News18 India World Cup 2019

ಕಾಲೇಜು ವಿದ್ಯಾರ್ಥಿ ಕೊಲೆಯಾದ ಕಥೆ ಸಿನಿಮಾ ರೂಪದಲ್ಲಿ..!

news18
Updated:July 31, 2018, 10:44 PM IST
ಕಾಲೇಜು ವಿದ್ಯಾರ್ಥಿ ಕೊಲೆಯಾದ ಕಥೆ ಸಿನಿಮಾ ರೂಪದಲ್ಲಿ..!
news18
Updated: July 31, 2018, 10:44 PM IST
-ನ್ಯೂಸ್ 18 ಕನ್ನಡ

ದೇಶದ ಗಮನ ಸೆಳೆದಿದ್ದ ಕೇರಳ ಕಾಲೇಜು ವಿದ್ಯಾರ್ಥಿ ಅಭಿಮನ್ಯು ಕೊಲೆ ಪ್ರಕರಣವನ್ನು ಸಿನಿಮಾ ಮಾಡಲು ಮಾಲಿವುಡ್​ನ ಚಿತ್ರತಂಡವೊಂದು ಮುಂದಾಗಿದೆ. ಕೊಚ್ಚಿಯ ಮಹಾರಾಜಸ್ ಕಾಲೇಜಿನ ಎಸ್​ಎಫ್​ಐ ವಿದ್ಯಾರ್ಥಿ ಸಂಘಟನೆಯ ನಾಯಕನಾಗಿದ್ದ ಅಭಿಮನ್ಯುವನ್ನು ಕಾಲೇಜು ಆವರಣದಲ್ಲಿ ಹತ್ಯೆಗೈಯ್ಯಲಾಗಿತ್ತು. ಈ ಕೊಲೆಯ ಸೂತ್ರಧಾರರು ಅದೇ ಕಾಲೇಜಿನ ಮತ್ತೊಂದು ವಿದ್ಯಾರ್ಥಿ ಸಂಘಟನೆಯಾದ ಕ್ಯಾಂಪಸ್ ಫ್ರಂಟ್ ವಿದ್ಯಾರ್ಥಿಗಳಾಗಿದ್ದರು. ಈ ಸಂಬಂಧ ಈಗಾಗಲೇ ಹತ್ತಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ.

ಕ್ಯಾಂಪಸ್​ನಲ್ಲಿ ಉಂಟಾದ ಭಿನ್ನಾಭಿಪ್ರಾಯ ಕೊಲೆಯಲ್ಲಿ ಅಂತ್ಯ ಕಂಡು ದೇಶದಾದ್ಯಂತ ಈ ಪ್ರಕರಣ ಸುದ್ದಿಯಾಗಿತ್ತು. ಬಡ ವಿದ್ಯಾರ್ಥಿಯಾಗಿದ್ದರೂ ಕಾಲೇಜು ಚಟುವಟಿಕೆಯಲ್ಲಿ ಮುಂದಾಳತ್ವ ವಹಿಸಿದ್ದ ಅಭಿಮನ್ಯು ಜೀವನವನ್ನು ಚಿತ್ರವಾಗಿಸಲು ಯುವ ನಿರ್ದೇಶಕ ವಿನೀಶ್ ಆರಾಧ್ಯ ತಯಾರಾಗಿದ್ದಾರೆ. ಈ ಚಿತ್ರಕ್ಕೆ 'ಪದ್ಮವ್ಯೂಹತ್ತಿಲೇ ಅಭಿಮನ್ಯು'(ಚಕ್ರವ್ಯೂಹದ ಅಭಿಮನ್ಯು) ಎಂಬ ಟೈಟಲ್ ನೀಡಲಾಗಿದೆ.

ಮಹಾಭಾರತದಲ್ಲಿ ಚಕ್ರವ್ಯೂಹದಲ್ಲಿ ಸಿಲುಕಿದ ಅಭಿಮನ್ಯು ವೀರ ಮರಣವನ್ನಪ್ಪಿದ್ದು, ಇಲ್ಲೂ ಸಹ ವಿದ್ಯಾರ್ಥಿ ನಾಯಕ ಅಭಿಮನ್ಯು ಎದುರಾಳಿಗಳ ಕುತಂತ್ರಕ್ಕೆ ಬಲಿಯಾಗಿದ್ದರು ಎಂದು ನಿರ್ದೇಶಕರು ತಿಳಿಸಿದ್ದಾರೆ. ಈ ಚಿತ್ರದ ಮೂಲಕ ಅಭಿಮನ್ಯುವನ್ನು ಕೊಲ್ಲಲು ಯಾವ ರೀತಿಯಾಗಿ ಯೋಜನೆ ರೂಪಿಸಲಾಗಿತ್ತು. ವಿದ್ಯಾರ್ಥಿ ನಾಯಕನಾಗಿ ಕಾಲೇಜಿನಲ್ಲಿ ಅಭಿಮನ್ಯು ಹೇಗೆ ಸಕ್ರೀಯನಾಗಿದ್ದನು ಎಂಬುದನ್ನು ತಿಳಿಸುವ ಪ್ರಯತ್ನ ಮಾಡಲಾಗುವುದು ಎಂದು ವಿನೀಶ್ ತಿಳಿಸಿದ್ದಾನೆ.

ಈ ಕೊಲೆಯು ಪೂರ್ವನಿಯೋಜಿತವಾಗಿದ್ದರಿಂದ ಹಂತಕರ ಜಾಡು ಹಿಡಿಯುವಲ್ಲಿ ಪೊಲೀಸರು ಹಗಲು ರಾತ್ರಿಯಲ್ಲಿ ಕಷ್ಟಪಟ್ಟಿದ್ದರು. ಒಬ್ಬೊಬ್ಬರ ಬಂಧನವಾಗುತ್ತಿದ್ದಂತೆ ಈ ಕೊಲೆಯಲ್ಲಿ ಕಾಲೇಜಿನ ಹೊರಗಿನವರು ಕೂಡ ಮುಖ್ಯ ಪಾತ್ರವಹಿಸಿದ್ದು ಬೆಳಕಿಗೆ ಬಂದಿತ್ತು. ಈ ಮರ್ಡರ್ ಮಿಸ್ಟರಿಯನ್ನು ಬೆಳ್ಳಿಪರದೆಯಲ್ಲಿ ಮೂಡಿಸಲು ನಿರ್ದೇಶಕರು ಎಲ್ಲಾ ತಯಾರಿ ನಡೆಸಿದ್ದು, ಚಿತ್ರದ ಮಲಯಾಳಂನ ಪ್ರಮುಖ ಕಲಾವಿದರು ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ.

'ಪದ್ಮವ್ಯೂಹತ್ತಿಲೇ ಅಭಿಮನ್ಯು' ಚಿತ್ರವನ್ನು ಮುನ್ನಾರ್, ಕೋಝಿಕ್ಕೊಡ್ ಮತ್ತು ಕೊಚ್ಚಿನ್ ಭಾಗಗಳಲ್ಲಿ ಚಿತ್ರೀಕರಿಸಲಿದ್ದು, ಶೀಘ್ರದಲ್ಲೇ ಚಿತ್ರದ ನಾಯಕ ಸಂಪೂರ್ಣ ವಿವರಗಳನ್ನು ನೀಡುವುದಾಗಿ ನಿರ್ದೇಶಕ ವಿನೀಶ್ ಆರಾಧ್ಯ ತಿಳಿಸಿದ್ದಾರೆ.
First published:July 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...