ಸಿನಿಮಾ ಪ್ರದರ್ಶನಕ್ಕೆ ಸಜ್ಜಾಗುತ್ತಿರುವ ಚಿತ್ರಮಂದಿರಗಳು: ಮತ್ತೆ ರಿಲೀಸ್​ ಆಗಲಿವೆ ಶಿವಾರ್ಜುನ, ನರಗುಂದ ಬಂಡಾಯ..!

ಸಿನಿಮಾ ಮಂದಿರಗಳಲ್ಲಿ ಶೇ 50 ರಷ್ಟು ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ಕಲ್ಪಿಸಬೇಕು ಎಂದು ಕೇಂದ್ರ ಗೃಹಸಚಿವಾಲ ಹೊರಡಿಸಿರುವ ಪ್ರಕಟಣೆ ತಿಳಿಸಿದೆ. ಅಕ್ಟೋಬರ್​ 15ರಿಂದ ಕಂಟೈನ್ಮೆಟ್ ಪ್ರದೇಶ ಹೊರತು ಪಡಿಸಿ ಬೇರೆ ಕಡೆಗಳಲ್ಲಿ ಚಿತ್ರ ಮಂದಿರಗಳನ್ನು ತೆರೆಯಬಹುದಾಗಿದೆ. ಸಾಲು ಸಾಲು ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ಹೊಸ ಸಿನಿಮಾಗಳ ಜೊತೆಗೆ ಈಗ ಈ ಹಿಂದೆ ಲಾಕ್​ಡೌನ್​ ಆರಂಭದಲ್ಲಿ ರಿಲೀಸ್ ಆಗಿದ್ದ ಕೆಲವು ಸಿನಿಮಾಗಳೂ ಈಗ ಮತ್ತೆ ರಿಲೀಸ್​ ಆಗಲಿವೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಳೆದ ಆರು ತಿಂಗಳಿಂದ ಮುಚ್ಚಿರೋ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್​ಗಳು ಈಗ ತೆರೆಯಲಿವೆ. ಧೂಳಿಡಿದಿರೋ ಚಿತ್ರಮಂದಿರಗಳ ಸ್ವಚ್ಛತೆಗೆ ಮಾಲೀಕರು ಸಜ್ಜಾಗಿದ್ದಾರೆ. ಕೊರೋನಾ ಭೀತಿಯಿಂದಾಗಿ ಲಾಕ್​ಡೌನ್​ ಆರಂಭವಾದ ಕೂಡಲೇ ಮಲ್ಟಿಪ್ಲೆಕ್ಸ್​ ಹಾಗೂ ಚಿತ್ರಮಂದಿರಗಳನ್ನು ಮುಚ್ಚಿಸಲಾಗಿತ್ತು. ಕಳೆದ ಆರು ತಿಂಗಳಿನಿಂದ ಬಂದ್​ ಆಗಿದ್ದ ಸಿನಿಮಾ ಮಂದಿರ ತೆರೆಯಲು ಕೇಂದ್ರ ಗೃಹಸಚಿವಾಲಯ ಅನುಮತಿ ನೀಡಿದ್ದು, ಸಿನಿಪ್ರಿಯರಲ್ಲಿ ಸಂತಸ ಉಂಟು ಮಾಡಿದೆ. ಕೊರೋನಾ ಲಾಕ್​ಡೌನ್​ ಸಡಿಲಿಕೆ ಅನ್​ಲಾಕ್ ​5 ಮೂಲಕ ಇದನ್ನು ತೆರೆಯಲಾಗುತ್ತಿಲ್ಲ. ಬದಲಾಗಿ ಹಲವು ಮಾರ್ಗಸೂಚಿಗಳ ಮೇಲೆ ಈ ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಾರ್ಗಸೂಚಿ ಬಿಡುಗಡೆ ಮಾಡಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಸಿನಿಮಾ ಮಂದಿರ, ಮಲ್ಟಿಪ್ಲೆಕ್ಸ್​ಗಳು ಕಾರ್ಯರಂಭಕ್ಕೆ ಅವಕಾಶ ನೀಡಲಾಗಿದೆ. ಇದಿರಂದಾಗಿ ಮಲ್ಟಿಪ್ಲೆಕ್ಸ್​ ಹಾಗೂ ಸಿನಿಮಾ ಮಾಲೀಕರು ಖುಷಿಯಿಂದ ಸಿನಿಮಾ ಪ್ರದರ್ಶನಕ್ಕೆ ಸಜ್ಜಾಗುತ್ತಿದ್ದಾರೆ. 

ಸಿನಿಮಾ ಮಂದಿರಗಳಲ್ಲಿ ಶೇ 50 ರಷ್ಟು ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ಕಲ್ಪಿಸಬೇಕು ಎಂದು ಕೇಂದ್ರ ಗೃಹಸಚಿವಾಲ ಹೊರಡಿಸಿರುವ ಪ್ರಕಟಣೆ ತಿಳಿಸಿದೆ. ಅಕ್ಟೋಬರ್​ 15ರಿಂದ ಕಂಟೈನ್ಮೆಟ್ ಪ್ರದೇಶ ಹೊರತು ಪಡಿಸಿ ಬೇರೆ ಕಡೆಗಳಲ್ಲಿ ಚಿತ್ರ ಮಂದಿರಗಳನ್ನು ತೆರೆಯಬಹುದಾಗಿದೆ. ಸಾಲು ಸಾಲು ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ಹೊಸ ಸಿನಿಮಾಗಳ ಜೊತೆಗೆ ಈಗ ಈ ಹಿಂದೆ ಲಾಕ್​ಡೌನ್​ ಆರಂಭದಲ್ಲಿ ರಿಲೀಸ್ ಆಗಿದ್ದ ಕೆಲವು ಸಿನಿಮಾಗಳೂ ಈಗ ಮತ್ತೆ ರಿಲೀಸ್​ ಆಗಲಿವೆ.

ಚಿರು-ಮೇಘನಾ
ಶಿವಾರ್ಜುನ-ನರಗುಂದ ಬಂಡಾಯ ಮತ್ತೆ ರಿಲೀಸ್​

ಅಕ್ಟೋಬರ್ 16ರಂದು ಮತ್ತೆ ರಿಲೀಸ್ ಆಗಲು ಸಜ್ಜಾಗಿದೆ ಚಿರಂಜೀವಿ ಸರ್ಜಾ ಅಭಿನಯದ ಶಿವಾರ್ಜುನ. ಅಕ್ಟೋಬರ್ 19 ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ಕಾರಣ ಸಿನಿಮಾವನ್ನು ಮತ್ತೆ ತೆರೆಗೆ ತರುವ ಆಲೋಚನೆಯಲ್ಲಿದೆ ಚಿತ್ರತಂಡ.  ಮಾರ್ಚ್ ಮೊದಲ ವಾರದಲ್ಲಿ ತೆರೆಕಂಡ ಎರಡು ಕನ್ನಡ ಸಿನಿಮಾಗಳು ರಿಲೀಸ್ ಆದ ಎರಡೇ ದಿನಕ್ಕೆ ಥೀಯೇಟರ್ ಬಂದಾಗಿತ್ತು. ಇದೇ ಕಾರಣದಿಂದ ಈ ಚಿತ್ರತಂಡಗಳು ಈಗ ವಾಣಿಜ್ಯ ಮಂಡಳಿಗೆ ಮನವಿ ಮಾಡಿವೆಯಂತೆ. ಶಿವಾರ್ಜುನದ ಜೊತೆಗೆ ನರಗುಂದ ಬಂಡಾಯ ಚಿತ್ರವೂ ಮತ್ತೆ ರಿಲೀಸ್ ಆಗಿಲಿದೆಯಂತೆ.

ಇದನ್ನೂ ಓದಿ: Vidyu Raman: ದೇಹದ ತೂಕ ಇಳಿಸಿಕೊಂಡ ನಂತರ ಹಾಟ್​ ಫೋಟೋಶೂಟ್​ಗೆ ಪೋಸ್​ಕೊಟ್ಟ ಹಾಸ್ಯ ನಟಿ ವಿದ್ಯುಲ್ಲೇಖಾ ರಾಮನ್..!

ಉಳಿದಂತೆ ಸ್ಟಾರ್​ ನಟರಾದ ದರ್ಶನ್​, ಸುದೀಪ್​ ಹಾಗೂ ಪುನೀತ್​ ಅವರ ಸಿನಿಮಾಗಳೂ ತೆರೆಗಪ್ಪಳಿಸುವ ಹಂತದಲ್ಲಿವೆ. ಸುದೀಪ್​ ಅವರ ಕೋಟಿಗೊಬ್ಬ 3, ದ್ರುವಾ ಸರ್ಜಾ ಅವರ ಪೊಗರು, ದರ್ಶನ್​ ಅಭಿನಯದ ರಾಬರ್ಟ್​ ಹಾಗೂ ಪುನೀತ್​ ಅವರ ಯುವರತ್ನ ರಿಲೀಸ್​ಗೆ ಸಜ್ಜಾಗುತ್ತಿವೆ.
Published by:Anitha E
First published: