ಎಲ್ಲರೂ ಹೊಸ ವರ್ಷ(New Year)ದ ಸಂಭ್ರದಲ್ಲಿದ್ದರು. ಸಿನಿರಸಿಕರಂತೂ ಈ ವರ್ಷ ನಮಗೆ ಭರ್ಜರಿ ಹಬ್ಬ ಎಂದು ಭಾವಿಸಿ ಸಂತಸ ಪಟ್ಟಿದ್ದರು. ಅದಕ್ಕೂ ಒಂದು ಕಾರಣವಿತ್ತು. 2022ರ ಹೊಸ್ತಿಲಲ್ಲೇ ಬಿಗ್ ಬಜೆಟ್(Big Budget) ಸಿನಿಮಾ ಜನವರಿ 7ರಂದು ‘ಆರ್ಆರ್ಆರ್’(RRR) ರಿಲೀಸ್ ಆಗಬೇಕಿತ್ತು. ಒಂದೂವರೆ ತಿಂಗಳ ಹಿಂದಿನಿಂದಲೇ ಚಿತ್ರತಂಡ ಅದ್ಧೂರಿಯಗಿ ಪ್ರಚಾರ ಮಾಡಿಕೊಂಡು ಬಂದಿದೆ. ಕಾರಣ ಇದೊಂದು ಪ್ಯಾನ್ ಇಂಡಿಯಾ(Pan India) ಸಿನಿಮಾ ಆಗಿರುವುದರಿಂದ ಪ್ರತಿ ರಾಜ್ಯಕ್ಕೂ ತೆರಳಿ ಪ್ರಚಾರ ಮಾಡಬೇಕು.ಅದರಂತೆ ಎಲ್ಲ ಕಾರ್ಯವೂ ನಡೆಯುತ್ತಿತ್ತು. ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಆರ್ಆರ್ಆರ್’ ಪ್ರೀ ರಿಲೀಸ್ ಇವೆಂಟ್(Pre Release Event) ನಡೆಯಲು ಎಲ್ಲ ಸಿದ್ಧತೆ ನಡೆಯುತ್ತಿತ್ತು. ಆದರೆ, ನಿನ್ನೆ ಚಿತ್ರತಂಡ ಕೊಟ್ಟ ಶಾಕ್ನಿಂದ ಸಿನಿರಸಿಕರಿಗೆ ಭಾರೀ ನಿರಾಸೆಯಾಗಿದೆ. ಹೊಸ ವರ್ಷದಲ್ಲೇ ಸಂಕಷ್ಟ ಎದುರಾದರೆ ಮುಂದೆ ಹೇಗೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನೇನು ಒಂದು ವಾರದಲ್ಲಿ ‘ಆರ್ಆರ್ಆರ್’ ಸಿನಿಮಾ ವಿಶ್ವಾದಾದ್ಯಂತ ರಿಲೀಸ್ ಆಗಬೇಕಿತ್ತು. ಈಗಾಗಲೇ ಅಂತಿಮ ಹಂತದ ಸಿದ್ಧತೆಗಳು ಕೂಡ ನಡೆದಿತ್ತು. ಅದರಲ್ಲೂ ಕೆಲ ಕಡೆ ಚಿತ್ರದ ಮುಂಗಡ ಟಿಕೆಟ್ ಕೂಡ ಸೇಲ್ ಆಗಿತ್ತು. ಆದರೆ, ಈಗ ‘ಆರ್ಆರ್ಆರ್’ ರಿಲೀಸ್ ಡೇಟ್ ಅಧಿಕೃತವಾಗಿ ಮುಂದೂಡಿಕೆ(RRR Release Date Postponed)ಯಾಗಿದೆ. ಈ ವಿಚಾರ ಸಿನಿಮಾ ಪ್ರೇಮಿಗಳಿಗೆ ಬೇಸರ ಮೂಡಿಸಿದೆ. ಇದೇನಪ್ಪಾ ಹೊಸ ವರ್ಷಕ್ಕೆ ಹಬ್ಬ ಮಾಡೋಣ ಅಂದುಕೊಂಡರೇ ಈ ತರ ಆಯ್ತಲ್ಲ ಎಂದು ಅಭಿಮಾನಿಗಳು ಬೇಜಾರು ಮಾಡಿಕೊಂಡಿದ್ದಾರೆ.
ದೇಶಾದ್ಯಂತ ಓಮ್ರಿಕಾನ್ ಅಬ್ಬರ.. ಚಿತ್ರರಂಗಕ್ಕೂ ಹೊಡೆತ!
ದೇಶಾದ್ಯಂತ ಪ್ರತಿದಿನ ಓಮಿಕ್ರಾನ್ ಸೋಂಕಿನ ಅಬ್ಬರ ಜೋರಾಗಿದೆ. ದಿನದಿಂದ ದಿನಕ್ಕೆ ಓಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಲೇ ಇದೆ. ಇದು ಚಿತ್ರರಂಗಕ್ಕೂ ಹೊಡೆತ ಬಿದ್ದಿದೆ. ಚಿತ್ರೋದ್ಯಮ ಮತ್ತೆ ಸಂಕಷ್ಟ ಎದುರಿಸುವ ಸಾಧ್ಯತೆ ದಟ್ಟವಾಗಿದೆ. ಹಾಗಾಗಿ ಅನೇಕ ಸಿನಿಮಾಗಳು ರಿಲೀಸ್ ದಿನಾಂಕವನ್ನು ಮುಂದೂಡಿಕೊಳ್ಳುತ್ತಿವೆ. ಅದರ ಮೊದಲ ಹಂತವಾಗಿ ‘ಆರ್ಆರ್ಆರ್’ ಚಿತ್ರದ ರಿಲೀಸ್ ಡೇಟ್ ಮುಂದೂಡಿಕೆ ಆಗಿದೆ. ಅದನ್ನು ಅಧಿಕೃತವಾಗಿಯೇ ಚಿತ್ರತಂಡ ಘೋಷಿಸಿದೆ. ಜನವರಿ 7ರಂದು ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಮೂರನೇ ಅಲೆಯ ಆತಂಕದಲ್ಲಿ ಆರ್ಆರ್ಆರ್ ಚಿತ್ರದ ಬಿಡುಗಡೆ ದಿನಾಕ ಪೋಸ್ಟ್ಪೋನ್ ಆಗಿದೆ.
ಇದನ್ನು ಓದಿ : ಈ ವರ್ಷ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಕೆಜಿಎಫ್-2: ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ..
ಹೊಸ ವರ್ಷದಲ್ಲೇ ಸಿನಿರಸಿಕರಿಗೆ ಶಾಕ್!
ಆರ್ಆರ್ಆರ್ ಚಿತ್ರಕ್ಕೆ ರಾಜಮೌಳಿ ನಿರ್ದೇಶನ ಮಾಡಿದ್ದು, ರಾಮ್ ಚರಣ್ ಮತ್ತು ಜ್ಯೂ. ಎನ್ಟಿಆರ್ ಭೂಮಿಕೆಯಲ್ಲಿ ನಟಿಸಿದ್ದಾರೆ. ಆದಷ್ಟು ಬೇಗ ಈ ಚಿತ್ರವನ್ನು ನೋಡಬೇಕು ಎಂದು ಕಾಯುತ್ತಿದ್ದ ಸಿನಿಪ್ರಿಯರಿಗೆ ನಿರಾಸೆ ಆಗಿದೆ. ಟೀಸರ್, ಸಾಂಗ್ಸ್, ಟ್ರೈಲರ್ನಿಂದಲೇ ಆರ್ಆರ್ಆರ್ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿದೆ. ಚಿತ್ರಮಂದಿರಗಳಲ್ಲಿ ಮತ್ತೆ ಈ ಸಿನಿಮಾ ಮೂಲಕ ಅಸಲಿ ಹಬ್ಬ ಎಂದರೇ ಏನು ಎಂದು ತೋರಿಸೋಣ ಅಂದುಕೊಂಡಿದ್ದ ಅಭಿಮಾನಿಗಳಿಗೆ ನಿಜಕ್ಕೂ ಶಾಕ್ ಆಗಿದೆ. ನಟಿ ಆಲಿಯಾ ಭಟ್ ಅವರು ಈ ಸಿನಿಮಾ ಮೂಲಕ ಇದೇ ಮೊದಲ ಬಾರಿಗೆ ದಕ್ಷಿಣ ಭಾರತಕ್ಕೆ ಕಾಲಿಟ್ಟಿದ್ದಾರೆ. ಅಜಯ್ ದೇವಗನ್ ಅವರು ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಇದನ್ನು ಓದಿ: ರಾಕಿ ಭಾಯ್ ಎದುರು ತೊಡೆ ತಟ್ಟಿದ ಮತ್ತೊಬ್ಬ ಸ್ಟಾರ್ ನಟ: ಪ್ಲೀಸ್.. ತಪ್ಪು ಮಾಡ್ಬೇಡಿ ಅಂದಿದ್ಯಾಕೆ ಫ್ಯಾನ್ಸ್?
ಹಲವು ಕಡೆಗಳಲ್ಲಿ ಚಿತ್ರಮಂದಿರಗಳು ಕ್ಲೋಸ್!
ಇದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಬೇಕು. ಆದರೆ ಹಲವು ಕಡೆಗಳಲ್ಲಿ ಚಿತ್ರಮಂದಿಗರಳು ಕ್ಲೋಸ್ ಆಗುತ್ತಿವೆ. ಇನ್ನೂ ಕೆಲವೆಡೆ ಶೇ.50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ಇದೆ. ಇಂಥ ಸಂದರ್ಭದಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಸೂಕ್ತ ಅಲ್ಲ ಎಂದು ‘ಆರ್ಆರ್ಆರ್’ ತಂಡ ನಿರ್ಧರಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ