• Home
  • »
  • News
  • »
  • entertainment
  • »
  • MS Dhoni: ಸಿನಿ ರಂಗದಲ್ಲೂ ರೆಕಾರ್ಡ್ ಮಾಡ್ತಾರಾ ಕೂಲ್ ಕ್ಯಾಪ್ಟನ್? ಧೋನಿ ಎಂಟರ್‌ಟೈನ್‌ಮೆಂಟ್ ಮೂಲಕ ತಮಿಳು ಸಿನಿಮಾ ನಿರ್ಮಾಣ!

MS Dhoni: ಸಿನಿ ರಂಗದಲ್ಲೂ ರೆಕಾರ್ಡ್ ಮಾಡ್ತಾರಾ ಕೂಲ್ ಕ್ಯಾಪ್ಟನ್? ಧೋನಿ ಎಂಟರ್‌ಟೈನ್‌ಮೆಂಟ್ ಮೂಲಕ ತಮಿಳು ಸಿನಿಮಾ ನಿರ್ಮಾಣ!

ಸಿನಿ ಲೋಕಕ್ಕೆ ಎಂಟ್ರಿಕೊಟ್ಟ ಎಂ.ಎಸ್‌. ಧೋನಿ

ಸಿನಿ ಲೋಕಕ್ಕೆ ಎಂಟ್ರಿಕೊಟ್ಟ ಎಂ.ಎಸ್‌. ಧೋನಿ

ವಿಶ್ವದ ಕ್ರಿಕೆಟ್‌ ದಿಗ್ಗಜರಲ್ಲಿ ಒಬ್ಬರಾಗಿರುವ ಧೋನಿ, ಈಗ ಮತ್ತೊಂದು ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಹೌದು, ಎಂಎಸ್ ಧೋನಿ ಸಿನಿಮಾ ನಿರ್ಮಾಣಕ್ಕೆ (Film Productions) ಮುಂದಾಗಿದ್ದಾರೆ. ಧೋನಿ ಎಂಟರ್‌ಟೈನ್‌ಮೆಂಟ್‌ ಲಿ. (Dhoni Entertainment Ltd.) ಮೂಲಕ ಜನರನ್ನು ಎಂಟರ್‌ಟೈನ್ ಮಾಡಲು ಮುಂದಾಗಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • Chennai, India
  • Share this:

ಚೆನ್ನೈ: ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಅಲಿಯಾಸ್ ಎಂಎಸ್ ಧೋನಿ (MS Dhoni) ಅಲಿಯಾಸ್ ಕೂಲ್ ಕ್ಯಾಪ್ಟನ್ (Cool Captain)… ಇಷ್ಟೆಲ್ಲಾ ಹೆಸರು ಪಡೆದಿರುವ ಧೋನಿ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ? ಕ್ರಿಕೆಟ್ ಅಭಿಮಾನಿಗಳಿಗಂತೂ (Cricket fans) ಧೋನಿ ಅಂದ್ರೆ ಎಲ್ಲಿಲ್ಲದ ಪ್ರೀತಿ. ಸಹ ಆಟಗಾರರಿಂದ ಕೂಲ್ ಕ್ಯಾಪ್ಟನ್ ಅಂತಾನೇ ಕರೆಸಿಕೊಂಡಿರೋ ಎಂಎಸ್ ಧೋನಿ, ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ (Chennai Super Kings) ತಂಡದ ನಾಯಕರಾಗಿದ್ದರು (captain). ಆದರೆ ಸಿಎಸ್‌ಕೆ ಟೀಂ (CSK Team) ಅನ್ನು ವಿರೋಧಿಸುವವರೂ ಕೂಡ ಧೋನಿಯನ್ನು ಇಷ್ಟಪಡುತ್ತಾ ಇದ್ರು. ವಿಶ್ವದ ಕ್ರಿಕೆಟ್‌ ದಿಗ್ಗಜರಲ್ಲಿ ಒಬ್ಬರಾಗಿರುವ ಧೋನಿ, ಈಗ ಮತ್ತೊಂದು ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಹೌದು, ಎಂಎಸ್ ಧೋನಿ ಸಿನಿಮಾ ನಿರ್ಮಾಣಕ್ಕೆ (Film Productions) ಮುಂದಾಗಿದ್ದಾರೆ. ಧೋನಿ ಎಂಟರ್‌ಟೈನ್‌ಮೆಂಟ್‌ ಲಿ. (Dhoni Entertainment Ltd.) ಮೂಲಕ ಜನರನ್ನು ಎಂಟರ್‌ಟೈನ್ ಮಾಡಲು ಮುಂದಾಗಿದ್ದಾರೆ.


ಧೋನಿ ಎಂಟರ್‌ಟೈನ್‌ಮೆಂಟ್ ಲಿ.


ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ದಕ್ಷಿಣ ಭಾರತದ ಚಲನಚಿತ್ರಗಳನ್ನು ನಿರ್ಮಿಸಲು ಮುಂದಾಗಿದ್ದಾರೆ. ಸಿನಿಮಾ ನಿರ್ಮಾಣಕ್ಕಾಗಿ ಧೋನಿ ಎಂಟರ್‌ಟೈನ್‌ಮೆಂಟ್ ಪ್ರೈ. ಲಿಮಿಟೆಡ್ ಎಂಬ ಸಂಸ್ಥೆಯನ್ನೂ ಸಹ ನಿರ್ಮಾಣ ಮಾಡಲಾಗಿದೆ. ಅವರ ಪತ್ನಿ ಸಾಕ್ಷಿ ಸಿಂಗ್ ಉಸ್ತುವಾರಿಯಲ್ಲಿ ಈ ಸಂಸ್ಥೆಯಲ್ಲಿ ಸಿನಿಮಾ ನಿರ್ಮಾಣವಾಗಲಿದೆ.ತಮಿಳು, ತೆಲುಗು, ಮಲಯಾಳಂನಲ್ಲಿ ಸಿನಿಮಾ ನಿರ್ಮಾಣ


ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ನಿರ್ಮಿಸೋ ಗುರಿ ಹೊಂದಲಾಗಿದೆ.  ಧೋನಿ ಎಂಟರ್‌ಟೈನ್‌ಮೆಂಟ್ ಅನೇಕ ಚಲನಚಿತ್ರ ನಿರ್ಮಾಪಕರು ಮತ್ತು ಸ್ಕ್ರಿಪ್ಟ್ ರೈಟರ್‌ಗಳೊಂದಿಗೆ ವೈಜ್ಞಾನಿಕ ಕಾದಂಬರಿ, ಸಸ್ಪೆನ್ಸ್ ಥ್ರಿಲ್ಲರ್, ಅಪರಾಧ ಕಥೆ, ನಾಟಕ ಮತ್ತು ಹಾಸ್ಯ ಸೇರಿದಂತೆ ಅತ್ಯಾಕರ್ಷಕ ಮತ್ತು ಅರ್ಥಪೂರ್ಣ ಕಂಟೆಂಟ್ ರಚಿಸಲು ಮತ್ತು ನಿರ್ಮಿಸಲು ಮಾತುಕತೆ ನಡೆಸುತ್ತಿದೆ.


ಸಿನಿ ಕ್ಷೇತ್ರಕ್ಕೆ ಎಂಟ್ರಿಕೊಟ್ಟ ಧೋನಿ


ಇದನ್ನೂ ಓದಿ: Puneeth Rajkumar: ಯುವರತ್ನನಿಗೆ ಕರ್ನಾಟಕ ರತ್ನ ಪ್ರದಾನ ಮಾಡ್ತಾರಾ ರಜನಿಕಾಂತ್? ರಾಜ್ಯೋತ್ಸವಕ್ಕೆ ಬರುತ್ತಾರಾ ತಲೈವಾ?


ಖ್ಯಾತ ನಿರ್ದೇಶಕನೊಂದಿಗೆ ಸಿನಿಮಾ


ಧೋನಿ ಎಂಟರ್‌ಟೈನ್‌ಮೆಂಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕಿ ಸಾಕ್ಷಿ ಸಿಂಗ್ ಧೋನಿ ಅವರ ಪರಿಕಲ್ಪನೆಯ ತಮಿಳು ಚಲನಚಿತ್ರವನ್ನು ಬ್ಯಾಂಕ್‌ರೋಲ್ ಮಾಡುತ್ತದೆ. ಇದು ಫ್ಯಾಮಿಲಿ ಎಂಟರ್ಟೈನರ್ ಎಂದು ಹೇಳಲಾಗಿದೆ. ಅಥರ್ವ - ದಿ ಒರಿಜಿನ್ ಖ್ಯಾತಿಯ ರಮೇಶ್ ತಮಿಳ್ಮಣಿ ಅವರು ಧೋನಿ ಸಂಸ್ಥೆಯ ಸಿನಿಮಾ ನಿರ್ದೇಶಿಸಲಿದ್ದಾರೆ.


ಎಂಎಸ್ ಧೋನಿ ಜೀವನದ್ದೇ ಕಥೆಯಾ?


ಅಥರ್ವ ರಮೇಶ್ ಬರೆದಿರುವ ಕಾದಂಬರಿ ಆಧಾರಿತ ಸಿನಿಮಾ ಇದಾಗಿದೆ. ಜೀವಸದೃಶ ಚಿತ್ರಣಗಳನ್ನು ಹೊಂದಿರುವ ಈ ಕಾದಂಬರಿಯು MS ಧೋನಿಯ ಪೌರಾಣಿಕ ಸೂಪರ್‌ ಹೀರೋನ ಹೋಲಿಕೆಯನ್ನು ಒಳಗೊಂಡಿರುತ್ತದೆಯಂತೆ. ಇನ್ನೂ ಹೆಸರಿಡದ ತಮಿಳು ಚಿತ್ರದೊಂದಿಗೆ ಎಂಎಸ್ ಧೋನಿ ಜೊತೆಗಿನ ಸಹಯೋಗವನ್ನು ರಮೇಶ್ ಮುಂದುವರಿಸಲಿದ್ದಾರೆ ಎಂದು ವರದಿಯಾಗಿದೆ.


ತಮಿಳಿನಲ್ಲೇ ಮೊದಲ ಸಿನಿಮಾ ಏಕೆ?


ಕ್ರಿಕೆಟಿಗ ಧೋನಿ ತಮಿಳುನಾಡಿನ ಜನರೊಂದಿಗೆ ಅಸಾಧಾರಣ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ತಮ್ಮ ಮೊದಲ ಚಲನಚಿತ್ರವನ್ನು ತಮಿಳಿನಲ್ಲಿ ನಿರ್ಮಿಸುವ ಮೂಲಕ ಈ ವಿಶೇಷ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ಕಂಪನಿ ಪ್ರಯತ್ನಿಸುತ್ತಿದೆ ಎಂದು ಧೋನಿ ಎಂಟರ್‌ಟೈನ್‌ಮೆಂಟ್ ಪ್ರಕಟಣೆ ತಿಳಿಸಿದೆ.


ಇದನ್ನೂ ಓದಿ: Rishab Shetty: ಪ್ರಶಾಂತ್ ಶೆಟ್ಟಿ ಎಂಬ ಹುಡುಗ ರಿಷಬ್ ಶೆಟ್ಟಿ ಆಗಿದ್ದು ಹೇಗೆ? ಕುಂದಾಪುರದಿಂದ ಕಾಂತಾರದವರೆಗಿನ ಪ್ರಯಾಣ ಇಲ್ಲಿದೆ


ಈಗಾಗಲೇ ಸಾಕ್ಷ್ಯಚಿತ್ರಗಳ ನಿರ್ಮಾಣ


ವಿಶ್ವಕಪ್ ವಿಜೇತ ತಂಡದ ನಾಯಕ "ಧೋನಿ ಎಂಟರ್‌ಟೈನ್‌ಮೆಂಟ್" ಎಂಬ ನಿರ್ಮಾಣ ಕಂಪನಿಯನ್ನು ಹೊಂದಿದ್ದಾರೆ. ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಇಬ್ಬರೂ ಇದರ ಮಾಲೀಕರು. ರೋರ್ ಆಫ್ ದಿ ಲಯನ್, ಬ್ಲೇಜ್ ಟು ಗ್ಲೋರಿ ಮತ್ತು ದಿ ಹಿಡನ್ ಹಿಂದೂ ಸೇರಿದಂತೆ ಸಣ್ಣ-ಬಜೆಟ್ ಚಲನಚಿತ್ರಗಳನ್ನು ನಿರ್ಮಾಣ ಕಂಪನಿಯು ನಿರ್ಮಿಸಿದೆ.

Published by:Annappa Achari
First published: