ತೆಲುಗಿನ ಜನಪ್ರಿಯ ನಟ ಪ್ರಭಾಸ್(Prabhas) ಮತ್ತು ನಟಿ ಪೂಜಾ ಹೆಗ್ಡೆ(Pooja Hegde) ನಟಿಸಿರುವ ‘ರಾಧೆ ಶ್ಯಾಮ್’(Radhe Shyam) ಚಿತ್ರದ ‘ನಗುಮೊಮು ಥಾರಲೆ’ ಹಾಡು ಕೆಲವು ದಿನಗಳ ಹಿಂದೆ ಯೂಟ್ಯೂಬ್ನಲ್ಲಿ ಒಂದು ಕೋಟಿಗೂ ಹೆಚ್ಚು ಜನರು ವೀಕ್ಷಿಸಿದ್ದು ಜನಪ್ರಿಯವಾಗಿರುವ ವಿಚಾರ ನಮಗೆಲ್ಲಾ ಗೊತ್ತೇ ಇದೆ. ಪ್ರಭಾಸ್ ಅಭಿಮಾನಿಗಳು ತುಂಬಾನೇ ನಿರೀಕ್ಷೆಯಿಂದ ಕಾಯುತ್ತಿರುವ ಚಿತ್ರ ಎಂದರೆ ಅದು ‘ರಾಧೆ ಶ್ಯಾಮ್’ ಎಂದು ಹೇಳಿದರೆ ತಪ್ಪಾಗುವುದಿಲ್ಲ.ಈಗ ಈ ಚಿತ್ರತಂಡವು ‘ರಾಧೆ ಶ್ಯಾಮ್’ ಚಿತ್ರದ ಟ್ರೈಲರ್(Trailer) ಅನ್ನು ಬಿಡುಗಡೆ ಮಾಡಿದ್ದಾರೆ. ಮುಂಬರುವ ಚಿತ್ರವು ವೈಜ್ಞಾನಿಕ ಮತ್ತು ರೊಮ್ಯಾಂಟಿಕ್(Romantic) ಕಥಾ ಹಂದರ ಒಳಗೊಂಡಿದೆ ಎಂದು ಹೇಳಲಾಗುತ್ತಿದೆ. ನಟ ಪ್ರಭಾಸ್ ಮತ್ತು ನಟಿ ಪೂಜಾ ಹೆಗ್ಡೆ ನಟಿಸಿರುವ ಈ ಚಿತ್ರಕ್ಕೆ ರಾಧಾ ಕೃಷ್ಣ ಕುಮಾರ್ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ.ಈ ಚಿತ್ರವನ್ನು ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರೀಕರಿಸಲಾಗಿದ್ದು, ಇದು ಪ್ರಭಾಸ್ ಅವರ ಹೋಮ್ ಬ್ಯಾನರ್(Prabhas Home Banner) ಗೋಪಿಕೃಷ್ಣ ಮೂವೀಸ್, ಯುವಿ ಕ್ರಿಯೇಷನ್ಸ್ ಮತ್ತು ಟಿ-ಸೀರೀಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ.
ಚಿತ್ರದಲ್ಲಿ ನಿಗೂಢವಾದ ಭವಿಷ್ಯ ಹೇಳುವ ಒಬ್ಬ ನಾಯಕ ಮತ್ತು ಪ್ರೇಮಿ ವಿಕ್ರಮ್ ಆದಿತ್ಯನಾಗಿ ನಟ ಪ್ರಭಾಸ್ ಅವರ ಕೆಲವು ದೃಶ್ಯಗಳನ್ನು ಈ ಟ್ರೈಲರ್ನಲ್ಲಿ ನೋಡಬಹುದು. ಈಗ ಹೊಸದಾಗಿ ಬಿಡುಗಡೆ ಮಾಡಿದ ಟ್ರೈಲರ್ ಈ ವಿಶಿಷ್ಟ ಪ್ರೇಮ ಕಥೆಯ ಕಥಾ ಹಂದರವನ್ನು ತಿಳಿಸುತ್ತವೆ. ಟ್ರೈಲರ್ನಲ್ಲಿ ಕಥೆ ಹೇಗೆ ಶುರುವಾಗುತ್ತದೆ ಎಂಬುದನ್ನು ನೋಡಬಹುದಾಗಿದೆ.ಈ ಟ್ರೈಲರ್ ನೋಡಿದ ಅಭಿಮಾನಿಗಳಿಗೆ ಈ ಚಿತ್ರದ ಬಗ್ಗೆ ಇರುವ ಕುತೂಹಲ ಇನ್ನಷ್ಟು ಹೆಚ್ಚಾಗಿದೆ ಎಂದು ಹೇಳಬಹುದು. ಈ ಟ್ರೈಲರ್ ಅದ್ಭುತ ಭಾವನೆಗಳ ಮಿಶ್ರಣವಾಗಿದ್ದು, ಇದರಲ್ಲಿ ಪ್ರೀತಿ ಪ್ರೇಮವಿದೆ, ಒಂದು ದುರಂತವಿದೆ, ಉತ್ತಮ ಸಂಗೀತವಿದೆ, ಟ್ರೈಲರ್ನ ಕೊನೆಯಲ್ಲಿ ಹಡಗು ಮುಳುಗಿಸುವ ದೃಶ್ಯಗಳು ನಮಗೆ ‘ಟೈಟಾನಿಕ್’ ಅನ್ನು ನೆನಪಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ