Samantha-Naga Chaitanya ಮದುವೆಯಾದ ಸ್ಥಳದಲ್ಲೇ ಮೌನಿ ರಾಯ್, ಸೂರಜ್ ವಿವಾಹವಂತೆ!

ಟಾಲಿವುಡ್ ಹಿಟ್ ಜೋಡಿ ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ಮದುವೆಯಾದದ್ದು ಕೂಡ ಇದೇ ಜಾಗದಲ್ಲಿ. ಅವರ ಮದುವೆ 2017ರಲ್ಲಿ ನಡೆಯಿತು. ಇವರಿಬ್ಬರ ಕನಸಿನ ಮದುವೆಯ ದೃಶ್ಯಗಳು ನಮ್ಮ ಮನಸ್ಸಿನಲ್ಲಿ ಇನ್ನೂ ತಾಜಾವಾಗಿವೆ.

ಮೌನಿ ರಾಯ್, ಸೂರಜ್ ನಂಬಿಯಾರ್

ಮೌನಿ ರಾಯ್, ಸೂರಜ್ ನಂಬಿಯಾರ್

  • Share this:
ಮೌನಿ ರಾಯ್ (Mouni Roy) ಮನರಂಜನಾ ಉದ್ಯಮದಲ್ಲಿ ಪ್ರತಿಭಾವಂತ ಮತ್ತು ಸುಂದರ ನಟಿ. ದೂರದರ್ಶನದಿಂದ ಪ್ರಾರಂಭವಾದ ಅವರ ಮಾಧ್ಯಮ ಪ್ರಯಾಣ ಹಿಟ್ ಚಲನಚಿತ್ರಗಳನ್ನು ನೀಡುವತ್ತಾ ಸಾಗಿರುವುದು ಮಾತ್ರ ನಿಜಕ್ಕೂ ಆಶ್ಚರ್ಯ. ಹೌದು ಬಾಲಿವುಡ್‌ನಲ್ಲಿ(Bollywood) ಇದೀಗ ಮೌನಿ ರಾಯ್ ಬಹು ಬೇಡಿಕೆಯ ನಟಿಯಾಗಿ ಮುಂದುವರೆದಿದ್ದಾರೆ. ಗಾಯಕಿ, ಕಥಕ್ ನೃತ್ಯಗಾರ್ತಿ, ರೂಪದರ್ಶಿಯಾಗಿರುವ (Model) ಮೌನಿ ರಾಯ್ ಟಿವಿಯಲ್ಲಿ ಮೊದಲ ಬಾರಿ ಕೃಷ್ಣ ತುಳಸಿ ಧಾರವಾಹಿಯಲ್ಲಿ ಕಾಣಿಸಿಕೊಂಡರು. ಅಲ್ಲಿಂದ ಇವರ ಬಣ್ಣದ ಜಗತ್ತಿನ ಪ್ರಯಾಣ ಶುರುವಾಯಿತು. ಇದೀಗ ರಣಬೀರ್ ಕಪೂರ್ ಅಲಿಯಾ ಭಟ್ ಅಮಿತಾಬ್ ಬಚ್ಚನ್ ಅಭಿನಯಿಸುತ್ತಿರುವ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೀಗ ಸಿನಿಮಾ ಜೊತೆಗೆ ಮತ್ತೊಂದು ವಿಚಾರ ಮೌನಿರಾಯ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ನಟಿಯ ಮದುವೆ (Wedding) ವಿಚಾರ ಎಲ್ಲರ ಕೇಂದ್ರಬಿಂದುವಾಗಿದೆ.

ವಾಗಾಟೋರ್ ಸಮುದ್ರ ಬಳಿ ಮದುವೆ
ಬಾಲಿವುಡ್ ನಟಿ ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ಅವರ ಮದುವೆ ಎಲ್ಲರ ಗಮನ ಸೆಳೆಯುತ್ತಿದೆ. ದಂಪತಿಗಳು 2022ರ ಜನವರಿ 27ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಖಾಸಗಿ ಬೀಚ್ ಹೊಂದಿರುವ ವಿಸ್ತಾರವಾದ ಪ್ರದೇಶದಲ್ಲಿ ಗೋವಾದಲ್ಲಿರುವ ವಾಗಾಟೋರ್ ಸಮುದ್ರ ಬಳಿ ಇರುವ 'W' ಹೋಟೆಲ್‌ನಲ್ಲಿ ಮದುವೆ ನಡೆಯಲಿದೆ. ಇದುವರೆಗೆ ಇವರಿಬ್ಬರು ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಅವರ ಸ್ನೇಹಿತರು ಮದುವೆಯ ಸ್ಥಳದ ಬಗ್ಗೆ ಮಾತನಾಡಿದ್ದಾರೆ.

ಟಾಲಿವುಡ್ ಹಿಟ್ ಜೋಡಿ ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ಮದುವೆಯಾದದ್ದು ಕೂಡ ಇದೇ ಜಾಗದಲ್ಲಿ. ಅವರ ಮದುವೆ 2017ರಲ್ಲಿ ನಡೆಯಿತು. ಇವರಿಬ್ಬರ ಕನಸಿನ ಮದುವೆಯ ದೃಶ್ಯಗಳು ನಮ್ಮ ಮನಸ್ಸಿನಲ್ಲಿ ಇನ್ನೂ ತಾಜಾವಾಗಿವೆ. ಆದರೆ ಇದೀಗ ಇವರಿಬ್ಬರು ವಿಚ್ಛೇದನ ಘೋಷಿಸಿ ತಮ್ಮದೇ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಮೌನಿ ರಾಯ್, ಸೂರಜ್ ನಂಬಿಯಾರ್ ಮದುವೆ ಸಂಭ್ರಮ. ದುಬೈನಲ್ಲಿ 2019ರಲ್ಲಿ ಹೊಸ ವರ್ಷದ ಹಿಂದಿನ ದಿನ ಭೇಟಿಯಾದ ಇವರು ಸ್ನೇಹಿತರಾಗಿ, ಪ್ರೇಮಿಗಳಾಗಿ, ದಂಪತಿಗಳಾಗುತ್ತಿದ್ದಾರೆ. ಆದರೆ ಸೂರಜ್ ನಂಬಿಯಾರ್ ಜೊತೆಗಿನ ಪ್ರೀತಿ ವಿಚಾರವನ್ನು ಮುಚ್ಚಿಟ್ಟಿದ್ದರು.

ಇದನ್ನೂ ಓದಿ: 21 ವರ್ಷಗಳಿಂದ ಪ್ರತ್ಯೇಕವಾಗಿರುವ ಗಂಡ-ಹೆಂಡತಿ Divorceಗೆ ಅರ್ಹರು ಎಂದ High Court

ಮದುವೆಗೆ 2 ಕುಟುಂಬಗಳು ಸಮ್ಮತಿ
ಇನ್ನು, ನಟಿಯ ವಿವಾಹಕ್ಕೆ ಜನವರಿ 23ರಿಂದ ಅತಿಥಿಗಳು ಗೋವಾವನ್ನು ತಲುಪುವ ಸಾಧ್ಯತೆ ಇದೆ. 2 ಕುಟುಂಬಗಳು ರಾಜಸ್ಥಾನ ಮತ್ತು ಗೋವಾ ಎಂಬ 2 ಸ್ಥಳಗಳನ್ನು ಹುಡುಕುತ್ತಿದ್ದರು. ಕೊನೆಗೆ ಗೋವಾದಲ್ಲಿಯೇ ಇವರಿಬ್ಬರ ಮದುವೆಗೆ 2 ಕುಟುಂಬಗಳು ಸಮ್ಮತಿ ನೀಡಿವೆ. ಮೌನಿ ಕೆಲವೊಮ್ಮೆ ದುಬೈ ಮತ್ತು ಮುಂಬೈ ಕೆಲಸದ ನಿಮಿತ್ತ ಓಡಾಡುತ್ತಲೇ ಇರುತ್ತಾರೆ.

ಆದರೆ ದಂಪತಿಗಳು ಮೌನಿ ಪ್ರಸ್ತುತ ದುಬೈನಲ್ಲಿರುವ ಅದೇ ಕಟ್ಟಡದಲ್ಲಿ ದೊಡ್ಡ ಫ್ಲಾಟ್ ಅನ್ನು ಸಹ ಖರೀದಿಸಿದ್ದಾರೆ. ಇಂಟೀರಿಯರ್‌ಗಳನ್ನು ತ್ವರಿತ ಗತಿಯಲ್ಲಿ ಮಾಡಲಾಗುತ್ತಿದೆ. ಇನ್ನು ಇದರ ಜೊತೆಗೆ ಸಂಗೀತ ಪಾರ್ಟಿಗಾಗಿ ನೃತ್ಯ ಪೂರ್ವಾಭ್ಯಾಸದಿಂದ ಹಿಡಿದು ಮದುವೆಯ ಅಲಂಕಾರದವರೆಗೆ ತಯಾರಿ ಈಗಾಗಲೇ ಪ್ರಾರಂಭವಾಗಿದೆ.

ಮಂದಿರಾ ಬೇಡಿ ನಿವಾಸದಲ್ಲಿ ಭೇಟಿ
ಮೌನಿ ರಾಯ್ ಅವರ ತಾಯಿ ಸೂರಜ್ ಅವರನ್ನು ಮಂದಿರಾ ಬೇಡಿ ಅವರ ನಿವಾಸದಲ್ಲಿ ಭೇಟಿಯಾದರು. ಆಶ್ಕಾ ಗೊರಾಡಿಯಾ, ಮೀಟ್ ಬ್ರೋಸ್, ಡಿಸೈನರ್ ಅನುರಾಧಾ ಖುರಾನಾ ಮತ್ತು ನೃತ್ಯ ಸಂಯೋಜಕರಾದ ರಾಹುಲ್ ಮತ್ತು ಪ್ರತೀಕ್ ಸೇರಿದಂತೆ ಮದುವೆಗೆ ಇನ್ನು ಸಾಕಷ್ಟು ಅತಿಥಿಗಳನ್ನು ನಿರೀಕ್ಷಿಸಲಾಗಿದೆ.
ಸೂರಜ್ ನಂಬಿಯಾರ್ ಕುಟುಂಬವು ಮೌನಿ ರಾಯ್ ಅವರನ್ನು ಇಷ್ಟಪಟ್ಟಿದ್ದಾರೆ.

ಇದನ್ನೂ ಓದಿ: Marriage: ಸರ್ವಂ ಆನ್​ಲೈನ್​ಮಯ: Google Meetನಲ್ಲಿ ಮದುವೆ, Zomato ಮೂಲಕ ಊಟ

ವರನ ಪೋಷಕರಾದ ರೇಣುಕಾ ಮತ್ತು ರಾಜಾ ನಂಬಿಯಾರ್ ಅವರೊಂದಿಗಿನ ಮೌನಿ ರಾಯ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಸೂರಜ್‌ ಸಹೋದರ ನೀರಜ್ ಮತ್ತು ಪತ್ನಿ ಮೌನಿಗೆ ಉತ್ತಮ ಸ್ನೇಹಿತರಾಗಿದ್ದಾರೆ. ಸೂರಜ್ ನಂಬಿಯಾರ್ ಅವರು ಯುಎಸ್‌ನ ಐವಿ ಲೀಗ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ. ಬೆಂಗಳೂರಿನವರಾದ ಇವರು ಅಲ್ಲೇ ಇಂಜಿನಿಯರಿಂಗ್ ಮುಗಿಸಿದ್ದಾರೆ. ಈ ಜೋಡಿಯ ಆರತಕ್ಷತೆಯು ಮೌನಿರಾಯ್ ಅವರ ತವರೂರಾದ ಕೂಚ್ ಬೆಹಾರ್‌ನಲ್ಲಿ ಆಯೋಜಿಸಲಿದ್ದಾರೆ.
Published by:vanithasanjevani vanithasanjevani
First published: