HOME » NEWS » Entertainment » MOVIE REVIEW GULLY BOY EARLY REACTION RANVEER ALIA FILM RECEIVES THE BIGGEST CHEERS IN 20 YEARS AT BERLINALE

Movie Review: ನೋಡಲೇಬೇಕಾದ ಸಿನಿಮಾ ಗಲ್ಲಿ ಬಾಯ್​: ರಣವೀರ್​-ಅಲಿಯಾ ಅಭಿನಯಕ್ಕೆ ಫಿದಾ ಆದ ಪ್ರೇಕ್ಷಕ

ಬರ್ಲಿನ್​ನಲ್ಲಿ ಗಲ್ಲಿ ಬಾಯ್​ ಸಿನಿಮಾ ಪ್ರದರ್ಶನ. ಫಿದಾ ಆದ ಹಾಲಿವುಡ್​ ನಿರ್ದೇಶಕರು ಹಾಗೂ ಪ್ರೇಕ್ಷಕರು. ಭಾರತದಲ್ಲಿ ತೆರೆ ಕಾಣುವ ಮುನ್ನವೇ ರಣವೀರ್​-ಅಲಿಯಾ ಅಭಿನಯಕ್ಕೆ ಮೆಚ್ಚುಗೆಯ ಮಾಹಾಪೂರ.

Anitha E | news18
Updated:February 12, 2019, 4:25 PM IST
Movie Review: ನೋಡಲೇಬೇಕಾದ ಸಿನಿಮಾ ಗಲ್ಲಿ ಬಾಯ್​: ರಣವೀರ್​-ಅಲಿಯಾ ಅಭಿನಯಕ್ಕೆ ಫಿದಾ ಆದ ಪ್ರೇಕ್ಷಕ
ಗಲ್ಲಿ ಬಾಯ್​ ಸಿನಿಮಾದಲ್ಲಿ ರಣವೀರ್​-ಅಲಿಯಾ
  • News18
  • Last Updated: February 12, 2019, 4:25 PM IST
  • Share this:
ನಟ ರಣವೀರ್​ ಸಿಂಗ್​ ಹಾಗೂ ಅಲಿಯಾ ಭಟ್​ ಅಭಿನಯದ 'ಗಲ್ಲಿ ಬಾಯ್​' ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿ ನಿಂತಿದೆ. ಆದರೆ ಈ ಸಿನಿಮಾದ ಟೀಸರ್​, ಟ್ರೈಲರ್​ ಹಾಗೂ ಹಾಡುಗಳು ರಿಲೀಸ್​ ಆದಾಗಿನಿಂದ ಪ್ರೇಕ್ಷಕನಲ್ಲಿ ಸಾಕಷ್ಟು ನಿರೀಕ್ಷೆ ಹೆಚ್ಚಿಸಿದೆ.

ಇದನ್ನೂ ಓದಿ: Yajamana Trailer: ಅಭಿಮಾನಿಗಳೊಂದಿಗೆ 'ಯಜಮಾನ'ನ ಸಂಭ್ರಮಾಚರಣೆ..!

ಅಲ್ಲದೆ ಭಾರತದಲ್ಲಿ ಫೆ.14ಕ್ಕೆ ತೆರೆ ಕಾಣಬೇಕಿರುವ ಈ ಸಿನಿಮಾ ಈಗಾಗಲೇ 'ಬರ್ಲಿನ್​ ಸಿನಿಮೋತ್ಸವ'ದಲ್ಲಿ ಪ್ರದರ್ಶನ ಕಂಡಿದೆ. ಅಲ್ಲದೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದು, ಇದು ನೋಡಲೇ ಬೇಕಾದ ಸಿನಿಮಾ ಎನ್ನುತ್ತಿದ್ದಾರೆ ಅಭಿಮಾನಿಗಳು.

ಹೌದು, ಈ ಸಿನಿಮಾದಲ್ಲಿ ರಣವೀರ್​-ಅಲಿಯಾ ಜೋಡಿ ಹಾಗೂ ಅಭಿನಯ ತುಂಬಾ ಚೆನ್ನಾಗಿದೆ ಎಂದು ಪ್ರೇಕ್ಷಕರು ಕೊಂಡಾಡುತ್ತಿದ್ದಾರೆ. ಅದರಲ್ಲೂ ರಣವೀರ್​ ಸಿಂಗ್​ ಹಾಡಿ-ಅಭಿನಯಿಸಿರುವ ರ‍್ಯಾಪ್​ ಹಾಡು ಸಹ ನೋಡುಗರ ಮನ ಗೆದ್ದಿದೆ.

ಇದನ್ನೂ ಓದಿ: ರಶ್ಮಿಕಾರನ್ನು ಅಪ್ಪಿಕೊಳ್ಳಬೇಕೆಂದು ಅಭಿಮಾನಿಯೊಬ್ಬರು ಬರೆದ ಪತ್ರ ವೈರಲ್​..!

ಫೆ.9ರಂದು ಬರ್ಲಿನ್​ ಸಿನಿಮೋತ್ಸವದಲ್ಲಿ ಈ ಸಿನಿಮಾದ ಮೊದಲ ಪ್ರದರ್ಶನ ನಡೆದಿದ್ದು, ಅಲ್ಲಿ ಸಿನಿಮಾ ವೀಕ್ಷಿಸಿರುವ ಸಾಕಷ್ಟು ಮಂದಿ ನಿರ್ದೇಶಕರು ಇದು ರಣವೀರ್​ ಸಿಂಗ್​ ಸಿನಿ ಜೀವನದ ಅತ್ಯುತ್ತಮ ಚಿತ್ರ ಎಂದಿದ್ದಾರೆ. ಈ ಹಿಂದೆ 'ಪದ್ಮಾವತ್' ಸಿನಿಮಾದಲ್ಲಿನ ಖಿಲ್ಜಿ ಪಾತ್ರದಲ್ಲಿನ ಅಭಿನಯಕ್ಕೂ ರಣವೀರ್​ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.

ಟೊರಾಂಟೊ ಅಂತರರಾಷ್ಟ್ರೀಯ ಸಿನಿಮೋತ್ಸವದ ಕಲಾ ನಿರ್ದೇಶಕ ಕ್ಯಾಮರೂನ್​ ಬೆಲಿ ಸಹ 'ಗಲ್ಲಿ ಬಾಯ್​' ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬರ್ಲಿನ್​ನಲ್ಲಿ ಕಳೆದ 20 ವರ್ಷಗಳಿಂದ ನೋಡದಷ್ಟು ಭರ್ಜರಿ ಸ್ವಾಗತ ಈ ಸಿನಿಮಾಗೆ ಸಿಕ್ಕಿದೆ ಎಂದು ಟ್ವೀಟ್​ ಮಾಡಿದ್ದಾರೆ.


Now that the embargo is over, I’ve been dying to say this for 3 days! #GullyBoy is awesome, a great achievement for #ZoyaAkhtar. @RanveerOfficial gives his career best performance. Wonderful supporting cast. The music comes alive! My review out tomorrow. #Berlinale @berlinale 

 ಈಗಾಗಲೇ ವಿದೇಶದಲ್ಲಿ ಮೆಚ್ಚುಗೆಗೆ ಪಾತ್ರವಾಗಿರುವ 'ಗಲ್ಲಿ ಬಾಯ್​' ಸಿನಿಮಾ ಫೆ.14ರಂದು ತೆರೆ ಕಾಣಲಿದೆ. ಜೋಯಾ ಅಖ್ತರ್​ ನಿರ್ದೇಶನದ ಈ ಸಿನಿಮಾಗೆ ಭಾರತದಲ್ಲಿ ಯಾವ ರೀತಿಯ ಪ್ರತಿಕ್ರಿಯೆ ಸಿಗಲಿದೆ ಕಾದು ನೋಡಬೇಕಿದೆ.

PHOTOS: ಇದೇ ಶುಕ್ರವಾರ ತೆರೆಗಪ್ಪಳಿಸಲಿದೆ 'ಕೆಮಿಷ್ಟ್ರಿ ಆಫ್​ ಕರಿಯಪ್ಪ' ಸಿನಿಮಾ..!
First published: February 12, 2019, 3:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading