ಮಂಚ ಹಂಚಿಕೊಂಡರೆ ವಿಜಯ್ ದೇವರಕೊಂಡ ಚಿತ್ರದಲ್ಲಿ ಅವಕಾಶ: ಹೊಸ ಬಾಂಬ್ ಸಿಡಿಸಿದ ನಟಿ..!

ಶಾಲು ಈಗಾಗಲೇ ನಟ ವಿಜಯ್ ಸೇತುಪತಿ, ಶಿವಕಾರ್ತಿಕೇನ್, ವಿಜಯ್ ಪ್ರಭು ಸೇರಿಂದಂತೆ  ಹಲವು ಸ್ಟಾರ್​ ನಟರ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.

zahir | news18
Updated:June 8, 2019, 6:46 PM IST
ಮಂಚ ಹಂಚಿಕೊಂಡರೆ ವಿಜಯ್ ದೇವರಕೊಂಡ ಚಿತ್ರದಲ್ಲಿ ಅವಕಾಶ: ಹೊಸ ಬಾಂಬ್ ಸಿಡಿಸಿದ ನಟಿ..!
ಶಾಲು ಶಮು
  • News18
  • Last Updated: June 8, 2019, 6:46 PM IST
  • Share this:
ತೆಲುಗಿನ ಸೆನ್ಸೇಶನಲ್ ಸ್ಟಾರ್ ವಿಜಯ್ ದೇವರಕೊಂಡ ಚಿತ್ರದಲ್ಲಿ ಅವಕಾಶಗಿಟ್ಟಿಸಿಕೊಂಡರೆ ದಕ್ಷಿಣ ಭಾರತದಲ್ಲಿ ಒಂದೇ ದಿನದಲ್ಲಿ ಸ್ಟಾರ್ ಪಟ್ಟಕ್ಕೇರುತ್ತಾರೆ ಎಂಬುದಕ್ಕೆ ಕನ್ನಡದ ರಶ್ಮಿಕಾ ಮಂದಣ್ಣ ಅವರೇ ಸಾಕ್ಷಿ. ಈ ಕಾರಣಕ್ಕಾಗಿ ಚಿತ್ರ ಕಥೆಯ ಆಯ್ಕೆಯಲ್ಲಿ ನಿಪುಣರಾಗಿರುವ ಟಾಲಿವುಡ್ 'ರೌಡಿ' ವಿಜಯ್ ಜತೆ ಅಭಿನಯಿಸಲು  ನಟಿಮಣಿಯರ ದಂಡೇ ಕಾದು ಕುಳಿತಿದೆ ಎಂದರೆ ತಪ್ಪಾಗಲಾರದು.

ಇನ್ನು ವಿಜಯ್ ದೇವರಕೊಂಡ ನಟಿಸುತ್ತಿರುವ ಪ್ರತಿ ಚಿತ್ರದಲ್ಲೂ ಕಿಸ್ಸಿಂಗ್ ಸೀನ್ ಅಂತು ಇದ್ದದ್ದೇ ಎಂಬುದು ಪಡ್ಡೆ ಹೈಕ್ಳಿಗೆ ಚೆನ್ನಾಗಿ ಗೊತ್ತಿರುವ ವಿಷಯ. ಏಕೆಂದರೆ ಅರ್ಜುನ್ ರೆಡ್ಡಿಯಿಂದ ಆರಂಭವಾದ ಮುತ್ತಿನ ಮಳೆ ಬಿಡುಗಡೆಗೆ ಸಜ್ಜಾಗಿರುವ ಡಿಯರ್ ಕಾಮ್ರೇಡ್​ವರೆಗೂ ಮುಂದುವರೆದಿದೆ. ಆದರೆ ಇದನ್ನೆಲ್ಲಾ ಬಂಡವಾಳ ಮಾಡಿಕೊಳ್ಳಲು  ಟಾಲಿವುಡ್​ನಲ್ಲಿ ಕೆಲ ಮಂದಿ ಪ್ರಯತ್ನಿಸುತ್ತಿದ್ದಾರೆ ಎಂಬ ಸ್ಪೋಟಕ ಸತ್ಯವೊಂದನ್ನು ನಟಿಯೊಬ್ಬರು ಬಹಿರಂಗ ಪಡಿಸಿದ್ದಾರೆ.

ನಿರ್ಮಾಪಕರೊಬ್ಬರು ತನ್ನೊಂದಿಗೆ ಮಂಚವನ್ನು ಹಂಚಿಕೊಂಡರೆ ವಿಜಯ್ ದೇವರಕೊಂಡ ಚಿತ್ರದಲ್ಲಿ ಅವಕಾಶ ನೀಡುವುದಾಗಿ ತಿಳಿಸಿದ್ದರು ಎಂಬ ವಿಷಯವನ್ನು ಕಾಲಿವುಡ್ ನಟಿ ಶಾಲು ಶಮು ಬಿಚ್ಚಿಟ್ಟಿದ್ದಾರೆ. ನಟಿಯ ಈ ಹೇಳಿಕೆ ಈಗ ಟಾಲಿವುಡ್ ಸೇರಿದಂತೆ ಸೌತ್ ಸಿನಿರಂಗದಲ್ಲಿ ಹೊಸ ಚರ್ಚೆ ಹುಟ್ಟು ಹಾಕಿದೆ.

ಇತ್ತೀಚೆಗೆ ಇನ್​ಸ್ಟಾಗ್ರಾಂನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಕಾಲಿವುಡ್ ನಟಿ ಶಾಲು ಉತ್ತರಿಸುತ್ತಿದ್ದರು. ಇದೇ ವೇಳೆ ವ್ಯಕ್ತಿಯೊಬ್ಬ ನಟಿಗೆ ಚಿತ್ರೋದ್ಯಮದಲ್ಲಿನ ಲೈಂಗಿಕ ಕಿರುಕುಳದ ಬಗ್ಗೆ ಪ್ರಶ್ನಿಸಿದರು. ಈ ಬಗ್ಗೆ ಉತ್ತರಿಸಿದ ಶಾಲು, ನಾನು ಕೂಡ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ. ಆದರೆ ಅದರ ಬಗ್ಗೆ ದೂರು ನೀಡಿಲ್ಲ. ಇಂತಹ ಘಟನೆಗಳನ್ನು ಹೇಗೆ ಎದುರಿಸಬೇಕೆಂದು ನನಗೆ ಚೆನ್ನಾಗಿ ಗೊತ್ತಿದೆ. ಒಂದು ವೇಳೆ ದೂರು ನೀಡಿದರೂ ಪ್ರಯೋಜನವೇನು? ಆರೋಪಿತ ತಾನು ಮಾಡಿದ ತಪ್ಪನ್ನು ಒಪ್ಪಿಕೊಳ್ಳುತ್ತಾನೆ ಎಂದು ನೀವು ಭಾವಿಸುತ್ತೀರಾ ಎಂದು ಪ್ರಶ್ನಿಸಿದರು.

ಇದೇ ವೇಳೆ ಘಟನೆಯನ್ನು ವಿವರಿಸಿದ ನಟಿ, ಹೆಸರಾಂತ ನಿರ್ದೇಶಕರೊಬ್ಬರು ತನ್ನೊಂದಿಗೆ ಮಂಚ ಹಂಚಿಕೊಳ್ಳುವಂತೆ ಕೇಳಿಕೊಂಡಿದ್ದ. ಇದಕ್ಕೆ ಪ್ರತಿಫಲವಾಗಿ ವಿಜಯ್ ದೇವರಕೊಂಡ ಅಭಿನಯದ ಹೊಸ ಸಿನಿಮಾದಲ್ಲಿ ಚಾನ್ಸ್ ಕೊಡಿಸುವುದಾಗಿ ತಿಳಿಸಿದ್ದನು ಎಂದು ಶಾಲು ಹೊಸ ಬಾಂಬ್ ಹಾಕಿದ್ದಾರೆ. ಈ ಹೇಳಿಕೆ ಇದೀಗ ಕಾಲಿವುಡ್ ಹಾಗೂ ಟಾಲಿವುಡ್​ನಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.ಮೀಟೂ ಅಭಿಯಾನದ ಮೂಲಕ ಪಾತ್ರಕ್ಕಾಗಿ ಪಲ್ಲಂಗ ತೊಲಗಿದೆ ಎಂದುಕೊಂಡವರಿಗೆ ಶಾಲು ಹೊಸ ಉತ್ತರವಾಗಿ ಮರಳಿದ್ದಾರೆ. ತಮಿಳು ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರು ಪ್ರಯತ್ನದಲ್ಲಿರುವ ಶಾಲು ಈಗಾಗಲೇ ನಟ ವಿಜಯ್ ಸೇತುಪತಿ, ಶಿವಕಾರ್ತಿಕೇನ್, ವಿಜಯ್ ಪ್ರಭು ಸೇರಿಂದಂತೆ  ಹಲವು ಸ್ಟಾರ್​ ನಟರ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇನ್ನು ಇತ್ತೀಚೆಗೆ ಬಿಡುಗಡೆಯಾದ ಶಿವಕಾರ್ತಿಕೇನ್ ಅಭಿನಯದ ಮಿಸ್ಟರ್ ಲೋಕಲ್ ಸಿನಿಮಾ ಶಾಲು ಶಮುಗೆ ಉತ್ತಮ ಹೆಸರು ತಂದು ಕೊಟ್ಟಿತ್ತು.
ಕಾಸ್ಟಿಂಗ್ ಕೌಚ್ ಮುಕ್ತವಾಗಿ ಮಾತನಾಡಿರುವ ಶಾಲು ಶಮು, ಬಣ್ಣದ ಲೋಕದಲ್ಲಿ ಇನ್ನು ಕೂಡ ಹಲವರು ಮುಖವಾಡ ಧರಿಸಿದ್ದಾರೆ ಎಂಬ ನಗ್ನ ಸತ್ಯವನ್ನು ಬಹಿರಂಗಪಡಿಸಿದ್ದಾರೆ.

First published:June 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ