ಪವಿತ್ರಾ ಲೋಕೇಶ್ ಮತ್ತು ನರೇಶ್ (Pavitra-Naresh Movie Latest Updates) ಅಭಿನಯದ ಮತ್ತೆ ಮದುವೆ ( Matte Maduve Movie) ಸ್ಪೆಷಲ್ ಸಾಂಗ್ ರಿಲೀಸ್ ಆಗಿದೆ. ಹಾಡಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ಪಾತ್ರದ ಮೇಕಿಂಗ್ ಕೂಡ ರಿವೀಲ್ ಆಗಿದೆ. ಇದನ್ನ ನೋಡಿದ್ರೆ ಎಲ್ಲ ಸಿನಿಮಾ ರೀತಿನೇ ಇದೂ ಒಂದು ಮಿಡ್ಲ್ ಏಜ್ ಲವರ್ಸ್ ಸ್ಟೋರಿ ರೀತಿನೇ ಕಾಣುತ್ತಿದೆ. ವಯಸ್ಸಾದ್ಮೆಲೆ ಲವ್ ಆದ್ರೆ ಹೇಗೆಲ್ಲ ಅಗುತ್ತದೆ ಅನ್ನೋದು ಇದರಲ್ಲಿ ತಿಳಿಯವಂತೆ ಕಾಣುತ್ತಿದೆ. ಆದರೆ ಅದ್ಯಾಕೆ ಈ ಚಿತ್ರದಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ಎಲ್ಲವನ್ನೂ ರಿಯಲ್ ಮದುವೆ ರೀತಿ ಪ್ರೊಜೆಕ್ಟ್ ಮಾಡಿದರೋ ಏನೋ?
ಈಗೀನ ಹಾಡನ್ನ ನೋಡಿದ್ರೆ ಎಲ್ಲೂ ಇದು ಸಿನಿಮಾ ಬಿಟ್ಟು ಬೇರೆ ಕೆಂಟೆಂಟ್ ಇದೆ ಅನಿಸೋದಿಲ್ಲ.
ಮತ್ತೆ ಮದುವೆ.. ಸಿನಿಮಾನಾ? ನಾಟಕಾನಾ?
ಮತ್ತೆ ಮದುವೆ ಚಿತ್ರದ ಮೂಲಕ ಟಾಲಿವುಡ್‌ನ ನರೇಶ್ ಮತ್ತು ಕನ್ನಡತಿ ಪವಿತ್ರಾ ಲೋಕೇಶ್ ಭರ್ಜರಿ ಸದ್ದು ಮಾಡಿದ್ದಾರೆ. ಈ ಮೂಲಕ ತಾವು ಮದುವೇನೆ ಆಗಿದ್ದೇವೆ ಅನ್ನೋಮಟ್ಟಕ್ಕೆ ಸದ್ದು ಮಾಡಿದ್ದಾರೆ. ಆದರೆ ಜನ ಎಲ್ಲದಕ್ಕೂ ಮರುಳಾಗೋದಿಲ್ಲ ಬಿಡಿ.
ರಿಯಲ್ ಲವ್ ಸ್ಟೋರಿ ಇದ್ರೇ ಇಲ್ಲವೇ ಏನಾದರೂ ವಿವಾದ ಇದ್ರೇ ಥಿಯೇಟರ್‌ಗೆ ಬಂದು ಸಿನಿಮಾ ನೋಡ್ತಾರೆ. ಇಲ್ಲವೇ ನ್ಯೂಸ್ ಚಾನೆಲ್‌ಗಳಲ್ಲಿಯೇ ಎಲ್ಲವನ್ನೂ ನೋಡಿ ಇಷ್ಟೆ ಬಿಡಿ ಅಂತಲೇ ಸುಮ್ಮನಾಗುತ್ತಾರೆ.
ಪವಿತ್ರಾ-ನರೇಶ್ ಮದುವೆ ಪ್ರಮೋಷನ್ ಗಿಮಿಕ್ಕಾ?
ಅದಕ್ಕೋ ಏನೋ, ಪವಿತ್ರಾ ಲೋಕೇಶ್ ಮತ್ತು ನಟ ನರೇಶ್ ತಮ್ಮ ಮತ್ತೆ ಮದುವೆ ಚಿತ್ರವನ್ನ ರಿಯಲ್ ರೀತಿಯಲ್ಲಿಯೇ ಪ್ರಮೋಟ್ ಮಾಡ್ತಾರೆ ಅನಿಸುತ್ತದೆ. ಇದೀಗ ರಿಲೀಸ್ ಆದ ಉರುಳೋ ಕಾಲವೇ ಹಾಡನ್ನ ನೋಡಿದ್ರೆ ಎಲ್ಲವೂ ಸಿನಮಾನೇ ಅನಿಸುತ್ತದೆ.
ಹೌದು, ಮತ್ತೆ ಮದುವೆ ಚಿತ್ರದ ಉರುಳೋ ಕಾಲವೇ ಹಾಡಿನಲ್ಲಿ ಮತ್ತೆ ಮದುವೆ ಚಿತ್ರದ ಮೇಕಿಂಗ್ ವಿಡಿಯೋ ಕೂಡ ರಿವೀಲ್ ಆಗಿದೆ. ಈ ಹಾಡಿನಲ್ಲಿ ಎಲ್ಲ ಸಿನಿಮಾದ ರೀತಿಯಲ್ಲಿಯೇ ಎಲ್ಲವೂ ನಾರ್ಮಲ್ ಆಗಿಯೇ ಇದೆ. ಆದರೂ ಈ ಸಿನಿಮಾ ಬಗ್ಗೆ ಒಂದು ಸೆಳೆತ ಇದ್ದೇ ಇದೆ.
ಮತ್ತೆ ಮದುವೆ ಚಿತ್ರದ ಹಾಡಿನಲ್ಲಿ ಇರೋ ವಿಶೇಷತೆ ಏನು?
ಮತ್ತೆ ಮದುವೆ ಸಿನಿಮಾದ ಉರುಳೋ ಕಾಲವೇ ಹಾಡನ್ನ ವರದರಾಜು ಚಿಕ್ಕಬಳ್ಳಾಪುರ ಬರೆದಿದ್ದಾರೆ. ಗಾಯಕ ಸಂತೋಷ್ ವೆಂಕಿ ಈ ಒಂದು ಹಾಡಿಗೆ ಬೇರೆ ಗತ್ತನ್ನ ತಂದುಕೊಟ್ಟಿದ್ದಾರೆ. ಸುರೇಶ್ ಬೊಬ್ಬಿಲಿ ಸಂಗೀತ ನಿರ್ದೇಶನದ ಈ ಹಾಡಿನಲ್ಲಿ ಮೇಕಿಂಗ್ ವಿಡಿಯೋ ಕೂಡ ಗಮನ ಸೆಳೆಯುತ್ತದೆ.
ಮತ್ತೆ ಮದುವೆ ಚಿತ್ರವನ್ನ ಎಂ.ಎಸ್. ರಾಜು ನಿರ್ದೇಶನ ಮಾಡಿದ್ದಾರೆ. ಇದೇ ಮೇ ತಿಂಗಳಲ್ಲಿ ಚಿತ್ರವನ್ನ ರಿಲೀಸ್ ಮಾಡೋಕೆ ಸಿನಿಮಾ ಟೀಮ್ ಪ್ಲಾನ್ ಮಾಡಿದೆ. ಮೊನ್ನೆ ರಿಲೀಸ್ ಆದ ಟೀಸರ್ ಚಿತ್ರದ ಬಗ್ಗೆ ಬೇರೆಯದ್ದೇ ಕುತೂಹಲ ಮೂಡಿಸಿದೆ.
ಹೋಟೆಲ್ ರಂಪಾಟ.. ರೀಲಾ? ರಿಯಲ್ಲಾ?
ನರೇಶ್ ಮತ್ತು ಪವಿತ್ರಾ ಲೋಕೇಶ್ ಮೈಸೂರಿನ ಹೋಟಲ್‌ನಲ್ಲಿದ್ದರು. ಆ ಒಂದು ದಿನ ನರೇಶ್ ಮೂರನೇ ಪತ್ನಿ ಅಲ್ಲಿಗೆ ಬಂದು ರಾದ್ಧಾಂತ ಮಾಡಿದ್ದರು. ಆ ಒಂದು ದೃಶ್ಯವೂ ಈ ಒಂದು ಚಿತ್ರದ ಟೀಸರ್‌ನಲ್ಲಿ ಇದೆ. ಹಾಗಾಗಿಯೇ ಮತ್ತೆ ಮದುವೆ ರೀಲಾ ? ರಿಯಲ್ಲಾ? ಅನ್ನುವ ಅನುಮಾನ ಕೂಡ ಮೂಡಿದೆ.
ಇದನ್ನೂ ಓದಿ: Freddie Mercury: ಈ ಖ್ಯಾತ ಗಾಯಕನ ಚಡ್ಡಿಗೆ 18 ಲಕ್ಷ ರೂಪಾಯಿ! ಹರಾಜಿನಲ್ಲಿ ಖರೀದಿಸೋಕೆ ಮುಗಿಬಿದ್ದ ಜನ!
ಆದರೆ ಇದೀಗ ರಿಲೀಸ್ ಆಗಿರೋ ಹಾಡಲ್ಲಿ ಅಂತಹ ಯಾವುದೇ ರಿಯಲ್ ಟಚ್ ಕಾಣೋದೇ ಇಲ್ಲ. ನಾರ್ಮಲ್ ಒಂದು ಸಿನಿಮಾದ ಗೀತೆಯ ರೀತಿಯಲ್ಲಿಯೇ ಈ ಒಂದು ಹಾಡು ಕಂಡು ಬರುತ್ತದೆ. ಚಿತ್ರದ ಮೇಕಿಂಗ್ ವಿಡಿಯೋ ಕೂಡ ಈ ಒಂದು ಹಾಡಿನಲ್ಲಿ ಕಾಣಿಸುತ್ತವೆ. ಆದರೆ ಅಂತಹ ಸ್ಪೆಷಲ್ ಅನಿಸೋ ಗೀತೆ ಇದಲ್ಲ ಅಂತಲೇ ಫೀಲ್ ಆಗುತ್ತದೆ ಅಷ್ಟೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ