ಪೆಟ್ಟ ಟೀಸರ್: ಕಾಳ ಬಳಿಕ ರಜನಿಕಾಂತ್ ಕಲರ್​ಫುಲ್ ಎಂಟ್ರಿ

news18
Updated:September 8, 2018, 2:22 PM IST
ಪೆಟ್ಟ ಟೀಸರ್: ಕಾಳ ಬಳಿಕ ರಜನಿಕಾಂತ್ ಕಲರ್​ಫುಲ್ ಎಂಟ್ರಿ
news18
Updated: September 8, 2018, 2:22 PM IST
-ನ್ಯೂಸ್ 18 ಕನ್ನಡ

'ಕಾಳ' ಕರಿಕಾಳನ್ ಮೂಲಕ ಒಂದಷ್ಟು ಸದ್ದು ಸುದ್ದಿ ಮಾಡಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಮತ್ತೆ ಬಂದಿದ್ದಾರೆ. ಅದು  'ಪೆಟ್ಟ' ಎಂಬ ಹೊಸ ಚಿತ್ರದ ಮೋಷನ್ ಟೀಸರ್​ನೊಂದಿಗೆ ಎಂಬುದು ವಿಶೇಷ. 'ಕಾಳ'ದಲ್ಲಿ ಕಪ್ಪು ಕರಿಕಪ್ಪು ಸ್ಟೈಲ್​ನಲ್ಲಿ ಮಿಂಚಿದ್ದ ರಜನಿ ಇಲ್ಲಿ ಸಖತ್ ಕಲರ್​ಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ಕಾರ್ತಿಕ್ ಸುಬ್ಬರಾಜ್ ಆ್ಯಕ್ಷನ್ ಕಟ್ ಹೇಳುತ್ತಿರುವ 'ಪೆಟ್ಟ'ದಲ್ಲಿ ಸೂಪರ್ ಸ್ಟಾರ್ ಜೊತೆ ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ಕೂಡ ಇದೇ ಮೊದಲ ಬಾರಿ ಅಭಿನಯಿಸಲಿದ್ದಾರೆ.

ಕಲರ್​ಫುಲ್ ಟೀಸರ್​ನಲ್ಲಿ ಪುರಾಣ ಬಂಗಲೆಯೊಂದರ ಒಳಗೆ ರಜನಿ ಎಂಟ್ರಿ ಕೊಡುವ ದೃಶ್ಯ ತೋರಿಸಲಾಗಿದೆ. ಅದರೊಂದಿಗೆ ಮೇಣದ ಬತ್ತಿ, ಕತ್ತಿ, ಕಾಗದಗಳು ಗಾಳಿಯಲ್ಲಿ ಹಾರಾಡುವುದನ್ನು ಸೃಷ್ಟಿಸಲಾಗಿದೆ. ಫಸ್ಟ್​ ಲುಕ್ ಟೀಸರ್ ರಜನಿ ಅಭಿನಯದ 'ಚಂದ್ರಮುಖಿ'ಯ ನಾಗವಲ್ಲಿಯನ್ನು ಮತ್ತೊಮ್ಮೆ ನೆನಪಿಸುವಂತಿದೆ. ಈ ಸಿನಿಮಾದ ಕಥೆಯು ದೆವ್ವ-ಭೂತ ಸುತ್ತ ಸುತ್ತಲಿದೆಯಾ ಎಂಬ ಸಂಶಯ ರಜನಿಯ ಎಂಟ್ರಿಯಿಂದ ಮೂಡುತ್ತದೆ.

ಈ ಚಿತ್ರದಲ್ಲಿ ತಲೈವಾನ ಲುಕ್​ ಕೂಡ 'ಬಾಬಾ' ಸಿನಿಮಾವನ್ನು ನೆನಪಿಸುತ್ತಿರುವುದು ಮತ್ತೊಂದು ವಿಶೇಷ. ಸೈಲೆಂಟ್ ಸಿನಿಮಾ 'ಮರ್ಕ್ಯೂರಿ' ಬಳಿಕ ಕಾರ್ತಿಕ್ ಸುಬ್ಬರಾಜ್ ಕೈಗೆತ್ತಿಕೊಂಡಿರುವ 'ಪೆಟ್ಟ'ದಲ್ಲಿ ತಾರಾ ದಂಡೇ ಕಾಣಿಸಿಕೊಳ್ಳಲಿದೆ. ಕಾಲಿವುಡ್​ನ ಯುವ ತಾರೆಯರಾದ ಬೋಬಿ ಸಿಂಹ, ವಿಜಯ್ ಸೇತುಪತಿ ಈ ಸಿನಿಮಾದಲ್ಲಿ ಸೂಪರ್ ಸ್ಟಾರ್​ಗೆ ಸಾಥ್ ನೀಡಿದರೆ, ಸಿಮ್ರಾನ್ ಮತ್ತು ತ್ರೀಷಾ ನಾಯಕಿಯರಾಗಿ ಮಿಂಚಲಿದ್ದಾರೆ.

ಹಾಗೆಯೇ  'ಪೆಟ್ಟ' ಚಿತ್ರದ ಮೂಲಕ ಬಾಲಿವುಡ್​ ಸೆನ್ಸೇಷನಲ್ ನಟ ನವಾಜುದ್ದೀನ್ ಸಿದ್ದಿಕಿ ತಮಿಳು ಚಿತ್ರರಂಗಕ್ಕೆ ಪದಾರ್ಪಣೆಗೈಯಲಿದ್ದಾರೆ. ಸದ್ಯ  'ಠಾಕ್ರೆ' ಸಿನಿಮಾದಲ್ಲಿ ಬಿಝಿಯಾಗಿರುವ ನವಾಜುದ್ದೀನ್ ಶೀಘ್ರದಲ್ಲೇ ಕಾಲಿವುಡ್​ಗೆ ಎಂಟ್ರಿ ಕೊಡಲಿದ್ದಾರೆ.

'ಪಿಜ್ಜಾ', 'ಜಿಗರ್​ಥಂಡ', 'ಇರೈವಿ' ಮತ್ತು 'ಮರ್ಕ್ಯೂರಿ' ಎಂಬ ಥ್ರಿಲ್ಲರ್ ಚಿತ್ರಗಳನ್ನು ನಿರ್ದೇಶಿಸಿರುವ ಯುವ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್​ ಅವರ ಈ ಮೂವಿಗೆ ಸಂಗೀತ ನೀಡುತ್ತಿರುವುದು ಕೊಲೆವೆರಿ... ಖ್ಯಾತಿಯ ಅನಿರುದ್ಧ್. ಈ ವರ್ಷದ ಅಂತ್ಯದಲ್ಲಿ ಅಥವಾ ಮುಂದಿನ ವರ್ಷ ತೆರೆಗೆ ಬರಲಿರುವ 'ಪೆಟ್ಟ'ಗೆ ಸನ್ ಪಿಕ್ಚರ್ಸ್ ಬಂಡವಾಳ ಹೂಡಿದ್ದಾರೆ​.
Loading...ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದ '2.0'(ರೋಬೊ2) ಚಿತ್ರವು ನವೆಂಬರ್ 29ರಂದು ಬಿಡುಗಡೆಯಾಗಲಿದ್ದು, ಇದು ಈ ವರ್ಷ ಬಿಡುಗಡೆಯಾಗಲಿರುವ ರಜನಿಕಾಂತ್ ಅಭಿನಯದ ಎರಡನೇ ಚಿತ್ರವಾಗಲಿದೆ. ಹಾಗೆಯೇ 'ಪೆಟ್ಟ' ಕೂಡ ತೆರೆ ಕಂಡರೆ ಹಲವಾರು ವರ್ಷಗಳ ಬಳಿಕ ರಜನಿ ಅಭಿನಯದ ಮೂರು ಚಿತ್ರಗಳು ಬಿಡುಗಡೆ ಕಂಡ ವರ್ಷ ಎಂಬ ಖ್ಯಾತಿ 2018ರ ಪಾಲಾಗಲಿದೆ.
First published:September 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...