ಭಾರತೀಯ ಸಿನಿಮಾ ರಂಗದ ಮೋಸ್ಟ್ ಎಕ್ಸ್ಪೆಕ್ಟೆಡ್ (Most Expected) ‘ಪುಷ್ಪ’ (Pushpa) ಸಿನಿಮಾ ಡಿಸೆಂಬರ್ 17ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಸಿನಿಮಾ ತಂಡ ಪ್ರಚಾರ (Promotion) ಕಾರ್ಯದಲ್ಲಿ ತೊಡಗಿಕೊಂಡಿದೆ. ‘ಪುಷ್ಪ’ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿ (Bengaluru)ಗೆ ಚಿತ್ರತಂಡ ಬಂದಿತ್ತು. ಬೆಂಗಳೂರಿನ ಖಾಸಗಿ ಹೋಟೆಲ್ವೊಂದರಲ್ಲಿ ಸುದ್ದಿಗೋಷ್ಠಿ (Press meet) ನಡೆಸಲಾಯಿತು. ಸುಕುಮಾರ್ ನಿರ್ದೇಶನದ ಅಲ್ಲು ಅರ್ಜುನ್(Allu Arjun) ಅಭಿನಯದ ಬಹು ನಿರೀಕ್ಷಿತ ಸಿನಿಮಾ ಪುಷ್ಪ. ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ (Rashmika Mandanna), ಡಾಲಿ ಧನಂಜಯ್ (Dali Dhanajaya) ಭಾಗಿಯಾಗಿದ್ದರು. ಪುಷ್ಪ ಚಿತ್ರ ಎರಡು ಭಾಗಗಳಲ್ಲಿ ಬರ್ತಿದ್ದು ಇದೇ ವಾರ ಮೊದಲನೆ ಭಾಗ ರಿಲೀಸ್ ಆಗಲಿದೆ. ಹೀಗಾಗಿ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಪ್ರಚಾರ ನಡೆಸಲಾಯಿತು. ಪ್ರಚಾರದಲ್ಲಿ ನಟಿ ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್, ಡಾಲಿ ಧನಂಜಯ್ ಎಲ್ಲರೂ ಮಾತನಾಡಿದ್ದಾರೆ. ಆಂಧ್ರದಲ್ಲೂ ಚಿತ್ರತಂಡ ಭರ್ಜರಿಯಾಗಿ ಪ್ರಚಾರ ನಡೆಸಿದೆ. ಈಗಾಗಲೇ ಎಲ್ಲ ಕಡೆ ಪುಷ್ಪ ಸಿನಿಮಾದ ಫೀವರ್ ಶುರುವಾಗಿದೆ. ಡಿಸೆಂಬರ್ 17 ಯಾವಾಗ ಆಗುತ್ತೆ ಅಂತ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.
‘ಕನ್ನಡ ಡಬ್ ಮಾಡೋಕೆ ಟೈಂ ಸಿಕ್ಲಿಲ್ಲ’
ಇನ್ನೂ ಕಾರ್ಯಕ್ರಮದಲ್ಲಿ ಮಾತನಾಡಿದ ರಶ್ನಿಕಾ ಮಂದಣ್ಣ, ‘ನಮ್ಮೂರಿಗೆ ಬಂದು ತುಂಬಾ ಖುಷಿ ಆಗುತ್ತಿದೆ ಎಂದು ಹೇಳುತ್ತಾ ಮಾತು ಆರಂಭಿಸಿದರು. ಡಿಸೆಂಬರ್ 17 ರಂದು ಸಿನಿಮಾ ರಿಲೀಸ್ ಆಗ್ತಿದೆ, ಸಿನಿಮಾ ತುಂಬಾ ಚನ್ನಾಗಿ ಮಾಡಿದ್ದೇವೆ. ಶ್ರೀವಲ್ಲಿ ಪಾತ್ರ ನನಗೆ ತುಂಬಾ ಸ್ಪೆಷಲ್. ಪುಷ್ಪ ಸಿನಿಮಾ ನಾರ್ಮಲ್ ಸ್ಟೋರಿ ಅಲ್ಲ. ನಾನು ಅಲ್ಲು ಅರ್ಜುನ್ ಸರ್ ಜೊತೆ ನಟಿಸಿದ್ದು ತುಂಬಾ ಖುಷಿ ಕೊಟ್ಟಿದೆ. ಅಲ್ಲು ಅರ್ಜುನ್ ಸರ್ಗೆ ಇರೋ ಹೆಸರಿಗೆ ನಾನು ಫುಲ್ ಫಿಲ್ ಮಾಡುವಷ್ಡು ಕೆಲಸ ಮಾಡಿದ್ದೇನೆ. ಡಾಲಿ ಧನಂಜಯ್ ಜೊತೆ ಕೂಡ ನಟಿಸಿದ್ದೇನೆ.. ಸೆಟ್ ನಲ್ಲಿ ಕನ್ನಡದಲ್ಲಿ ಮಾತನಾಡುತ್ತಿದ್ದೆ’ ಎಂದು ರಶ್ಮಿಕಾ ಹೇಳಿದ್ದಾರೆ.
ಜೊತೆಗೆ ‘ನಾನು ಕನ್ನಡದಲ್ಲಿ ಡಬ್ಬಿಂಗ್ ಮಾಡಬೇಕು ಅಂದುಕೊಂಡಿದ್ವಿ, ಆದರೆ ಟೈಂ ಸಿಗಲಿಲ್ಲ. ಹೀಗಾಗಿ ಬೇರೆಯವರು ಡಬ್ಬಿಂಗ್ ಮಾಡಿದ್ದಾರೆ. ಪಾರ್ಟ್ 2 ಗೆ ನಾನೆ ಕನ್ನಡದಲ್ಲಿ ಡಬ್ಬಿಂಗ್ ಮಾಡುತ್ತೇನೆ’ ಎಂದು ರಶ್ಮಿಕಾ ಮಂದಣ್ಣಹೇಳಿದ್ದಾರೆ. ಇತ್ತೀಚೆಗೆ ರಶ್ಮಿಕಾ ಮೇಲೆ ಕನ್ನಡಿಗರು ಮುನಿಸಿಕೊಂಡಿದ್ದರು. ಆರ್ಆರ್ಆರ್ ಸಿನಿಮಾದಲ್ಲಿ ಜೂ.ಎನ್ಟಿಆರ್ ಕನ್ನಡದಲ್ಲಿ ಡಬ್ ಮಾಡಿದ್ದೇನೆ ಎಂದಿದ್ದರು. ಕನ್ನಡದವರೇ ಆದ ರಶ್ಮಿಕಾ ಅವರಿಗೆ ಮಾತ್ರ ಕನ್ನಡ ಡಬ್ ಮಾಡದಿರುವುದಕ್ಕೆ ಟೈಂ ಸಿಗಲಿಲ್ಲ ಎಂದಿದಕ್ಕೆ ಗರಂ ಆಗಿದ್ದಾರೆ. ಇದೀಗ ರಶ್ಮಿಕಾ ಮಂದಣ್ಣ ಕನ್ನಡದಲ್ಲಿ ನಾನು ಡಬ್ ಮಾಡಿಲ್ಲ ಎಂದು ಹೇಳಿದ್ದಾರೆ. ಈ ವಿಚಾರ ಕನ್ನಡಗರ ಕಣ್ಣನ್ನು ಮತ್ತಷ್ಟು ಕೆಂಪಾಗಿಸಿದೆ.
ಇದನ್ನು ಓದಿ : ರಿಲೀಸ್ಗೂ ಮುನ್ನವೇ 100 ಕೋಟಿ ಕ್ಲಬ್ ಸೇರಿದ ಅಲ್ಲು ಸಿನಿಮಾ: `ಪುಷ್ಪ’ ಅಂದ್ರೆ ಹೂ ಅಲ್ಲ.. ಫೈರ್!
ಕನ್ನಡಿಗರಿಗೆ ಹೆಮ್ಮೆಯ ವಿಚಾರ ಎಂದ ಅಲ್ಲು!
ಕಾರ್ಯಕ್ರಮದಲ್ಲಿ ಮಾತನಾಡಿದ ಅಲ್ಲು ಅರ್ಜುನ್, 18 ವರ್ಷ ಇದ್ದಾಗ ನಾನು ಬೆಂಗಳೂರಿಗೆ ಬಂದಿದ್ದೆ. ಆಗ ನನ್ನ ಸಿನಿಮಾ ರಿಲೀಸ್ ಆಗುತ್ತೆ ಅಂತ ನಾನು ಅನ್ಕೊಂಡಿರಲಿಲ್ಲ. ಈಗ ಕರ್ನಾಟಕದಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಸಿನಿಮಾದಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ಡಾಲಿ ಧನಂಜಯ್ ನಟಿಸಿದ್ದಾರೆ. ಕನ್ನಡದಿಂದ ಚಿತ್ರರಂಗಕ್ಕೆ ಬಂದ ರಶ್ಮಿಕಾ ಇವತ್ತು ದೇಶಾದ್ಯಂತ ಹೆಸರು ಮಾಡಿದ್ದಾರೆ. ಇದು ಕನ್ನಡಿಗರಿಗೆ ಹೆಮ್ಮೆ ವಿಚಾರ. ಈ ಸಿನಿಮಾಗೆ ಡಬ್ಬಿಂಗ್ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದ. ದೇವಿ ಶ್ರೀ ಪ್ರಸಾದ್ ಅದ್ಭುತವಾದ ಮ್ಯೂಸಿಕ್ ಕೊಟ್ಟಿದ್ದಾರೆ. ಕರ್ನಾಟಕದಲ್ಲಿರೋ ನನ್ನ ಅಭಿಮಾನಿಗಳಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.
ಇದನ್ನು ಓದಿ : ಹೊಸ ದಾಖಲೆಗಳಿಗೆ ಮುನ್ನುಡಿ ಬರೆದ `ಅಖಂಡ’: ಬಾಲಯ್ಯನ ಆರ್ಭಟಕ್ಕೆ ರೆಕಾರ್ಡ್ಗಳೇ ಚಿಂದಿ ಚಿಂದಿ!
ಕಾರ್ಯಕ್ರಮದಲ್ಲಿ ಪುನೀತ್ ನೆನದ ಅಲ್ಲು ಅರ್ಜುನ್!
ಇದೇ ವೇಳೆ ಪುನೀತ್ ರಾಜ್ ಕುಮಾರ್ ಬಗ್ಗೆ ಮುಖ್ಯವಾಗಿ ಮಾತನಾಡಲೇ ಬೇಕು ಎಂದು ಅಲ್ಲು ಅರ್ಜುನ್ ಹೇಳಿದರು. ‘ಪುಷ್ಪ’ ರಿಲೀಸ್ ಟೈಂ ನಲ್ಲಿ ನಾನು ಪುನೀತ್ ಮನೆಗೆ ಹೋಗೋದು ಸರಿ ಅಲ್ಲ. ನಾನು ಪುಷ್ಪ ಸಿನಿಮಾ ರಿಲೀಸ್ ಆದ ನಂತರ ಮತ್ತೆ ಬೆಂಗಳೂರಿಗೆ ಬಂದು ಅಪ್ಪು ಸರ್ ಮನೆಗೆ ಹೋಗುತ್ತೇನೆ. ಅವರ ಕುಟುಂಬಕ್ಕೆ ದೇವರು ಶಕ್ತಿ ನೀಡಬೇಕು ಎಂದು ಅಲ್ಲು ಅರ್ಜುನ್ ಹೇಳಿದರು. ಇನ್ನೂ ಡಾಲಿ ಧನಂಜಯ್ ಮಾತನಾಡಿ ಅಲ್ಲು ಅರ್ಜುನ್ ಜೊತೆ ಕೆಲಸ ಮಾಡಿದ್ದು ತುಂಬಾ ಖುಷಿ ಆಯ್ತು ಅಂತ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ