Raj Kundra : ರಾಜ್​ ಕುಂದ್ರಾಗೆ ಜೈಲೇ ಗತಿ; ಜಾಮೀನು ನಿರಾಕರಿಸಿದ ಮುಂಬೈ ನ್ಯಾಯಾಲಯ

Raj Kundra: ಪ್ರಕರಣ ಇನ್ನು ತನಿಖೆ ಹಂತದಲ್ಲೇ ಇದೆ ಈ ಹಿನ್ನಲೆ ರಾಜ್​ ಕುಂದ್ರಾ ಅವರಿಗೆ ಜಾಮೀನು ನೀಡದಂತೆ ಮುಂಬೈ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದ್ದರು

ರಾಜ್​ ಕುಂದ್ರಾ

ರಾಜ್​ ಕುಂದ್ರಾ

 • Share this:
  ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಜೈಲು ಸೇರಿರುವ ಉದ್ಯಮಿ ರಾಜ್​ ಕುಂದ್ರಾ ಜಾಮೀನು ಅರ್ಜಿಯನ್ನು ಮುಂಬೈ ನ್ಯಾಯಾಲಯ ತಳ್ಳಿ ಹಾಕಿದ್ದು, ಶಿಲ್ಪಾ ಶೆಟ್ಟಿ ಗಂಡನಿಗೆ ಜೈಲೇ ಗತಿಯಾಗಿದೆ. 14 ದಿನಗಳ ಜೈಲುವಾಸಕಕೆ ಒಳಗಾಗಿರುವ ರಾಜ್​ ಕುಂದ್ರಾ ಜಾಮೀನು ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ಪ್ರಕರಣ ಇನ್ನು ತನಿಖೆ ಹಂತದಲ್ಲೇ ಇದೆ ಈ ಹಿನ್ನಲೆ ರಾಜ್​ ಕುಂದ್ರಾ ಅವರಿಗೆ ಜಾಮೀನು ನೀಡದಂತೆ ಮುಂಬೈ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದ್ದರು. ರಾಜ್ ಕುಂದ್ರಾ ಅವರಿಗೆ ಜಾಮೀನು ನೀಡಿದರೆ ಸಾಕ್ಷ್ಯ ನಾಶವಾಗುವ ಸಾಧ್ಯತೆ ಇದೆ. ಅಲ್ಲದೇ, ಈ ಪ್ರಕರಣ ಸಂಬಂದ ಇನ್ನು ಅನೇಕ ಸಂತ್ರಸ್ತರ ಮಾಹಿತಿ ಪಡೆಯಬೇಕಿದ್ದು, ಅವರ ಮೇಲೆ ಪ್ರಭಾವ ಬೀರು ಸ್ಥಿತಿಯನ್ನು ಅಲ್ಲಗಳೆಯುವಂತಿಲ್ಲ. ಈ ಹಿನ್ನಲೆ ಅವರಿಗೆ ಜಾಮೀನು ನಿರಾಕರಿಸಬೇಕು ಎಂದು ಪ್ರಕರಣದ ತನಿಖಾಧಿಕಾರಿ ಆಗಿರುವ ಇನ್ಸ್​ಪೆಕ್ಟರ್​ ಕಿರಣ್​ ಬಿಡ್ವೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

  ರಾಜ್​ ಕುಂದ್ರಾ ಈಗಾಗಲೇ ತನಿಖೆಗೆ ಪೊಲೀಸರೊಂದಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದು, ಅವರನ್ನು ಜೈಲಿನಲ್ಲಿ ಇಟ್ಟು ಕೊಳ್ಳುವುದರಿಂದ ಯಾವುದೇ ​ ಲಾಭಾವಿಲ್ಲ ಎಂದು ರಾಜ್​ ಕುಂದ್ರಾ ಪರ ವಕೀಲರು ಅರ್ಜಿ ಸಲ್ಲಿಸಿದ್ದರು.

  ಈ ಪ್ರಕರಣದಲ್ಲಿ ಗರಿಷ್ಠ ಶಿಕ್ಷೆ ಏಳು ವರ್ಷಗಳು ಶಿಕ್ಷೆಗೆ ಗುರಿಯಾಗಬಹುದು. ಆದ್ದರಿಂದ ಅವರಿಗೆ ಜಾಮೀನು ನೀಡಬೇಕು. ಅಲ್ಲದೇ ಕುಂದ್ರಾ ವಿವಾಹವಾಗಿದ್ದು, ಅವರ ಕುಟುಂಬ, ಮನೆ ಮುಂಬೈನಲ್ಲಿಯೇ ಇದೆ. ಅವರು ತನಿಖೆಗೆ ಸದಾ ಲಭ್ಯವಿಲ್ಲದಿರುವ ಎಂಬ ಮಾತೇ ಬರುವುದಿಲ್ಲ. ಈ ಹಿನ್ನಲೆ ಅವರಿಗೆ ಜಾಮೀನು ನೀಡಬೇಕು ಎಂದು ವಾದಿಸಿದರು.
  ರಾಜ್ ಕುಂದ್ರಾ ನಿರಪರಾಧಿ ಅಥವಾ ಇಲ್ಲವೇ ಎಂಬುದು ಸಮಸ್ಯೆಯಲ್ಲ. ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದೇ ಅಥವಾ ಇಲ್ಲವೇ ಎಂಬುದು ಸಮಸ್ಯೆಯಾಗಿದೆ. ಈಗಾಗಲೇ ಚಾರ್ಜ್‌ಶೀಟ್ ದಾಖಲಾಗಿದ್ದು, ಎಲ್ಲಾ ಆರೋಪಿಗಳು ಜಾಮೀನಿನಲ್ಲಿದ್ದಾರೆ ಎಂದರು

  ಇದಕ್ಕೆ ಪ್ರತಿವಾದ ನಡೆಸಿದ ಮುಂಬೈ ಪೊಲೀಸರು, ರಾಜ್​ ಕುಂದ್ರಾ ಬ್ರಿಟನ್​ ಪೌರತ್ವ ಹೊಂದಿದ್ದಾರೆ. ಅವರು ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ದೇಶ ಬಿಟ್ಟು ಹೋಗಬಹುದು ಎಂದು ಆರೋಪಿಸಿದರು.

  ಇದನ್ನು ಓದಿ: ಫಜೀತಿ ತಂದ ಆನ್‍ಲೈನ್ ಶಾಪಿಂಗ್‍! ಈ ಮಹಿಳೆಗೆ ಯಾಕೆ ಹೀಗೆ?

  ಇದಕ್ಕೆ ಪ್ರತಿವಾದ ಮಂಡಿಸಿದ ಕುಂದ್ರಾ ಪರ ವಕೀಲರು, ಫೆಬ್ರವರಿಯಲ್ಲಿ ಅವರು ಬ್ರಿಟಿಷ್ ಪ್ರಜೆಯೆಂದು ಚಾರ್ಜ್‌ಶೀಟ್ ಸಲ್ಲಿಸಿದಾಗಲೂ ಪೊಲೀಸರಿಗೆ ತಿಳಿದಿತ್ತು. ಅವರ ಪಾಸ್‌ಪೋರ್ಟ್ ಈಗಾಗಲೇ ಪೊಲೀಸರ ಬಳಿ ಇದೆ. ಇದಲ್ಲದೆ, ಅವರಿಗೆ ಷರತ್ತುಗಳನ್ನು ವಿಧಿಸಬಹುದು. ಈ ಪ್ರಕರಣದಲ್ಲಿ ಹೆಚ್ಚಿನ ಆರೋಪಗಳನ್ನು ಹೊಂದಿರುವ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಕೂಡ ನ್ಯಾಯಾಲಯಕ್ಕೆ ತಿಳಿಸಿದರು.

  ನೀಲಿಚಿತ್ರಗಳ ನಿರ್ಮಾಣ ಪ್ರಕರಣದಲ್ಲಿ ಜು.19ರಂದು ರಾಜ್​​ಕುಂದ್ರಾರನ್ನು ಬಂಧಿಸಲಾಗಿತ್ತು. ಇಂದು ಪೊಲೀಸ್​​ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಕೋರ್ಟ್​​ ರಾಜ್​ ಕುಂದ್ರಾರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು ಎಲ್ಲಾ ದಿಕ್ಕುಗಳಿಂದಲೂ ತನಿಖೆ ನಡೆಸುತ್ತಿದ್ದಾರೆ. ರಾಜ್​ಕುಂದ್ರಾರ ಪೋರ್ನ್​​ ಆ್ಯಪ್​, ಅಕ್ರಮವಾಗಿ ಕೋಟ್ಯಂತರ ರೂಪಾಯಿ ಗಳಿಕೆ ಸಂಬಂಧ ಹಲವು ಸಂಗತಿಗಳು ನಿತ್ಯ ಬಯಲಾಗುತ್ತಲೇ ಇವೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
  Published by:Seema R
  First published: