• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Pushpa Review: `ಪುಷ್ಪ’ರಾಜ್​ ಫುಲ್​ ಮಾಸ್​, ಟ್ರೈಲರ್​ನಲ್ಲಿ ಹಚ್ಚಿದ್ದ ಫೈರ್​ ಆರಿಹೋಯ್ತು ಅಂತಿದ್ದಾರೆ ಫ್ಯಾನ್ಸ್​!

Pushpa Review: `ಪುಷ್ಪ’ರಾಜ್​ ಫುಲ್​ ಮಾಸ್​, ಟ್ರೈಲರ್​ನಲ್ಲಿ ಹಚ್ಚಿದ್ದ ಫೈರ್​ ಆರಿಹೋಯ್ತು ಅಂತಿದ್ದಾರೆ ಫ್ಯಾನ್ಸ್​!

ಪುಷ್ಪ ಚಿತ್ರದ ಪೋಸ್ಟರ್​​

ಪುಷ್ಪ ಚಿತ್ರದ ಪೋಸ್ಟರ್​​

ರಾಯಲಸೀಮೆಯ ಶೇಷಾಚಲಂ ಬೆಟ್ಟಗಳಲ್ಲಿ ರಕ್ತ ಚಂದನ ಕಡಿಯುವ ಕೂಲಿಯಾಗಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದಾರೆ. ಶೀಘ್ರದಲ್ಲೇ ತನ್ನ ಧೈರ್ಯ ಮತ್ತು ಬುದ್ಧಿವಂತಿಕೆಯಿಂದ ಕಳ್ಳಸಾಗಾಣಿಕೆ ಸಾಮ್ರಾಜ್ಯದ ಪ್ರಮುಖ ವ್ಯಕ್ತಿಯಾಗುತ್ತಾನೆ ‘ಪುಷ್ಪ’.

  • Share this:

ಭಾರತೀಯ ಸಿನಿಮಾರಂಗದ ಮೋಸ್ಟ್​ ಎಕ್ಸ್​ಪೆಕ್ಟೆಡ್(Most Expected)​​  ಸಿನಿಮಾ, ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್(Stylish Star Allu Arjun) ಅಭಿನಯದ ‘ಪುಷ್ಪ’(Pushpa) ಚಿತ್ರ ತೆರೆಕಂಡಿದೆ. ಮುಂಜಾನೆಯಿಂದಲೇ ಫ್ಯಾನ್ಸ್​​(Fans) ಶೋಗಳು ಆರಂಭವಾಗಿದ್ದು, ಸಿನಿಮಾ ನೋಡಿದ ಫ್ಯಾನ್ಸ್​ ಪುಷ್ಪ ಸಿನಿಮಾ ಸಖತ್​ ಮಾಸ್(Mass)​ ಅಂತಿದ್ದಾರೆ. ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಟ್ರೈಲರ್​​ನಲ್ಲಿ  ಪುಷ್ಪ ರಾಜ್​ ಹಚ್ಚಿದ ಬೆಂಕಿ(Fire) ಸಿನಿಮಾದಲ್ಲಿ ಆರಿಹೋಯ್ತು ಅಂತ ಟ್ವಿಟ್ಟರ್​​ನಲ್ಲಿ ಪೋಸ್ಟ್​ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್​ ಅವರ ‘ಅಲ ವೈಕುಂಠಪುರಮುಲೋ' ಸಿನಿಮಾ ಸಖತ್​ ಹಿಟ್​ ಆಗಿತ್ತು. ಹೀಗಾಗಿ ಅಲ್ಲು ಅರ್ಜುನ್​ ಮುಂದಿನ ಸಿನಿಮಾ ‘ಪುಷ್ಪ’ ಸಿನಿಮಾ ಮೇಲೆ ಭಾರೀ ನಿರೀಕ್ಷೆಯಿತ್ತು. ಆ ನಿರೀಕ್ಷೆ ಹುಸಿ ಮಾಡುವಲ್ಲಿ ಸುಕುಮಾರ್(Sukumar)​ ಎಡವಿದ್ದಾರೆ ಅಂತ ಜನ ಮಾತನಾಡುತ್ತಿದ್ದಾರೆ. ಮತ್ತೊಂದು ವರ್ಗ ಹಿಂದೆಂದೂ ಈ ರೀತಿಯ ಸಿನಿಮಾಗಳು ಬಂದಿಲ್ಲ. ಅಲ್ಲು ಅರ್ಜುನ್​ ಅವರ ಮಾಸ್​ ಲುಕ್​​ ಒಂದು ಸಾಕು ಈ ಸಿನಿಮಾ ಬ್ಲಾಕ್​ಬ್ಲಸ್ಟರ್(Block Buster)​ ಎಂದು ಹೇಳುತ್ತಿದ್ದಾರೆ. ಮೊದಲ ಬಾರಿಗೆ ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ಅಲ್ಲು ಅರ್ಜುನ್​ ರಾಕ್​ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ ವಿಮರ್ಶಕರು. ಇನ್ನು 'ತಗ್ಗೆದೇ ಲೇ' ಎಂದು ಜನರ ಮುಂದೆ ಬಂದ 'ಪುಷ್ಪ' ರಾಜ್ ಕೊಟ್ಟ ಮಾತು ಉಳಿಸಿಕೊಂಡಿದ್ದಾರಾ ? ಮುಂದೆ ನೋಡಿ..


ಎಲ್ಲರಿಗೂ ಗೊತ್ತಿರುವ ಕಥೆಯೆ ‘ಪುಷ್ಪ’


ಅರಣ್ಯ ನಾಶ ಮತ್ತು ಸಸ್ಯವರ್ಗ ಮತ್ತು ಖನಿಜಗಳ ಲೂಟಿಯ ಬಗ್ಗೆ ಇತ್ತೀಚೆಗೆ ಸಾಕಷ್ಟು ಸಿನಿಮಾಗಳು ಬಂದಿವೆ. 'ಪುಷ್ಪ- ದಿ ರೈಸ್' ಚಿತ್ರಕ್ಕೆ ಬರಹಗಾರ ಮತ್ತು ನಿರ್ದೇಶಕ ಸುಕುಮಾರ್ ವಿಭಿನ್ನ ಕಥೆಯನ್ನು ಬರೆದಿದ್ದಾರೆ. ರಾಯಲಸೀಮೆಯ ಶೇಷಾಚಲಂ ಬೆಟ್ಟಗಳಲ್ಲಿ ರಕ್ತ ಚಂದನ ಕಡಿಯುವ ಕೂಲಿಯಾಗಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದಾರೆ. ಶೀಘ್ರದಲ್ಲೇ ತನ್ನ ಧೈರ್ಯ ಮತ್ತು ಬುದ್ಧಿವಂತಿಕೆಯಿಂದ ಕಳ್ಳಸಾಗಾಣಿಕೆ ಸಾಮ್ರಾಜ್ಯದ ಪ್ರಮುಖ ವ್ಯಕ್ತಿಯಾಗುತ್ತಾನೆ ‘ಪುಷ್ಪ’. ಈ ಆ್ಯಕ್ಷನ್​ ಡ್ರಾಮಾ ಸಿನಿಮಾದಲ್ಲಿ ಸುಕುಮಾರ್​​ ಮದರ್ ಸೆಂಟಿಮೆಂಟ್ ಮತ್ತು ಲವ್ ಸೆಂಟಿಮೆಂಟ್ ಕೂಡ ಮಿಕ್ಸ್ ಮಾಡಿದ್ದಾರೆ.ಆರಂಭದಿಂದ ಕೊನೆಯವರೆಗೂ ಅದ್ಧೂರಿ ಹೊಡೆದಾಟದ ದೃಶ್ಯಗಳಿದ್ದರೂ ಮಧ್ಯದಲ್ಲಿ ತೆರೆಗೆ ಬರುವ ಈ ಭಾವುಕ ಘಟನೆಗಳು ಪ್ರೇಕ್ಷಕರಿಗೆ ಕೊಂಚ ರಿಲೀಫ್ ನೀಡುತ್ತದೆ.



ಇದನ್ನು ಓದಿ : ಸಿಲಿಕಾನ್​ ಸಿಟಿಯಲ್ಲಿ `ಪುಷ್ಪ’ ಪ್ರಮೋಷನ್​: ಕನ್ನಡದಲ್ಲಿ ಡಬ್​ ಮಾಡೋಕೆ ಟೈಂ ಸಿಕ್ಲಿಲ್ಲ ಅಂದ್ರು ರಶ್ಮಿಕಾ ಮಂದಣ್ಣ!


‘ಪುಷ್ಪ’ದಲ್ಲಿ ಅಲ್ಲು ಅರ್ಜುನ್​ ಮುಖ್ಯ ಬಲ!


ಚಿತ್ರದ ಆರಂಭದಿಂದಲೂ ಪುಷ್ಪ ರಾಜ್ ಬಿಟ್ಟರೆ ಅಲ್ಲು ಅರ್ಜುನ್ ಪ್ರೇಕ್ಷಕರಿಗೆ ಕಾಣಿಸುವುದಿಲ್ಲ. ಯಾರ ಅಡಿಯಲ್ಲಿಯೂ ಕೆಲಸ ಮಾಡಲು ಇಷ್ಟಪಡದ ವ್ಯಕ್ತಿಯಾಗಿ ಮತ್ತು ತನ್ನ ಸಂಗಾತಿಯನ್ನು ಹುಚ್ಚನಂತೆ ಪ್ರೀತಿಸುವ ಪ್ರೇಮಿಯಾಗಿ ಅಮೋಘವಾಗಿ ನಟಿಸಿದ್ದಾರೆ. ಹಾಲು ಮಾರುವ ಕೆಳ ಮಧ್ಯಮ ವರ್ಗದ ಹುಡುಗಿ ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ತನ್ನ ತಂದೆಯನ್ನು ಜೈಲಿನಿಂದ ರಕ್ಷಿಸಲು ಆಕೆ ಒದ್ದಾಡುವ ಪರಿ ಎಲ್ಲ ಮನಸ್ಸು ನಾಟುತ್ತದೆ. ಎರ್ರಚಂದನಂ ಸ್ಮಗ್ಲರ್ ಕೊಂಡರೆಡ್ಡಿ ಪಾತ್ರದಲ್ಲಿ ಅಜಯ್ ಘೋಷ್ ಮತ್ತು ಅವರ ಕಿರಿಯ ಸಹೋದರ ಜಾಲಿರೆಡ್ಡಿ ಪಾತ್ರದಲ್ಲಿ ಕನ್ನಡ ನಟ ಧನುಂಜಯ್ ಉತ್ತಮವಾಗಿ ನಟಿಸಿದ್ದಾರೆ. ಮಲಯಾಳಂ ನಟ ಫಹಾದ್​ ಫಾಜಿಲ್​ ಅವರ ಪಾತ್ರ ಕಡಿಮೆ ಇದ್ದರೂ, ಅವರ ಅಭಿನಯಕ್ಕೆ ಫುಲ್​ ಮಾರ್ಕ್ಸ್​​.



ಇದನ್ನು ಓದಿ : ಕನ್ನಡ ಚಿತ್ರಗಳಿಗೆ ಡಬ್ಬಿಂಗ್​ ಸಿನಿಮಾಗಳ ಕಾಟ: ಸದಭಿರುಚಿ ಕಥೆಗಳ ಗತಿಯೇನು ಅಂತಿದ್ದಾರೆ ಕನ್ನಡಿಗರು!


ಟ್ವಿಟ್ಟರ್​ನಲ್ಲಿ ಪುಷ್ಪ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ!


ಕೆಲವರು ಇದೊಂದು ಸಾಮಾನ್ಯ ಸಿನಿಮಾ ಎಂದು ಹೇಳುತ್ತಿದ್ದಾರೆ. ಟ್ವಿಟರ್​ನಲ್ಲಿ ಎಲ್ಲ ಬಗೆಯ ಪ್ರತಿಕ್ರಿಯೆಗಳು ಸಿಗುತ್ತಿವೆ.ಟ್ರೈಲರ್​ನಲ್ಲಿ ಇದ್ದ ಅಬ್ಬರ ಸಿನಿಮಾದಲ್ಲಿಲ್ಲ ಎಂದು ಟ್ವೀಟ್​ ಮಾಡಿದ್ದಾರೆ. ಸೂಪರ್​ ಡೂಪರ್ ಹಿಟ್​ ಆಗುತ್ತೆ ಅಂದುಕೊಂಡಿದ್ದ ಫ್ಯಾನ್ಸ್​ಗೆ ಕೊಂಚ ನಿರಾಸೆಯಾಗಿದೆ ಎಂದು ಅಭಿಮಾನಿಗಳು ಮಾಡಿರುವ ಟ್ವೀಟ್​ನಿಂದ ಗೊತ್ತಾಗುತ್ತೆ. ಫಸ್ಟ್​ ಹಾಫ್​ ಮುಗಿಯಿತು. ಇದು ಅಲ್ಲು ಅರ್ಜುನ್​ ಅವರ ಒನ್​ ಮ್ಯಾನ್​ ಶೋ’ ಎಂದು ನೆಟ್ಟಿಗರೊಬ್ಬರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಅಲ್ಲು ಅರ್ಜುನ್​ ಅವರ ರಗಡ್ ಲುಕ್​ ಮತ್ತು ಮ್ಯಾನರಿಸಂ ಸಖತ್​ ಇಷ್ಟ ಆಗುತ್ತದೆ. ಹಳ್ಳಿ ಹಿನ್ನೆಲೆಯಲ್ಲಿ ಎಲ್ಲ ಕಲಾವಿದರ ಡೈಲಾಗ್​ಗಳು ನಿಮ್ಮನ್ನು ಬೇರೊಂದು ಲೋಕಕ್ಕೆ ಕರೆದುಕೊಂಡು ಹೋಗುತ್ತದೆ ಎಂದು ಟ್ವೀಟ್​ ಮಾಡಿದ್ದಾರೆ.

Published by:Vasudeva M
First published: