ಭಾರತೀಯ ಸಿನಿರಂಗದ ಮೋಸ್ಟ್ ಎಕ್ಸ್ಪೆಕ್ಟೆಡ್(Most Expected) ಸಿನಿಮಾ ಆರ್ಆರ್ಆರ್(RRR) ಚಿತ್ರದ ಟ್ರೈಲರ್(Trailer) ರಿಲೀಸ್ ಆಗಿದೆ. ಈಗಾಗಲೇ ಟೀಸರ್(Teaser), ಹಾಡು(Songs)ಗಳಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಆರ್ಆರ್ಆರ್ ಸಿನಿಮಾ, ಟ್ರೈಲರ್ನಲ್ಲಿ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ. ಮೊದಲ ಬಾರಿಗೆ ರಾಮ್ಚರಣ್ ಹಾಗೂ ಜೂನಿಯರ್ NTR ನಟಿಸಿದ್ದಾರೆ. ಟ್ರೇಲರ್ನಲ್ಲಿ ಭಾವುಕ ಅಂಶಗಳು ಸಹ ಇವೆ. ನಾಯಕಿಯರಾದ ಆಲಿಯಾ ಭಟ್, ಒಲಿವಿಯಾ ಮೋರಿಸ್, ಶ್ರೆಯಾ ಶಿರಿನ್ ಅವರುಗಳ ಅಂದವೂ ಇದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಗಮನ ಸೆಳೆಯುವುದು ಆಕ್ಷನ್ ದೃಶ್ಯಗಳು. ಈ ಚಿತ್ರ 2022ರ ಜ. 7ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಅದ್ದೂರಿ ಹಾಡು, ಟೀಸರ್ ಮೂಲಕ ಪ್ರೇಕ್ಷಕರ ಸೆಳೆದಿರುವ ಚಿತ್ರದ ಮತ್ತೊಂದು ಬಹುನಿರೀಕ್ಷಿತ ಜನನಿ (Janani Song From RRR Movie) ಹಾಡನ್ನು ನವೆಂಬರ್ 26ರಂದು ಬಿಡುಗಡೆ ಮಾಡಿದ್ದರು. ಈ ಹಾಡು ನೋಡಿದ ಪ್ರತಿಯೊಬ್ಬರ ಫಿದಾ ಆಗಿದ್ದರು. ಈಗ ಸಿನಿಮಾ ಟ್ರೈಲರ್ ನೋಡಿ ಸಖತ್ ಥ್ರಿಲ್ ಆಗಿದ್ದಾರೆ. ಮತ್ತೊಂದು ದಾಖಲೆ ಸೃಷ್ಟಿಸುವುದರಲ್ಲಿ ಅನುಮಾನ ಇಲ್ಲ ಅಂತಿದ್ದಾರೆ ಫ್ಯಾನ್ಸ್.
ರಾಜಮೌಳಿ ಮತ್ತೆ ಟ್ರೈಲರ್ನಲ್ಲೇ ತಾನೆಂತ ನಿರ್ದೇಶಕ ಅಂತ ನಿರೂಪಿಸಿದ್ದಾರೆ. ಇನ್ನೂ ಸಿನಿಮಾ ರಿಲೀಸ್ ಆದ ಮೇಲೆ ಮತ್ತೊಂದು ದಾಖಲೆ ಬರೆಯೋದು ಕನ್ಫರ್ಮ್. ಟ್ರೈಲರ್ನ ಪ್ರತಿಯೊಂದು ಫ್ರೆಮ್ ಕೂಡ ಅದ್ಭುತವಾಗಿದೆ. ಅದಕ್ಕೆ ತಕ್ಕಂತೆ ಹಿನ್ನಲೆ ಸಂಗೀತ ಕೂಡ ಇದೆ. ಟ್ರೈಲರ್ನಲ್ಲಿ ಎಲ್ಲಾ ಪಾತ್ರಗಳ ಪರಿಯವಾಗಿದೆ. ಸಿನಿಮಾ ಎಷ್ಟು ಅದ್ದೂರಿಯಾಗಿ ಇರಲಿದೆ ಎನ್ನುವುದರ ಸಣ್ಣ ಝಲಕ್ ಟ್ರೇಲರ್ನಲ್ಲಿ ಸಿಕ್ಕಿದೆ. ‘ಆರ್ಆರ್ಆರ್’ ಸಿನಿಮಾ ಮೇಕಿಂಗ್ ಕೂಡ ಉತ್ಕೃಷ್ಟ ಮಟ್ಟದಿಂದ ಕೂಡಿರಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಟ್ರೇಲರ್ ರಿಲೀಸ್ ಆದ ನಂತರದಲ್ಲಿ ಚಿತ್ರತಂಡ ಪ್ರಚಾರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಿದೆ. ಟ್ರೇಲರ್ ರಿಲೀಸ್ ಆದ ಒಂದು ತಿಂಗಳವರೆಗೆ ನಾನಾ ರಾಜ್ಯಗಳಿಗೆ ತೆರಳಿ ತಂಡ ಸಿನಿಮಾ ಪ್ರಚಾರ ಕಾರ್ಯ ನಡೆಸಿಲಿದೆ.
ಇದನ್ನು ಓದಿ : `ಪುಷ್ಪ’ ಚಿತ್ರಕ್ಕೆ ಕಾಡುಗಳ್ಳ ವೀರಪ್ಪನ್ ಪ್ರೇರಣೆ? ಅಲ್ಲು ಗೆಟಪ್ ಕಂಡು ಯೆಸ್ ಅಂತಿದ್ದಾರೆ ನೆಟ್ಟಿಗರು!
ಕನ್ನಡದಲ್ಲಿಯೇ ಡಬ್ ಮಾಡಿದ ಜೂ.ಎನ್ಟಿಆರ್
ಐದು ಭಾಷೆಗಳಲ್ಲೂ ಆರ್ಆರ್ಆರ್ ಸಿನಿಮಾದ ಟ್ರೈಲರ್ ರಿಲೀಸ್ ಮಾಡಲಾಗಿದೆ. ಕನ್ನಡದಲ್ಲಿ ಬಿಡುಗಡೆಯಾಗಿರುವ ಆರ್ಆರ್ಆರ್ ಟ್ರೈಲರ್ಗೆ ಸ್ವತಃ ಜೂನಿಯರ್ ಎನ್ಟಿಆರ್ ವಾಯ್ಸ್ ಡಬ್ ಮಾಡಿದ್ದಾರೆ. ಜನವರಿ 7ರಂದು ‘ಆರ್ಆರ್ಆರ್’ ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ದೊಡ್ಡ ತಾರಾ ಬಳಗವಿದೆ. ಈ ಕಾರಣಕ್ಕೆ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಹಲವು ಹಾಡುಗಳನ್ನು ರಿಲೀಸ್ ಮಾಡುವ ಮೂಲಕ ಚಿತ್ರದ ಮೇಲೆ ಭರವಸೆ ಹುಟ್ಟಿಸುವ ಕೆಲಸ ನಡೆದಿದೆ. ಈಗಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಸಿನಿಪ್ರಿಯರ ಕೌತುಕ ಹೆಚ್ಚಿದೆ.
ಇದನ್ನು ಓದಿ : `ಮಾರ್ಟಿನ್’ ಚಿತ್ರಕ್ಕಾಗಿ ಧ್ರುವ ಸರ್ಜಾ ಮಸ್ತ್ ವರ್ಕೌಟ್: ಆ್ಯಕ್ಷನ್ ಪ್ರಿನ್ಸ್ ಜೊತೆ ವೈಭವಿ ಶಾಂಡಿಲ್ಯ ರೊಮ್ಯಾನ್ಸ್!
'ಆರ್ಆರ್ಆರ್' ಸಿನಿಮಾವು ಅಲ್ಲೂರಿ ಸೀತಾರಾಮ ರಾಜು ಹಾಗೂ ಕೋಮರಂ ಭೀಮ್ ಅವರುಗಳ ಜೀವನ ಮತ್ತು ಹೋರಾಟದ ಕತೆಯನ್ನು ಆಧರಿಸಿದ್ದು, ಸಿನಿಮಾದಲ್ಲಿ ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ರಾಮ್ ಚರಣ್ ತೇಜ, ಕೋಮರಂ ಭೀಮ್ ಪಾತ್ರದಲ್ಲಿ ಜೂ ಎನ್ಟಿಆರ್ ನಟಿಸಿದ್ದಾರೆ. ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ನಟಿ ಆಲಿಯಾ ಭಟ್, ನಟ ಅಜಯ್ ದೇವಗನ್ ಸಹ ಇದ್ದಾರೆ. ಶ್ರೆಯಾ ಶಿರಿನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ರಾಜಮೌಳಿ ನಿರ್ದೇಶನದ ಈ ಸಿನಿಮಾಕ್ಕೆ ಎಂಎಂ ಕೀರವಾಣಿ ಸಂಗೀತ ನೀಡಿದ್ದು, ಬಂಡವಾಳ ಹೂಡಿರುವುದು ಡಿವಿವಿ ದಯಾನಂದ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ