Doctor's Movies: ಡಾಕ್ಟರ್ ಕೆಲಸ ಅಷ್ಟು ಸುಲಭದ್ದಲ್ಲ! ಅರ್ಥವಾಗೋಕೆ ಈ ಸಿನಿಮಾ ನೋಡಿ

ವೈದ್ಯರ ಬಗ್ಗೆ ಎಷ್ಟು ಮಾತಾಡಿದರೂ ಕಡಿಮೆನೇ. ಇವರು ಒಂದು ಪ್ರಾಣ ಉಳಿಸುವ ಶಕ್ತಿಯಿರುವ ವೃತ್ತಿವುಳ್ಳವರು ಎಂದು ಮಾತ್ರ ಹೇಳಬಹುದು. ಇವರಿಗೂ ನಮ್ಮ ಎಲ್ಲರ ಕಡೆಯಿಂದ ಒಂದು ಸಲಾಮ್ ಹೇಳುವುದಕ್ಕೆ ಅವರಿಗೂ ಒಂದು ದಿನ ಇದೆ. ಅದೇ ಈ ವೈದ್ಯರ ದಿನವಾಗಿದೆ. ನೀವು ವೈದ್ಯರು ಮತ್ತು ರೋಗಿಯ ನಡುವಿನ ಬಾಂಧವ್ಯವನ್ನು ಉತ್ತಮಪಡಿಸಿಕೊಳ್ಳಬೇಕೆಂದರೆ ಕೆಲವು ಸಿನಿಮಾಗಳನ್ನು ನೋಡುವುದು ಉತ್ತಮ.

ವೈದ್ಯರಿಗೆ ಸಂಬಂಧಪಟ್ಟ ಸಿನೆಮಾಗಳು

ವೈದ್ಯರಿಗೆ ಸಂಬಂಧಪಟ್ಟ ಸಿನೆಮಾಗಳು

  • Share this:
ವೈದ್ಯೋ ನಾರಾಯಣೋ ಹರಿಃ ಎಂಬ ಮಾತು ನೀವು ಆಗಾಗ ಕೇಳಿಯೇ ಇರ್ತಿರಿ ಅಲ್ವಾ. ಈ ಮಾತಿನ ಅರ್ಥ ನಿಮಗೆ ಗೊತ್ತಿದೆಯಾ. ಗೊತ್ತಿಲ್ಲ ಎಂದರೆ ಹೇಳ್ತಿವಿ ಕೇಳಿ. ವೈದ್ಯರು ದೇವರು (God) ಇದ್ದ ಹಾಗೆ ಎಂಬ ಅರ್ಥ ಈ ಶ್ಲೋಕಕ್ಕೆ ಇದೆ. ನಿಜ ವೈದ್ಯರು (Doctor) ಮಾಡೋ ಆ ವೈದ್ಯ ವೃತ್ತಿ ತುಂಬಾ ತ್ಯಾಗ - ತಾಳ್ಮೆಯಿಂದ ಕೂಡಿದ ವೃತ್ತಿ (Work) ಎಂದರೆ ತಪ್ಪಾಗಲಾರದು. ಈ ವೈದ್ಯರ ಬಗ್ಗೆ ಎಷ್ಟು ಮಾತಾಡಿದರೂ ಕಡಿಮೆನೇ. ಇವರು ಒಂದು ಪ್ರಾಣ ಉಳಿಸುವ ಶಕ್ತಿಯಿರುವ ವೃತ್ತಿವುಳ್ಳವರು ಎಂದು ಮಾತ್ರ ಹೇಳಬಹುದು. ಇವರಿಗೂ ನಮ್ಮ ಎಲ್ಲರ ಕಡೆಯಿಂದ ಒಂದು ಸಲಾಮ್ ಹೇಳುವುದಕ್ಕೆ ಅವರಿಗೂ ಒಂದು ದಿನ ಇದೆ. ಅದೇ ಈ ವೈದ್ಯರ ದಿನವಾಗಿದೆ.

ನೀವು ವೈದ್ಯರು ಮತ್ತು ರೋಗಿಯ ನಡುವಿನ ಬಾಂಧವ್ಯವನ್ನು ಉತ್ತಮಪಡಿಸಿಕೊಳ್ಳಬೇಕೆಂದರೆ ಕೆಲವು ಸಿನಿಮಾಗಳನ್ನು ನೋಡುವುದು ಉತ್ತಮ.

ರಾಷ್ಟ್ರೀಯ ವೈದ್ಯರ ದಿನ 2022
ವೈದ್ಯ-ರೋಗಿ ಸಂಬಂಧವು ನಂಬಿಕೆ ಮತ್ತು ಉತ್ತಮ ಸಂವಹನವನ್ನು ಆಧರಿಸಿದ ಬಂಧವನ್ನು ಹೊಂದಿದೆ. ನಾವು ಪ್ರತಿ ವರ್ಷ, ಜುಲೈ 1 ರಂದು ಡಾ.ಬಿಧನ್ ಚಂದ್ರ ರಾಯ್ ಅವರು ಆರೋಗ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗೆ ಗೌರವ ಸಲ್ಲಿಸುವ ಸಲುವಾಗಿ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸುತ್ತೇವೆ. ಈ ದಿನವು ಪ್ರಪಂಚದಾದ್ಯಂತದ ಆರೋಗ್ಯ ಸಿಬ್ಬಂದಿಗಳು ಪ್ರತಿನಿತ್ಯ ನಮಗೆಲ್ಲ ನೀಡುವ ಕೊಡುಗೆಗಳು ಮತ್ತು ತ್ಯಾಗಗಳ ಬಗ್ಗೆ ನಮಗೆ ನೆನಪಿಸುತ್ತದೆ.

ಇದನ್ನೂ ಓದಿ: Tourist Places: ಬಾಲಿವುಡ್ ತಾರೆಯರ ಹೃದಯಗೆದ್ದ ಆಕರ್ಷಕ ರಜಾ ಸ್ಥಳಗಳು ಯಾವುವು ಗೊತ್ತಾ? ಇಲ್ಲಿದೆ ನೋಡಿ

ಅನೇಕ ಆರೋಗ್ಯದ ಕಷ್ಟದ ಸಮಯದಲ್ಲಿ, ಆರೋಗ್ಯ ವೃತ್ತಿಪರರು ಸವಾಲಿನ ಸಂದರ್ಭಗಳನ್ನು ಎದುರಿಸಿದರು ಮತ್ತು ಇತರರನ್ನು ಉಳಿಸಲು ತಮ್ಮ ಪ್ರಾಣವನ್ನು ಪಣಕ್ಕಿಟ್ಟರು. ಇದಕ್ಕೆ ಅತಿ ದೊಡ್ಡ ಉದಾಹರಣೆ ಎಂದರೆ COVID-19 ಸಾಂಕ್ರಾಮಿಕ ರೋಗವಾಗಿದೆ. ಆದ್ದರಿಂದ ವೈದ್ಯರು ಮತ್ತು ರೋಗಿಯ ನಡುವಿನ ಬಾಂಧವ್ಯವನ್ನು ತೋರಿಸುವ ಅನೇಕ ಹಿಂದಿ ಚಲನಚಿತ್ರಗಳಿವೆ. ಅವುಗಳನ್ನು ನೀವೂ ಈ ದಿನ ವೀಕ್ಷಿಸಿದರೆ ವೈದ್ಯರ ಕಾರ್ಯ ಏನು ಎಂಬುಂದು ನಿಮಗೆ ತಿಳಿಯುತ್ತದೆ. ಅದಕ್ಕೆ ಇವತ್ತು ಸಮಯ ಸಿಕ್ಕಾಗ ಕುಳಿತು ಈ 6 ಸಿನಿಮಾಗಳನ್ನು ತಪ್ಪದೇ ವೀಕ್ಷಿಸಿ:

ಡಾ ಕೊಟ್ನಿಸ್ ಕಿ ಅಮರ್ ಕಹಾನಿ (1946):
ವಿ. ಶಾಂತಾರಾಮ್ ನಟಿಸಿದ ಸಿನಿಮಾವು ವೈದ್ಯ ವೃತ್ತಿ ಮತ್ತು ದೇಶಭಕ್ತಿಯ ಸುಂದರ ಸಿನಿಮಾವಾಗಿದೆ, ಅವರು ಜಪಾನಿನ ಆಕ್ರಮಣದ ಸಮಯದಲ್ಲಿ ಚೀನಾದಲ್ಲಿ ಕೆಲಸ ಮಾಡಿದರು ಮತ್ತು ತಮ್ಮ ರೋಗಿಗಳಿಗೆ ಚಿಕಿತ್ಸೆ ನೀಡಲು ತಮ್ಮ ಜೀವನವನ್ನು ಪಣಕ್ಕಿಟ್ಟಿದ್ದರು.

ಗುಜಾರೀಶ್ (2010):
ಸಂಜಯ್ ಲೀಲಾ ಬನ್ಸಾಲಿಯವರ ಸಿನಿಮಾದಲ್ಲಿ ಹೃತಿಕ್ ರೋಷನ್ ವಿಚಿತ್ರ ರೋಗದ ಸ್ಥಿತಿಯಿಂದ ಬಳಲುತ್ತಿರುವ ರೋಗಿಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಐಶ್ವರ್ಯಾ ರೈ ಹೃತಿಕ್ ಆರೈಕೆ ಮಾಡುವ ನರ್ಸ್ ಪಾತ್ರವನ್ನು ಅದೆಷ್ಟೂ ನಿಷ್ಠೆಯಿಂದ ಮಾಡಿದ್ದರು ಎಂಬುದನ್ನು ಚಿತ್ರಿಸಲಾಗಿದೆ.

ಆನಂದ್ (1971):
ಡಾ. ಭಾಸ್ಕರ್ ಪಾತ್ರದಲ್ಲಿ ನಟಿಸಿರುವ ಅಮಿತಾಬ್ ಬಚ್ಚನ್ ತನ್ನ ಕ್ಯಾನ್ಸರ್ ರೋಗಿಯೊಂದಿಗೆ (ರಾಜೇಶ್ ಖನ್ನಾ) ಬಲವಾದ ಭಾವನಾತ್ಮಕ ಬಂಧವನ್ನು ಬೆಳೆಸಿಕೊಳ್ಳುತ್ತಾನೆ. ರೋಗಿಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿದಿದ್ದರೂ, ಅವನು ತನ್ನ ರೋಗವನ್ನು ಗುಣಪಡಿಸಲು ಪರ್ಯಾಯ ವಿಧಾನಗಳನ್ನು ಹುಡುಕುತ್ತಲೇ ಇರುತ್ತಾನೆ.

ಏಕ್ ಡಾಕ್ಟರ್ ಕಿ ಮೌತ್ (1990):
ನಿಜ ಜೀವನದ ಘಟನೆಗಳನ್ನು ಆಧರಿಸಿದ ಈ ಸಿನಿಮಾವು ಒಬ್ಬ ಸಂಶೋಧಕನನ್ನು ಚಿತ್ರಿಸುತ್ತದೆ, ಅವನು ತನ್ನ ಆರೋಗ್ಯದ ವೆಚ್ಚದಲ್ಲಿ ಕುಷ್ಠರೋಗ ಲಸಿಕೆಯನ್ನು ಕಂಡುಹಿಡಿಯುವ ಅಮೋಘ ದೃಶ್ಯಗಳನ್ನು ಇದರಲ್ಲಿ ಕಂಡು ಹಿಡಿಯಬಹುದು.

ಮುನ್ನಾ ಭಾಯ್ MBBS (2003):
ಮುನ್ನಾ ಭಾಯ್, ಸಂಜಯ್ ದತ್ತ ಮಾಡಿದ ರೌಡಿ ಪಾತ್ರವು, ತನ್ನ ಹೆತ್ತವರನ್ನು ಮೆಚ್ಚಿಸಲು ಮತ್ತು MBBS ಪದವಿಯನ್ನು ಗಳಿಸುವ ಪ್ರಯತ್ನದಲ್ಲಿ ವೈದ್ಯಕೀಯ ಶಾಲೆಗೆ ದಾಖಲಾಗುತ್ತಾನೆ. ಅಲ್ಲಿ ಅವರಿಗೆ ತಮ್ಮ ಪದವಿಯನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೂ, ಅವರು ರೋಗಿಗಳನ್ನು ಸಹಾನುಭೂತಿಯಿಂದ ಹೇಗೆ ನಡೆಸಿಕೊಳ್ಳಬೇಕೆಂದು ವೈದ್ಯರಿಗೆ ಹೇಳಿಕೊಡುವ ದೃಶ್ಯಗಳನ್ನು ಸೆರೆ ಹಿಡಿದ್ದಾರೆ.

ಡಿಯರ್‌ ಜಿಂದಗಿ (2016):
ಶಾರುಖ್ ಖಾನ್ ಜಹಾಂಗೀರ್ ಎಂಬ ಪಾತ್ರವನ್ನು ನಿರ್ವಹಿಸುತ್ತಾರೆ, ಅವರು ನಿದ್ರಾಹೀನತೆಯಿಂದ ಬಳಲುತ್ತಿರುವ ರೋಗಿಗೆ (ಆಲಿಯಾ ಭಟ್) ಚಿಕಿತ್ಸೆ ನೀಡುವ ಉತ್ಸಾಹಭರಿತ ಮಾನಸಿಕ ಚಿಕಿತ್ಸಕಿ ಆಗಿ ಪಾತ್ರ ನಿರ್ವಹಣೆ ಮಾಡಿದ್ದಾರೆ. ಅವರ ಸಹಾನುಭೂತಿ ಆಲಿಯಾ ಪಾತ್ರಕ್ಕೆ ಸ್ವಯಂ-ಪ್ರೀತಿಯ ಮಾರ್ಗವನ್ನು ಮರುಶೋಧಿಸಲು ಸಹಾಯ ಮಾಡುತ್ತಾರೆ.

ಇದನ್ನೂ ಓದಿ:  Mahesh Babu: ಸೌತ್​ ಸೂಪರ್​ ಸ್ಟಾರ್​ನ್ನು ಫಾಲೋ ಮಾಡ್ತಿದ್ದಾರೆ ವಿಶ್ವದ ಶ್ರೀಮಂತ ವ್ಯಕ್ತಿ, ಕುತೂಹಲ ಹೆಚ್ಚಿಸಿದ ಬಿಲ್​ ಗೇಟ್ಸ್ ಭೇಟಿ

ಓದಿದರಲ್ವಾ. ಈ ಎಲ್ಲ ಸಿನಿಮಾಗಳನ್ನು ನೋಡಿ ಆನಂದಿಸಿ. ನಿಮ್ಮ ಕಡೆಯಿಂದ ವೈದ್ಯರಿಗೂ ಒಂದು ಸಲಾಮ್ ತಿಳಿಸುವ ಸಮಯ ಇದಾಗಿದೆ.
Published by:Ashwini Prabhu
First published: