ಟಾಲಿವುಡ್​ನ ಮೋಸ್ಟ್​ ಎಲಿಜಬಲ್​ ಬ್ಯಾಚುಲರ್ಸ್​​ ಪಟ್ಟಿಯಲ್ಲಿ 'ಬಾಹುಬಲಿ' ಪ್ರಭಾಸ್​ಗೆ ಮೊದಲ ಸ್ಥಾನ..!

Anitha E | news18
Updated:February 1, 2019, 6:02 PM IST
ಟಾಲಿವುಡ್​ನ ಮೋಸ್ಟ್​ ಎಲಿಜಬಲ್​ ಬ್ಯಾಚುಲರ್ಸ್​​ ಪಟ್ಟಿಯಲ್ಲಿ 'ಬಾಹುಬಲಿ' ಪ್ರಭಾಸ್​ಗೆ ಮೊದಲ ಸ್ಥಾನ..!
Anitha E | news18
Updated: February 1, 2019, 6:02 PM IST
ಈಗ ಕೇವಲ ಹುಡುಗಿಯರಿಗೆ ಮಾತ್ರವಲ್ಲದೇ ಹುಡುಗರಿಗೂ ಯಾವಾಗಾ ಮದುವೆ ಆಗುತ್ತೆ ಅನ್ನೋ ಪ್ರಶ್ನೆಗಳು ಎದುರಾಗುತ್ತವೆ. ಅದರಲ್ಲೂ ವಯಸ್ಸು 30 ದಾಟುತ್ತಿದ್ದಂತೆಯೇ ಸಿನಿಮಾದ ನಾಯಕರಿಗೂ ಈ ಪ್ರಶ್ನೆಗಳು ಸಾಮಾನ್ಯವಾಗುತ್ತವೆ. ಟಾಲಿವುಡ್​ನಲ್ಲೂ 30 ದಾಟಿದರೂ ಇನ್ನೂ ವಿವಾಹವಾಗದ ನಾಯಕರು ಸಾಕಷ್ಟು ಮಂದಿ ಇದ್ದಅರೆ.

ಹೌದು, ವಯಸ್ಸು 30ರ ಗಡಿ ದಾಟಿದರೂ ಕೆಲ ನಾಯಕರು ಮದುವೆ ಬಗ್ಗೆ ಚಿಂತಿಸದೇ ಸಿನಿಮಾಗಳಲ್ಲೇ ಮುಳುಗಿ ಹೋಗಿದ್ದಾರೆ. ಇಂತಹವರಲ್ಲಿ ಮೊದಲಿಗರೆಂದರೆ ಬಾಹುಬಲಿ ಖ್ಯಾತಿಯ ಪ್ರಭಾಸ್​. ಇವರು ಯಾವಾಗ, ಯಾರನ್ನ ಮದುವೆಯಾಗಲಿದ್ದಾರೆ ಎಂದು ಅಭಿಮಾನಿಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿದ್ದಾರೆ.

ನಟ ಪ್ರಭಾಸ್​


ಇತ್ತೀಚೆಗಷ್ಟೆ 39 ವಸಂತಕ್ಕೆ ಕಾಲಿಟ್ಟ ಪ್ರಭಾಸ್​ ಇನ್ನೂ ಮದುವೆ ಬಗ್ಗೆ ಚಕಾರ ಎತ್ತುತ್ತಿಲ್ಲ. ನಂತರ ರಾಣಾ ದಗ್ಗುಬಾಟಿಗೆ ಈಗ 35 ವರ್ಷ. ಒಂದರ ಹಿಂದೆ ಒಂದರಂತೆ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಾಣಾ ಸಹ ಮದುವೆಯ ಬಗ್ಗೆ ಮಾತೇ ಆಡುತ್ತಿಲ್ಲ. ಉಳಿದಂತೆ 34 ವರ್ಷದ ನಟ ನಿತಿನ್​ ಸಹ ಇನ್ನೂ ಸಿನಿಮಾ ಮಾಡುವುದರಲ್ಲೇ ವ್ಯಸ್ತವಾಗಿದ್ದಾರೆ. ಈ ಹಿಂದೆ ಶ್ರೀನಿವಾಸ ಕಲ್ಯಾಣ ಸಿನಿಮಾ ಮಾಡುವಾಗ ನಿತಿನ್​ ವಿವಾಹವಾಗುವ ಇಚ್ಛೆ ವ್ಯಕ್ತಪಡಿಸಿದ್ದರು.

ವರುಣ್ ತೇಜ್​


ಉಳಿದಂತೆ ಫಿದಾ ಖ್ಯಾತಿಯ ನಟ ವರುಣ್​ ತೇಜ್​​ ಸಹ 30 ದಾಟಿದ್ದು, ಸದ್ಯದಲ್ಲೇ ವಿವಾಹವಾಗಲಿದ್ದಾರೆ. ಇವರೇ ಅಲ್ಲದೆ ಇನ್ನೂ ಅಲ್ಲು ಸಿರೀಶ್, ರಾಮ್​​ ಸೇರಿದಂತೆ ಇನ್ನೂ ಸಾಕಷ್ಟು ಮಂದಿ ಸಿನಿಮಾಗಳಿಂದಾಗಿ ವಿವಾಹವಾಗದೆ ಹಾಗೇ ಉಳಿದಿದ್ದಾರೆ. 

First published:February 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ