• Home
  • »
  • News
  • »
  • entertainment
  • »
  • KGF2 Release date : ಜುಲೈಗೆ ರಾಕಿಭಾಯ್​ ಹವಾ ಶುರು: ರಿವೀಲ್​ ಆಯ್ತು ಕೆಜಿಎಫ್​2 ರಿಲೀಸ್​ ಡೇಟ್​

KGF2 Release date : ಜುಲೈಗೆ ರಾಕಿಭಾಯ್​ ಹವಾ ಶುರು: ರಿವೀಲ್​ ಆಯ್ತು ಕೆಜಿಎಫ್​2 ರಿಲೀಸ್​ ಡೇಟ್​

ಇನ್ನೂ ಯಶ್ ಹುಟ್ಟು ಹಬ್ಬಕ್ಕೆ ‘ಕೆಜಿಎಫ್ 2’ ಚಿತ್ರದ ಟೀಸರ್ ಬಿಡುಗಡೆ ಮಾಡುವುದಾಗಿ ಬಿಗ್ ಸರ್ಪ್ರೈಸ್ ಕೊಟ್ಟಿರುವ ಚಿತ್ರತಂಡ, ಶೂಟಿಂಗ್ ಕ್ಲೈಮ್ಯಾಕ್ಸ್ ಹಂತ ತಲುಪಿರುವುದನ್ನು ಖುಷಿಯಾಗಿ ಹೇಳಿಕೊಂಡಿದೆ.

ಇನ್ನೂ ಯಶ್ ಹುಟ್ಟು ಹಬ್ಬಕ್ಕೆ ‘ಕೆಜಿಎಫ್ 2’ ಚಿತ್ರದ ಟೀಸರ್ ಬಿಡುಗಡೆ ಮಾಡುವುದಾಗಿ ಬಿಗ್ ಸರ್ಪ್ರೈಸ್ ಕೊಟ್ಟಿರುವ ಚಿತ್ರತಂಡ, ಶೂಟಿಂಗ್ ಕ್ಲೈಮ್ಯಾಕ್ಸ್ ಹಂತ ತಲುಪಿರುವುದನ್ನು ಖುಷಿಯಾಗಿ ಹೇಳಿಕೊಂಡಿದೆ.

ಜುಲೈಗೆ ಸಿನಿಮಾ ಬಿಡುಗಡೆಯಾಗಲಿದೆ. ಈ ಕುರಿತು ಯಶ್​ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತ ಪಡಿಸಿದ್ದಾರೆ. 

  • Share this:

ಕನ್ನಡಿಗರು ಮಾತ್ರವಲ್ಲದೇ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆ ಸಿನಿ ಪ್ರಿಯರು ಕಾತುರದಿಂದ ಕಾದಿರುವ ಚಿತ್ರ ಕೆಜಿಎಫ್​2. ಕೆಜಿಎಫ್​ ಚಾಪ್ಟರ್​ 1 ಗುಂಗಿನಿಂದ ಇನ್ನು ಹೊರ ಬಾರದಿರುವ ಸಿನಿ ಪ್ರೇಕ್ಷಕರು ಯಾವಾಗ ಕೆಜಿಎಫ್​ 2 ಸಿನಿಮಾ ಬಿಡುಗಡೆಯಾಗಲಿದೆ ಎಂದು ಕಾತುರರಾಗಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್, ಟೀಸರ್​ ಕೂಡ ಈ ಕುತೂಹಲವನ್ನು ದುಪ್ಪಟ್ಟುಗೊಳಿಸಿದೆ. ಈ ಕೂತುಹಲಕ್ಕೆಲ್ಲಾ ಇಂದು ಚಿತ್ರ ತಂಡ ಅಂತಿಮ ಹಾಡಿದೆ. ಜುಲೈ 16 ರಂದು ಸಿನಿಮಾ ಬಿಡುಗಡೆಯಾಗಲಿದೆ. ಈ ಕುರಿತು ನಟ ಯಶ್  ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತ ಪಡಿಸಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿಯೂ ಏಕಕಾಲಕ್ಕೆ ಚಿತ್ರ ಬಿಡುಗಡೆಯಾಗಲಿದೆ.ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಚಿತ್ರತಂಡ ಈ ಹಿಂದೆ ಹೇಳಿದಂತೆ ಕಳೆದ ವರ್ಷ 2020ರಲ್ಲಿಯೇ ಚಿತ್ರ ಬಿಡುಗಡಯಾಗಬೇಕಿತ್ತು. ಕೊರೋನಾ ಸೋಂಕಿನ ಜೊತೆ ಕೆಜಿಎಫ್​ 2 ಚಿತ್ರದ ಪ್ರಮುಖ ಪಾತ್ರವಾಗಿರುವ ಅಧೀರ ಪಾತ್ರಧಾರಿ ಸಂಜಯ್​ ದತ್​ ಆರೋಗ್ಯ ಸಮಸ್ಯೆಗೆ ಒಳಗಾಗಿದ್ದು, ಚಿತ್ರದ ಬಿಡುಗಡೆಗೆ ತಡವಾಯಿತು. ಆದರೂ, ಚಿತ್ರದ ಮೇಲೆ ಪ್ರೇಕ್ಷಕರ ನಿರೀಕ್ಷೆ ಮಾತ್ರ ಕಡಿಮೆಯಾಗಿಲ್ಲ. ಇದಕ್ಕೆ ಸಾಕ್ಷಿ ಚಿತ್ರದ ಟೀಸರ್​ ಬರೆದ ದಾಖಲೆ. ಯಶ್​ ಹುಟ್ಟುಹಬ್ಬದಂದು ಬಿಡುಗಡೆಯಾದ ಕೆಜಿಎಫ್​ 2 ಟೀಸರ್​ ಬಿಡುಗಡೆಯಾದ 24 ಗಂಟೆಯೊಳಗೆ 78 ಮಿಲಿಯನ್​ ವೀಕ್ಷಣೆಯಾಗುವ ಮೂಲಕ ದಾಖಲೆಗಳನ್ನು ನಿರ್ಮಿಸಿದೆ.
ಕೆಜಿಎಫ್​ ಚಾಪ್ಟರ್​ 2 ಚಿತ್ರತಂಡ ಟೀಸರ್​ ರಿಲೀಸ್​ ಬಗ್ಗೆ ಪ್ರಕಟಿಸಿದಾಗ ಅಭಿಮಾನಿಗಳು #KGFChapter2TeaserOnJan8 ಎಂದು ಟ್ವಿಟರ್​​ನಲ್ಲಿ ಟ್ರೆಂಡ್​ ಮಾಡಿದ್ದರು. ಈ ಮೂಲಕ ನಿರ್ದೇಶಕ ಪ್ರಾಶಾಂತ್ ನೀಲ್​ ಹಾಗೂ ಚಿತ್ರತಂಡದ ಉತ್ಸಾಹಕ್ಕೆ ಮತ್ತಷ್ಟು ಉತ್ತೇಜನ ನೀಡಿದ್ದರು. ಈಗಲೂ ಸಹ ಅದನ್ನೇ ಮಾಡುತ್ತಿದ್ದಾರೆ ರಾಕಿ ಭಾಯ್​ ಫ್ಯಾನ್ಸ್​. ಈ ಮೂಲಕ ಚಿತ್ರ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿರುವುದಾಗಿ ಸಂದೇಶ ನೀಡಿದ್ದಾರೆ.ಈಗಾಗಲೇ ಕೇಂದ್ರ ಸರ್ಕಾರ ಚಿತ್ರಮಂದಿರಗಳಲ್ಲಿ ಶೇ 50ಕ್ಕಿಂತ ಹೆಚ್ಚಿನ ಆಸನ ಭರ್ತಿಗೆ ಅವಕಾಶ ನೀಡಿದೆ. ಈ ಹಿನ್ನಲೆ ಕೆಜಿಎಫ್​2 ಸಿನಿಮಾ ಚಿತ್ರಮಂದಿರದಲ್ಲಿ ಕೂಡ ದಾಖಲೆ ನಿರ್ಮಿಸಲಿದೆ ಎಂಬ ಲೆಕ್ಕಾಚಾರ ನಡೆಸಲಾಗಿದೆ.

Published by:Seema R
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು