ಇತ್ತೀಚಿನ ಕೆಲವು ವರ್ಷಗಳಲ್ಲಿ ತೆಲುಗು (Telugu) ಭಾಷೆಯಲ್ಲಿ ಮೊದಲಿಗೆ ಬಾಹುಬಲಿ, ನಂತರ ಬಾಹುಬಲಿ 2, ಅದರ ನಂತರ ಆರ್‌ಆರ್‌ಆರ್ ಚಿತ್ರಗಳನ್ನು ತಯಾರಿಸಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿ ಸಿನಿ ರಸಿಕರಿಗೆ ದೊಡ್ಡ ಮಟ್ಟದ ಹಿಟ್ ಚಿತ್ರಗಳನ್ನು ನೀಡಿರುವ ಕೀರ್ತಿ ತೆಲುಗು ಚಿತ್ರೋದ್ಯಮದ ನಿರ್ದೇಶಕರಾದ ಎಸ್ ಎಸ್ ರಾಜಮೌಳಿ ಅವರಿಗೆ ಸಲ್ಲುತ್ತದೆ. ಈ ಮೂರು ಚಿತ್ರಗಳನ್ನು ನಂತರ ಬೇರೆ ಬೇರೆ ಭಾಷೆಗಳಲ್ಲಿಯೂ ಸಹ ಬಿಡುಗಡೆ ಮಾಡಿದರು. ಒಟ್ಟಿನಲ್ಲಿ ಈ ಮೂರು ಚಿತ್ರಗಳು ಪ್ಯಾನ್ ಇಂಡಿಯಾ (Oan India) ಚಿತ್ರಗಳಾಗಿ ಸೂಪರ್ ಹಿಟ್ (Super Hit) ಆಗಿದ್ದು, ಗಲ್ಲಾ ಪೆಟ್ಟಿಗೆಯಲ್ಲೂ ಸಹ ಭಾರಿ ಹಣವನ್ನು ಗಳಿಕೆ ಮಾಡಿದ್ದು ನಮಗೆಲ್ಲಾ ಗೊತ್ತೇ ಇದೆ. ಅದೇ ರೀತಿಯಾಗಿ ಇತ್ತೀಚೆಗೆ ಆರ್‌ಆರ್‌ಆರ್ ಚಿತ್ರದಲ್ಲಿನ ‘ನಾಟು ನಾಟು’ (Naatu Naatu Song) ಹಾಡಿಗೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸಹ ಬಂತು.
ಹೀಗೆ ಒಂದರ ನಂತರ ಇನ್ನೊಂದು ಎಂಬಂತೆ ಸೂಪರ್ ಹಿಟ್ ಚಲನಚಿತ್ರಗಳನ್ನು ಅಭಿಮಾನಿಗಳಿಗೆ ನೀಡಿದ ತೆಲುಗು ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರಿಗೆ ಈಗ ಉದ್ಯಮಿಯೊಬ್ಬರು ಒಂದು ವಿಷಯವನ್ನು ನೀಡಿ, ಅದರ ಬಗ್ಗೆ ಒಂದು ಚಿತ್ರ ಮಾಡಿ ಅಂತ ಸಲಹೆ ನೀಡಿದ್ದಾರೆ ನೋಡಿ.
ಸಿನೆಮಾ ಮಾಡಿ ಅಂತ ಈ ವಿಷಯವನ್ನು ಕೊಟ್ರಂತೆ ನೋಡಿ ಮಹೀಂದ್ರಾ
ಹೌದು, ಉದ್ಯಮಿ ಆನಂದ್ ಮಹೀಂದ್ರಾ ಅವರು ಸದಾ ಒಂದಲ್ಲ ಒಂದು ಆಸಕ್ತಿಕರವಾದ ಮತ್ತು ಸ್ವಾರಸ್ಯಕರವಾದ ಪೋಸ್ಟ್ ಗಳನ್ನು ಹಾಕುವುದರೊಂದಿಗೆ ಸುದ್ದಿಯಲ್ಲಿರುತ್ತಾರೆ.
ಇದನ್ನೂ ಓದಿ: ಸಮಂತಾ ಮಾಜಿ ಪತಿಯ ಕಿಸ್ಸಿಂಗ್ ಗುಟ್ಟು ರಟ್ಟು! ಎಷ್ಟು ಮಂದಿಗೆ ನಾಗ ಚೈತನ್ಯ ಕೊಟ್ಟಿದ್ದಾರೆ ಮುತ್ತು?
ಈಗ ಅವರು ಮತ್ತೊಮ್ಮೆ ಸುದ್ದಿಯಲ್ಲಿರುವುದು ಒಂದು ಚಿತ್ರ ಮಾಡುವಂತೆ ಒಂದು ವಿಷಯವನ್ನು ನಿರ್ದೇಶಕರಾದ ರಾಜಮೌಳಿ ಅವರಿಗೆ ನೀಡಿರುವುದರಿಂದ ಎಂದರೆ ಸುಳ್ಳಾಗದು.
ಉದ್ಯಮಿ ಆನಂದ್ ಮಹೀಂದ್ರಾ ಅವರು ರಾಜಮೌಳಿ ಮತ್ತು ಟ್ವಿಟ್ಟರ್ ಥ್ರೆಡ್ ನಲ್ಲಿ ಐತಿಹಾಸಿಕವಾದ ಒಂದು ಫೋಟೋವನ್ನು ಹಂಚಿಕೊಂಡಿದ್ದು, ಒಂದು ಯುಗವನ್ನು ಆಧರಿಸಿದ ಚಲನಚಿತ್ರ ಯೋಜನೆಯನ್ನು ನೀಡಿದ್ದಾರೆ ನೋಡಿ.
"ಇವು ಇತಿಹಾಸವನ್ನು ಜೀವಂತವಾಗಿಡುವ ಮತ್ತು ನಮ್ಮ ಕಲ್ಪನೆಯನ್ನು ಪ್ರಚೋದಿಸುವ ಅದ್ಭುತ ಉದಾಹರಣೆಗಳಾಗಿವೆ. ಆ ಪ್ರಾಚೀನ ನಾಗರಿಕತೆಯ ಬಗ್ಗೆ ಜಾಗತಿಕವಾಗಿ ಜಾಗೃತಿ ಮೂಡಿಸುವ ಆ ಯುಗವನ್ನು ಆಧರಿಸಿದ ಚಲನಚಿತ್ರ ಯೋಜನೆಯನ್ನು ಪರಿಗಣಿಸಲು ರಾಜಮೌಳಿ ಅವರಿಗೆ ಹೇಳುತ್ತಾ ಉದ್ಯಮಿ ಆನಂದ್ ಮಹೀಂದ್ರಾ ಟ್ವಿಟ್ ಮಾಡಿದ್ದಾರೆ
These are amazing illustrations that bring history alive & spark our imagination. Shoutout to @ssrajamouli to consider a film project based on that era that will create global awareness of that ancient civilisation…😊 https://t.co/ApKxOTA7TI
— anand mahindra (@anandmahindra) April 29, 2023
ಸಿಂಧೂ ಕಣಿವೆ ನಾಗರೀಕತೆಯ ಪ್ರಾಚೀನ ನಗರಗಳಾದ ಹರಪ್ಪ, ಮೊಹೆಂಜೊದಾರೊ, ಧೋಲಾವಿರಾ, ಲೋಥಾಲ್, ಕಾಲಿಬಂಗನ್, ಬನವಾಲಿ, ರಾಖಿಗರ್ಹಿ, ಸುರ್ಕೋಟಡಾ, ಚಾನ್ಹು ದಾರೊ, ರುಪರ್ ಅನ್ನು ಚಿತ್ರಿಸಲಾಗಿದೆ. ಟ್ವಿಟರ್ ಥ್ರೆಡ್ ಅನ್ನು ಟ್ವಿಟರ್ ಹ್ಯಾಂಡಲ್ ದೇಸಿ ಥಗ್ ಹಂಚಿಕೊಂಡಿದೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಪಾಲಾಯ್ತು ಮತ್ತೊಂದು ಹಿಂದಿ ಸಿನಿಮಾ, ಬಾಲಿವುಡ್ ಬಿಗ್ ಮೂವಿಯಲ್ಲಿ ಶ್ರೀವಲ್ಲಿ!
"ಸಿಂಧೂ ಕಣಿವೆ ನಾಗರೀಕತೆಯು ಕ್ರಿ.ಪೂ 7500 ಕ್ಕಿಂತ ಹಿಂದಿನ ವಿಶ್ವದ ಅತ್ಯಂತ ಹಳೆಯ ನಾಗರಿಕತೆಯಾಗಿದೆ, ಈ ಟ್ವಿಟ್ ನ ಏಕೈಕ ಉದ್ದೇಶವೆಂದರೆ ನಮ್ಮ ಸಿಂಧೂ ಕಣಿವೆಯಲ್ಲಿ ಅಸ್ತಿತ್ವದಲ್ಲಿದ್ದ ಪ್ರಾಚೀನ ನಗರಗಳ ಹೆಸರನ್ನು ತಿಳಿಸುವುದು.. ಪ್ರಾತಿನಿಧಿಕ ಉದ್ದೇಶಕ್ಕಾಗಿ ಇಲ್ಲಿ ಬಳಸಲಾಗುವ ಎಲ್ಲಾ ಚಿತ್ರಗಳು ಸೈಟ್ ಗಳಿಗಿಂತ ಭಿನ್ನವಾಗಿರಬಹುದು” ಅಂತ ಬರೆದಿದ್ದಾರೆ.
ಮಹೀಂದ್ರಾ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿದ ನೆಟ್ಟಿಗರು
ಈ ಟ್ವಿಟ್ ಗೆ ಈಗಾಗಲೇ ಹಲವಾರು ಪ್ರತಿಕ್ರಿಯೆಗಳು ಬಂದಿವೆ. "ಆನಂದ್ ಮಹೀಂದ್ರಾ ಸರ್ ತುಂಬಾನೇ ಅದ್ಭುತವಾದ ಬೇಡಿಕೆ ಇದು" ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು "ಮಣಿರತ್ನಂ ಸರ್ ಅವರ ಪೊನ್ನಿಯಿನ್ ಸೆಲ್ವನ್ ಅನ್ನು ನೀವು ನೋಡಬೇಕು" ಎಂದು ಬರೆದಿದ್ದಾರೆ.
ರಾಜಮೌಳಿ ಅವರ ಬಾಹುಬಲಿಯನ್ನು ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಗೆ ಹೋಲಿಸಲಾಗಿದೆ ಎಂಬುದನ್ನು ಇಲ್ಲಿ ಗಮನಿಸಬೇಕು. ಪೊನ್ನಿಯಿನ್ ಸೆಲ್ವನ್ 2 ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು ಮತ್ತು ದೇಶೀಯವಾಗಿ ಬಾಕ್ಸ್ ಆಫೀಸ್ ನಲ್ಲಿ 82 ಕೋಟಿಗೂ ಹೆಚ್ಚು ಹಣವನ್ನು ಇದು ಗಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ