ಸಿನಿಮಾವಾಗಲಿದೆ 17ನೇ ಶತಮಾನದ ಆದಿವಾಸಿ 'ಕರಿನ್ತಂಡನ್' ಅವರ ಕಥೆ

news18
Updated:July 10, 2018, 8:38 PM IST
ಸಿನಿಮಾವಾಗಲಿದೆ 17ನೇ ಶತಮಾನದ ಆದಿವಾಸಿ 'ಕರಿನ್ತಂಡನ್' ಅವರ ಕಥೆ
news18
Updated: July 10, 2018, 8:38 PM IST
-ನ್ಯೂಸ್​ 18 ಕನ್ನಡ

ಒಂದು ಪೋಸ್ಟರ್​ ಮೂಲಕ ಮಲಯಾಳಂ ಚಿತ್ರರಂಗದಲ್ಲಿ ಚಿತ್ರವೊಂದು ಹೊಸ ಚರ್ಚೆ ಹುಟ್ಟು ಹಾಕಿದೆ.  17ನೇ ಶತಮಾನದಲ್ಲಿ ಬದುಕಿದ್ದ ಆದಿವಾಸಿ ನಾಯಕ 'ಕರಿನ್ತಂಡನ್' ಅವರ ಕಥೆ ಸಿನಿಮಾ ಆಗುತ್ತಿರುವುದು ಇತಿಹಾಸವನ್ನು ಮೆಲುಕು ಹಾಕುವಂತೆ ಮಾಡಿದೆ.

1750-1790 ನಡುವೆ ಬದುಕಿದ್ದ ಕರಿನ್ತಂಡನ್ ಅವರ ನೈಜಘಟನಾಧಾರಿತ ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವುದು ಲೀಲಾ ಸಂತೋಷ್. ಈ ಮೂಲಕ ದೇಶದ ಮೊದಲ ಆದಿವಾಸಿ ಸಿನಿಮಾ ನಿರ್ದೇಶಕಿ ಎಂಬ ಪಟ್ಟವನ್ನು ಲೀಲಾ ಸಂತೋಷ್ ಅಲಂಕರಿಸಲಿದ್ದಾರೆ.

ಸ್ವಾತಂತ್ರ್ಯ ಪೂರ್ವದ ಕಥೆ ತಿಳಿಸುವ ಈ ಚಿತ್ರದ ಮೂಲಕ ಇತಿಹಾಸ ಗ್ರಂಥದಿಂದ ದೂರ ಉಳಿದಿದ್ದ ಕರಿನ್ತಂಡನ್ ಎಂಬ ಸಾಹಸಿ ಆದಿವಾಸಿ ಕಥೆಯು ಬೆಳ್ಳಿತೆರೆಯಲ್ಲಿ ಮೂಡಿ ಬರಲಿದೆ.

ಕಮ್ಮಟ್ಟಿಪಾಡಂ ಚಿತ್ರ ಖ್ಯಾತಿಯ ನಟ ವಿನಾಯಗನ್ ಈ ಸಿನಿಮಾದಲ್ಲಿ 'ಕರಿನ್ತಂಡನ್' ಆಗಿ ಕಾಣಿಸಿಕೊಳ್ಳಲಿದ್ದಾರೆ.  ಈ ಚಿತ್ರದ ಫಸ್ಟ್​ ಲುಕ್ ಪೋಸ್ಟರ್ ರಿಲೀಸ್ ಆಗುತ್ತಿದ್ದಂತೆ ಸಾಮಾಜಿಕ ತಾಣದಲ್ಲಿ 'ಕರಿನ್ತಂಡನ್' ಯಾರು ಎಂಬ ಚರ್ಚೆ ಶುರುವಾಗಿದೆ.

ಕೇರಳದ ಮಲಬಾರ್​ ಭಾಗದ ಸಂಚಾರಿ ಮಾರ್ಗವನ್ನು ಕಂಡು ಹಿಡಿಯುವಲ್ಲಿ ಪ್ರಮುಖ ಪಾತ್ರವನ್ನು ಕರಿನ್ತಂಡನ್ ವಹಿಸಿದ್ದರು. ಬೆಟ್ಟ ಗುಡ್ಡಗಳ ನಡುವೆ ಸಂಪರ್ಕ ಸಾಧಿಸಲು ಹೆಣಗುತ್ತಿದ್ದ ಬ್ರಿಟೀಷ್​ ಪಡೆಯು ಇವರ ಸಹಾಯದಿಂದ ಕೋಝಿಕ್ಕೊಡ್ ಮತ್ತು ವಯನಾಡ್​ ಜಿಲ್ಲೆಗಳ ನಡುವೆ ದಾರಿ ನಿರ್ಮಿಸಿದ್ದರು. ವಯನಾಡ್ ಘಾಟ್​ ಮಾರ್ಗವನ್ನು ಕಂಡು ಹಿಡಿದ ಆದಿವಾಸಿ ಮೂಪ ಎಂದು ಇವರನ್ನು ಗುರುತಿಸಲಾಗುತ್ತದೆ.
Loading...

ವಯನಾಡ್​ ಭಾಗದಿಂದ ಮೈಸೂರು ಸಂಸ್ಥಾನದ ಕಡೆ ಸುಲಭ ಮಾರ್ಗ ಸ್ಥಾಪಿಸಲು ಬ್ರಿಟೀಷ್​ ಎಂಜಿನಿಯರ್​ಗಳು ಕರಿನ್ತಂಡನ್ ಅವರನ್ನು ಬಳಸಿಕೊಂಡಿದ್ದರು. ಆದರೆ ತಮಾರಶೇರಿ ಘಾಟ್​ ಮಾರ್ಗ ಕಂಡು ಹಿಡಿದ ಬಳಿಕ ಬ್ರಿಟೀಷರು ಕರಿನ್ತಂಡನ್ ಅವರನ್ನು ಕೊಲೆಗೈದು, ಭಾರತದ ಆದಿವಾಸಿ ಸಾಹಸಿಯ ಜ್ಞಾನ ಹೊರ ಜಗತ್ತಿಗೆ ಇಳಿಯದಂತೆ ನೋಡಿಕೊಂಡರು ಎಂದು ನಂಬಲಾಗಿದೆ.

'ಉರ್ಮಿ' ಚಿತ್ರದ ಮೂಲಕ ವಾಸ್ಕೋಡಿಗಾಮನ ಅಸಲಿ ಚರಿತ್ರೆ ತಿಳಿಸಿದ್ದ ಮಾಲಿವುಡ್​ ಚಿತ್ರರಂಗ, ಈಗ 'ಕರಿನ್ತಂಡನ್' ಅವರ ಕಥೆಯನ್ನು ಕೈಗೆತ್ತಿಕೊಂಡು ಮತ್ತೊಮ್ಮೆ ಇತಿಹಾಸ ಸೃಷ್ಟಿಸಲು ಹೊರಟಿದೆ.
First published:July 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ