ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಅವರ ಬುಹು ನಿರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’ (Vikrant Rona) ಯಾವಾಗ ರಿಲೀಸ್ ಆಗುತ್ತೆ ಅಂತ ಅಭಿಮಾನಿಗಳು ಕಾಯುತ್ತಿದ್ದರು. ಕಿಚ್ಚ ಸುದೀಪ್ ಮತ್ತು ಅನೂಪ್ ಬಂಡಾರಿ(Anup Bhandari) ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರುವ ವಿಕ್ರಾಂತ್ ರೋಣ ಸಿನಿಮಾವನ್ನು 2022ರ ಫೆಬ್ರವರಿ 24ರಂದು ರಿಲೀಸ್ ಮಾಡಲಾಗುತ್ತಿದೆ. 37 ಸೆಕೆಂಡ್ಗಳ ಟೀಸರ್ ವಿಡಿಯೋ ರಿಲೀಸ್ ಮಾಡುವ ಮೂಲಕ ಡೇಟ್ ಅನೌನ್ಸ್(Announce) ಮಾಡಿತ್ತು. ಇದನ್ನು ಕಂಡು ಅವರ ಅಭಿಮಾನಿಗಳು ಫುಲ್ ಖಷ್ ಆಗಿದ್ದರು. 2022ರ ಫೆ.24ರಂದು ವಿಶ್ವಾದ್ಯಂತ ‘ವಿಕ್ರಾಂತ್ ರೋಣ’ ತೆರೆಕಾಣಲಿದೆ. ಆದರೆ, ಈಗಿರುವ ಪರಿಸ್ಥಿತಿ ನೋಡಿದರೆ, ಹೇಳಿದ ದಿನಾಂಕದಂದು ಸಿನಿಮಾ ರಿಲೀಸ್ ಮಾಡುವುದು ಡೌಟ್(Doubt). ದೇಶದಲ್ಲಿ, ರಾಜ್ಯದಲ್ಲಿ ಕೊರೋನಅ ತನ್ನ ತಾಂಡವವನ್ನು ಮತ್ತೆ ಶುರುಮಾಡಿಕೊಂಡಿದೆ. ಬೆಂಗಳೂರಿನಲ್ಲಿ ಊಹೆಗೂ ಮೀರಿ ಪ್ರತಿದಿನ ಕೊರೋನಾ ಕೇಸ್ಗಳ ಸಂಖ್ಯೆ ಹೆಚ್ಚುತ್ತಿದೆ, ಚಿತ್ರಮಂದಿರಗಳ(Theaters)ಲ್ಲಿ ಶೇಕಡ 50ರಷ್ಟು ಸೀಟು ಭರ್ತಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಈ ಮಧ್ಯೆ ಸಿನಿಮಾ ರಿಲೀಸ್ ಮಾಡಬೇಕಾ? ಬೇಡವಾ? ಎಂಬ ಗೊಂದಲದಲ್ಲಿ ಹಲವು ಸಿನಿಮಾದ ನಿರ್ಮಾಪಕರಿದ್ದಾರೆ. ಇದೆಲ್ಲರ ನಡುವೆ ವಿಕ್ರಾಂತ್ ರೋಣ ಸಿನಿಮಾಗೆ ಓಟಿಟಿ(OTT)ಯಿಂದ ಭರ್ಜರಿ ಆಫರ್(Offer) ಬಂದಿದೆಯಂತೆ. ನೇರವಾಗಿ ಒಟಿಟಿಯಲ್ಲಿ ರಿಲೀಸ್ ಮಾಡಲು ದಾಖಲೆ ಮೊತ್ತದ ಆಫರ್ ಬಂದಿದೆ.
ಈ ಹಿಂದೆ ಯಾವ ಸಿನಿಮಾಗೂ ಸಿಕ್ಕಿಲ್ವಂತೆ ಬಿಗ್ ಆಫರ್!
3ಡಿ ತಂತ್ರಜ್ಞಾನದಲ್ಲಿ ಅದ್ದೂರಿ ವೆಚ್ಚದಲ್ಲಿ ತಯಾರಾಗಿರುವ ಪ್ಯಾನ್ ಇಂಡಿಯಾ ಚಿತ್ರ ‘ವಿಕ್ರಾಂತ್ ರೋಣ’ದ ನೇರ ಪ್ರಸಾರ ಹಕ್ಕುಗಳಿಗಾಗಿ ಎರಡು ಒಟಿಟಿ ಸಂಸ್ಥೆಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ ಎನ್ನಲಾಗಿದೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಸೇರಿ ಇಂಗ್ಲಿಷ್ ಭಾಷೆಯಲ್ಲೂ ನೇರವಾಗಿ ಒಟಿಟಿಯಲ್ಲಿ ಪ್ರಸಾರ ಮಾಡಲು ಓಟಿಟಿ ಆಫರ್‌ನೀಡಿದೆ. ಆದರೆ, ಚಿತ್ರತಂಡ ಇನ್ನೂ ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಗಾಂಧಿನಗರದಲ್ಲಿ ಚಾಲ್ತಿಯಲ್ಲಿರುವ ವದಂತಿಯ ಪ್ರಕಾರ ಒಂದು ಓಟಿಟಿ ವಿಕ್ರಾಂತ್ ರೋಣ ಚಿತ್ರಕ್ಕೆ ಬರೋಬ್ಬರಿ ನೂರು ಕೋಟಿ ರುಪಾಯಿ ನೀಡಲು ಮುಂದೆ ಬಂದಿದೆ ಎಂದು ಹೇಳಲಾಗುತ್ತಿದೆ.
ಇದನ್ನು ಓದಿ : ತಮಿಳುನಾಡು ಅಧಿವೇಶನದಲ್ಲೂ `ರಾಜರತ್ನ’ನಿಗೆ ಗೌರವ: ಮನಸ್ಸು ಏಕೋ ಭಾರ.. ಅಪ್ಪು ನೆನೆದು ನಾಯಕರು ಭಾವುಕ!
ಓಟಿಟಿಯಲ್ಲೇ ಬಿಡುಗಡೆಯಾಗುತ್ತಾ ವಿಕ್ರಾಂತ್ ರೋಣ?
ದಕ್ಷಿಣ ಭಾರತೀಯ ಚಿತ್ರವೊಂದಕ್ಕೆ ಬಂದಿರುವ ಅತೀ ಹೆಚ್ಚಿನ ಆಫರ್ ಇದಾಗಿದೆ. ಈ ಕುರಿತು ಚಿತ್ರದ ನಿರ್ಮಾಪಕ ಜಾಕ್ ಮಂಜು ಯಾವುದೇ ನಿರ್ಧಾರ ಮಾಡಿಲ್ಲವಂತೆ. ವಿಕ್ರಾಂತ್ ರೋಣ’ ಚಿತ್ರವನ್ನು ಚಿತ್ರಮಂದಿರದಲ್ಲೇ ಬಿಡುಗಡೆ ಮಾಡುವ ಉದ್ದೇಶ ನಮಗೆ ಇದೆ. ಆ ಕಾರಣಕ್ಕೆ ಅದ್ದೂರಿಯಾಗಿ 3ಡಿ ತಂತ್ರಜ್ಞಾನದಲ್ಲಿ ಚಿತ್ರವನ್ನು ನಿರ್ಮಿಸಿದ್ದೇವೆ. ನಟ ಸುದೀಪ್ ಅವರಿಗೆ ಇರುವ ಪ್ಯಾನ್ ಇಂಡಿಯಾ ಫ್ಯಾನ್ ಬೇಸ್ ಬಗ್ಗೆ ಗೊತ್ತಿದೆ.ವೀಕೆಂಡ್ ಕರ್ಫ್ಯೂ ಮತ್ತು ಶೇ.50 ಸೀಟು ಭರ್ತಿ ಆದೇಶ ಜಾರಿಯಾಗಿದ್ದು, ಇದು ಮತ್ತಷ್ಟುದಿನ ಮುಂದುವರಿದವರೆ ಹೇಗೆ ಎನ್ನುವ ಯೋಚನೆ ಕೂಡ ಇದೆ ಎಂದು ಜಾಕ್ ಮಂಜು ಹೇಳಿದ್ದಾರೆ.
ಇದನ್ನು ಓದಿ : Golden Gang ಜೊತೆ ಬಂದ್ರು ಗೋಲ್ಡನ್ ಸ್ಟಾರ್ ಗಣೇಶ್: ಜ.8ರಿಂದ ಜೀ ಕನ್ನಡದಲ್ಲಿ ಪ್ರತಿ ವೀಕೆಂಡ್ ಫುಲ್ ಮಸ್ತಿ!
ಎರಡ್ಮೂರು ವಾರಗಳಲ್ಲಿ ಅಂತಿಮ ನಿರ್ಧಾರ ಎಂದ ಜಾಕ್ ಮಂಜು!
ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ನಡುವೆ ಮತ್ತೆ ಲಾಕ್ಡೌನ್ ಮಾಡುವ ಎಲ್ಲ ಸಾಧ್ಯತೆ ಹೆಚ್ಚಿದೆ. ಈ ವಿಚಾರ ಗಮನದಲ್ಲಿಟ್ಟುಕೊಂಡು ಕಿಚ್ಚ ಸುದೀಪ್ ಅವರ ಜೊತೆ ಮಾತನಾಡಿ ಎರಡ್ಮೂರು ವಾರಗಳ ನಂತರ ಸೂಕ್ತ ನಿರ್ಧಾರಕ್ಕೆ ಬರುತ್ತೇವೆ ಎಂದು ಸಿನಿಮಾದ ನಿರ್ಮಾಪಕರು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ