ಜೂ. ಎನ್​ಟಿಆರ್ ಕನ್ನಡದ ಡಬಿಂಗ್ ನೋಡಿ ಖುಷಿಪಟ್ರಂತೆ ಅವರ ಕನ್ನಡಿಗ ತಾಯಿ

Jr. NTR speaking in RRR trailer launch function at Bengaluru: ರಾಜಮೌಳಿ ನಿರ್ದೇಶನದ ಆರ್​ಆರ್​ಆರ್ ಸಿನಿಮಾದ ಟ್ರೇಲರ್ ನಿನ್ನೆ ಬಿಡುಗಡೆ ಆಗಿದೆ. ಅದರಲ್ಲಿ ಜೂ. ಎನ್​ಟಿಆರ್ ಮತ್ತು ರಾಮಚರಣ್ ಕನ್ನಡದಲ್ಲಿ ಡಬ್ ಮಾಡಿರುವುದು ಎಲ್ಲರ ಗಮನ ಸೆಳೆದಿದೆ. ಈ ಬಗ್ಗೆ ಎನ್​ಟಿಆರ್ ಹೇಳಿದ್ದು ಇಲ್ಲಿದೆ:

ಆರ್​ಆರ್​ಆರ್ ಟ್ರೇಲರ್​ನಲ್ಲಿ ಕಂಡ ದೃಶ್ಯಗಳು

ಆರ್​ಆರ್​ಆರ್ ಟ್ರೇಲರ್​ನಲ್ಲಿ ಕಂಡ ದೃಶ್ಯಗಳು

  • Share this:
ಬೆಂಗಳೂರು, ಡಿ. 10: ಬಾಹುಬಲಿ ಖ್ಯಾತಿಯ ನಿರ್ದೇಶಕ ರಾಜಮೌಳಿ ಅವರ ಬಹುನಿರೀಕ್ಷೆಯ RRR ಸಿನಿಮಾದ ಟ್ರೇಲರ್​ಗಳು ನಿನ್ನೆ ಬಿಡುಗಡೆ ಆಗಿ ಧೂಳೆಬ್ಬಿಸುತ್ತಿವೆ. ಜೂನಿಯರ್ ಎನ್​ಟಿಆರ್ ಮತ್ತು ರಾಮಚರಣ್ ನಟಿಸಿರುವ ಈ ಸಿನಿಮಾದ ಟ್ರೇಲರ್ ಸಖತ್ ಥ್ರಿಲ್ ಕೊಟ್ಟಿದೆ. ಒರಿಜಿನಲ್ ತೆಲುಗಿನ ಟ್ರೇಲರ್ ಯೂಟ್ಯೂಬ್​ನಲ್ಲಿ ಒಂದೇ ದಿನದಲ್ಲಿ ಎರಡು ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿದೆ. ಹಿಂದಿ, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲೂ ಸಿನಿಮಾ ಡಬ್ ಆಗುತ್ತಿದೆ. ಈ ಭಾಷೆಗಳಲ್ಲೂ ಟ್ರೇಲರ್ ಲಾಂಚ್ ಆಗಿದೆ. ಕನ್ನಡದ ಆರ್​ಆರ್​ಆರ್ ಟ್ರೇಲರ್​ನಲ್ಲಿ ಜೂನಿಯರ್ ಎನ್​ಟಿಆರ್ ಮತ್ತು ರಾಮಚರಣ್ ತೇಜಾ ಅವರು ತಮ್ಮ ಪಾತ್ರಗಳಿಗೆ ತಾವೇ ಧ್ವನಿ ಕೊಟ್ಟಿದ್ಧಾರೆ. ಕನ್ನಡಿಗರೂ ಥ್ರಿಲ್ ಆಗಿದ್ಧಾರೆ.

ಇಂದು ಒರಾಯನ್ ಪಿವಿಆರ್​ನಲ್ಲಿ ಆರ್​ಆರ್​ಆರ್ ಟ್ರೇಲರ್ ಬಿಡುಗಡೆ ನಿಮಿತ್ತ ನಡೆದ ಸಂವಾದ ಕಾರ್ಯಕ್ರಮದಲ್ಲಿ ಜೂನಿಯರ್ ಎನ್​ಟಿಆರ್ ಅವರು ತಮ್ಮ ಕನ್ನಡ ಡಬಿಂಗ್ ಬಗ್ಗೆ ಮಾತನಾಡಿದರು. “ಅಮ್ಮ ಕನ್ನಡದವರು ನಿಜ. RRR ನಲ್ಲಿ ನಾನೇ ಡಬ್ ಮಾಡಿದೀನಿ. ನಮ್ಮೂರಿನವರ ಮುಂದೆ ತಲೆ ತಗ್ಗಿಸುವಂತೆ ಕನ್ನಡ ಮಾತಾಡಬೇಡ ಅಂತ ಅಮ್ಮ ಹೇಳಿದ್ರು. ಆದರೆ, ನನ್ನ ಕನ್ನಡ ಡಬಿಂಗ್ ನೋಡಿ ತುಂಬಾ ಖುಷಿ ಪಟ್ಟಿದ್ದಾರೆ” ಎಂದು ಜೂನಿಯರ್ ಎನ್​ಟಿಆರ್ ಹೇಳಿದರು.

ಟ್ರೇಲರ್​ನಲ್ಲಿ ಜೂನಿಯರ್ ಎನ್​ಟಿಆರ್ ಅವರು ಚೆನ್ನಾಗಿಯೇ ಕನ್ನಡದ ಡೈಲಾಗ್ ಹೊಡೆದಿದ್ದಾರೆ. ಕುತೂಹಲ ಎಂದರೆ ರಾಮಚರಣ್ ತೇಜಾ ಅವರಿಗೆ ಕನ್ನಡದ ಗಂಧ ಗಾಳಿ ಇಲ್ಲದಿದ್ದರೂ ಸಿನಿಮಾದಲ್ಲಿ ಕನ್ನಡದಲ್ಲಿ ತಾವೇ ಡಬ್ ಮಾಡಿದ್ದಾರೆ. ಈ ಇಬ್ಬರು ಸ್ಟಾರ್​ಗಳ ಪ್ರಯತ್ನವನ್ನು ಕನ್ನಡಿಗರು ಮೆಚ್ಚಿ ಕೊಂಡಾಡಿದ್ಧಾರೆ.

ಇವರ ಕನ್ನಡ ಡಬಿಂಗ್ ಕೇವಲ ಟ್ರೇಲರ್​ಗೆ ಮಾತ್ರ ಸೀಮಿತವಾಗಿದೆಯಾ, ಅಥವಾ ಇಡೀ ಸಿನಿಮಾದಲ್ಲಿ ಇವರು ತಮ್ಮ ಪಾತ್ರಗಳಿಗೆ ಡಬ್ ಮಾಡಿದ್ದಾರಾ ಎಂಬುದು ಇನ್ನೂ ಗೊತ್ತಾಗಿಲ್ಲ. ಟ್ರೇಲರ್​ನಲ್ಲಿ ಕಿಚ್ಚ ಸುದೀಪ ಮತ್ತು ರವಿಶಂಕರ್ ಅವರೂ ಧ್ವನಿ ಕೊಟ್ಟಿದ್ಧಾರೆ.

ಜೂ. ಎನ್​ಟಿಆರ್ ತಾಯಿ ಯಾರು?

ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ನಂದಮೂರಿ ತಾರಕ ರಾಮರಾವ್ ಅವರ ಮಗ ನಂದಮೂರಿ ಹರಿಕೃಷ್ಣ ಅವರ ಎರಡನೇ ಹೆಂಡತಿ ಶಾಲಿನಿ. ಇವರ ಮಗನೇ ಜೂನಿಯರ್ ಎನ್​ಟಿಆರ್. ಶಾಲಿನಿ ಅವರು ಉಡುಪಿಯ ಕುಂದಾಪರದವರು. ಇವರ ತಂದೆ ಖ್ಯಾತ ಉದ್ಯಮಿ ಭಾಸ್ಕರ್ ರಾವ್. ಶಾಲಿನಿ ಚಿಕ್ಕವರಿದ್ಧಾಗಲೇ ಹೈದರಾಬಾದ್​ಗೆ ಹೋಗಿ ನೆಲಸಿದ್ದರು. ಅಲ್ಲಿ ಹರಿಕೃಷ್ಣ ಅವರ ಪರಿಚಯ ಆಗಿ ಪ್ರೇಮ ಬೆಳೆದು ಕೊನೆಗೆ ಮದುವೆ ಆಗಿದ್ಧಾರೆ.

ಇದನ್ನೂ ಓದಿ: RRR ಟ್ರೈಲರ್​ ರಿಲೀಸ್​, ರಾಮ್​-ಭೀಮ್​ ಅಬ್ಬರ: ಮತ್ತೊಂದು ದಾಖಲೆ ಸೃಷ್ಟಿಸೋದು ಫಿಕ್ಸ್​!

ಆರ್​ಆರ್​ಆರ್ ಸಿನಿಮಾ ಕಥೆ ಏನು?

ಇದು ಅಲ್ಲೂರಿ ಸೀತಾರಾಮರಾಜು ಮತ್ತು ಕೊಮವರಂ ಭೀಮ್ ಎಂಬ ಇಬ್ಬರು ದೇಶಪ್ರೇಮಿಗಳು, ಸ್ನೇಹಿತರು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಕಥೆ. ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ರಾಮಚರಣ್ ತೇಜ ಅಭಿನಯಿಸಿದ್ಧಾರೆ. ಕೊಮರಂ ಭೀಮ್ ಪಾತ್ರದಲ್ಲಿ ಜೂನಿಯರ್ ಎನ್​ಟಿಆರ್ ಘರ್ಜಿಸಿದ್ದಾರೆ.

ಬಜೆಟ್ 400 ಕೋಟಿ ರೂ:

ರಾಜಮೌಳಿ ನಿರ್ದೇಶಿಸಿರುವ ಈ ಸಿನಿಮಾದ ಬಜೆಟ್ ಬರೋಬ್ಬರಿ 400 ಕೋಟಿ ರೂ. ಇದು ಈವರೆಗೆ ತಯಾರಾಗಿರುವ ಭಾರತದ ಅತ್ಯಂತ ದೊಡ್ಡ ಬಜೆಟ್ ಸಿನಿಮಾ ಎಂಬ ದಾಖಲೆ ಬರೆದಿದೆ. ಬಾಹುಬಲಿ ನಂತರ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಮಾರುಕಟ್ಟೆ ವಿಸ್ತೃತಗೊಂಡಿದೆ. ರಾಜಮೌಳಿ ಸಿನಿಮಾ ಆದ್ದರಿಂದ ಭಾರತದಾದ್ಯಂತ ಜನರಿಗೆ ಕುತೂಹಲ ಇದೆ. ಹಿಂದಿ ಭಾಷೆಯಲ್ಲೂ ಸಿನಿಮಾ ಇರುವುದರಿಂದ ಚಿತ್ರದ ಗಳಿಕೆ ಸಾವಿರ ಕೋಟಿ ಮೀರಿದರೆ ಅಚ್ಚರಿ ಪಡಬೇಕಿಲ್ಲ ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: 83 Movie: ಬಿಡುಗಡೆಗೂ ಮುನ್ನವೇ ರಣವೀರ್-ದೀಪಿಕಾ ಚಿತ್ರದ ಮೇಲೆ ಕೇಸ್!

ಯಾವಾಗ ರಿಲೀಸ್?:

ಆರ್ ಆರ್ ಆರ್ ಸಿನಿಮಾ ವಿಶ್ವಾದ್ಯಂತ ಏಕಕಾಲಕ್ಕೆ ಜನವರಿ 7ಕ್ಕೆ ಥಿಯೇಟರ್​ಗಳಲ್ಲಿ ರಿಲೀಸ್ ಆಗಲಿದೆ. ಕನ್ನಡದಲ್ಲಿ ಕೆವಿಎನ್ ಪ್ರೊಡಕ್ಷನ್​ನವರು ವಿತರಣೆಯ ಹಕ್ಕು (Distribution Rights) ಪಡೆದಿದ್ಧಾರೆ.

ತಾರಾ ಬಳಗ:

ಈ ಚಿತ್ರದಲ್ಲಿ ಜೂ. ಎನ್​ಟಿಆರ್, ರಾಮಚರಣ್ ತೇಜ ಜೊತೆಗೆ ಅಜಯ್ ದೇವಗನ್, ಅಲಿಯಾ ಭಟ್, ಶ್ರೀಯಾ ಸರನ್ ಮೊದಲಾದವರು ನಟಿಸಿದ್ದಾರೆ. ಎಂಎಂ ಕೀರವಾಣಿ ಮ್ಯೂಸಿಕ್ ಡೈರೆಕ್ಟರ್ ಆದರೆ, ಡಿ.ವಿ.ವಿ. ದಯಾನಂದ್ ಅವರು ನಿರ್ಮಾಪಕರಾಗಿದ್ಧಾರೆ.
Published by:Vijayasarthy SN
First published: