83 Movie Review: ಐತಿಹಾಸಿಕ ಗೆಲುವಿನ ರೋಮಾಂಚನಕಾರಿ ದೃಶ್ಯಕಾವ್ಯ: ಚಿತ್ರದಲ್ಲಿ ಕಾಣಿಸೋದೇ ಇಲ್ಲ ರಣವೀರ್​ ಸಿಂಗ್​!

ಬರೋಬ್ಬರಿ 38 ವರ್ಷಗಳ ಹಿಂದೆ ನಡೆದ ಆ ಅದ್ಭುತ ಘಟನೆಯನ್ನು ಇಟ್ಟುಕೊಂಡು ಈಗ ‘83’ ಸಿನಿಮಾ (83 Movie) ಮಾಡಲಾಗಿದೆ. ಆ ಐತಿಹಾಸಿಕ ಗೆಲುವುನ್ನ ಮತ್ತೆ ನೀವು 83 ಸಿನಿಮಾ ನೋಡಿ ಮತ್ತೆ ಕಣ್ತುಂಬಿಕೊಳ್ಳಬಹುದು. ಹಾಗಿದ್ರೆ ಕಪಿಲ್​ ದೇವ್​ ಬಯೋಪಿಕ್ (Biopic)​ 83 ಸಿನಿಮಾ ಹೇಗಿದೆ? ರಣವೀರ್​ ಅವರ ಅಭಿನಯ ಹೇಗಿದೆ? ಇಲ್ಲಿದೆ ನೋಡಿ.

83 ಸಿನಿಮಾದ ಚಿತ್ರ

83 ಸಿನಿಮಾದ ಚಿತ್ರ

  • Share this:
ನಟ ರಣವೀರ್​ ಸಿಂಗ್​ (Ranveer Singh) ನಟನೆಯ ಬಹುನಿರೀಕ್ಷಿತ ಸಿನಿಮಾ ಇಂದು ವಿಶ್ವದಾದ್ಯಂತ ರಿಲೀಸ್​ ಆಗಿದೆ. ಕಬೀರ್ ಖಾನ್ (Kabir Khan) ನಿರ್ದೇಶನದ ಬಯೋಗ್ರಾಫಿಕಲ್ ಸ್ಪೋರ್ಟ್ಸ್ ಸಿನಿಮಾ ‘83’. ಈ ಚಿತ್ರಕ್ಕೆ ದೀಪಿಕಾ ಪಡುಕೋಣೆ (Deepika Padukone) ಕೂಡ ಹಣ ಹೂಡಿದ್ದಾರೆ. 1983ರಲ್ಲಿ ಭಾರತದ ಕ್ರಿಕೆಟ್ ತಂಡ ವಿಶ್ವಕಪ್ ಎತ್ತಿ ಹಿಡಿದ ರೋಚಕ ಗೆಲುವಿನ ಸುತ್ತ ‘83’ ಚಿತ್ರದ ಕಥೆ ಇದೆ. ‘83’ ಸಿನಿಮಾದಲ್ಲಿ ಅಂದಿನ ಭಾರತದ ಕ್ರಿಕೆಟ್ (Cricket) ತಂಡದ ನಾಯಕನಾಗಿದ್ದ ಕಪಲ್ ದೇವ್ (Kapil Dev) ಪಾತ್ರದಲ್ಲಿ ರಣ್‌ವೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ನೋಡಿದವರು ಸಖತ್​ ಥ್ರಿಲ್​ ಆಗಿದ್ದಾರೆ. ಅಂತಾರಾಷ್ಟ್ರೀಯ ಏಕದಿನ ವಿಶ್ವಕಪ್​ ಕ್ರಿಕೆಟ್​ನಲ್ಲಿ ಭಾರತ ತಂಡ ಮೊದಲ ಬಾರಿ ಟ್ರೋಫಿ ಗೆದ್ದಿದ್ದು 1983ರಲ್ಲಿ. ಇಂದಿನ ಹಲವು ತಲೆಮಾರಿನ ಜನರಿಗೆ ಆ ಐತಿಹಾಸಿಕ ಕ್ಷಣವನ್ನು ಸಂಭ್ರಮಿಸುವ ಅವಕಾಶ ಸಿಕ್ಕಿರಲಿಲ್ಲ. ಬರೋಬ್ಬರಿ 38 ವರ್ಷಗಳ ಹಿಂದೆ ನಡೆದ ಆ ಅದ್ಭುತ ಘಟನೆಯನ್ನು ಇಟ್ಟುಕೊಂಡು ಈಗ ‘83’ ಸಿನಿಮಾ (83 Movie) ಮಾಡಲಾಗಿದೆ. ಆ ಐತಿಹಾಸಿಕ ಗೆಲುವನ್ನ ಮತ್ತೆ ನೀವು 83 ಸಿನಿಮಾ ನೋಡಿ ಮತ್ತೆ ಕಣ್ತುಂಬಿಕೊಳ್ಳಬಹುದು. ಹಾಗಿದ್ರೆ ಕಪಿಲ್​ ದೇವ್​ ಬಯೋಪಿಕ್ (Biopic)​ 83 ಸಿನಿಮಾ ಹೇಗಿದೆ? ರಣವೀರ್​ ಅವರ ಅಭಿನಯ ಹೇಗಿದೆ? ಇಲ್ಲಿದೆ ನೋಡಿ.

ರಣವೀರ್ ಸಿಂಗ್​ ಪರಕಾಯ ಪ್ರವೇಶ

ಕಪಿಲ್​ ದೇವ್​ ಪಾತ್ರದೊಳಗೆ ರಣವೀರ್ ಸಿಂಗ್ ಪರಕಾಯ ಪ್ರವೇಶ ಮಾಡಿದ್ದಾರೆ. ಸಿನಿಮಾದಲ್ಲಿ ರಣವೀರ್ ಸಿಂಗ್ ಹುಡುಕಿದರೂ ಸಿಗೋದಿಲ್ವಂತೆ, ಎಲ್ಲೆಲ್ಲಿಯೂ ಕಪಿಲ್ ದೇವ್ ಮಾತ್ರ ಕಾಣುತ್ತಾರೆ. ಕಪಿಲ್ ದೇವ್ ಎನಿಸುವಷ್ಟರ ಮಟ್ಟಿಗೆ ದೈಹಿಕವಾಗಿಯೂ ರಣವೀರ್ ಸಿಂಗ್ ಮ್ಯಾನರಿಸಂ, ಬಾಡಿ ಲ್ಯಾಂಗ್ವೇಜ್‌ ಬದಲಾವಣೆ ಮಾಡಿಕೊಂಡಿದ್ದಾರೆ. ರಣವೀರ್ ಸಿಂಗ್ ಸೇರಿ 11 ಆಟಗಾರರ ಪಾತ್ರದಲ್ಲಿ ಕಾಣಿಸಿಕೊಂಡವರು ಅದ್ಭುತ ಪ್ರದರ್ಶನ ತೋರಿದ್ದಾರೆ. ಟೀಸರ್​​ ಬಿಡುಗಡೆಯಾದಗಲೇ ರಣವೀರ್​ ಸಿಂಗ್​ ರನ್ನು ಕಂಡು ಫ್ಯಾನ್ಸ್​ ಶಾಕ್​ ಆಗಿದ್ದರು. ಇದೀಗ ಸಿನಿಮಾದಲ್ಲಿ ಅವರ ಅಭಿನಯಕ್ಕೆ ಫುಲ್​ ಮಾರ್ಕ್ಸ್​ ನೀಡಿದ್ದಾರೆ.

ಇದನ್ನು ಓದಿ : Spider Man ನಟನಿಗೆ ಸೆಕ್ಸ್​ ಚಟವಂತೆ: ಆ್ಯಕ್ಟಿಂಗ್​ ಹೇಳಿಕೊಡುವ ನೆಪದಲ್ಲಿ ಸ್ಟೂಡೆಂಟ್ಸ್​ ಜೊತೆ ಸಂಭೋಗ!

ಕಲಾವಿದರ ಅಭಿನಯವೇ ಸಿನಿಮಾಗೆ ಹೈಲೆಟ್ಸ್​!

ಸುನಿಲ್​ ಗವಾಸ್ಕರ್​ ಪಾತ್ರದಲ್ಲಿ ತಾಹಿರ್​ ರಾಜ್​ ಭಸಿನ್​, ಕೃಷ್ಣಮಚಾರಿ ಶ್ರೀಕಾಂತ್​ ಪಾತ್ರದಲ್ಲಿ ಜೀವ, ಮೊಹಿಂದರ್​ ಅಮರ್​ನಾಥ್​ ಪಾತ್ರದಲ್ಲಿ ಸಾಖಿಬ್​ ಸಲೀಮ್​, ಯಶ್​ಪಾಲ್​ ಶರ್ಮಾ ಪಾತ್ರದಲ್ಲಿ ಜತಿನ್​ ಸರ್ನಾ, ಸಂದೀಪ್​ ಪಾಟಿಲ್​ ಪಾತ್ರದಲ್ಲಿ ಚಿರಾಗ್​ ಪಾಟಿಲ್​, ಕೀರ್ತಿ ಆಜಾದ್​ ಪಾತ್ರದಲ್ಲಿ ದಿನಕರ್​ ಶರ್ಮಾ, ರೋಜರ್​ ಬಿನ್ನಿ ಪಾತ್ರದಲ್ಲಿ ನಿಶಾಂತ್​ ದಹಿಯಾ, ಮದನ್​ ಲಾಲ್​ ಪಾತ್ರದಲ್ಲಿ ಹಾರ್ಡಿ ಸಂಧು, ಸೈಯದ್​ ಕಿರ್ಮಾನಿ ಪಾತ್ರದಲ್ಲಿ ಸಾಹಿಲ್​ ಕಟ್ಟರ್​, ಬಲ್ವಿಂದರ್​ ಸಂಧು ಪಾತ್ರದಲ್ಲಿ ಎಲ್ಲರು ಅಭಿನಯಿಸಿಲ್ಲ, ಪಾತ್ರದಲ್ಲಿ ಜೀವಿಸಿದ್ದಾರೆ.

ಇದನ್ನು ಓದಿ : ಕಟ್​ ಹೇಳಿದ್ರೂ ಬಿಡದೇ ಲಿಪ್​ಲಾಕ್ ಮಾಡಿದ ನರ್ಗೀಸ್​: ಕಿಸ್ಸಿಂಗ್​ ವಿಡಿಯೋ ಸಿಕ್ಕಾಪಟ್ಟೆ ವೈರಲ್​!

ಕಬೀರ್​ ಖಾನ್​ ರಿಯಲ್​ ಹೀರೋ!

‘83’ ಸಿನಿಮಾವನ್ನು ಕಟ್ಟಿಕೊಡುವುದು ನಿಜಕ್ಕೂ ಸುಲಭದ ಮಾತಲ್ಲ. ಈ ಸಿನಿಮಾ ಮಾಡಲು ಕಬೀರ್​ ಖಾನ್​ ಅವರ ತಂಡ ಸಾಕಷ್ಟು ಶ್ರಮ ವಹಿಸಿದೆ. 38 ವರ್ಷಗಳ ಹಿಂದಿನ ಕಾಲಘಟ್ಟವನ್ನು ತುಂಬ ಚೆನ್ನಾಗಿ ಚಿತ್ರಿಸಲಾಗಿದೆ. ಈ ಸಿನಿಮಾ ಎಲ್ಲಿಯೂ ಕೂಡ ಒಂದು ಸಾಕ್ಷ್ಯಚಿತ್ರದ ರೀತಿ ಫೀಲ್​ ನೀಡುವುದಿಲ್ಲ. ವಿಶ್ವಕಪ್ ಗೆಲ್ಲುವ ವೇಳೆ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡುತ್ತಾಳೆ, ಆಗ ಆ ಮಗುಗೆ ಕಪಿಲ್ ಎಂದು ಹೆಸರಿಡುವುದು, ಯುವಕ ಸಚಿನ್ ತೆಂಡೂಲ್ಕರ್ ಪಾತ್ರಧಾರಿ ಭಾರತಕ್ಕಾಗಿ ಆಡ್ತೀನಿ ಎನ್ನುವ ದೃಶ್ಯಗಳು ಮೈ ರೋಮಾಂಚನಗೊಳಿಸುತ್ತವೆ. 83 ಕೇವಲ ಸಿನಿಮಾವಲ್ಲ, ಬದಲಾಗಿ ಪ್ರತಿಯೊಬ್ಬ ಭಾರತೀಯ ಜಯ ಎನ್ನಬಹುದು. 83 ಕೇವಲ ಸಿನಿಮಾವಲ್ಲ, ಐತಿಹಾಸಿಕ, ವೈಭವವಾದ ಕ್ಷಣಕ್ಕೆ ಸಾಕ್ಷಿಯಾದ ಭಾವನೆ.
Published by:Vasudeva M
First published: