• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Prabhu Deva: ತೋಳ ಬಂತು ತೋಳ ಬಹು ಭಾಷೆಯ ತೋಳ; Wolf ಚಿತ್ರದ ಫಸ್ಟ್ ಲುಕ್ ರಿಲೀಸ್-ಪ್ರಭು ದೇವ ಖುಷ್​!

Prabhu Deva: ತೋಳ ಬಂತು ತೋಳ ಬಹು ಭಾಷೆಯ ತೋಳ; Wolf ಚಿತ್ರದ ಫಸ್ಟ್ ಲುಕ್ ರಿಲೀಸ್-ಪ್ರಭು ದೇವ ಖುಷ್​!

ತೋಳ ಬಂತು ತೋಳ ಬಹು ಭಾಷೆಯ ತೋಳ!

ತೋಳ ಬಂತು ತೋಳ ಬಹು ಭಾಷೆಯ ತೋಳ!

ವೂಲ್ಫ್ ಚಿತ್ರವನ್ನ ಬಹು ಭಾಷೆಯಲ್ಲಿ ರಿಲೀಸ್ ಮಾಡೋಕೆ ಪ್ಲಾನ್ ಮಾಡಲಾಗಿದೆ. ಸಿನಿಮಾ ಪ್ರೇಮಿಗಳು ಈ ಚಿತ್ರವನ್ನ ಕನ್ನಡ, ತೆಲುಗು, ತಮಿಳು, ಹಿಂದಿ ಹೀಗೆ ಎಲ್ಲ ಭಾಷೆಯಲ್ಲು ನೋಡಬಹುದಾಗಿದೆ. ಬಹು ಭಾಷೆಯಲ್ಲಿ ಬರ್ತಿರೋ ಈ ಚಿತ್ರದ ರಿಲೀಸ್ ಡೇಟ್ ಪ್ಲಾ​ನಿಂಗ್ ನಡೆಯುತ್ತಿದೆ.

 • News18 Kannada
 • 3-MIN READ
 • Last Updated :
 • Bangalore [Bangalore], India
 • Share this:

ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭು ದೇವ (Prabhu Deva) ಅಭಿನಯದ ವೂಲ್ಫ್ ಚಿತ್ರದ (Wolf Movie First Look) ಫಸ್ಟ್ ಲುಕ್ ರಿಲೀಸ್ ಆಗಿದೆ. ಚಿತ್ರದ ಮೋಷನ್ ಪೋಸ್ಟರ್ ಕೂಡ ಗಮನ ಸೆಳೆಯುತ್ತಿದೆ. ಬಹು ಭಾಷೆಯಲ್ಲಿ ತಯಾರಾಗ್ತಿರೋ ಈ ಚಿತ್ರಕ್ಕೆ ಕನ್ನಡದ ಹೆಸರಾಂತ ನಿರ್ಮಾಪಕರು ದುಡ್ಡು ಹಾಕಿದ್ದಾರೆ. ಸಿನಿಮಾದ ಬಹುತೇಕ ಕೆಲಸ ಮುಗಿದಿದೆ. ಮುಂದಿನ ಮಾರ್ಚ್​ (Wolf Movie Release On March) ತಿಂಗಳು ಚಿತ್ರ ರಿಲೀಸ್ ಆಗೋ ಸಾಧ್ಯತೆ ಇದೆ. ಅದಕ್ಕೂ ಮೊದಲೇ ಸಿನಿಮಾ ತಂಡ, ಚಿತ್ರದ ಫಸ್ಟ್ ಲುಕ್ ಹಾಗೂ ಮೋಷನ್ (Movie Mostion Poster) ಪೋಸ್ಟರ್ ರಿಲೀಸ್ ಮಾಡಿದೆ. ವಿಶೇಷವೆಂದ್ರೆ ಚಿತ್ರದ ಈ ಪೋಸ್ಟರ್ ಮತ್ತು ಮೋಷನ್ ಪೋಸ್ಟರ್​ನ್ನ ಡೈರೆಕ್ಟರ್ ವಿನೂ ವೆಂಕಟೇಶ್ ಮತ್ತು ಪ್ರಭು ದೇವ ಸೋಷಿಯಲ್ ಮೀಡಿಯಾದಲ್ಲೂ ಶೇರ್ ಮಾಡಿದ್ದಾರೆ.


ಇಂಗ್ಲೀಷ್ ಟೈಟಲ್-ಕನ್ನಡ ಪ್ರೋಡ್ಯೂಸರ್-ಪ್ರಭು ದೇವ ನಟನೆ!
ಕನ್ನಡದಲ್ಲಿ ತೋಳದ ಕಥೆಗಳನ್ನ ಇಟ್ಟುಕೊಂಡು ಸಿನಿಮಾ ಬಂದಿರೋದು ತೀರಾ ಕಡಿಮೆ ಅಂತಲೇ ಹೇಳಬಹುದು. ಅಂತಹ ಸಿನಿಮಾಗಳೆಲ್ಲ ಹಾಲಿವುಡ್​ಗೆ ಸೀಮಿತ ಅನ್ನೋ ಕಲ್ಪನೆ ಕೂಡ ಇದೆ. ಆದರೆ ಈಗ ದಕ್ಷಿಣದ ಅನೇಕ ಚಿತ್ರಗಳು ಹಾಲಿವುಡ್​ ಮಟ್ಟಕ್ಕೇನೆ ರೆಡಿ ಆಗುತ್ತಿವೆ.


Multi Language Wolf Movie First Look Released
ಬಹು ಭಾಷೆಯಲ್ಲಿ ಪ್ರಭು ದೇವ ವೂಲ್ಫ್​ ಚಿತ್ರ ರಿಲೀಸ್


ಈ ಹಿನ್ನೆಲೆಯಲ್ಲಿ ನೋಡೋದಾದ್ರೆ, ಬಹು ಭಾಷೆಯ ವೂಲ್ಫ್ ಚಿತ್ರ ಅದ್ಭುತವಾಗಿಯೇ ಬಂದಿದೆ ಅನಿಸುತ್ತಿದೆ. ಇಂಗ್ಲೀಷ್ ಫಿಲ್ಮಂ ನ ಕ್ವಾಲಿಟಿ ಇಲ್ಲಿ ಎದ್ದು ಕಾಣುತ್ತಿದೆ.
ಬಹು ಭಾಷೆಯಲ್ಲಿ ಪ್ರಭು ದೇವ ವೂಲ್ಫ್​ ಚಿತ್ರ ರಿಲೀಸ್
ವೂಲ್ಫ್ ಸಿನಿಮಾ ವಿಶೇಷವಾಗಿಯೇ ಬಂದಿದೆ. ಚಿತ್ರದಲ್ಲಿ ಪ್ರಭು ದೇವ ತೋಳವಾಗಿ ರೂಪಾಂತರ ಹೊಂದುತ್ತಾರೆ ಅನ್ನೋ ರೀತಿಯಲ್ಲಿಯೇ ಚಿತ್ರದ ಮೋಷನ್ ಪೋಸ್ಟರ್ ಇದೆ. ಯಾವುದೇ ಇಂಗ್ಲೀಷ್ ಚಿತ್ರಕ್ಕೆ ಕಮ್ಮಿ ಇಲ್ಲ ಅನ್ನೋ ರೀತಿಯಲ್ಲಿ ವೂಲ್ಫ್ ಸಿನಿಮಾ ರೆಡಿ ಆಗಿದೆ.ವೂಲ್ಫ್ ಚಿತ್ರವನ್ನ ಬಹು ಭಾಷೆಯಲ್ಲಿ ರಿಲೀಸ್ ಮಾಡೋಕೆ ಪ್ಲಾನ್ ಮಾಡಲಾಗಿದೆ. ಸಿನಿಮಾ ಪ್ರೇಮಿಗಳು ಈ ಚಿತ್ರವನ್ನ ಕನ್ನಡ, ತೆಲುಗು, ತಮಿಳು, ಹಿಂದಿ ಹೀಗೆ ಎಲ್ಲ ಭಾಷೆಯಲ್ಲು ನೋಡಬಹುದಾಗಿದೆ. ಬಹು ಭಾಷೆಯಲ್ಲಿ ಬರ್ತಿರೋ ಈ ಚಿತ್ರದ ರಿಲೀಸ್ ಡೇಟ್ ಪ್ಲಾ​ನಿಂಗ್ ನಡೆಯುತ್ತಿದೆ.


ಬಹು ಭಾಷಾ ವೂಲ್ಫ್ ಚಿತ್ರದಲ್ಲಿ ವಸಿಷ್ಠ ಸಿಂಹ ಅಭಿನಯ
ವೂಲ್ಫ್ ಚಿತ್ರದಲ್ಲಿ ತಾರಾ ಬಳಗ ದೊಡ್ಡದೇ ಇದ್ದು, ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭು ದೇವ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕನ್ನಡದ ವಸಿಷ್ಠ ಸಿಂಹ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ ಅನ್ನೋ ವಿಷಯ ಕೂಡ ಈಗಾಗಲೇ ಹರಿದಾಡುತ್ತಿದೆ.


ಚಿತ್ರದಲ್ಲಿ ಬೆಳಗಾವಿ ಹುಡುಗಿ ಲಕ್ಷ್ಮೀ ರೈ, ನಟಿ ಶ್ರೀಗೋಪಿಕಾ, ಅನಸುಯಾ ಭಾರದ್ವಾಜ್ ಹೀಗೆ ನಟಿಯರ ದಂಡು ಈ ಚಿತ್ರದಲ್ಲಿರೋದು ವಿಶೇಷವೇ ಆಗಿದೆ. ಇನ್ನು ಚಿತ್ರದ ರಿಲೀಸ್ ಕೂಡ ಸನಿಹದಲ್ಲಿಯೇ ಇದೆ ಅಂತೇ ಹೇಳಬಹುದು.


ಪ್ರಭು ದೇವ ವೂಲ್ಫ್ ಚಿತ್ರಕ್ಕೆ ವಿನೂ ವೆಂಕಟೇಶ್ ನಿರ್ದೇಶನ
ವೂಲ್ಫ್ ಚಿತ್ರದ ನಿರ್ದೇಶಕ ವಿನೂ ವೆಂಕಟೇಶ್, ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಮೂಲಕ ಕನ್ನಡಕ್ಕೂ ಬಂದಿದ್ದಾರೆ ಅಂದ್ರೆ ತಪ್ಪಾಗೋಲ್ಲ ಬಿಡಿ.


Multi Language Wolf Movie First Look Released
ಪ್ರಭು ದೇವ ವೂಲ್ಫ್ ಚಿತ್ರಕ್ಕೆ ವಿನೂ ವೆಂಕಟೇಶ್ ನಿರ್ದೇಶನ


ವಿನೂ ವೆಂಕಟೇಶ್ ತಮ್ಮ ಈ ಚಿತ್ರವನ್ನ ಇಂಗ್ಲೀಷ್ ಚಿತ್ರದ ರೀತಿಯಲ್ಲಿ ತೆಗೆದಿದ್ದಾರೆ. ಸಿನಿಮಾದಲ್ಲಿ ತೋಳದ ಕಥೆ ಇರೋದ್ರಿಂದಲೋ ಏನೋ, ಈ ಚಿತ್ರದಲ್ಲಿ ಥ್ರಿಲ್ಲಿಂಗ್ ಎಲಿಮೆಂಟ್ಸ್ ಜಾಸ್ತಿ ಇದೆ ಅಂತಲೂ ಗೆಸ್​ ಮಾಡಬಹುದು. ಹಾಗೇನೆ ಸಿನಿಮಾದಲ್ಲಿ ಭಯ ಹುಟ್ಟಿಸೋ ದೃಶ್ಯಗಳೂ ಇದ್ದಂತೆ ಕಾಣುತ್ತವೆ.


ಒಟ್ಟಾರೆ, ವೂಲ್ಫ್ ಚಿತ್ರ ಬಹು ಭಾಷೆಯಲ್ಲಿ ರಿಲೀಸ್ ಆಗಿ ಎಲ್ಲರಿಗೂ ಒಂದು ಹೊಸ ರೀತಿಯ ಅನುಭವ ಕೊಡುವಂತೆ ಕಾಣುತ್ತಿದೆ.


ಇದನ್ನೂ ಓದಿ: Ghost Movie: ಕನ್ನಡದ ಘೋಸ್ಟ್ ಚಿತ್ರಕ್ಕೆ ವಿಜಯ್ ಸೇತುಪತಿ ಬರ್ತಾರಾ? ಏನ್ ಅಂತಾರೆ ಡೈರೆಕ್ಟರ್ ಶ್ರೀನಿ?


ಬಹು ಭಾಷೆಯಲ್ಲಿ ರಿಲೀಸ್ ಆಗ್ತಿರೋ ವೂಲ್ಫ್ ಚಿತ್ರಕ್ಕೆ ಕನ್ನಡದ ಹೆಸರಾಂತ ನಿರ್ಮಾಪಕರಾದ ಸಂದೇಶ್ ನಾಗರಾಜ್ ಅವರೇ ಬಂಡವಾಳ ಹೂಡಿದ್ದಾರೆ. ಸದ್ಯಕ್ಕೆ ಸಿನಿಮಾ ತಂಡ ಚಿತ್ರೀಕರಣದ ನಂತರದ ಕೆಲಸದಲ್ಲಿ ಬ್ಯುಸಿ ಆಗಿದೆ. ಮಾರ್ಚ್​ ತಿಂಗಳಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ಲಾನ್ ಕೂಡ ಇದೆ. ಆದರೆ ರಿಲೀಸ್ ಡೇಟ್ ಇನ್ನಷ್ಟೆ ಅನೌನ್ಸ್ ಆಗಬೇಕಿದೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು