(Bollywood) ನ ಖ್ಯಾತ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ(Ganesh Acharya) ವಿರುದ್ಧ ಮುಂಬೈ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ‘ಹೂ ಅಂತೀಯಾ ಮಾವ’ ಹಾಡು ಸಖತ್ ಹಿಟ್​ ಆಗಿತ್ತು. ಈ ಹಾಡಿನಲ್ಲಿ ಸಮಂತಾ(Samantha) ಹಾಕಿದ ಸ್ಟೆಪ್ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿತ್ತು. ಈ ಹಾಡಿನಿಂದ ಸಿನಿಮಾದ ಮೈಲೇಜ್ ಕೂಡ ಹೆಚ್ಚಿತ್ತು.  ಈ ಸಾಂಗ್​ಗೆ ನೃತ್ಯ ಸಂಯೋಜನೆ ಮಾಡಿದ್ದು ಗಣೇಶ್ ಆಚಾರ್ಯ (Ganesh Acharya). ಅವರ ವಿರುದ್ಧ ಕೇಳಿ ಬಂದಿದ್ದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮುಂಬೈ ಪೊಲೀಸರು ಚಾರ್ಜ್​ಶೀಟ್ (Charge sheet) ಸಲ್ಲಿಕೆ ಮಾಡಿದ್ದಾರೆ. 2020ರ ಪ್ರಕರಣ ಇದಾಗಿದ್ದು, ಈಗ ದೋಷಾರೋಪ ಪಟ್ಟಿ ಸಲ್ಲಿಕೆ ಆಗಿದೆ.

ಸಹ ನೃತ್ಯಗಾರ್ತಿಗೆ ಗಣೇಶ್​ ಲೈಂಗಿಕ ಕಿರುಕುಳ?

ಸಹ ನೃತ್ಯಗಾತಿಗೆ ಲೈಂಗಿಕ ಕಿರುಕುಳದ ಆರೋಪ ಪ್ರಕರಣದಲ್ಲಿ ಮುಂಬೈ ಪೊಲೀಸರು ಬಾಲಿವುಡ್ ನ ಖ್ಯಾತ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದು, ಮುಂಬೈನ ಓಶಿವಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ .ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಇತ್ತೀಚೆಗೆ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ವರದಿಯಾಗಿದೆ. ಗಣೇಶ್ ಆಚಾರ್ಯ ಮಾತ್ರವೇ ಅಲ್ಲದೆ ಅವರ ಸಹಾಯಕನ ಮೇಲೂ ಸಹ ನೃತ್ಯಾಗಾರ್ತಿ ದೂರು ದಾಖಲಿಸಿದ್ದರು.

ಅಸಭ್ಯವಾಗಿ ಸ್ಪರ್ಶಿಸಿದ್ರಾ ಗಣೇಶ್ ಆಚಾರ್ಯ?

ಅಸಭ್ಯವಾಗಿ ಸ್ಪರ್ಶಿಸುವುದು, ಹಿಂಬಾಲಿಸುವುದು ಲೈಂಗಿಕ ಚಾಂಚೆಯ ದೃಷ್ಟಿಯಿಂದ ನೋಡುವುದು ಇತರೆ ಆರೋಪಗಳನ್ನು ಸಹ ನೃತ್ಯಗಾರ್ತಿ ಗಣೇಶ್ ಆಚಾರ್ಯ ಹಾಗೂ ಅವರ ಸಹಾಯಕನ ಮೇಲೆ ದಾಖಲಿಸಿದ್ದರು.2020ರಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಮಹಿಳೆ, ಗಣೇಶ್ ಆಚಾರ್ಯ ಇಟ್ಟಿದ್ದ ಲೈಂಗಿಕ ಬೇಡಿಕೆಯನ್ನು ತಾವು ನಿರಾಕರಿಸಿದ್ದಾಗಿಯೂ, ಗಣೇಶ್ ಆಚಾರ್ಯ ಆಕೆಯನ್ನು ಕೆಟ್ಟ ರೀತಿಯಲ್ಲಿ ಮುಟ್ಟಿದ್ದಾಗಿ, ನೀಲಿ ಚಿತ್ರಗಳನ್ನು ಬಲವಂತದಿಂದ ತೋರಿಸಿದ್ದಾಗಿ ಹೇಳಿದ್ದರು.

ನನ್ನ ವಿರುದ್ಧ ಷಡ್ಯಂತ್ರ ಎಂದಿದ್ದ ಗಣೇಶ್ ಆಚಾರ್ಯ

ಇನ್ನು ಮೊದಲ ಬಾರಿಗೆ ತಮ್ಮ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಾಗ ಈ ಕುರಿತು ಪ್ರತಿಕ್ರಿಯಿಸಿದ್ದ ಗಣೇಶ್ ಆಚಾರ್ಯ ಅವರು, ಈ ಆರೋಪದ ಹಿಂದೆ ಬಾಲಿವುಡ್ ನ ಕೆಲ ಗಣ್ಯರ ಷಡ್ಯಂತ್ರವಿದೆ ಎಂದು ಆರೋಪಿಸಿದ್ದರು. ‘ಇದು ನನ್ನ ಇಮೇಜ್ ಹಾಳುಮಾಡಲು ನನ್ನ ವಿರುದ್ಧದ ನಡೆಸಲಾಗುತ್ತಿರುವ ಪಿತೂರಿಯಾಗಿದೆ.. ಸರೋಜ್ ಖಾನ್ ಮತ್ತು ಅವರ ಸಹೋದ್ಯೋಗಿಗಳು ಉದ್ಯಮದಲ್ಲಿ ಭ್ರಷ್ಟಾಚಾರ ಮಾಡುತ್ತಿದ್ದಾರೆ. ನಾನು ಸಂಘಕ್ಕೆ ಪ್ರವೇಶಿಸಿದ್ದರಿಂದ ಅವರ ಈ ಅವ್ಯವಹಾರವು ವಿಫಲವಾಗಿದೆ. ಹೀಗಾಗಿ ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ ಎಂದಿದ್ದರು.

ಇದನ್ನೂ ಓದಿ: RRR ಚಿತ್ರದಲ್ಲಿ ನಿಮ್ಮನ್ನು ಮಂತ್ರಮುಗ್ದರನ್ನಾಗಿಸುತ್ತವೆ ಈ ದೃಶ್ಯಗಳು..!, ರಾಜಮೌಳಿ ಜಾದು ನೋಡಿ ಕಳೆದುಹೋದ ಪ್ರೇಕ್ಷಕರು

1992ರಿಂದ ಬಾಲಿವುಡ್​ನಲ್ಲಿರುವ ಗಣೇಶ್ ಆಚಾರ್ಯ!

1992 ರಿಂದಲೂ ಗಣೇಶ್ ಆಚಾರ್ಯ ಸಿನಿಮಾಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಬಾಲಿವುಡ್‌ನ ಬಹುತೇಕ ಎಲ್ಲ ಸ್ಟಾರ್ ನಟರು, ಈಗಿನ ಯುವ ಸ್ಟಾರ್ ನಟರೊಟ್ಟಿಗೆ ಗಣೇಶ್ ಆಚಾರ್ಯ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ಗಣೇಶ್ ಆಚಾರ್ಯ ನೃತ್ಯ ನಿರ್ದೇಶಿಸಿರುವ 'ಪುಷ್ಪ' ಸಿನಿಮಾದ ಹಾಡುಗಳು, ಸ್ಟೆಪ್ಪುಗಳು ಬಹಳ ಫೇಮಸ್ ಆಗಿವೆ. ಬಾಲಿವುಡ್​ನ ಎಬಿಸಿಡಿ ಸಿನಿಮಾ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: ರಣವೀರ್​ ಸಿಂಗ್​, ಡಿಪ್ಪಿನಾ ಪ್ರೀತಿಯಿಂದ ಏನಂಥಾ ಕರೀತಾರೆ ಗೊತ್ತಾ? ಸಖತ್​ ಕ್ಯೂಟ್​ ಇದೆ..

ಗಣೇಶ್ ಆಚಾರ್ಯ ಮತ್ತು ಅವರ ಸಹಾಯಕರ ವಿರುದ್ಧ ಸೆಕ್ಷನ್ 354-ಎ (ಲೈಂಗಿಕ ಕಿರುಕುಳ), 354-ಸಿ, 354-ಡಿ (ಹಿಂಬಾಲಿಸುವಿಕೆ), 509 (ಮಹಿಳೆಗೆ ಅವಮಾನ), 323 (ನೋವು), 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಅವಮಾನ), 506 (ಅಪರಾಧ ಬೆದರಿಕೆ)ದ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
Published by:Vasudeva M
First published: