• Home
  • »
  • News
  • »
  • entertainment
  • »
  • Sandalwood: ಹುಲಿ - ಕಾಳಿಂಗ ಸರ್ಪದಿಂದ ಬಚಾವ್ ಆದ ಮುಖ್ಯಮಂತ್ರಿ ಚಂದ್ರು, ಭಯಾನಕ ಘಟನೆ ಬಿಚ್ಚಿಟ್ಟ ಹಿರಿಯ ನಟ

Sandalwood: ಹುಲಿ - ಕಾಳಿಂಗ ಸರ್ಪದಿಂದ ಬಚಾವ್ ಆದ ಮುಖ್ಯಮಂತ್ರಿ ಚಂದ್ರು, ಭಯಾನಕ ಘಟನೆ ಬಿಚ್ಚಿಟ್ಟ ಹಿರಿಯ ನಟ

ಮುಖ್ಯಮಂತ್ರಿ ಚಂದ್ರು

ಮುಖ್ಯಮಂತ್ರಿ ಚಂದ್ರು

Sandalwood: ಅಲ್ಲದೇ ಹುಲಿ ಬರುತ್ತಿರುವುದು ತಿಳಿದ ಹಾಗೆ ಅವರು ಹೊರಡುತ್ತಾರೆ. ಆದರೆ ಅಲ್ಲೇ ಹತ್ತೇ ಅಡಿಯಲ್ಲಿ ಕಾಳಿಂಗ ಸರ್ಪ ಕಂಡಿತು ಎಂದು ಮುಖ್ಯಮಂತ್ರಿ ಚಂದ್ರು ಆ ಭಯಾನಕ ಘಟನೆಯನ್ನು ವಿವರಿಸಿದ್ದಾರೆ.  

  • Share this:

ಸ್ಯಾಂಡಲ್‌ವುಡ್‌ನ (Sandalwood) ಹಿರಿಯ ನಟ ಮುಖ್ಯಮಂತ್ರಿ ಚಂದ್ರು(Mukhyamantri Chandru) ಸದ್ಯ ಕಿರುತೆರೆಯಲ್ಲಿ ಬ್ಯುಸಿ ಇದ್ದಾರೆ. ಧಾರಾವಾಹಿಗಳು ಹಾಗೂ ರಿಯಾಲಿಟಿ ಶೋಗಳಲ್ಲಿ (Reality Show)   ಜಡ್ಜ್​ ಆಗಿ ಕಾಣಿಸಿಕೊಳ್ಳುತ್ತಿದ್ಆರೆ. ಅಗ್ನಿಸಾಕ್ಷಿ ಧಾರಾವಾಹಿಯ ನಂತರ ಪುರ್ಣ ಪ್ರಮಾಣದಲ್ಲಿ ಮತ್ತೆ ಕಿರುತೆರೆಗೆ ಬಂದಿದ್ದು, ಸ್ಟಾರ್ ಸುವರ್ಣವಾಹಿನಿಯಲ್ಲಿ ಬರುವ ಕಾಮಿಡಿ ಗ್ಯಾಂಗ್(Comedy Gang) ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿದ್ದಾರೆ. ಈ ಶೋ ಜನರನ್ನು ತಮ್ಮ ಕಾಮಿಡಿಗಳ ಮೂಲಕ ನಗಿಸುವ ಕಾರ್ಯಕ್ರಮವಾಗಿದ್ದು, ಇದರಲ್ಲಿ ಚಂದ್ರು ಆಗಾಗ ಒಂದೊಂದು ಸ್ವಾರಸ್ಯಕರ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.


ಇತ್ತೀಚೆಗೆ ನಡೆದ ಎಪಿಸೋಡ್​ನಲ್ಲಿ ಡಾ.ರಾಜ್ ಕುಮಾರ್ ನಟನೆಯ ಒಂದು ಮುತ್ತಿನಕಥೆ(Ondu Muttina Kathe) ಸಿನಿಮಾದ ಚಿತ್ರೀಕರಣ ಸಮಯದಲ್ಲಿ ನಡೆದ ಭಯಾನಕ ಘಟನೆಯನ್ನು ಬಹಿರಂಗ ಪಡಿಸಿದ್ದು, ಆ ಸಮಯದಲ್ಲಿ ಪುಟ್ಟ ಬಾಲಕ ಅವರ ಜೀವ ಉಳಿಸಿದ ಘಟನೆಯನ್ನು ಹೇಳಿದ್ದಾರೆ.  'ಒಂದು ಮುತ್ತಿನ ಕಥೆ' ಸಿನಿಮಾ ಚಿತ್ರೀಕರಣವನ್ನು ಯಾಣದಲ್ಲಿ ಮಾಡಲಾಗುತ್ತಿತ್ತಂತೆ, ಅಲ್ಲಿಗೆ ಸರಿ ಸುಮಾರು 3 ರಿಂದ 4 ಕಿ.ಮೀ ನಡೆದುಕೊಂಡು ಹೋಗಬೇಕಿತ್ತು.


ಆಗಿದ್ದೇನು? 


ಯಾಣ ತುಂಬಿರುವುದೇ ಬರೀ ಕಲ್ಲು ಗಳಿಂದ. ಅದರಲ್ಲೂ ಕಪ್ಪು ಬಣ್ಣದ ಕಲ್ಲುಗಳಿಂದ. ಇಡೀ ಚಿತ್ರತಂಡ ನಡೆದುಕೊಂಡು ಹೋಗುತ್ತಿತ್ತಂತೆ. ಕಲಾವಿದರಾದ ಸುಧೀಂದ್ರ, ರಮೇಶ್ ಭಟ್, ಸುಂದರ್ ರಾಜ್ ಸೇರಿದಂತೆ ಸಾಕಷ್ಟು ಜನರು ಒಟ್ಟಿಗೆ ಹೋಗುತ್ತಿದ್ದರಂತೆ. ಬೆಳಗ್ಗೆ 7 ಗಂಟೆಗೆ ಶೂಟಿಂಗ್ ಮಾಡಬೇಕು ಅಂತ  ಬೆಳಗಿನ ಜಾವ 5 ಗಂಟೆಗೆ ನಡೆಯಲು ಆರಂಭಿಸಿದ್ದರಂತೆ.


ಇದನ್ನೂ ಓದಿ: ಫ್ರೆಂಡ್​ ಮದ್ವೆಯಲ್ಲಿ ರಶ್ಮಿಕಾ ಫುಲ್​ ಬ್ಯುಸಿ, ಈ ಸಲ ಎಷ್ಟು ಚೆಂದದ ಸೀರೆ ಉಟ್ಟು ರೆಡಿಯಾಗಿದ್ದಾರೆ ನೋಡಿ ಕೊಡಗಿನ ಕುವರಿ


ಆ ಸಿನಿಮಾದಲ್ಲಿ ಮುಖ್ಯಮಂತ್ರಿ ಚಂದ್ರು ಅವರು ಸಾಹುಕಾರನ ಪಾತ್ರ ಮಾಡಿದ್ದರು, ಹಾಗಾಗಿ ಅವರು ಪೂರ್ತಿ ಬಟ್ಟೆ ಹಾಕಿದ್ದರಂತೆ. ಆದರೆ  ಉಳಿದವರೆಲ್ಲ ಬೆಸ್ತರ ಉಡುಗೆಯಲ್ಲಿದ್ದರು.  ಹೀಗೆ ಚಿತ್ರತಂಡ ನಡೆದುಕೊಂಡು ಹೋಗುವಾಗ 2 ಕಿಮೀ ನಂತರ ಅವರಿಗೆ ಅಲ್ಲಿ ಸಣ್ಣ ತೊರೆ ಕಾಣಿಸಿದೆ. ಅದನ್ನು ನೋಡಿ ರಾಜ್​ಕುಮಾರ್ ಅವರು, ಎಲ್ಲರಿಗೂ ಸುಸ್ತಾಗಿದೆ, ಸ್ವಲ್ಪ ಹೊತ್ತು ಕುಳಿತು ನೀರಲ್ಲಿ ಆಟವಾಡಿಕೊಂಡು ರೆಸ್ಟ್​ ಮಾಡಿಕೊಂಡು ಹೋಗೋಣ ಅಂತ ಹೇಳಿದ್ದಾರೆ. ಅವರೇ ಹೇಳಿದ ಮೆಲೆ ಯಾರೂ ತಾನೇ ಇಲ್ಲ ಎನ್ನುತ್ತಾರೆ. ಎಲ್ಲರೂ ತೊರೆಯಲ್ಲಿ ಆಟವಾಡಲು ಹೋಗುತ್ತಾರೆ.


ಸ್ವಲ್ಪ ಹೊತ್ತು ಅಲ್ಲಿಯೇ ಇವರೆಲ್ಲ ಆಡಿ ಆಡಿಕೊಂಡು, ಮಾತನಾಡುತ್ತಿರುತ್ತಾರೆ. ಆಗ ಅಲ್ಲಿಗೆ ಬಂದ ಬುಡಕಟ್ಟು ಜನಾಂಗ ಬಾಲಕ, ಇಲ್ಲಿಗೆ ಹುಲಿ ಬರುತ್ತದೆ. ಈ ತೊರೆಯಲ್ಲಿ ನೀರು ಕುಡಿಯುತ್ತದೆ ಎನ್ನುತ್ತಾನೆ.  ಈ ಮಾತು ಕೇಳಿ ಎಲ್ಲರೂ ಹೆದರಿಕೊಂಡು ಹೋಗಲು ತುರಾತುರಿಯಲ್ಲಿ ಸಿದ್ದರಾಗುತ್ತಾರೆ. ಆಗ ಬಾಲಕ ಇರಿ, ಇರಿ. ಹುಲಿ ಬಂದರೆ ಸೌಂಡ್​ ಆಗುತ್ತದೆ. ಮಂಗ ಹಾಗೂ ಪ್ರಾಣಿ ಪಕ್ಷಿಗಳು ಶಬ್ಧ ಮಾಡುತ್ತದೆ. ಹೆದರಬೇಡಿ, ನಾನಿದ್ದೇನೆ ಎನ್ನುತ್ತಾನೆ. ನೀನು ಈ ಕಾಡಿನಲ್ಲಿ ಹೇಗೆ ಇರ್ತಿಯಾ ಎಂದು ಕೇಳಿದಾಗ ನನಗೆ ಚಿಕ್ಕಂದಿನಿಂದಲೇ ಅಭ್ಯಾಸವಾಗಿದೆ ಎಂದ.


ಇದನ್ನೂ ಓದಿ: ಮತ್ತೊಮ್ಮೆ ಗೋಲ್ಡ್​ ಮೆಡಲ್ ತಮ್ಮದಾಗಿಸಿಕೊಂಡ ಫಿದಾ ಬೆಡಗಿ, ಶ್ಯಾಮಸಿಂಗರೈ ಚಿತ್ರದ ಅಭಿನಯಕ್ಕೆ ಬಿಹೈಂಡ್ ದಿ ವುಡ್ಸ್ ಪ್ರಶಸ್ತಿ


ಮುಂದೇನಾಯ್ತು?


ಅಲ್ಲದೇ ಹುಲಿ ಬರುತ್ತಿರುವುದು ತಿಳಿದ ಹಾಗೆ ಅವರು ಹೊರಡುತ್ತಾರೆ. ಆದರೆ ಅಲ್ಲೇ ಹತ್ತೇ ಅಡಿಯಲ್ಲಿ ಕಾಳಿಂಗ ಸರ್ಪ ಕಂಡಿತು ಎಂದು ಮುಖ್ಯಮಂತ್ರಿ ಚಂದ್ರು ಆ ಭಯಾನಕ ಘಟನೆಯನ್ನು ವಿವರಿಸಿದ್ದಾರೆ.  ಇನ್ನು ಮುಂದುವರೆದು, ಕಾಳಿಂಗ ಸರ್ಪ ಕಂಡು ನಮ್ಮ ಕತೆ ಮುಗಿಯಿತು ಎಂದುಕೊಳ್ಳುತ್ತಿದ್ದೆವು, ಆದರೆ ರಾಜ್​ಕುಮಾರ್ ಅವರು ಧೈರ್ಯವಾಗಿರಿ ಎಂದು ಹೇಳುತ್ತಾರೆ. ಅಲ್ಲದೇ ಆ ಹುಡುಗ ನಿಜಕ್ಕೂ ದೇವರ ರೀತಿ ಬಂದು ನಮ್ಮನ್ನ ಕಾಪಾಡಿದ್ದಾನೆ ಎಂದು ಆ ಘಳಿಗೆಯನ್ನು ನೆನೆಸಿಕೊಂಡಿದ್ದಾರೆ.

Published by:Sandhya M
First published: