83 Movie: ರಾಮಾಚಾರಿ, ಕೆಂಪೇಗೌಡ ಸಿನಿಮಾ ಡೈಲಾಗ್ ಹೊಡೆದ ವಿಶ್ವಕಪ್ ಹೀರೋ ಕೃಷ್ಣಮಾಚಾರಿ

Promotion for 83 Movie in Bengaluru: ಡಿ. 23ರಂದು ಬಿಡುಗಡೆ ಆಗಲಿರುವ 83 ಸಿನಿಮಾದ ಪ್ರಚಾರ ಕಾರ್ಯಕ್ಕಾಗಿ ಇಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು. ರಣವೀರ್, ಕಪಿಲ್ ದೇವ್, ಶ್ರೀಕಾಂತ್, ಕಿಚ್ಚ ಸುದೀಪ್ ಮೊದಲಾದವರು ಪಾಲ್ಗೊಂಡಿದ್ದರು.

83 ಸಿನಿಮಾದ ಒಂದು ದೃಶ್ಯ ಮತ್ತು ಕಿಚ್ಚ ಸುದೀಪ್ ಬೆಂಬಲ

83 ಸಿನಿಮಾದ ಒಂದು ದೃಶ್ಯ ಮತ್ತು ಕಿಚ್ಚ ಸುದೀಪ್ ಬೆಂಬಲ

 • News18
 • Last Updated :
 • Share this:
  ಬೆಂಗಳೂರು, ಡಿ. 18: ನಿನ್ನೆ ಸಿಲಿಕಾನ್ ಸಿಟಿಯಲ್ಲಿ ಪುಷ್ಪ ಸಿನಿಮಾದ ಪ್ರೊಮೋಶನ್ ಕಲರವ ನಡೆದರೆ ಇಂದು ‘83’ ಸಿನಿಮಾದ ಪ್ರೊಮೋಶನ್ ಭರ್ಜರಿಯಾಗಿ ನಡೆಯಿತು. ಭಾರತದಲ್ಲಿ ಕ್ರಿಕೆಟ್ ಕ್ಷೇತ್ರಕ್ಕೆ ಒಂದು ಅದ್ಭುತ ಶಕ್ತಿ ಸಂಚಯನಕ್ಕೆ ಕಾರಣವಾದ 1983ರ ವಿಶ್ವಕಪ್ ಗೆಲುವಿನ ರಿಯಲ್ ಕಥೆಯನ್ನ ಆಧರಿಸಿ ತೆಗೆಯಲಾಗಿರುವ ‘83’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಅದರ ಪ್ರಚಾರ ಕಾರ್ಯವಾಗಿ ರಣವೀರ್ ಸಿಂಗ್, ಕಪಿಲ್ ದೇವ್, ಸಯದ್ ಕಿರ್ಮಾನಿ, ಕೆ ಶ್ರೀಕಾಂತ್, ಕಿಚ್ಚ ಸುದೀಪ್ ಮೊದಲಾದವರು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕೆಲ ಅನುಭವಗಳನ್ನ ಹಂಚಿಕೊಂಡರು.

  1983ರ ವಿಶ್ವಕಪ್ ಗೆದ್ದ ಟೀಮ್ ಇಂಡಿಯಾದ ನಾಯಕರಾದವರು ಕಪಿಲ್ ದೇವ್. ಅವರ ಸುತ್ತಲೇ ಸಿನಿಮಾದ ಕಥೆ ಹೆಣೆಯಲಾಗಿದೆ. ಕಪಿಲ್ ದೇವ್ ಪಾತ್ರವನ್ನು ರಣವೀರ್ ಸಿಂಗ್ ನಿರ್ವಹಿಸಿದ್ದಾರೆ. ಅಂದಿನ ಟೀಮ್ ಇಂಡಿಯಾದ ಎಲ್ಲ ಆಟಗಾರರ ಪಾತ್ರಗಳೂ ಚಿತ್ರದಲ್ಲಿ ಇದೆ. ಮಿಲ್ಖಾ ಸಿಂಗ್ ಜೀವನಕಥೆ ಆಧರಿತ ಚಿತ್ರವನ್ನು ತೆರೆಯ ಮೇಲೆ ಯಶಸ್ವಿಯಾಗಿ ತಂದಿದ್ದ ಕಬೀರ್ ಖಾನ್ ಅವರು 83 ಸಿನಿಮಾದ ನಿರ್ದೇಶಕರಾಗಿದ್ದಾರೆ. ಡಿ. 23ರಂದು ವಿಶ್ವಾದ್ಯಂತ ಸಿನಿಮಾ ತೆರೆಗಳಿಗೆ ಅಪ್ಪಳಿಸಲಿದೆ.

  ಹಿಂದಿಯಲ್ಲಿ ತಯಾರಾಗಿರುವ 83 ಸಿನಿಮಾವನ್ನು ಕನ್ನಡ ಸೇರಿದಂತೆ ನಾಲ್ಕು ಭಾರತೀಯ ಭಾಷೆಗಳಲ್ಲಿ ಡಬ್ ಮಾಡಲಾಗಿದೆ. ಕನ್ನಡದ ಸಿನಿಮಾಗೆ ಕಿಚ್ಚ ಸುದೀಪ್ ಧ್ವನಿ ನೀಡಿದ್ದಾರೆ.

  ಪ್ರೆಸ್ ಮೀಟ್ ಬಲು ಮಜಾ:

  ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಕೃಷ್ಣಮಾಚಾರಿ ಶ್ರೀಕಾಂತ್ ರಂಜನೆ ನೀಡಿದರು. ಟೀಮ್ ಇಂಡಿಯಾದ ಮಾಜಿ ಓಪನಿಂಗ್ ಬ್ಯಾಟರ್ ಶ್ರೀಕಾಂತ್ ಕನ್ನಡ ಸಿನಿಮಾಗಳ ಡೈಲಾಗ್ ಹೊಡೆದು ರಂಜಿಸಿದರು. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮಿಸ್ಟರ್ ಅಂಡ್ ಮಿಸಸ್ ರಾಮಚಾರಿ ಸಿನಿಮಾದ “ನಾನು ಬರೋವರೆಗೂ ಮಾತ್ರ ಬೇರೆಯವರ ಹವಾ, ನಾನ್ ಬಂದ್ಮೇಲೆ ನಂದೇ ಹವಾ“ ಎಂಬ ಡೈಲಾಗ್ ಅನ್ನು ಕೃಷ್ಣಮಾಚಾರಿ ಶ್ರೀಕಾಂತ್ ಹೇಳಲು ಯತ್ನಿಸಿದರು.

  ಇದನ್ನೂ ಓದಿ: Bollywood: ಕರೀನಾ ಕಪೂರ್ ಭಾವುಕರಾಗಿದ್ದು ಏಕೆ..? ಮಕ್ಕಳನ್ನು ಮಿಸ್‌ ಮಾಡ್ಕೊಂಡ ಬೆಬೋ..!

  ನಂತರ, ಕಿಚ್ಚ ಸುದೀಪ್ ನಟನೆಯ ಕೆಂಪೇಗೌಡ ಸಿನಿಮಾದ ಖ್ಯಾತ ಸಂಭಾಷಣೆಯ ತುಣಕನ್ನೂ ಹೇಳಲು ಪ್ರಯತ್ನಿಸಿದರು. “ತೊಂದರೆಯಲ್ಲಿರೋರನ್ನ ಆ ದೇವ್ರು ಕೈ ಬಿಡಲ್ಲ, ತೊಂದರೆ ಕೊಟ್ಟವರನ್ನ ಈ ಕೆಂಪೇಗೌಡ ಬಿಡೋದಿಲ್ಲ” ಎಂದು ಶ್ರೀಕಾಂತ್ ಡೈಲಾಗ್ ಹೇಳಿದರು.

  ಬಾಲಿವುಡ್ ನಟ ಹಾಗು ಕಪಿಲ್ ಪಾತ್ರಧಾರಿ ರಣವೀರ್ ಸಿಂಗ್ ಕೂಡ ಕೆಂಪೇಗೌಡ ಸಿನಿಮಾದ ಡೈಲಾಗ್ ಹೊಡೆದು ಮನರಂಜನೆ ಒದಗಿಸಿದರು.

  ತಮಿಳುನಾಡಿನ ಕೃಷ್ಣಮಾಚಾರಿ ಶ್ರೀಕಾಂತ್ ಅವರಿಗೆ ಕನ್ನಡ ಅಲ್ಪಸ್ವಲ್ಪ ತಿಳಿಯಲು ಜಾವಗಲ್ ಶ್ರೀನಾಥ್ ಕಾರಣವಂತೆ. ಜಾವಗಲ್ ಶ್ರೀನಾಥ್ ಮತ್ತು ಅವರು ರೂಮ್ ಮೇಟ್ ಆಗಿದ್ದರಂತೆ. ಶ್ರೀನಾಥ್ ಸಹವಾಸದಿಂದ ಕೆಲ ಕನ್ನಡ ಪದ ಕಲಿತಿದ್ದೇನೆ. ತಮ್ಮ ಕನ್ನಡ ಅದ್ಭುತವೇನಿಲ್ಲ ಎಂದು ಹೇಳುತ್ತಲೇ ಶ್ರೀಕಾಂತ್ ಅವರು ಕನ್ನಡ ಸಿನಿಮಾಗಳ ಡೈಲಾಗ್​ಗಳನ್ನ ಹೊಡೆದು ಗಮನ ಸೆಳೆದರು.

  ಕಪಿಲ್ ಮೊದಲ ಭೇಟಿಯ ನೆನಪಿಸಿಕೊಂಡ ಸುದೀಪ್:

  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಿಚ್ಚ ಸುದೀಪ್ ಅವರು ತಾನು ಬಹಳ ವರ್ಷಗಳ ಹಿಂದೆ ಕಪಿಲ್ ದೇವ್ ಅವರನ್ನ ಮೊದಲ ಬಾರಿಗೆ ಭೇಟಿಯಾದ ಘಟನೆಯನ್ನ ಸ್ಮರಿಸಿಕೊಂಡರು.

  ಇದನ್ನೂ ಓದಿ: ಎಲ್ಲೆ ಹೋದ್ರೂ.. ಎಲ್ಲೇ ಇದ್ರೂ.. ನಾನು ಭಾರತೀಯೆ: ದೇಶಪ್ರೇಮ ಮೆರೆದ ಪ್ರಿಯಾಂಕ ಚೋಪ್ರಾ!

  ತುಂಬಾ ವರ್ಷಗಳ ಹಿಂದೆ ನಾನು ಸಾಹೇಬರ (ಕಪಿಲ್) ನೋಡಕೆ ಹೋಗಿದ್ದೆ. ತುಂಬಾ ದೂರ ಓಡಿ ಅವರ ಕೋಟ್ ಎಳೆದಿದ್ದೆ. ನನ್ನ ಜೊತೆ ನನ್ನ ಅಕ್ಕ ಇದ್ರು. ಫೋಟೋ ತೆಗೆದುಕೊಳ್ಳುವಾಗ ಕ್ಯಾಮರಾ ವರ್ಕ್ ಆಗಲಿಲ್ಲ. ಆಗ ತುಂಬಾ ಅತ್ತಿದ್ದೆ. ನನ್ನ ಎತ್ತಿಕೊಂಡು ಸಾಹೇಬರು ಕಣ್ಣೀರು ಒರೆಸಿದ್ರು. ತುಂಬಾ ವರ್ಷ ಅವರ ಒಂದೇ ಒಂದು ಫೋಟೋಗೆ ಕಾದಿದ್ದೇನೆ ಎಂದು ಕಿಚ್ಚ ಸುದೀಪ್ ಭಾವುಕರಾದರು.


  ಸುದೀಪ್ ಬ್ಯಾಟಿಂಗ್, ಕಪಿಲ್ ಫೀಲ್ಡಿಂಗ್:

  ಇಂದಿನ 83 ಸಿನಿಮಾ ಪತ್ರಿಕಾಗೋಷ್ಠಿಯಲ್ಲಿ ಕಿಚ್ಚ ಸುದೀಪ್ ಅವರೇ ಕೇಂದ್ರಬಿಂದುವಂತೆ ಕಂಡರು. ವೇದಿಕೆಯಲ್ಲಿ ಒಂದು ಸಣ್ಣ ಕ್ರಿಕೆಟ್ ಕೂಡ ಆಯಿತು. ಸುದೀಪ್ ಬ್ಯಾಟಿಂಗ್ ಮಾಡಿದರೆ 1983ರ ವಿಶ್ವಕಪ್ ಹೀರೋಗಳು ಫೀಲ್ಡಿಂಗ್ ಮಾಡಿದರು. ರೋಜರ್ ಬಿನ್ನಿ ಬೌಲಿಂಗ್, ಕಿರ್ಮಾನಿ ಕೀಪಿಂಗ್ ಮತ್ತು ಕಪಿಲ್ ದೇವ್ ಫೀಲ್ಡಿಂಗ್ ಮಾಡಿದರು.
  Published by:Vijayasarthy SN
  First published: