ಕೆ.ಜಿ.ಎಫ್ 2 (KGF 2)ಬಹುನಿರೀಕ್ಷಿತ ಸಿನಿಮಾ. ಈ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯ ಕೆಜಿಎಫ್ 2 ಸಿನಿಮಾದಲ್ಲಿ ಹೇಗೆ ಮೂಡಿ ಬಂದಿದೆ ಎಂಬುದನ್ನು ವೀಕ್ಷಿಸಲು ಕಾತುರರಾಗಿದ್ದಾರೆ. ಅಂದ ಹಾಗೆಯೇ ಇತ್ತೀಚೆಗೆ ರಾಕಿಂಗ್ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ಸಮಯಲ್ಲಿ ಕೆಜಿಎಫ್ ತಂಡ ತಮ್ಮ ಕಡೆಯಿಂದ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ರು. ಆ ಮೂಲಕ ಅಭಿಮಾನಿಗಳಿಗಾಗಿ ಸಿಹಿ ನೀಡಿದ್ದರು. ಆದು ಬಿಟ್ಟರೆ ಬೇರೆ ಏನನ್ನು ಚಿತ್ರತಂಡ ನೀಡಿರಲಿಲ್ಲ. ಬಿಗ್ ಬಜೆಟ್ (Big Budget) ಸಿನಿಮಾವಾದ ಕೆಜಿಎಫ್ ಕಡೆಯಿಂದ ರಾಕಿಂಗ್ ಬರ್ತ್ಡೇಗೆ ಕೇವಲ ಒಂದೇ ಒಂದು ಪೋಸ್ಟ್ ಹಂಚಿಕೊಂಡಿರುವುದು ಅಭಿಮಾನಿಗಳಿಗೆ ಕೊಂಚ ಬೇಸರವಿತ್ತು. ಹೀಗಿರುವಾಗ ನಿರ್ದೇಶಕ ನರ್ತನ್ (Narthan) ಅವರಿಗಾಗಿ ಸಿಹಿ ಸುದ್ದಿ ನೀಡಿದ್ದರು. ಅದೇನೆಂದರೆ ಯಶ್ 19ನೇ ಸಿನಿಮಾ (Yash 19 Film) ಶೀಘ್ರದಲ್ಲೇ ಸೆಟ್ಟೇರುತ್ತೆ ಎಂಬ ಸುಳಿವು ನೀಡಿದ್ದರು. ಜೊತೆಗೆ ಟೀಸರ್ ಬಿಡುಗಡೆಯ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದರು. ಈ ಟ್ವೀಟ್ (Tweet) ನೋಡಿದ ಅಭಿಮಾನಿಗಳಿಗೆ ಸಿಹಿ ಊಟ ಸಿಕ್ಕಂತೆ ಸಂತೋಷ ಪಟ್ಟಿದ್ದರು.
ಯಶ್ ಕೆಜಿಎಫ್ ತಂಡವನ್ನು ಸೇರಿಕೊಂಡ ನಂತರ ಕೆಜಿಎಫ್ ಚಾಪ್ಟರ್ 1 ಬಿಟ್ಟರೆ ಬೇರೆಯಾವುದೇ ಸಿನಿಮಾ ಬಿಡುಗಡೆಯಾಗಿಲ್ಲ. ಇದೀಗ ಕೆಜಿಎಫ್ 2 ಸಿದ್ಧವಾಗಿದೆ. ಇದಕ್ಕಾಗಿ ಅಭಿಮಾನಿಗಳು ಕಾದುನಿಂತಿದ್ದಾರೆ. ಯಶ್ ಸುಮಾರು ಮೂರು ವರ್ಷಗಳ ಕಾಲ ಈ ಸಿನಿಮಾಗೆ ಸಮಯ ನೀಡಿದ್ದಾರೆ. ಹಾಗಾಗಿ ಇದರ ಮಧ್ಯದಲ್ಲಿ ಯಶ್ ಕಡೆಯಿಂದ ಯಾವುದೇ ಸಿನಿಮಾ ನೋಡಲು ಅವಕಾಶ ಸಿಕ್ಕಿರಲಿಲ್ಲ. ಆದರೆ ನಿರ್ದೇಶಕ ನರ್ತನ್ ಅವರ ಟ್ವೀಟ್ ಕಂಡು ಮತ್ತು ಅದರಲ್ಲಿ ಯಶ್ ಅವರ ಮುಂದಿನ ಸಿನಿಮಾದ ಘೋಷಣೆಯನ್ನು ಕಂಡು ಅಭಿಮಾನಿಗಳು ಸಂತಸಗೊಂಡಿದ್ದರು. ಆದರೆ ಬೇಸರದ ಸಂಗತಿಯೆಂದರೆ ಇದು ನಕಲಿ ಟ್ವೀಟ್ ಆಗಿದ್ದು, ನನ್ನ ಹೆಸರಿನಲ್ಲಿ ನಕಲಿ ಖಾತೆ ತೆರೆದು ಈ ರೀತಿ ಮಾಡಲಾಗಿದೆ ಎಂದು ನರ್ತನ್ ಹೇಳಿದ್ದಾರೆ.
ರಾಕಿ ಬಾಯ್ಗೆ ಮಫ್ತಿ ಸಿನಿಮಾದ ನಿರ್ದೇಶಕ ನರ್ತನ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂದು ಈ ಮೊದಲೇ ಸುದ್ದಿಯೊಂದು ಹರಿದಾಡುತ್ತಿತ್ತು. ಮಾತ್ರವಲ್ಲೆ, ಕೆಜಿಎಫ್ 2 ತೆರೆಕಂಡತೆ ನರ್ತನ್ ನಿರ್ದೇಶನದ ಸಿನಿಮಾದಲ್ಲಿ ಯಶ್ ನಟಿಸಲಿದ್ದಾರೆ ಎಂಬುದು ಸುದ್ದಿಯಾಗಿತ್ತು. ಹಾಗಾಗಿ ಅಭಿಮಾನಿಗಳಿಗೂ ತಮ್ಮ ನೆಚ್ಚಿನ ನಟನ ಹುಟ್ಟಹಬ್ಬದಂದು ಹೊಸ ಸಿನಿಮಾ ಘೋಷಣೆ ಮಾಡಲಿದ್ದಾರೆ ಎಂದು ಕಾದುಕುಳಿತ್ತಿದ್ದರು. ಈ ಸಮಯಲ್ಲಿ ಯಾರೋ ನಿರ್ದೇಶಕ ನರ್ತನ್ ಹೆಸರಿನಲ್ಲಿ ನಕಲಿ ಖಾತೆ ತೆರೆದು ಯಶ್ ಮುಂದಿನ 19ನೇ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಸುಳ್ಳು ಮಾಹಿತಿಯನ್ನು ಟ್ವೀಟ್ ಮಾಡಿದ್ದಾರೆ.
ಇದನ್ನು ಓದಿ: Katrina Kaif: ಮುಂದಿನ ಚಿತ್ರದ ಟೈಟಲ್ ಕಾರ್ಡ್ನಲ್ಲಿ ಕತ್ರಿನಾ ಹೆಸರು ಚೇಂಜ್ ಮಾಡ್ತಾರಾ? ಹೀಗೊಂದು ಗುಸುಗುಸು ಶುರುವಾಗಿದೆ
ನರ್ತನ್ ಪ್ರತಿಕ್ರಿಯೆ
ಯಾರೋ ನನ್ನ ನಕಲಿ ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಂ ಖಾತೆ ತೆರೆದಿದ್ದಾರೆ. ಈ ಖಾತೆಯ ಮೂಲಕವೇ ಯಶ್ ಹುಟ್ಟುಹಬ್ಬದ ಇನ ಅವರ 19ನೇ ಸಿನಿಮಾದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಆದರೆ ಇದು ನನ್ನ ಖಾತೆಯಲ್ಲ. . ನಾನು ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಇಲ್ಲ. ಹೀಗಾಗಿ ಅಧಿಕೃತವಾಗಿ ನಾವೇ ಹೇಳುವವರೆಗೂ ಯಾವೂದನ್ನು ನಂಬಬೇಡಿ ಎಂದು ನಿರ್ದೇಶಕ ನರ್ತನ್ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನು ಓದಿ: Deepika Padukone: ಕೊರೊನಾ ಮಾರಿ ಹೇಗೆಲ್ಲಾ ಕಾಡಿತ್ತು ಎಂದು ನೆನೆಸಿಕೊಂಡ ನಟಿ ದೀಪಿಕಾ ಪಡುಕೋಣೆ..!
ನರ್ತನ್ ಈ ನಕಲಿ ಖಾಥೆಯ ಬಗ್ಗೆ ರಿಪೋರ್ಟ್ ಮಾಡಿದ್ದಾರೆ. ಇಂತಹ ಸುಳ್ಳು ಸುದ್ದಿ ಹಬ್ಬಿಸುವ ಖಾತೆಯ ಮೇಲೆ ನಿಗಾ ವಹಿಸಿ ಎಂದು ತಿಳಿಸಿದ್ದಾರೆ. ಅಂದಹಾಗೆಯೇ ಮಫ್ತಿ ನಿರ್ದೇಶಕ ರಾಕಿಂಗ್ ಸ್ಟಾರ್ ಯಶ್ಗೆ ಮುಂದಿನ ಸಿನಿಮಾ ನಿರ್ದೇಶನ ಮಾಡಲಿದ್ದಾರೆಯೇ? ಎಂದು ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ