• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Bollywood Actress: ಡ್ರಗ್ಸ್ ಸ್ಮಗ್ಲಿಂಗ್ ಕೇಸ್​ನಲ್ಲಿ ಸಿಲುಕಿಕೊಂಡ ಬಾಲಿವುಡ್ ನಟಿ! ಈ ಕೇಸ್ ಏನು ಅಂತ ನೀವೇ ನೋಡಿ

Bollywood Actress: ಡ್ರಗ್ಸ್ ಸ್ಮಗ್ಲಿಂಗ್ ಕೇಸ್​ನಲ್ಲಿ ಸಿಲುಕಿಕೊಂಡ ಬಾಲಿವುಡ್ ನಟಿ! ಈ ಕೇಸ್ ಏನು ಅಂತ ನೀವೇ ನೋಡಿ

ಸನ್ ಪಿರೇರಾ ಶಾರ್ಜಾ

ಸನ್ ಪಿರೇರಾ ಶಾರ್ಜಾ

ನಟಿ ಈಗ ಸದ್ಯ ಯುಎಇಯ ಶಾರ್ಜಾ ಜೈಲಿನಲ್ಲಿದ್ದಾರೆ ಮತ್ತು ಬಂಧಿತ ಇಬ್ಬರೂ ಕ್ರಿಸ್ಸನ್ ಪಿರೇರಾ ಅವರನ್ನು ಜೈಲಿಗೆ ಕಳುಹಿಸಲು ಹೀಗೆ ಡ್ರಗ್ಸ್ ಸ್ಮಗ್ಲಿಂಗ್ ನಲ್ಲಿ ಸಿಲುಕಿಸಿದ್ದಾರೆ ಎಂದು ಹೇಳಲಾಗಿದೆ.

  • Share this:

ಈಗಂತೂ ಯಾರು? ಹೇಗೆ? ಯಾವಾಗ? ಯಾವ ಕೆಟ್ಟ ಕೆಲಸಗಳಲ್ಲಿ ಸಿಲುಕಿಸುತ್ತಾರೆ ಅಂತ ಊಹಿಸುವುದಕ್ಕೂ ಸಾಧ್ಯವಾಗುತ್ತಿಲ್ಲ ನೋಡಿ. ಹೌದು, ಈ ಮೊಬೈಲ್ ಫೋನ್ ನಿಂದಲೂ ಸಹ ಅನೇಕ ಪ್ರಕರಣಗಳಲ್ಲಿ ಅನೇಕ ಅಮಾಯಕರನ್ನು ಸಿಲುಕಿಸಿರುವ ಪ್ರಕರಣಗಳನ್ನು ನಾವು ದಿನ ಬೆಳಗಾದರೆ ದಿನಪತ್ರಿಕೆಯಲ್ಲಿ ಓದುತ್ತಿರುತ್ತೇವೆ ಮತ್ತು ಟಿವಿಯಲ್ಲಿ ನೋಡುತ್ತಿರುತ್ತೇವೆ. ಹೀಗೆ ಮಾದಕ ವಸ್ತು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಕ್ರಿಸ್ಸನ್ ಪಿರೇರಾ (Krishan Perera) ಅವರನ್ನು ಸಿಲುಕಿಸಿದ ಆರೋಪದ ಮೇಲೆ ಮುಂಬೈ ಕ್ರೈಂ ಬ್ರಾಂಚ್ ಇಬ್ಬರನ್ನು ಬಂಧಿಸಿದೆ. ನಟಿ ಈಗ ಸದ್ಯ ಯುಎಇಯ ಶಾರ್ಜಾ ಜೈಲಿನಲ್ಲಿದ್ದಾರೆ ಮತ್ತು ಬಂಧಿತ ಇಬ್ಬರೂ ಕ್ರಿಸ್ಸನ್ ಪಿರೇರಾ ಅವರನ್ನು ಜೈಲಿಗೆ (Jail) ಕಳುಹಿಸಲು ಹೀಗೆ ಡ್ರಗ್ಸ್ (Drugs) ಸ್ಮಗ್ಲಿಂಗ್ ನಲ್ಲಿ ಸಿಲುಕಿಸಿದ್ದಾರೆ ಎಂದು ಹೇಳಲಾಗಿದೆ.


ಡ್ರಗ್ಸ್ ಕಳ್ಳಸಾಗಣೆ ಕೇಸ್ ನಲ್ಲಿ ಸಿಲುಕಿಕೊಂಡ ಬಾಲಿವುಡ್ ನಟಿ


27 ವರ್ಷ ವಯಸ್ಸಿನ ಈ ನಟಿ ಸಡಕ್ 2 ಮತ್ತು ಬಾಟ್ಲಾ ಹೌಸ್ ನಂತಹ ಚಿತ್ರಗಳಲ್ಲಿ ನಟಿಸಿದ್ದು, ಆರೋಪಿಗಳಲ್ಲಿ ಒಬ್ಬನನ್ನು ಮುಂಬೈನ ಬೊರಿವೆಲಿ ನಿವಾಸಿ ಆಂಥೋನಿ ಪೌಲ್ ಎಂದು ಗುರುತಿಸಲಾಗಿದೆ.


ಟ್ರೋಫಿಯಲ್ಲಿ ಅಡಗಿಸಿಟ್ಟ ಮಾದಕ ವಸ್ತುಗಳೊಂದಿಗೆ ನಟಿಯನ್ನು ಶಾರ್ಜಾಗೆ ಕಳುಹಿಸಿದ ಆರೋಪದ ಮೇಲೆ ಮಹಾರಾಷ್ಟ್ರದ ಸಿಂಧುದುರ್ಗ್ ಜಿಲ್ಲೆಯ ನಿವಾಸಿ ರಾಜೇಶ್ ಬಭೋಟೆ ಅಲಿಯಾಸ್ ರವಿಯನ್ನು ಕ್ರೈಂ ಬ್ರಾಂಚ್ ಬಂಧಿಸಿದೆ.


ಈ ತಿಂಗಳ ಆರಂಭದಲ್ಲಿ ಪಿರೇರಾ ಅವರನ್ನು ಶಾರ್ಜಾದಲ್ಲಿ ಅಧಿಕಾರಿಗಳು ಬಂಧಿಸಿದ್ದರು. ಡ್ರಗ್ಸ್ ಕಳ್ಳಸಾಗಣೆ ಆರೋಪದ ಮೇಲೆ ಆಕೆಯನ್ನು ಪ್ರಸ್ತುತ ಶಾರ್ಜಾ ಜೈಲಿನಲ್ಲಿ ಇರಿಸಲಾಗಿದೆ.


ಕ್ರಿಸ್ಸನ್ ಅವರನ್ನು ಈ ಕೇಸ್ ನಲ್ಲಿ ಸಿಲುಕಿಸಲಾಗಿದೆ ಅಂತ ಆರೋಪಿಸಿದ ಕುಟುಂಬ


ನಟಿ ಕ್ರಿಸ್ಸನ್ ಅನ್ನು ಈ ಡ್ರಗ್ಸ್ ಕೇಸ್ ನಲ್ಲಿ ಸಿಲುಕಿಸಲಾಗಿದೆ ಎಂದು ಆಕೆಯ ಕುಟುಂಬ ಆರೋಪಿಸಿದೆ ಮತ್ತು ಮುಂಬೈ ಪೊಲೀಸರು ಈ ವಿಷಯದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ.


ಇದನ್ನೂ ಓದಿ: ಬಿಕಿನಿ ಫೋಟೋ ಶೇರ್ ಮಾಡಿದ ಕನ್ನಡದ ನಟಿ! ಯಾರೀಕೆ ಹೇಳಿ?


ನಟಿಯ ತಾಯಿ ಪ್ರಮೀಳಾ ಪಿರೇರಾ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ಈ ಪ್ರಕರಣದಲ್ಲಿ ಕ್ರಿಸ್ಸನ್ ಅವರನ್ನು ಸಿಲುಕಿಸುವ ಪ್ಲ್ಯಾನ್ ಪೌಲ್ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


ಪೌಲ್ ತನ್ನ ಸಹಚರ ರವಿಯೊಂದಿಗೆ ನಟಿ ಕ್ರಿಸ್ಸನ್ ರನ್ನು ಅಂತರರಾಷ್ಟ್ರೀಯ ಮಟ್ಟದ ವೆಬ್ ಸಿರೀಸ್ ನ ಆಡಿಷನ್ ಗಾಗಿ ಯುಎಇಗೆ ಕಳುಹಿಸಲು ಸಂಚು ರೂಪಿಸಿದ್ದರು.


ವಿಮಾನ ನಿಲ್ದಾಣಕ್ಕೆ ಹೋಗುವಾಗ ಆಕೆಗೆ ಒಂದು ಟ್ರೋಫಿಯನ್ನು ನೀಡಲಾಯಿತು, ಅದರಲ್ಲಿ ಅವರು ಡ್ರಗ್ಸ್ ಬಚ್ಚಿಟ್ಟಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


ಪೌಲ್ ಈ ನಟಿಯನ್ನು ಅಲ್ಲದೆ ಇನ್ನಿತರೆ ನಾಲ್ಕು ಜನರನ್ನು ಇದೇ ರೀತಿಯಲ್ಲಿ ಸಿಲುಕಿಸಿದ್ದಾನೆ ಎಂದು ಅಧಿಕಾರಿಗಳು ಕಂಡು ಕೊಂಡಿದ್ದಾರೆ.


ಪೌಲ್ ನಟಿಯ ತಾಯಿಯ ಮೇಲೆ ಸೇಡು ತೀರಿಸಿಕೊಳ್ಳಲು ಹೀಗೆಲ್ಲಾ ಮಾಡಿದ್ದಂತೆ..


ಪೌಲ್ ಅವರು ಮುಂಬೈನ ಮಲಾಡ್ ಮತ್ತು ಬೊರಿವೆಲಿ ಪ್ರದೇಶಗಳಲ್ಲಿ ಬೇಕರಿ ನಡೆಸುತ್ತಿದ್ದಾರೆ. ಪೌಲ್ ನ ಸಹೋದರಿಯರಲ್ಲಿ ಒಬ್ಬಳು ಕ್ರಿಸ್ಸನ್ ನ ತಾಯಿ ವಾಸಿಸುವ ಅಪಾರ್ಟ್ಮೆಂಟ್ ನಲ್ಲಿಯೇ ವಾಸಿಸುತ್ತಾಳೆ.


2020 ರಲ್ಲಿ ಕೋವಿಡ್-19 ಪ್ರೇರಿತ ಲಾಕ್ಡೌನ್ ಸಮಯದಲ್ಲಿ, ಪೌಲ್ ತನ್ನ ಸಹೋದರಿಯನ್ನು ನೋಡಲು ಹೋಗಿದ್ದಾಗ, ಪ್ರಮೀಳಾ ಅವರ ಸಾಕು ನಾಯಿ ಅವನ ಮೇಲೆ ಬೊಗಳಿತು ಮತ್ತು ಅವನ ಮೇಲೆ ಹಾರಲು ಪ್ರಯತ್ನಿಸಿತು.


ತನ್ನನ್ನು ರಕ್ಷಿಸಿಕೊಳ್ಳಲು, ಪೌಲ್ ನಾಯಿಗೆ ಹೊಡೆಯುವ ಪ್ರಯತ್ನದಲ್ಲಿ ಕುರ್ಚಿಯನ್ನು ಎತ್ತಿಕೊಂಡನು. ಇದನ್ನು ನೋಡಿದ ಪ್ರಮೀಳಾ ಕೋಪಗೊಂಡು ಅಪಾರ್ಟ್ಮೆಂಟಿನ ಇತರ ನಿವಾಸಿಗಳ ಮುಂದೆ ಅವನನ್ನು ಅವಮಾನಿಸಿದ್ದಳು.


ಈ ಘಟನೆಯ ಸೇಡು ತೀರಿಸಿಕೊಳ್ಳಲು, ಪೌಲ್ ಕ್ರಿಸ್ಸನ್ ರನ್ನು ಈ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಸುವ ಪ್ಲ್ಯಾನ್ ಮಾಡಿದರಂತೆ.


ಏನ್ ಪ್ಲ್ಯಾನ್ ಮಾಡಿದ್ದ ನೋಡಿ ಪೌಲ್


ರಿಯಲ್ ಎಸ್ಟೇಟ್ ಸಂಬಂಧಿತ ಕೆಲಸದ ಬಗ್ಗೆ ಪ್ರಮೀಳಾ ಅವರ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ವೊಂದು ಬಂದಿತಂತೆ. ಆಗ ಪ್ರಮೀಳಾ ಆ ಸಂಖ್ಯೆಗೆ ಕಾಲ್ ಮಾಡಿದ್ದಾರೆ ಮತ್ತು ರವಿ ಜೊತೆ ಮಾತಾಡಿದ್ದಾರೆ.


ಪ್ರಮೀಳಾ ಅವರನ್ನು ತನ್ನ ಕಚೇರಿಗೆ ಬಂದು ಭೇಟಿಯಾಗಲು ಹೇಳಿದರಂತೆ. ರವಿ ಪ್ರಮೀಳಾ ಅವರನ್ನು ಅವರ ಕುಟುಂಬದ ಬಗ್ಗೆ ಕೇಳಿದರಂತೆ ಮತ್ತು ಅವರು ತಮ್ಮ ಮಗಳು ಚಲನಚಿತ್ರಗಳಲ್ಲಿ ಕೆಲಸ ಮಾಡುವ ಬಗ್ಗೆ ಹೇಳಿಕೊಂಡಿದ್ದಾರೆ.


ನಂತರ ರವಿ ತಾನು 'ಟ್ಯಾಲೆಂಟ್ ಪೂಲ್' ಎಂಬ ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಕಂಪನಿಯನ್ನು ಹೊಂದಿದ್ದೇನೆ ಮತ್ತು ಅದು ಅಂತರರಾಷ್ಟ್ರೀಯ ವೆಬ್ ಸಿರೀಸ್ ವೊಂದಕ್ಕೆ ನಟಿಯನ್ನು ಹುಡುಕುತ್ತಿದೆ ಎಂದು ಹೇಳಿದನಂತೆ.


ಹೋಟೆಲ್ ಗ್ರ್ಯಾಂಡ್ ಹಯಾತ್ ನಲ್ಲಿ ಒಂದು ಸಭೆಯನ್ನು ಏರ್ಪಡಿಸಲಾಯಿತು ಮತ್ತು ನಟಿಯನ್ನು ಅಲ್ಲಿ ಆಯ್ಕೆ ಮಾಡಲಾಯಿತು. ಆಡಿಷನ್ ಗಾಗಿ ಅವಳು ದುಬೈಗೆ ಹೋಗಬೇಕಾಗುತ್ತದೆ ಎಂದು ಅವಳಿಗೆ ತಿಳಿಸಲಾಯಿತು.


ಎಪ್ರಿಲ್ 1 ರಂದು ಶಾರ್ಜಾಗೆ ಪ್ರಯಾಣಿಸಲು ಕ್ರಿಸ್ಸನ್ ಅವರ ಟಿಕೆಟ್ ಗಳನ್ನು ಬುಕ್ ಮಾಡಲಾಯಿತು ಮತ್ತು ಶಾರ್ಜಾದಿಂದ ದುಬೈಗೆ ಪ್ರಯಾಣಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ರವಿ ಆಕೆಗೆ ತಿಳಿಸಿದ್ದರು.


ಇದನ್ನೂ ಓದಿ: ನಟಿ ತಾರಾ ವಿರುದ್ಧ FIR ದಾಖಲು! ಮನೆ ಪರಿಶೀಲನೆ


ಹಿಲ್ಟನ್ ಹೋಟೆಲ್ ನಲ್ಲಿ ಆಕೆಗೆ ರೂಂ ಸಹ ಬುಕ್ ಮಾಡಲಾಗಿದೆ ಅಂತ ಹೇಳಿದರಂತೆ. ಶಾರ್ಜಾಗೆ ಹೊರಡುವ ಮೊದಲು, ರವಿ ಅವಳಿಗೆ ಡ್ರಗ್ಸ್ ಹೊಂದಿರುವ ಟ್ರೋಫಿಯನ್ನು ನೀಡಿದರು ಮತ್ತು ಆಡಿಷನ್ ಗೆ ಇದು ಅಗತ್ಯವಿದೆ ಅಂತ ಕ್ರಿಸ್ಸನ್ ಗೆ ತಿಳಿಸಿದರಂತೆ. ಆಗ ನಟಿ ಆ ಟ್ರೋಫಿಯನ್ನು ತನ್ನೊಂದಿಗೆ ತೆಗೆದುಕೊಂಡು ವಿಮಾನ ಹತ್ತಿದಳು.


ಕ್ರಿಸ್ಸನ್ ಶಾರ್ಜಾ ತಲುಪಿದಾಗ, ತನ್ನ ಬುಕಿಂಗ್ ಅನ್ನು ಖಚಿತಪಡಿಸಿಕೊಳ್ಳಲು ಅಲ್ಲಿನ ಹೋಟೆಲ್ ನೊಂದಿಗೆ ಪರಿಶೀಲಿಸಿದಾಗ ಹೋಟೆಲ್ ನ ಬುಕಿಂಗ್ ದಾಖಲೆಯಲ್ಲಿ ತನ್ನ ಹೆಸರನ್ನು ಉಲ್ಲೇಖಿಸಲಾಗಿಲ್ಲ ಎಂದು ತಿಳಿದು ಬಂದಿದೆ.


ನಂತರ ಅವಳು ಆ ಟ್ರೋಫಿಯೊಂದಿಗೆ ಅಲ್ಲಿನ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದರಂತೆ. ಟ್ರೋಫಿಯೊಳಗೆ ಡ್ರಗ್ಸ್ ಇರುವುದನ್ನು ನೋಡಿದ ಪೊಲೀಸರು ಆಕೆಯನ್ನು ಕೂಡಲೇ ಬಂಧಿಸಿದ್ದಾರೆ.


ತನ್ನ ಮಗಳ ಬಂಧನದ ಬಗ್ಗೆ ತಿಳಿದ ತಾಯಿ ಕೂಡಲೇ ಮಾಡಿದ್ದೇನು ನೋಡಿ


ತನ್ನ ಮಗಳ ಬಂಧನದ ಬಗ್ಗೆ ತಿಳಿದ ತಾಯಿ ಪ್ರಮೀಳಾ ಮುಂಬೈ ಪೊಲೀಸರನ್ನು ಸಂಪರ್ಕಿಸಿ ಈ ಘಟನೆಯ ಬಗ್ಗೆ ಪೂರ್ತಿಯಾಗಿ ಮಾಹಿತಿ ನೀಡಿದರು. ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತೆ ಲಕ್ಷ್ಮಿ ಗೌತಮ್ ಈ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ್ದು, ವಕೋಲಾ ಪೊಲೀಸ್ ಠಾಣೆಯಲ್ಲಿ ಈ ಕುರಿತು ಎಫ್ಐಆರ್ ಸಹ ದಾಖಲಿಸಲಾಗಿದೆ.


ಈ ಪ್ರಕರಣದ ತನಿಖೆಯ ಸಮಯದಲ್ಲಿ, ಪೌಲ್ ತಾನೇ ಈ ಪ್ಲ್ಯಾನ್ ಅನ್ನು ಮಾಡಿದ್ದು ಮತ್ತು ರವಿ ಅದನ್ನು ಕಾರ್ಯಗತಗೊಳಿಸಲು ಸಹಾಯ ಮಾಡಿದ್ದಾನೆ ಅಂತ ಪೊಲೀಸರ ಎದುರು ಬಾಯಿ ಬಿಟ್ಟಿದ್ದಾನೆ. ಈಗ ಪೊಲೀಸರು ಪೌಲ್ ನನ್ನು ಬಂಧಿಸಿದ್ದು, ಆತನ ಸಹಚರ ರವಿಯನ್ನು ವಿಚಾರಣೆಗೆ ಕರೆಸಿದ್ದಾರೆ.




ಇನ್ಮುಂದೆ ಮುಂಬೈ ಪೊಲೀಸರು ವಿದೇಶಾಂಗ ಸಚಿವಾಲಯದ ಅಧಿಕಾರಿಗಳನ್ನು ಸಂಪರ್ಕಿಸುತ್ತಾರೆ ಮತ್ತು ಸೂಕ್ತ ಮಾರ್ಗಗಳ ಮೂಲಕ, ಆರೋಪಿಗಳು ನಟಿಯ ಬಗ್ಗೆ ನೀಡಿದ ಒಳಹರಿವುಗಳನ್ನು ಯುಎಇ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಿದ್ದಾರೆ.

First published: