ಕನ್ನಡದಲ್ಲಿ ಅನೇಕ ಹಾರರ್ (Horror Movie) ಸಿನಿಮಾ ಬಂದಿವೆ. ಗೆದ್ದು ಬೀಗಿರೋದು ಇದೆ. ತಮಿಳಿನಲ್ಲೂ ಹಾರರ್ ಚಿತ್ರಗಳ ಪಟ್ಟಿ ಇದೆ. ಇದೇ ತಮಿಳು ಚಿತ್ರರಂಗದಲ್ಲಿ ಬೆಂಗಳೂರು ಮೂಲದ ಯುವ ನಿರ್ದೇಶಕ ಸಿಂಡ್ರೇಲಾ ಅಂತ (Tamil Cinderella Movie) ಒಂದು ಸಿನಿಮಾ ಮಾಡಿದ್ದರು. ಈ ಚಿತ್ರಕ್ಕೆ ಬೆಳಗಾವಿ ಬೆಡಗಿ ಲಕ್ಷ್ಮೀ ರಾಯ್ ನಾಯಕಿಯಾಗಿ ಅಭಿನಯಿಸಿದ್ದರು. ಚಿತ್ರಕ್ಕೆ ಮಿಕ್ಸ್ ರೆಸ್ಪಾನ್ಸ್ ಬಂದಿತ್ತು. ಅಂತಹ ಈ ಚಿತ್ರದ ನಿರ್ದೇಶಕ (Vinoo Venketesh) ತಮ್ಮ ಮೊದಲ ಚಿತ್ರದಲ್ಲಿಯೇ ಜನರನ್ನ ಹಾರರ್ ಕಂಟೆಂಟ್ ಮೂಲಕ ಹಿಡಿದಿಟ್ಟಿದ್ದರು. ಹಾಗೆ ಈ ಚಿತ್ರ ಬಂದು ಹೆಚ್ಚು ಕಡಿಮೆ ಒಂದೂವರೆ ಎರಡು ವರ್ಷ ಕಳೆದಿದೆ. ಅಷ್ಟರಲ್ಲಿಯೇ ಚಿತ್ರದ ಡೈರೆಕ್ಟರ್ ವಿನೂ ವೆಂಕೇಟೇಶ್ ಹೊಸ ರೀತಿಯ ಸಿನಿಮಾ ಮಾಡಿದ್ದಾರೆ.
ಈ ಚಿತ್ರ ಈಗ ಪ್ಯಾನ್ ಇಂಡಿಯಾ (Pan India Wolf Movie) ಮಟ್ಟದಲ್ಲಿ ರಿಲೀಸ್ ಆಗೋಕೆ ರೆಡಿ ಆಗುತ್ತಿದೆ. ಈ ಕುರಿತು ವಿಶೇಷವಾಗಿ ವಿನೂ ವೆಂಕಟೇಶ್ , ನ್ಯೂಸ್-18 ಕನ್ನಡ ಡಿಜಿಟಲ್ಗೆ ಒಂದಷ್ಟು ವಿಷಯ ಹಂಚಿಕೊಂಡಿದ್ದಾರೆ.
ವೂಲ್ಫ್ ಚಿತ್ರದ ಡೈರೆಕ್ಟರ್ ವಿನೂ ವೆಂಕಟೇಶ್ ಸಂದರ್ಶನ
ಕನ್ನಡದ ನಾಡಿನ ಯುವ ನಿರ್ದೇಶಕ ವಿನೂ ವೆಂಕಟೇಶ್ ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ಅಲ್ಲಿಯೇ ಈಗಲೂ ಗುರುತಿಸಿಕೊಂಡಿದ್ದಾರೆ. ಅಷ್ಟರಲ್ಲಿ ವೂಲ್ಫ್ ಚಿತ್ರದ ಡೈರೆಕ್ಷನ್ ಮಾಡೋ ಅವಕಾಶ ಸಿಕ್ಕಿದೆ.
ಈ ಚಿತ್ರದ ನಿರ್ದೇಶನ ಮಾಡಿರೋ ಡೈರೆಕ್ಟರ್ ವಿನೂ ವೆಂಕಟೇಶ್ ಈಗ ಎಲ್ಲ ಕೆಲಸ ಮುಗಿಸಿದ್ದಾರೆ. ಈ ಚಿತ್ರದ ಚಿತ್ರೀಕರಣದ ನಂತರದ ಕೆಲಸದಲ್ಲಿ ವಿನೂ ವೆಂಕಟೇಶ್ ಬ್ಯುಸಿ ಆಗಿದ್ದಾರೆ.
ವೂಲ್ಫ್ ಚಿತ್ರದ ಚಿತ್ರಕಥೆ ಬೇರೆ ರೀತಿ ಇದೆ ಅಂತಾರೆ ವಿನೂ?
ಹೌದು, ವೂಲ್ಫ್ ಚಿತ್ರದ ಸಿನಿಮಾ ಕಥೆ ಬೇರೆ ರೀತಿ ಇದೆ. ಈ ಚಿತ್ರದ ಕಥೆಯಲ್ಲಿ ಮಿಸ್ಟರಿ ಇದೆ. ಈ ಮಿಸ್ಟರಿ ಕಥೆಯನ್ನ ವಿನೂ ವೆಂಕಟೇಶ್ ವಿಭಿನ್ನವಾಗಿ ಹೇಳುತ್ತಿದ್ದಾರೆ. ಇದು ನೋಡುಗರಿಗೆ ಬೇರೆ ರೀತಿಯ ಫೀಲ್ ಕೊಡಲಿದೆ ಎಂದು ಡೈರೆಕ್ಟರ್ ವಿನೂ ವೆಂಕಟೇಶ್ ಹೇಳುತ್ತಾರೆ.
ಚಿತ್ರಕ್ಕೆ ಇಂಗ್ಲೀಷ್ ಟೈಟಲ್-ವೆಸ್ಟರ್ನ್ ಸ್ಕ್ರೀನ್ ಪ್ಲೇ!
ವಿನೂ ವೆಂಕಟೇಶ್ ಚಿತ್ರಕ್ಕೆ ಇಂಗ್ಲೀಷ್ ಟೈಟಲ್ ಇಟ್ಟಿದ್ದಾರೆ. ಅದೇ ರೀತಿ ವೆಸ್ಟರ್ನ್ ಸ್ಕ್ರೀನ್ ಪ್ಲೇ ಕೂಡ ಮಾಡಿಕೊಂಡಿದ್ದಾರೆ. ಅಂದ್ರೆ, ಈ ಚಿತ್ರದಲ್ಲಿ ಇಂಗ್ಲೀಷ್ ಫಿಲ್ಮ್ ರೀತಿಯ ಸ್ಕ್ರೀನ್ ಪ್ಲೇ ಇರುತ್ತದೆ ಅಂತಲೇ ವಿನೂ ವೆಂಕಟೇಶ್ ತಿಳಿಸುತ್ತಾರೆ.
ವೂಲ್ಫ್ ಚಿತ್ರದಲ್ಲಿ ವಸಿಷ್ಠ ಸಿಂಹ ಪಾತ್ರವೇನು ಗೊತ್ತೇ?
ಪ್ಯಾನ್ ಇಂಡಿಯಾ ವೂಲ್ಫ್ ಚಿತ್ರದಲ್ಲಿ ಕಲಾವಿದರ ದಂಡೇ ಇದೆ. ತೆಲುಗು, ತಮಿಳು, ಮಲಯಾಳಂ ಚಿತ್ರದ ಕಲಾವಿದರೂ ಇದ್ದಾರೆ. ಕನ್ನಡದ ನಟ ವಸಿಷ್ಠ ಸಿಂಹ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಆ ಪಾತ್ರ ಏನು ಅನ್ನೋದನ್ನ ಸ್ವತಃ ಡೈರೆಕ್ಟರ್ ವಿನೂ ವೆಂಕಟೇಶ್ ರಿವೀಲ್ ಮಾಡಿದ್ದಾರೆ.
ವೂಲ್ಫ್ ಚಿತ್ರದಲ್ಲಿ ವಸಿಷ್ಠ ಸಿಂಹ ವಿಶೇಷ ಪಾತ್ರ ಮಾಡಿದ್ದಾರೆ. ಪತ್ರಕರ್ತನಾಗಿ ಈ ಚಿತ್ರದಲ್ಲಿ ವಸಿಷ್ಠ ಸಿಂಹ ಅಭಿನಯಿಸುತ್ತಿದ್ದಾರೆ. ಇವರ ಪಾತ್ರ ಇಡೀ ಚಿತ್ರದ ಕಥೆಗೆ ತುಂಬಾ ಮುಖ್ಯವಾಗಿಯೇ ಇರುತ್ತದೆ ಎಂದು ನಿರ್ದೇಶಕ ವಿನೂ ವೆಂಕಟೇಶ್ , ನ್ಯೂಸ್-18 ಕನ್ನಡ ಡಿಜಿಟಲ್ಗೆ ತಿಳಿಸಿದ್ದಾರೆ.
ವೂಲ್ಫ್ ಚಿತ್ರದಲ್ಲಿ ಪ್ರಭು ದೇವ ವೂಲ್ಫ್ ಆಗಿ ಬದಲಾಗ್ತಾರಾ?
ವೂಲ್ಫ್ ಚಿತ್ರಕ್ಕೆ ಯಾವುದೇ ಇಂಗ್ಲೀಷ್ ಸಿನಿಮಾದ ಸ್ಪೂರ್ತಿ ಇಲ್ಲ. ಇಲ್ಲಿ ಬರುವ ವೂಲ್ಫ್ ಬೇರೆ ರೀತಿಯಲ್ಲಿ ಪ್ರೊಜೆಕ್ಟ್ ಆಗುತ್ತದೆ. ಇಂಗ್ಲೀಷ್ ಸಿನಿಮಾ ರೀತಿ ಯಾವುದು ಇಲ್ಲಿ ಇರೋದಿಲ್ಲ ಅಂತಲೇ ವಿನೂ ವೆಂಕಟೇಶ್ ಹೇಳುತ್ತಾರೆ.
ವೂಲ್ಫ್ ಚಿತ್ರದಲ್ಲಿ ವಿಜಯ್ ಸೇತುಪತಿ ಒಂದು ಹಾಡನ್ನ ಹಾಡಿದ್ದಾರೆ. ಇದು ವಿಶೇಷವಾದ ಹಾಡು ಆಗಿದೆ ಅಂತ ಡೈರೆಕ್ಟರ್ ವಿನೂ ವೆಂಕಟೇಶ್ ಹೇಳಿಕೊಳ್ತಾರೆ.
ಮಾರ್ಚ್ ತಿಂಗಳಲ್ಲಿ ವೂಲ್ಫ್ ಸಿನಿಮಾ ರಿಲೀಸ್
ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಅಭಿನಯದ ವೂಲ್ಫ್ ಚಿತ್ರದ ಬಹುತೇಕ ಕೆಲಸ ಪೂರ್ಣಗೊಂಡಿದೆ. ಮಾರ್ಚ್ ತಿಂಗಳಲ್ಲಿ ಚಿತ್ರವನ್ನ ರಿಲೀಸ್ ಮಾಡೋಕೆ ಪ್ಲಾನ್ ಮಾಡಿಕೊಂಡಿದ್ದೇವೆ.
ಇದನ್ನೂ ಓದಿ: Sanjay Dutt: ಕೆಡಿ ಸಿನಿಮಾ ಟೀಮ್ ಜೊತೆ ಸಂಜಯ್ ದತ್ ಪಾರ್ಟಿ; ಫೋಟೋ ಹಂಚಿಕೊಂಡ ನಟಿ ರಕ್ಷಿತಾ ಪ್ರೇಮ್
ಆದರೆ ರಿಲೀಸ್ ಡೇಟ್ ಇನ್ನೂ ಫಿಕ್ಸ್ ಮಾಡಿಕೊಂಡಿಲ್ಲ. ಮಾರ್ಚ್ ತಿಂಗಳಲ್ಲಿ ಒಂದು ವಿಶೇಷವಾದ ದಿನದಂದು ಚಿತ್ರ ರಿಲೀಸ್ ಆಗುತ್ತದೆ. ಅದಕ್ಕಾಗಿಯೇ ಎಲ್ಲ ಪ್ಲಾನ್ ನಡೆಯುತ್ತಿದೆ ಅಂತ ಡೈರೆಕ್ಟರ್ ವಿನೂ ವೆಂಕಟೇಶ್ ಹೇಳಿದ್ದು, ಚಿತ್ರದ ಫಸ್ಟ್ ಲುಕ್ ಮತ್ತು ಪೋಸ್ಟರ್ ರಿಲೀಸ್ ಮಾಡಿರೋ ಖುಷಿಯಲ್ಲೂ ಇದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ