Mouni Roy: ಮದುವೆ ಬಗ್ಗೆ ಕೊನೆಗೂ ಬಾಯ್ಬಿಟ್ಟ ಕೆಜಿಎಫ್ ಬೆಡಗಿ, ಇವ್ರೆ ನಮ್​ ಹುಡ್ಗ ಎಂದು ನಾಚಿ ನೀರಾದ ಮೌನಿ!

ಜನವರಿ 27 ರಂದು ಗೋವಾದ ವಾಗೋಟರ್‌ ಬೀಚ್‌ ಬಳಿಯ ಐಷಾರಾಮಿ ಹೋಟೆಲ್ ಒಂದರಲ್ಲಿ ಮದುವೆ ಆಗಲಿದ್ದಾರೆ. ಪಂಚತಾರಾ ಹೋಟೆಲ್ ಈಗಾಗಲೇ ಬುಕ್ ಆಗಿದ್ದು, ಪಂಚತಾರಾ ಹೊಟೆಲ್ ಮಾತ್ರವೇ ಅಲ್ಲದೆ ಬೀಚ್ ಏರಿಯಾದಲ್ಲಿಯೂ ಮದುವೆ ಸಮಾರಂಭ ಕಳೆ ಕಟ್ಟಲಿದೆ.

ಮೌನಿ ರಾಯ್​, ಸೂರಜ್​

ಮೌನಿ ರಾಯ್​, ಸೂರಜ್​

  • Share this:
ಮೌನಿ ರಾಯ್(Mouni Roy)​... ಹಿಂದಿ(Hindi) ಕಿರುತೆರೆಯಲ್ಲಿ ತಮ್ಮದೇ ಆದ ಹೊಸ ಚಾಪು ಮೂಡಿಸಿದ ನಟಿ.. ಆದರೆ ಕೆಜಿಎಫ್(KGF)​ ಸಿನಿಮಾ ಇವರಿಗೆ ಹೊಸದೊಂದು ಇಮೇಜ್​ ತಂದುಕೊಟ್ಟಿತ್ತು. ಕೆಜಿಎಫ್​ ಸಿನಿಮಾದಲ್ಲಿ ಐಟಂ ಸಾಂಗ್​(Item Song)ಗೆ ರಾಕಿಂಗ್​ ಸ್ಟಾರ್​ ಯಶ್(Rocking Star Yash)​ ಜೊತೆ ಸೊಂಟ ಬಳುಕಿಸಿದ್ದರು. ಇದಾದ ಬಳಿಕ ಮೌನಿ ರಾಯ್​ ದೇಶದ ಮೂಲೆ ಮೂಲೆಯಲ್ಲಿ ಈಕೆಯ ಹೆಸರು ಕೇಳ ತೊಡಗಿತು. ಇತ್ತೀಚೆಗೆ ಅವರ ಮದುವೆ ವಿಚಾರದ ಬಗ್ಗೆ ಸಾಕಷ್ಟು ವರದಿಗಳು ಹರಿದಾಡಿದ್ದವು. ಬಾಯ್​ಫ್ರೆಂಡ್​ ಸೂರಜ್​ ನಂಬಿಯಾರ್​(Suraj Nambiar) ಜತೆ ಮೌನಿ ರಾಯ್​ ಮದುವೆ ಆಗಲಿದ್ದಾರೆ ಎನ್ನಲಾಗಿತ್ತು. ಮೌನಿ ಮದುವೆ ಬಗ್ಗೆ ಸಾಕಷ್ಟು ಕುತೂಹಲಕಾರಿ ವಿಚಾರಗಳು ಹರಿದಾಡಿವೆ. ಆದರೆ ಅವೆಲ್ಲಾ ಕೇವಲ ಗಾಸಿಪ್‌ಗಳು ಎಂದು ಹೇಳಲಾಗಿತ್ತು. ಆದರೆ ಈಗ ಎಲ್ಲದಕ್ಕೂ ಮೌನಿ ಉತ್ತರಿಸಿದ್ದಾಳೆ. ಆದರೆ, ಇಷ್ಟು ದಿನ ಈ ವಿಚಾರದಲ್ಲಿ ಅವರು ಮೌನ ವಹಿಸಿದ್ದರು. ಮೌನಿ ಈ ಬಗ್ಗೆ ಮೌನ ಮುರಿದಿದ್ದಾರೆ. ತಾವು ಮದುವೆ(Marriage) ಆಗುತ್ತಿರುವ ವಿಚಾರವನ್ನು ಖಚಿತಪಡಿಸಿದ್ದಾರೆ. ಹೌದು ನಾನು ಮದುವೆಯಾಗುತ್ತಿರುವುದು ನಿಜ ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲದೇ ತನ್ನ ಹುಡುಗನ ಬಗ್ಗೆಯೂ ಹೇಳಿ ನಾಚಿಕೊಂಡಿದ್ದಾರೆ ಮೌನಿ ರಾಯ್​. ಮದುವೆ ಆಗುತ್ತಿರುವ ಕಾರಣ ಮಾಧ್ಯಮದವರು ಮೌನಿಗೆ ಶುಭಾಶಯಗಳನ್ನು ಕೋರಿದ್ದಾರೆ. ಅದಕ್ಕೆ ಸಂತಸದಿಂದಲೇ ಮೌನಿ ಉತ್ತರ ಕೊಟ್ಟಿದ್ದಾರೆ. ಎಲ್ಲರಿಗೂ ಧನ್ಯವಾದ ತಿಳಿಸಿ ತೆರಳಿದ್ದಾರೆ.

ಜನವರಿ 27ರಂದು ಮದುವೆಯಾಗ್ತಿದ್ದಾರಂತೆ ಮೌನಿ ರಾಯ್​!

2004ರಲ್ಲಿ ತೆರೆಗೆ ಬಂದ ‘ರನ್​’ ಸಿನಿಮಾದಲ್ಲಿ ಮೌನಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದರು. ಈ ಮೂಲಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಜನವರಿ 27ರಂದು ಮೌನಿ ಅವರು ಗೋವಾದಲ್ಲಿ ಮದುವೆ ಆಗುತ್ತಿದ್ದಾರೆ ಎನ್ನಲಾಗಿದೆ. ಗೋವಾದಲ್ಲಿ ಸಮಂತಾ ಮತ್ತು ನಾಗಚೈತನ್ಯ ಮದುವೆ ಆದ ಸ್ಥಳದಲ್ಲಿಯೇ ಮದುವೆ ಆಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕೊರೋನಾ ​ಕಾರಣ ಕೇವಲ ಕುಟುಂಬದವರು ಹಾಗೂ ಆಪ್ತರು ಮಾತ್ರ ಮದುವೆಯಲ್ಲಿ ಭಾಗಿಯಾಗಲಿದ್ದಾರಂತೆ. ಇದಾದ ಬಳಿಕ ಮುಂಬೈನಲ್ಲಿ ಆರತಕ್ಷತೆ ನಡೆಯಲಿದೆ ಎಂಬ ಗಾಸಿಪ್​ಗಳು ಬಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿದೆ.



ಇದನ್ನು ಓದಿ : ಕೊನೆಗೂ ಅಭಿಮಾನಿಗಳಿಗೆ ಸಿಕ್ತು ಕೊಹ್ಲಿ ಪುತ್ರಿ ದರ್ಶನ.. ಥೇಟ್​ ಅಪ್ಪನಂತೆ ಮುದ್ದಾಗಿದ್ದಾಳೆ ವಮಿಕಾ!

ದುಬೈನಲ್ಲಿ ಸೆಟಲ್ ಆಗಿದ್ದಾರೆ ಮೌನಿ ರಾಯ್​!

ಮೌನಿ ರಾಯ್​ ಮದುವೆ ಆಗುತ್ತಿರುವ  ಸೂರಜ್ ​ಅವರು ಉದ್ಯಮಿ ಆಗಿದ್ದು, ದುಬೈನಲ್ಲಿ ಸೆಟಲ್​ ಆಗಿದ್ದಾರೆ. ಮೌನಿ ಅವರು ಈ ಹುಡುಗನ ಬಗ್ಗೆ ಮೌನ ವಹಿಸಿದ್ದಾರೆ.‌ ಹೆಚ್ಚಾಗಿ ಏನನ್ನೂ ಮಾತನಾಡಿಲ್ಲ. ಇಬ್ಬರೂ ಅನೇಕ ವರ್ಷಗಳಿಂದ ಡೇಟ್​ಮಾಡುತ್ತಿದ್ದಾರೆ. ಇವರ ಫೋಟೋಗಳು ಸೋಶಿಯಲ್​ಮೀಡಿಯಾದಲ್ಲಿ ವೈರಲ್​ಆಗಿದ್ದವು. 2018ರಲ್ಲಿ ತೆರೆಗೆ ಬಂದ ‘ಗೋಲ್ಡ್​’ ಸಿನಿಮಾ ಅವರು ನಾಯಕಿಯಾಗಿ ಮೌನಿ ರಾಯ್​ ನಟಿಸಿದ್ದರು. ಅದೇ ವರ್ಷ ‘ಕೆಜಿಎಫ್​’ ಹಿಂದಿ ವರ್ಷನ್​ನ ‘ಗಲಿ ಗಲಿ..’ ಹಾಡಿಗೆ ಮೌನಿ ಹೆಜ್ಜೆ ಹಾಕಿದರು.

ಇದನ್ನು ಓದಿ : ಮಿರಿಮಿರಿ ಮಿಂಚಿದ ಕತ್ರಿನಾ ಕೈಫ್​.. ಹಾಟ್​ ಫೋಟೋ ಕಂಡು ಬಾಯಿ ಮೇಲೆ ಬೆರಳಿಟ್ಟುಕೊಂಡು ನೆಟ್ಟಿಗರು!

ಈ ಮೊದಲು ಮೌನಿ ರಾಯ್ ಹಾಗೂ ಆಕೆಯ ಬಾಯ್‌ಫ್ರೆಂಡ್ ಸೂರಜ್ ನಂಬಿಯಾರ್ ವಿದೇಶದಲ್ಲಿ ವಿವಾಹವಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಯೋಜನೆ ಬದಲಾಗಿದ್ದು, ಈ ಜೋಡಿಯು ಗೋವಾದಲ್ಲಿ ಕಡಲ ತಡಿಯಲ್ಲಿ ಅದ್ಧೂರಿಯಾಗಿ ವಿವಾಹವಾಗಲಿದ್ದಾರೆ. ಜನವರಿ 27 ರಂದು ಗೋವಾದ ವಾಗೋಟರ್‌ ಬೀಚ್‌ ಬಳಿಯ ಐಷಾರಾಮಿ ಹೋಟೆಲ್ ಒಂದರಲ್ಲಿ ಮದುವೆ ಆಗಲಿದ್ದಾರೆ. ಪಂಚತಾರಾ ಹೋಟೆಲ್ ಈಗಾಗಲೇ ಬುಕ್ ಆಗಿದ್ದು, ಪಂಚತಾರಾ ಹೊಟೆಲ್ ಮಾತ್ರವೇ ಅಲ್ಲದೆ ಬೀಚ್ ಏರಿಯಾದಲ್ಲಿಯೂ ಮದುವೆ ಸಮಾರಂಭ ಕಳೆ ಕಟ್ಟಲಿದೆ.
Published by:Vasudeva M
First published: