ರಾಜಮೌಳಿ ನಿರ್ದೇಶನ ಮಾಡಿರುವ ಆರ್ಆರ್ಆರ್ ಸಿನಿಮಾ ವಿಶ್ವಾದ್ಯಂತ ಮಾ.25ರಂದು ಬಿಡುಗಡೆ ಆಗಲಿದೆ. ಇಂದು (ಮಾ.19) ಚಿಕ್ಕಬಳ್ಳಾಪುರದ ಅಗಲಗುರ್ಕಿಯಲ್ಲಿ ಅದ್ದೂರಿಯಾಗಿ ಪ್ರೀ-ರಿಲೀಸ್ ಇವೆಂಟ್ (RRR Movie Pre-Release event) ಕಾರ್ಯಕ್ರಮ ನಡೆಯುತ್ತಿದೆ. ಚಿತ್ರತಂಡ ಈಗಾಗಲೇ , ಆಂಧ್ರ(Andhra), ತಮಿಳುನಾಡು(Tamil nadu), ಕೇರಳ(Kerala), ಮುಂಬೈ(Mumbai)ನಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರೆ. ಇಂದು ಚಿಕ್ಕಬಳ್ಳಾಪುರದಲ್ಲಿ ದಾಖಲೆ ಮಟ್ಟದಲ್ಲಿ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮ ನಡೆಯುತ್ತಿದೆ. ಎಸ್.ಎಸ್.ರಾಜಮೌಳಿ (S.S Rajamouli) ಅಂದರೆ ಅಲ್ಲಿ ಹೊಸತನ ಇರುತ್ತೆ. ಅದು ಚಿತ್ರದಲ್ಲಿ ಆಗಲಿ, ಸಿನಿಮಾದ ಪ್ರಚಾರದಲ್ಲಿ ಆಗಲಿ, ವಿಭಿನ್ನವಾಗಿಯೇ ಪ್ರಮೋಷನ್(Promotion) ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಸಾಗರೋಪಾದದಿಯಲ್ಲಿ ಜನ ಸೇರಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸಿಎಂ ಬಸವರಾಜ್ ಬೊಮ್ಮಾಯಿ(CM Basavaraj Bommai) ಹಾಜರಾಗಿದ್ದಾರೆ. ನಟ ಜ್ಯೂ.ಎನ್ಟಿಆರ್ ಹಾಗೂ ರಾಮ್ಚರಣ್ ನೋಡಲು ಜನ ಸೇರಿದ್ದಾರೆ. ಮಾತಿನ ಮಲ್ಲಿ ಅನುಶ್ರೀ ಹಾಗೂ ತೆಲುಗು ಆ್ಯಂಕರ್ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದಾರೆ.
100 ಎಕರೆ ಜಾಗದಲ್ಲಿ ಪ್ರೀ ರಿಲೀಸ್ ಇವೆಂಟ್!
ಚಿಕ್ಕಬಳ್ಳಾಪುರದ ಅಗಲಗುರ್ಕಿ ಗ್ರಾಮದಲ್ಲಿ ಆರ್ಆರ್ಆರ್ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ನಡೆಯುತ್ತಿದೆ. ನೂರು ಎಕರೆ ಜಾಗದಲ್ಲಿ ಎರಡು ಲಕ್ಷ ಜನರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. 52 ಸಾವಿರ ಚದುರಡಿಯ ಬೃಹತ್ ಎಲ್ಇಡಿ ಸ್ಕ್ರೀನ್ ಹಾಗೂ 42 ಬೃಹತ್ ಲೇಸರ್ ಲೈಟ್ಗಳ ಬಹುದೊಡ್ಡ ಸ್ಟೇಜ್ ಹಾಕಲಾಗಿದೆ.ಆರ್ಆರ್ಆರ್ ಪ್ರಿ ರಿಲೀಸ್ ಕಾರ್ಯಕ್ರಮಕ್ಕೆ ಸಿನಿಮಾ ಹಾಗೂ ರಾಜಕೀಯ ರಂಗದ ಗಣ್ಯರು ಆಗಮಿಸಿದ್ದಾರೆ. ಕರ್ನಾಟಕದಲ್ಲಿ ಕೆವಿಎನ್ ಪ್ರೊಡಕ್ಷನ್ ಸಂಸ್ಥೆಯು ‘ಆರ್ಆರ್ಆರ್’ ಸಿನಿಮಾದ ವಿತರಣೆ ಜವಾಬ್ದಾರಿಯನ್ನು ವಹಿಸಿಕೊಂಡಿದೆ.
ಸಿಎಂ ಬೊಮ್ಮಾಯಿ, ಸಚಿವ ಸುಧಾಕಾರ್ ಭಾಗಿ
ರಾಷ್ಟ್ರಮಟ್ಟದಲ್ಲಿ ‘ಆರ್ಆರ್ಆರ್’ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ಸದ್ದು ಮಾಡುತ್ತಿದೆ. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ನಟ ಶಿವರಾಜ್ಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಪೊಲೀಸ್ ಬಿಗಿ ಬಂದೋಬಸ್ತ್ ಮಾಡಿದ್ದಾರೆ.
ಇದನ್ನೂ ಓದಿ: ನಟ ಧನುಷ್ ಮಾಜಿ ಪತ್ನಿಗೆ ಮಾಡಿದ್ದ ಟ್ವೀಟ್ ಎಂತದ್ದು ಗೊತ್ತೇ? ಇದಕ್ಕೆ ಐಶ್ವರ್ಯಾ ಏನ್ ಹೇಳಿದ್ರು ನೋಡಿ
ಅಪ್ಪುಗಾಗಿ ಸ್ಪೆಷಲ್ ಟ್ರಿಬ್ಯೂಟ್ ಪರ್ಫಾಮೆನ್ಸ್!
ಇನ್ನೂ ಈ ಕಾರ್ಯಕ್ರಮವನ್ನು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗೆ ‘ಆರ್ಆರ್ಆರ್’ ಚಿತ್ರತಂಡ ಅರ್ಪಿಸಿದೆ. ಕೊರಿಯಾಗ್ರಾಫರ್ ಭೂಷಣ್ ನೇತೃತ್ವದಲ್ಲಿ ವೇದಿಕೆ ಮೇಲೆ ಅಪ್ಪು ಅಭಿನಯದ ಹಾಡುಗಳಿಗೆ ಡ್ಯಾನ್ಸ್ ಮಾಡಿದರು. ಇನ್ನೂಅಪ್ಪು ನೆನೆದು ಆರ್ಆರ್ಆರ್ಆರ್ ಚಿತ್ರತಂಡ ಹಾಗೂ ನೆರೆದಿದ್ದ ಜನರು ಭಾವುಕರಾದರು.
ಕಾರ್ಯಕ್ರಮದಲ್ಲಿ ಭಾಗಿಯಾದ ಶಿವಣ್ಣ!
ಮಾರ್ಚ್ 17ರಂದು ವಿಶ್ವವದಾದ್ಯಂತ ಜೇಮ್ಸ್ ಸಿನಿಮಾ ರಿಲೀಸ್ ಆಗಿದೆ. ಮೈಸೂರಿನಲ್ಲಿ ತಮ್ಮನ ಸಿನಿಮಾ ನೋಡಿ ಕಣ್ಣೀರು ಹಾಕಿದ್ದ ಶಿವಣ್ಣ, ಇಂದು ಆರ್ಆರ್ಆರ್ ಪ್ರಿ ರಿಲೀಸ್ ಇವೆಂಟ್ನಲ್ಲಿ ಭಾಗಿಯಾಗಿದ್ದಾರೆ. ಶಿವಣ್ಣನ ನೋಡಿ ಅಭಿಮಾನಿಗಳು ಖುಷಿ ಪಟ್ಟರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ