News18 India World Cup 2019

ರಾಜಮೌಳಿ ಚಿತ್ರಕ್ಕೆ ನೊ ಅಂದರಾ ಚೆಂದುಳ್ಳಿ ಚೆಲುವೆ ಸಮಂತಾ..?

news18
Updated:July 25, 2018, 11:07 PM IST
ರಾಜಮೌಳಿ ಚಿತ್ರಕ್ಕೆ ನೊ ಅಂದರಾ ಚೆಂದುಳ್ಳಿ ಚೆಲುವೆ ಸಮಂತಾ..?
news18
Updated: July 25, 2018, 11:07 PM IST
-ನ್ಯೂಸ್ 18 ಕನ್ನಡ

ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ ಅವರ ಚಿತ್ರದಲ್ಲಿ ಸಣ್ಣ ಅವಕಾಶಕ್ಕಾಗಿ  ನಟ-ನಟಿಯರು ಕ್ಯೂ ನಿಲ್ಲುತ್ತಾರೆ. ಅಂತದರಲ್ಲಿ 'ಬಾಹುಬಲಿ' ನಿರ್ದೇಶಕನ ಚಿತ್ರದಲ್ಲಿ ನಾಯಕಿಯಾಗಲು ಎರಡನೇ ಬಾರಿ ಚಾನ್ಸ್​ ಸಿಕ್ಕರೆ ಯಾರೂ ತಾನೆ ಬಿಡುವರು?. ಆದರೆ ಟಾಲಿವುಡ್​ ಸುಂದರಿ ಸಮಂತಾ ಅಕ್ವಿನೆನಿ ಇಂತಹ ಭರ್ಜರಿ ಅವಕಾಶವನ್ನು ನಿರಾಕರಿಸಿದ್ದಾರೆ. ಬಣ್ಣದ ಬದುಕಿಗೆ ವಿದಾಯ ಹೇಳಿ ತೆರೆ ಹಿಂದೆ ಸರಿಯಲು ನಟಿ ಸಮಂತಾ ನಿರ್ಧರಿಸಿದ್ದಾರೆ. ಈ ರೀತಿಯ ಕೆಲ ಸುದ್ದಿಗಳು ಕಳೆದ ಕೆಲವು ದಿನಗಳಿಂದ ಟಾಲಿವುಡ್ ಟೌನ್​ನಲ್ಲಿ ಕೇಳಿ ಬರುತ್ತಿತ್ತು. ನೆಚ್ಚಿನ ನಟಿಯ ಈ ನಿರ್ಧಾರದ ಸುದ್ದಿ ಬಗ್ಗೆ ಸ್ಯಾಮ್ ಅಭಿಮಾನಿಗಳೂ ಸಹ ತಲೆಕೆಡಿಸಿಕೊಂಡಿದ್ದರು.

ಟಾಲಿವುಡ್​ ಸೂಪರ್​ ಸ್ಟಾರ್ ಕುಡಿಗಳಾದ ರಾಮ್ ಚರಣ್ ತೇಜಾ ಮತ್ತು ಜೂನಿಯರ್​ ಎನ್​ಟಿಆರ್​ ಇದೇ ಮೊದಲ ಬಾರಿ ಒಂದೇ ಚಿತ್ರದಲ್ಲಿ ನಟಿಸುತ್ತಿದ್ದು, ಟಾಪ್​ ನಿರ್ದೇಶಕ ರಾಜಮೌಳಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ ಎಂಬ ವಿಚಾರ ಈಗಾಗಲೇ ತಿಳಿದಿದೆ. ಇಂತಹ ಬಹು ನಿರೀಕ್ಷಿತ ಸಿನಿಮಾವನ್ನು ಸಮಂತ ನಿರಾಕರಿಸಲು ಕಾರಣವೇನು ಎಂದು ತಡಕಾಡಿದರೆ ಸಿಗುವ ಉತ್ತರ 'ಗಾಸಿಪ್'.

ಸದ್ಯದ ಮಟ್ಟಿಗೆ 'RRR' ಎಂದು ಶೀರ್ಷಿಕೆ ಇಟ್ಟಿರುವ ಈ ಚಿತ್ರದಿಂದ ಸಮಂತಾಗೆ ಯಾವುದೇ ಪ್ರಸ್ತಾಪ ಹೋಗಿಲ್ಲ. ಚಿತ್ರತಂಡದ ಯಾರೊಬ್ಬರು ಕೂಡ ಸ್ಯಾಮ್​ನನ್ನು ಸಂಪರ್ಕಿಸಿಲ್ಲ. ಆದರೂ ಇಂತಹದೊಂದು ವದಂತಿ ಹಬ್ಬಿಸಲಾಗಿದೆ ಎಂದು ಸಮಂತಾ ಆಪ್ತ ಮೂಲಗಳಿಂದ ತಿಳಿದು ಬಂದಿದೆ. ಇದರೊಂದಿಗೆ ಟಾಲಿವುಡ್​ನಲ್ಲಿ ಕೆಲ ದಿನಗಳಿಂದ ಹರಿದಾಡುತ್ತಿದ್ದ ಹಾಟ್​ ನ್ಯೂಸ್​ಗೆ ವಿರಾಮ ಸಿಕ್ಕಂತಾಗಿದೆ.

ಈ ಹಿಂದೆ ರಾಜಮೌಳಿ ನಿರ್ದೇಶಿಸಿದ 'ಈಗ' ಚಿತ್ರದಲ್ಲಿ ಸಮಂತಾ ನಾಯಕಿಯಾಗಿ ಅಭಿನಯಿಸಿದ್ದರು. ಕಿಚ್ಚ ಸುದೀಪ್​ಗೆ ಜೋಡಿಯಾಗಿ ಕಾಣಿಸಿದ್ದ ಸ್ಯಾಮ್ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಆದರೆ ಬಾಹುಬಲಿಯ ಮೊದಲ ಭಾಗದಲ್ಲಿ ವಿಶೇಷ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಂಡರೂ, ಸಮಂತಾಗೆ ಯಾವುದೇ ಪಾತ್ರ ನೀಡದಿರುವುದು ಅಭಿಮಾನಿಗಳ ನಿರಾಸೆಗೆ ಕಾರಣವಾಗಿತ್ತು.

ಆದರೆ ಟಾಲಿವುಡ್​ ಚಿತ್ರರಂಗದ ಪ್ರತಿಷ್ಠಿತ ಸಿನಿಮಾಗಳಲ್ಲಿ ಒಂದಾಗಲಿರುವ 'RRR'ನಲ್ಲಿ ಸಮಂತಾ ಇರಲಿದ್ದಾರೆಂಬ ಸುದ್ದಿಯೊಂದು ಈ ಹಿಂದೊಮ್ಮೆಯೇ ಹರಿದಾಡಿತ್ತು. ಚಿತ್ರದಲ್ಲಿ ಇಬ್ಬರು ಸೂಪರ್ ಸ್ಟಾರ್​ಗಳಿದ್ದು, ಮೂರು ನಾಯಕಿಯರು ಇರಲಿದ್ದಾರೆಂಬ ಊಹಾಪೋಹಗಳು ಟಾಲಿವುಡ್​ನಲ್ಲಿತ್ತು. ಈ ಲೀಸ್ಟ್​ನಲ್ಲಿ ರಾಜಮೌಳಿ ಕೆರಿಯರ್​ನ ಹಿಟ್​ ಸಿನಿಮಾಗಳ ನಾಯಕಿರಾದ ತಮನ್ನಾ ಮತ್ತು ಸಮಂತಾ ಮುಂಚೂಣಿಯಲ್ಲಿದ್ದರು.
Loading...

ಇದೀಗ ಇದ್ದಕ್ಕಿದ್ದಂತೆ ಸಮಂತಾ ಆಫರ್ ನಿರಾಕರಿಸಿದ್ದಾರೆಂಬ ಸುಳ್ಳು ಸುದ್ದಿ ಹಬ್ಬಿಕೊಂಡಿದೆ. ಇದರಿಂದ ಮತ್ತೊಮ್ಮೆ ರಾಜಮೌಳಿ ಚಿತ್ರಕ್ಕಾಗಿ ನಟಿಮಣಿಯರ ಪೈಪೋಟಿ ಮುಂಚೂಣಿಗೆ ಬಂದಂತಾಗಿದೆ. ಚಿತ್ರವನ್ನು ಘೋಷಿಸಿದಾಗಿನಿಂದ ಸುದ್ದಿಯಲ್ಲಿರುವ ರಾಜಮೌಳಿ ಹೊಸ ಚಿತ್ರವು ಹೇಗಿದ್ದರೂ 2020 ಸಂಕ್ರಾಂತಿಯ ಹಬ್ಬದ ಉಡುಗೊರೆಯಾಗಿ ತೆರೆಗೆ ಬರಲಿದೆ ಎನ್ನಲಾಗುತ್ತಿದೆ. ಆದರೆ ಸಮಂತಾ ಬಗ್ಗೆ ಹುಟ್ಟಿಕೊಂಡಿರುವ ಈ ವಂದತಿಗಳು ಅವರಿಗೆ ನಕರಾತ್ಮಕವಾಗಿ ಪರಿಗಣಿಸಲಿದೆಯೇ ಎಂಬುದು ಮಾತ್ರ ಶೀಘ್ರದಲ್ಲೇ ಗೊತ್ತಾಗಲಿದೆ.
First published:July 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...