ಟಾಲಿವುಡ್ನಲ್ಲಿ ತಮ್ಮ ವಿಶೇಷ (Singer Mangli New Song) ಕಂಠಸಿರಿಯಿಂದಲೇ ಹೆಸರಾದ ಗಾಯಕಿ ಮಂಗ್ಲಿ ಮತ್ತೆ ಕನ್ನಡ ಚಿತ್ರದ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ. ಸೈರನ್ (Kannada Siren Movie) ಹೆಸರಿನ ಹೊಸಬರ ಚಿತ್ರದಲ್ಲಿ ಮಂಗ್ಲಿ ಎಣ್ಣೆ ಹಾಡಿಗೆ ಹೊಸ ಖದರ್ ತಂದುಕೊಟ್ಟಿದ್ದಾರೆ. ಮಂಗ್ಲಿ (Special Voice) ಕಂಠಸಿರಿಯಲ್ಲಿ ಮಾಸ್ ಸಾಂಗ್ಗಳು ತುಂಬಾ ಚೆನ್ನಾಗಿಯೇ ಬರುತ್ತವೆ. ವೇದ (Vedha Movie Singer) ಚಿತ್ರದಲ್ಲೂ ಮಂಗ್ಲಿ ಗಿಲ್ಲಕ್ಕೋ ಶಿವ ಅನ್ನೋ ಹಾಡಿಗೆ ಧ್ವನಿಯಾಗಿದ್ದರು. ಆ ಗೀತೆ ಕೂಡ ಸೂಪರ್ ಆಗಿಯೇ ಇತ್ತು. ಜನ ಕೂಡ ಅದನ್ನ ಮೆಚ್ಚಿ ಕೊಂಡಾಡಿದರು. ಈಗ ಹಾಡಿರೋ ಗೀತೆಯಲ್ಲೂ ಸಖತ್ ಕಿಕ್ ಇದೆ. ಇದರ ಬಗ್ಗೆ ಇನ್ನೂ ಒಂದಷ್ಟು ಮಾಹಿತಿ ಇಲ್ಲಿದೆ ಓದಿ.
ಎಣ್ಣೆ ಹೊಡೆಯೋ ಟೈಮಲಿ ನನ್ನ ಸ್ವಲ್ಪ ನೆನಪಿಸಿಕೊಳ್ಳಿ!
ಗಾಯಕಿ ಮಂಗ್ಲಿ ಕಂಠಸಿರಿಯಲ್ಲಿ ಏನೋ ವಿಶೇಷತೆ ಇದೆ. ಒಂದು ರೀತಿ ಕನ್ನಡದ ಗಾಯಕಿ ಅದಿತಿ ಸಾಗರ್ ರೀತಿನೇ ಗಾಯಕಿ ಮಂಗ್ಲಿ ಧ್ವನಿನೂ ಗಟ್ಟಿಯಾಗಿದೆ. ಈ ಕಂಠಸಿರಿಯಲ್ಲಿ ಬರುವ ಹಾಡುಗಳು ಜನಕ್ಕೆ ಬೇಗ ರೀಚ್ ಆಗುತ್ತವೆ.
ಇದರಿಂದಲೋ ಏನೋ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಈ ಗಾಯಕಿಯಿಂದಲೇ ಹಾಡುಗಳನ್ನ ಹಾಡಿಸುತ್ತಿದ್ದಾರೆ. ಇತ್ತೀಚಿನ ಲೇಟೆಸ್ಟ್ ಹಿಟ್ ಸಾಂಗ್ ಅಂತ ಬಂದ್ರೆ, ಮಂಗ್ಲಿ ಹಾಡಿರೋ ವೇದ ಚಿತ್ರದ ಗಿಲ್ಲಕ್ಕೋ ಶಿವ ಅತಿ ಹೆಚ್ಚು ಗಮನ ಸೆಳೆದಿತ್ತು ಅಂತಲೇ ಹೇಳಬಹುದು.
"ಸೈರನ್" ಚಿತ್ರದ ಎಣ್ಣೆ ಹಾಡಿಗೆ ಮಂಗ್ಲಿ ಕಂಠಸಿರಿ
ಗಾಯಕಿ ಮಂಗ್ಲಿ ಕನ್ನಡದ ಹಲವು ಸಿನಿಮಾಗಳಿಗೆ ಹಾಡಿದ್ದಾರೆ. ಅದರಲ್ಲಿ ದಿಲ್ಪಸಂದ್ ಚಿತ್ರ ರಾಮ ರಾಮ ಹಾಡು, ತ್ರಿಬಲ್ ರೈಡಿಂಗ್ ಚಿತ್ರದ ಯಟ್ಟಾ ಯಟ್ಟಾ ಹಾಡು, ಶಿವ 143 ಸಿನಿಮಾದ ನಂತಾಕ ಬಾ, ವೇದ ಚಿತ್ರದ ಗಿಲ್ಲಕ್ಕೋ ಶಿವ ಹಾಡಿಗೂ ಧ್ವನಿಯಾಗಿದ್ದಾರೆ. ಹೀಗೆ ಗಾಯಕಿ ಮಂಗ್ಲಿ ಹಾಡಿದ ಅಷ್ಟೂ ಗೀತೆಗಳೂ ಹೆಚ್ಚು ಕಡಿಮೆ ಎಲ್ಲರಿಗೂ ರೀಚ್ ಆಗಿವೆ.
"ಸೈರನ್" ಚಿತ್ರದ ಮೂಲಕ ಮತ್ತೆ ಕನ್ನಡಕ್ಕೆ ಬಂದ ಮಂಗ್ಲಿ!
ಕನ್ನಡದಲ್ಲಿ ಗಾಯಕಿ ಮಂಗ್ಲಿಗೆ ಬೇಡಿಕೆ ಹೆಚ್ಚಾಗಿದ್ದು, ಕನ್ನಡದ ಒಂದಿಲ್ಲ ಒಂದು ಚಿತ್ರದಲ್ಲಿ ಮಂಗ್ಲಿ ಗಾನ ಇದ್ದೇ ಇರುತ್ತದೆ. ಅದೇ ರೀತಿ "ಸೈರನ್" ಹೆಸರಿನ ಚಿತ್ರದಲ್ಲಿ ಮಂಗ್ಲಿ ಒಂದು ಎಣ್ಣೆ ಹಾಡಿಗೆ ಧ್ವನಿಯಾಗಿದ್ದಾರೆ. "ಎಣ್ಣೆ ಹೊಡೆಯೋ ಟೈಮಲಿ ನನ್ನ ಸ್ವಲ್ಪ ನೆನಪಿಸಿಕೊಳ್ಳಿ" ಅನ್ನೋ ಈ ಗೀತೆ ರೆಕಾರ್ಡಿಂಗ್ ಕೂಡ ಆಗಿದೆ.
ಮಂಗ್ಲಿ ಎಣ್ಣೆ ಹಾಡು ಇದೇ 24 ರಂದು ರಿಲೀಸ್
ಚಿನ್ಮಯ್ ಬಾವಿಕೆರೆ ಬರೆದಿರೋ ಈ ಗೀತೆಗೆ ಭಾರದ್ವಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಹಾಡಿನ ಲಿರಿಕಲ್ ವಿಡಿಯೋ ಇದೇ ತಿಂಗಳು 24 ರಂದು ರಿಲೀಸ್ ಆಗುತ್ತಿದೆ.
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿ "ಸೈರನ್" ಚಿತ್ರದ ನಾಯಕ!
ವಿಭಿನ್ನ ಕಥೆಯನ್ನ ಹೊಂದಿರೋ ಈ ಚಿತ್ರದಲ್ಲಿ ಕನ್ನಡ ಹೋರಾಟಗಾರ ಪ್ರವೀಣ್ ಶೆಟ್ಟಿ ಅವರ ಪುತ್ರ ಪ್ರವೀರ್ ಶೆಟ್ಟಿ ನಾಯಕರಾಗಿದ್ದಾರೆ. ಈ ಮೂಲಕ ಕನ್ನಡ ಇಂಡಸ್ಟ್ರೀಗೂ ಕಾಲಿಡುತ್ತಿದ್ದಾರೆ.
ಪ್ರವೀರ್ ಶೆಟ್ಟಿ ಜೊತೆಗೆ ಈ ಚಿತ್ರದಲ್ಲಿ ನಟಿ ಲಾಸ್ಯ ಜೋಡಿ ಆಗಿದ್ದಾರೆ. ಪವಿತ್ರಾ ಲೋಕೇಶ್, ಸ್ಪರ್ಶ ರೇಖಾ, ಶರತ್ ಲೋಹಿತಾಶ್ವ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನು ಚಿತ್ರದ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಮುಂದಿನ ತಿಂಗಳು ಈ ಚಿತ್ರ ರಿಲೀಸ್ ಕೂಡ ಆಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ