MS Dhoni Singing Video: ಬ್ಯಾಟ್​ ಹಿಡಿಯುವ ಕೈಯಲ್ಲಿ ಮೈಕ್​ ಹಿಡಿದು ಹಾಡು ಹಾಡಿದ ಧೋನಿ: ವಿಡಿಯೋ ವೈರಲ್​

MS Dhoni Singing Video: ಈ ಹಿಂದೆ ಹೆಂಡತಿಗಾಗಿ ಸೌಟು ಹಿಡಿದು ಅಡುಗೆ ಮಾಡಿ ಸುದ್ದಿಯಾಗಿದ್ದ ಧೋನಿ ಈಗ ಮೈಕ್ ಹಿಡಿದು ಹಾಡು ಹಾಡಿದ್ದಾರೆ. ಅವರು ಹಾಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

Anitha E | news18-kannada
Updated:December 4, 2019, 6:19 PM IST
MS Dhoni Singing Video: ಬ್ಯಾಟ್​ ಹಿಡಿಯುವ ಕೈಯಲ್ಲಿ ಮೈಕ್​ ಹಿಡಿದು ಹಾಡು ಹಾಡಿದ ಧೋನಿ: ವಿಡಿಯೋ ವೈರಲ್​
ಪಾರ್ಟಿಯಲ್ಲಿ ಹಾಡು ಹಾಡಿದ ಕ್ರಿಕೆಟಿಗ ಧೋನಿ
  • Share this:
ಎಂ.ಎಸ್​. ಧೋನಿ ಬ್ಯಾಟ್​ ಹಿಡಿದು ಫೀಲ್ಡ್​ಗೆ ಇಳಿದರೆ ಮುಗಿಯಿತು ಬಾಲರ್​ಗಳ ಮನದಲ್ಲಿ ನಡುಕ ಹುಟ್ಟುತ್ತದೆ. ಇಂತಹ ಕ್ರಿಕೆಟ್​ ಆಟಗಾರ ಸದ್ಯ ಬ್ಯಾಟ್​ ಬಿಟ್ಟು ಮೈಕ್  ಹಿಡಿದಿದ್ದಾರೆ. ಧೋನಿ ಹಾಗೂ ಸಾಕ್ಷಿ ತಮ್ಮ ಇತ್ತೀಚೆಗಷ್ಟೆ ಆತ್ಮೀಯರಿಗೆಂದು ಒಂದು ಪಾರ್ಟಿ ಕೊಟ್ಟಿದ್ದರು. ಈ ಪಾರ್ಟಿಯಲ್ಲಿ ಧೋನಿ ಹಾಡು ಹಾಡಿದ್ದಾರೆ.

ಈ ಹಿಂದೆ ಹೆಂಡತಿಗಾಗಿ ಸೌಟು ಹಿಡಿದು ಅಡುಗೆ ಮಾಡಿ ಸುದ್ದಿಯಾಗಿದ್ದ ಧೋನಿ ಈಗ ಮೈಕ್ ಹಿಡಿದು ಹಾಡು ಹಾಡಿದ್ದಾರೆ. ಅವರು ಹಾಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಈ ಪಾರ್ಟಿಯಲ್ಲಿ ಧೋನಿ ಮೈಕ್​ ಹಿಡಿದು 'ಜಬ್​ ಕೋಯಿ ಬಾತ್​ ಬಿಗಡ್​ ಜಾಯೆ....' ಹಾಡುವಾಗ ಧೋನಿ ಲಯ ತಪ್ಪಿದರೂ ಅಭಿಮಾನಿಗಳಿಗೆ ಅವರ ಈ ಸ್ಟೈಲ್​ ಸಖತ್​ ಇಷ್ಟ ಆಗುತ್ತಿದೆ. ಆದರೆ ಧೋನಿ ಹಾಡುವಾಗ ಅಲ್ಲಿದ್ದವರು ಮಾತ್ರ ನಗುವುದನ್ನು ನಿಲ್ಲಿಸುವುದೇ ಇಲ್ಲ.

ಇದನ್ನೂ ಓದಿ: ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಯುವ ನಟ: ಒಂದೇ ವರ್ಷದಲ್ಲಿ ಆರು ಸಾವು..!

ರಾಂಚಿಯಲ್ಲಿ ನಡೆದ ಈ ಪಾರ್ಟಿಯಲ್ಲಿ ಸಾಕ್ಷಿ ಧೋನಿ ಅವರ ಸ್ನೇಹಿತೆ ಹಾಗೂ ಟಿವಿಯೊಂದರಲ್ಲಿ ನಿರ್ಮಾಪಕಿಯಾಗಿರುವ ನೀತಿ ಹಾಗೂ ಪ್ರೀತಿ ಸಿಮೋನ್​ ಸಹ ಭಾಗಿಯಾಗಿದ್ದರು.

 

Bigg Boss: ಬಾತ್​ಟಬ್​ನಲ್ಲಿರುವ ಬೋಲ್ಡ್​ ಫೋಟೋಗಳನ್ನು ಹಂಚಿಕೊಂಡ ಬಿಗ್​ ಬಾಸ್​ ಖ್ಯಾತಿಯ ಈ ನಟಿ..!

First published:December 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading