Russia-Ukraine War: ಭಾರತದ ನಿರ್ದೇಶಕರಿಗೆ ಉಕ್ರೇನ್​ ಫೇವರಿಟ್​ ಶೂಟಿಂಗ್​ ಸ್ಪಾಟ್​! RRR ಚಿತ್ರೀಕರಣ ಕೂಡಾ ಇಲ್ಲೇ ಆಗಿದ್ದು

ಇತ್ತೀಚೆಗೆ ಅಜಯ್ ದೇವಗನ್, ಎನ್​ಟಿಆರ್​​ ಮತ್ತು ರಾಮ್ ಚರಣ್ ಅಭಿನಯದ ರಾಜಮೌಳಿ ಅವರ ಚಿತ್ರ RRR ಕಳೆದ ವರ್ಷ ಉಕ್ರೇನ್‌ನಲ್ಲಿ ಚಿತ್ರೀಕರಣಗೊಂಡಿದೆ.

ಉಕ್ರೇನ್​ನಲ್ಲಿ ಆರ್​ಆರ್​ಆರ್​ ಶೂಟಿಂಗ್​

ಉಕ್ರೇನ್​ನಲ್ಲಿ ಆರ್​ಆರ್​ಆರ್​ ಶೂಟಿಂಗ್​

  • Share this:
ರಷ್ಯಾ-ಉಕ್ರೇನ್ ಯುದ್ಧ(Russia-Ukraine War) ಪ್ರಾರಂಭವಾಗುತ್ತದೆ. ಇಡೀ ಜಗತ್ತು ಏನಾಗಬಾರದು ಅಂದುಕೊಂಡಿದ್ದೀರೋ.. ಈಗ ಅದೇ ಆಗುತ್ತಿದೆ.ರಷ್ಯಾ - ಉಕ್ರೇನ್ ಮೇಲೆ ಯುದ್ಧ ಘೋಷಿಸಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್(Vladimir Putin) ಸ್ವತಃ ಮಿಲಿಟರಿ ಕಾರ್ಯಾಚರಣೆಯ ಪ್ರಾರಂಭವನ್ನು ಘೋಷಿಸಿದ್ದಾರೆ. ಈಗಾಗಲೇ ರಷ್ಯಾದ ಪಡೆಗಳು ಉಕ್ರೇನ್ ಭೂಪ್ರದೇಶ(Territory of Ukraine)ಕ್ಕೆ ನುಗ್ಗಿವೆ. ಉಕ್ರೇನ್ ಅನ್ನು ಮೂರು ಕಡೆಗಳಿಂದ ಸುತ್ತುವರೆದಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಮುಗಿಲು ಮುಟ್ಟಿದೆ. ಈ ಯುದ್ಧದ ಬೆನ್ನಲ್ಲೇ ಇದೀಗ ರಷ್ಯಾ ಜೊತೆಗೆ ಉಕ್ರೇನ್ ಕೂಡ ಸುದ್ದಿಯಲ್ಲಿದೆ. ನಮ್ಮ ಚಿತ್ರಗಳು ಹೆಚ್ಚಾಗಿ ರಷ್ಯಾದಲ್ಲಿ ಚಿತ್ರೀಕರಣ(Shooting)ಗೊಳ್ಳುತ್ತವೆ. ಅದರಲ್ಲೂ ಆ ಕಾಲದಲ್ಲಿ ರಾಜ್ ಕಪೂರ್(Raj Kapoor) ನಾಯಕನಾಗಿ ನಟಿಸಿದ ಬಹುತೇಕ ಚಿತ್ರಗಳು ಅಲ್ಲಿಯೇ ಚಿತ್ರೀಕರಣಗೊಂಡಿದ್ದವು.

ಉಕ್ರೇನ್​ನಲ್ಲಿ ಆರ್​ಆರ್​ಆರ್​ ಸಿನಿಮಾ ಶೂಟಿಂಗ್​!

ರಷ್ಯಾದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಅನುಸರಿಸುವ ಭಾರತದ ನಾಯಕ ಅಂದರೆ ರಾಜ್ ಕಪೂರ್. ಇವರ ಚಲನಚಿತ್ರಗಳನ್ನು ರಷ್ಯಾ, ಉಕ್ರೇನ್, ಉಜ್ಬೇಕಿಸ್ತಾನ್, ತಜಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಅಜೆರ್ಬೈಜಾನ್‌ನಲ್ಲಿಯೂ ಚಿತ್ರೀಕರಿಸಲಾಗಿದೆ. ಇನ್ನೂ ಇತ್ತೀಚೆಗೆ ಅಜಯ್ ದೇವಗನ್, ಎನ್​ಟಿಆರ್​​ ಮತ್ತು ರಾಮ್ ಚರಣ್ ಅಭಿನಯದ ರಾಜಮೌಳಿ ಅವರ ಇತ್ತೀಚಿನ ಚಿತ್ರ RRR ಕಳೆದ ವರ್ಷ ಉಕ್ರೇನ್‌ನಲ್ಲಿ ಚಿತ್ರೀಕರಣಗೊಂಡಿದೆ.

ಉಕ್ರೇನ್​ನಲ್ಲಿದೆ ಅನೇಯ ಐತಿಹಾಸಿಕ ಸ್ಮಾರಕಗಳು!

ಹೌದು, ಉಕ್ರೇನ್​ನಲ್ಲಿ ಅನೇಕ ಐತಿಹಾಸಿಕ ಸ್ಮಾರಕಗಳಿವೆ. ಇವೆಲ್ಲವೂ ಬ್ರಿಟಿಷರ ಕಾಲದಲ್ಲಿ ನಮ್ಮ ದೇಶದಲ್ಲಿ ನಿರ್ಮಾಣವಾದ ಕಟ್ಟಡಗಳು. ಅದಕ್ಕಾಗಿಯೇ ಹಲವು ಚಿತ್ರಗಳು ಉಕ್ರೇನ್​ನಲ್ಲಿ ಶೂಟಿಂಗ್​ ಮಾಡಿದೆ. ಉಕ್ರೇನ್‌ನ ವಿವಿಧ ಐತಿಹಾಸಿಕ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿದೆ. ಆರ್​ಆರ್​ಆರ್ ಸಿನಿಮಾದ ‘ನಾಟು ನಾಟು’ ಹಾಡಿನ ಚಿತ್ರೀಕರಣವೂ ಕೂಡ ಇಲ್ಲಿ ನಡೆದಿದೆ. ಐದು ಬಿಡುಗಡೆಯ ದಿನಾಂಕಗಳ ನಂತರ ಈ ಚಿತ್ರವು ಮಾರ್ಚ್ 25 ರಂದು ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಉಕ್ರೇನ್‌ನಲ್ಲಿ ಯುದ್ಧ, ಭಾರತದಲ್ಲಿ ಆತಂಕ! ದೂರದ ದೇಶದೊಂದಿಗೆ India ಸಂಬಂಧವೇನು?

ಉಕ್ರೇನ್​ನಲ್ಲಿ ಶೂಟ್​ ಮಾಡಲಾಗಿತ್ತು ರಜನಿ ಸಿನಿಮಾ!

ಉಕ್ರೇನ್‌ನಲ್ಲಿ RRR, ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅವರ '2.O' ಚಿತ್ರದ ಶೂಟಿಂಗ್ ಜೊತೆಗೆ, 'ದೇವ್' ಚಿತ್ರ, 99 ಸಿನಿಮಾ ಹಾಡುಗಳು ಮತ್ತು ಇತರ ಅನೇಕ ಭಾರತೀಯ ಮತ್ತು ವಿದೇಶಿ ಚಲನಚಿತ್ರಗಳನ್ನು ಚಿತ್ರೀಕರಿಸಲಾಗಿದೆ. ಇನ್ನು ಆರ್‌ಆರ್‌ಆರ್ ವಿಷಯಕ್ಕೆ ಬಂದರೆ. ಈ ಚಿತ್ರದಲ್ಲಿ ತೆಲುಗಿನ ಐತಿಹಾಸಿಕ ನಾಯಕರಾದ ಕೊಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ಎನ್‌ಟಿಆರ್ ಮತ್ತು ರಾಮ್ ಚರಣ್ ನಟಿಸುತ್ತಿದ್ದಾರೆ.ಇಂಗ್ಲಿಷ್ ನಟಿ ಒಲಿವಿಯಾ ಮೋರಿಸ್ ಮತ್ತು ಹಿಂದಿ ನಟಿ ಆಲಿಯಾ ಭಟ್ ಕೂಡ ನಟಿಸಿದ್ದಾರೆ.ಕಥೆಯ ತಿರುವು ನೀಡುವಲ್ಲಿ ಅಜಯ್ ದೇವಗನ್ ಪ್ರಮುಖ ಪಾತ್ರ ವಹಿಸಿದ್ದಾರೆ. ಮತ್ತೊಂದೆಡೆ, ಚಿತ್ರವು ಒಟಿಟಿಯಲ್ಲಿ ಯಾವಾಗ ಬಿಡುಗಡೆಯಾಗುತ್ತದೆ ಎಂದು ಹಲವು ವದಂತಿಗಳು ಹರಿದಾಡುತ್ತಿವೆ.

ಇದನ್ನೂ ಓದಿ : ರಷ್ಯಾ-ಉಕ್ರೇನ್​ ಯುದ್ಧ ಬಿಕ್ಕಟ್ಟು; ಭಾರತದಲ್ಲಿ ಈ ವಸ್ತುಗಳ ಬೆಲೆ ಏರಿಕೆ

ರಷ್ಯಾ-ಉಕ್ರೇನ್ ಯುದ್ಧ; ಹಲವು ದೇಶಗಳಿಗೆ ಆತಂಕ

ಭಾರತ ಸಂಬಂಧ ಹೊಂದಿರುವ ಹಲವು ರಾಷ್ಟ್ರಗಳ ಪೈಕಿ ಉಕ್ರೇನ್ ಸಹ ಒಂದು. ಉಕ್ರೇನ್ ರಾಷ್ಟ್ರದೊಂದಿಗೆ ಭಾರತ ವ್ಯಾಪಾರ ಹಾಗೂ ಶೈಕ್ಷಣಿಕ ವಲಯಗಳ ಸಂಬಂಧವನ್ನು ಹೊಂದಿದೆ. ಆದರೆ, ಪ್ರಸ್ತುತ, ರಷ್ಯಾ-ಉಕ್ರೇನ್ ಬಿಕ್ಕಟ್ಟು ಜಗತ್ತನ್ನೇ ತಲ್ಲಣಗೊಳಿಸಿದ್ದು ಭಾರತ ಸೇರಿದಂತೆ ಎಲ್ಲ ಜಾಗತಿಕ ನಾಯಕರ ಕಣ್ಣು ಈಗ ಈ ದೇಶಗಳ ಮುಂದಿನ ನಡೆ ಏನೆಂಬುದರ ಬಗ್ಗೆ ಕೇಂದ್ರೀಕೃತವಾಗಿದೆ.
Published by:Vasudeva M
First published: