Gehraiyaan Movie: 'ಗೆಹರಾಯಿಯಾಂ' ಚಿತ್ರದ Trailer ರಿಲೀಸ್​ -ಪತ್ನಿ ನೋಡಿ ರಣವೀರ್​ ಹೇಳಿದ್ದೇನು?

Bollywood:" ಬಾಲಿವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ಸ್ ನೀಡುತ್ತಾ ಸಿನಿಮಾಗಳಲ್ಲೇ ನಟ ರಣವೀರ್ ಸಿಂಗ್ ಹಾಗೂ ಪತ್ನಿ, ನಟಿ ದೀಪಿಕಾ ಬಿಜಿಯಾಗಿದ್ದಾರೆ. ಇತ್ತೀಚೆಗೆ ದೀಪಿಕಾ ಮತ್ತು ರಣವೀರ್ ಸಿಂಗ್ '83' ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದರು.

ರಣವೀರ್ ಸಿಂಗ್, ದೀಪಿಕಾ ಪಡುಕೋಣೆ

ರಣವೀರ್ ಸಿಂಗ್, ದೀಪಿಕಾ ಪಡುಕೋಣೆ

  • Share this:
 ದೀಪಿಕಾ ಪಡುಕೋಣೆ,(Deepika Padukone) ಸಿದ್ಧಾಂತ್ ಚತುರ್ವೇದಿ, (Siddhant Chaturvedi) ಅನನ್ಯ ಪಾಂಡೆ ಮತ್ತು ಧೈರ್ಯ ಕರ್ವಾ ಸೇರಿದಂತೆ ಹಲವು ಕಲಾವಿದರಿರುವ ಬಹುನೀರಿಕ್ಷಿತ 'ಗೆಹರಾಯಿಯಾಂ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ನಿರ್ಮಾಪಕ ಶಕುನ್ ಬಾತ್ರಾ ಅವರ ಚಿತ್ರ 'ಗೆಹ್ರಾಯನ್' ಟ್ರೈಲರ್ ಆನ್‌ಲೈನ್‌ನಲ್ಲಿ ಬಿಡುಗಡೆಯಾಗಿದೆ. 'ಗೆಹರಾಯಿಯಾಂ' (Gehraiyaan) ಚಿತ್ರದ ಟ್ರೈಲರ್ ಅನ್ನು ಅಭಿಮಾನಿಗಳು ಮಾತ್ರವಲ್ಲದೇ ಬಾಲಿವುಡ್ ಸೆಲೆಬ್ರಿಟಿಗಳು ಕೂಡ  ಮೆಚ್ಚಿಕೊಂಡಿದ್ದಾರೆ. ಅಲ್ಲದೇ ದೀಪಿಕಾ ಪಡುಕೋಣೆ ಪತಿ ರಣವೀರ್ ಸಿಂಗ್(Ranveer Singh) ದೀಪಿಕಾಳನ್ನು ಹಾಡಿ ಹೊಗಳಿದ್ದಾರೆ.

ಪತ್ನಿಯನ್ನು ಮೆಚ್ಚಿದ ರಣವೀರ್
ಬಾಲಿವುಡ್‌ನ ಸೆನ್ಸೇಶನ್ ಕಪಲ್ಸ್ ಅಂದ್ರೆ ಅದು ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್. ಇಬ್ಬರು ಬಾಲಿವುಡ್ ಅಂಗಳದಲ್ಲಿ ಮಿಂಚುತ್ತಿರುವ ಸೂಪರ್ ಸ್ಟಾರ್ಸ್. ಒಬ್ಬರಿಗೊಬ್ಬರು ವೈಯಕ್ತಿಕ ಬದುಕು, ಸಿನಿಮಾದಲ್ಲಿ ಕೂಡ ಸಪೋರ್ಟ್ ಮಾಡಿಕೊಂಡು ಬರುತ್ತಿದ್ದಾರೆ. ಸದ್ಯ ದೀಪಿಕಾ ಪಡುಕೋಣೆ ಅಭಿನಯದ ''ಗೆಹರಾಯಿಯಾಂ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿನ ದೀಪಿಕಾ ಅಭಿನಯ ನೋಡಿ ಸ್ವತ: ರಣವೀರ್ ಸಿಂಗ್ ಪತ್ನಿಯನ್ನು ಮೆಚ್ಚಿಕೊಂಡಿದ್ದಾರೆ. ರಣವೀರ್ ಸಿಂಗ್ ಇನ್‌ಸ್ಟಾಗ್ರಾಮ್‌ ನಲ್ಲಿ 'ಗೆಹರಾಯಿಯಾಂ' ಟ್ರೈಲರ್‌ ಅನ್ನು ಹಂಚಿಕೊಂಡಿದ್ದು ಪತ್ನಿಯ ಬಗ್ಗೆ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Deepika Padukone Net Worth: ಬರೀ ಸಿನಿಮಾವಲ್ಲ.. ಇಷ್ಟೊಂದು ಕಡೆಯಿಂದ ಡಿಪ್ಪಿಗೆ ಬರುತ್ತೆ ಕೋಟಿ ಕೋಟಿ ಹಣ!

ಮೂಡಿ, ಸೆಕ್ಸಿ ಮತ್ತು ಇಂಟೆನ್ಸ್ ಎಂದ ಪತಿ
'ಗೆಹರಾಯಿಯಾಂ' ಟ್ರೈಲರ್‌ನಲ್ಲಿ ಹೆಂಡತಿಯನ್ನು ನೋಡಿದ ನಂತರ, ಮೂಡಿ, ಸೆಕ್ಸಿ ಮತ್ತು ಇಂಟೆನ್ಸ್ ಅಂತ ಬರೆದುಕೊಂಡಿದ್ದಾರೆ. ಹಾಗೆ@shakunbatra @ಅನನ್ಯಾಪಾಂಡೆ, @ಸಿದ್ಧಾಂತಚತುರ್ವೇದಿ, @ಧೈರ್ಯಕರ್ವಾನಾಸೀರ್ ದಿ ಲೆಜೆಂಡ್ ಸೇರಿ ಎಲ್ಲರನ್ನು ಮೆಚ್ಚಿಕೊಂಡಿದ್ದಾರೆ. ಹೆಂಡತಿಗೆ ನನ್ನ ಬೇಬಿ ಗರ್ಲ್ ಫ್ಯಾಜಿಲಿಯನ್ ಬಕ್ಸ್‌ನಂತೆ ಕಾಣುತ್ತಿದ್ದಾಳೆ @ದೀಪಿಕಾಪಡುಕೋಣೆ ಸೆಕ್ಸಿಯೆಸ್ಟ್ ಆಗಿ ಕಾಣುತ್ತಿದ್ದಾಳೆ ಅಂತ ಇನ್‌ಸ್ಟಾಗ್ರಾಮ್‌ನಲ್ಲಿ 'ಗೆಹರಾಯಿಯಾಂ' ಟ್ರೈಲರ್‌ ಅನ್ನು ಶೇರ್ ಮಾಡಿ ರಣವೀರ್ ಸಿಂಗ್ ದೀಪಿಕಾಳನ್ನು ಹೊಗಳಿದ್ದಾರೆ.






ಅಮೆಜಾನ್​​ ಪ್ರೈಮ್​ನಲ್ಲಿ ತೆರೆ
ಸ್ಟೈಲಿಸ್ಟ್ ಅನೈತಾ ಶ್ರಾಫ್ ಅದಾಜಾನಿಯಾ, ಹುಮಾ ಖುರೇಷಿ, ಅನನ್ಯ ಪಾಂಡೆ, ಸಿದ್ಧಾಂತ್ ಚತುರ್ವೇದಿ, ಧೈರ್ಯ ಕರ್ವಾ ಸೇರಿದಂತೆ ಅನೇಕ ಸ್ನೇಹಿತರು ರಣವೀರ್ ಸಿಂಗ್ ಪೋಸ್ಟ್ ಗೆ ಕಾಮೆಂಟ್ ಮಾಡಿದ್ದಾರೆ. 'ಗೆಹರಾಯಿಯಾಂ' ಚಿತ್ರವನ್ನು ಸಂಕೀರ್ಣ ಆಧುನಿಕ ಸಂಬಂಧಗಳ ಕುರಿತ ಸಿನಿಮಾ ಎಂದು ಬಿಂಬಿಸಲಾಗಿದೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಸಿದ್ಧಾಂತ್ ಚತುರ್ವೇದಿ, ಅನನ್ಯ ಪಾಂಡೆ ಮತ್ತು ಧೈರ್ಯ ಕರ್ವಾ ಪ್ರಮುಖರು ನಟಿಸುತ್ತಿದ್ದಾರೆ. ಆನಂದ್ ಎಲ್. ರಾಯ್ ನಿರ್ದೇಶನದ ಈ ಚಿತ್ರವನ್ನು ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಮತ್ತು ವಯಾಕಾಮ್ 18 ಸ್ಟುಡಿಯೋಸ್ ಮತ್ತು ಬಾತ್ರಾ ಅವರ ಜೌಸ್ಕಾ ಫಿಲ್ಮ್ಸ್ ಸಹಯೋಗದೊಂದಿಗೆ ಜಂಟಿಯಾಗಿ ನಿರ್ಮಿಸಲಾಗಿದೆ. ಈ ಚಿತ್ರವು ಫೆಬ್ರವರಿ 11ರಂದು ಅಮೆಜಾನ್​​ ಪ್ರೈಮ್​ನಲ್ಲಿ ತೆರೆ ಕಾಣಲಿದೆ.

ಬ್ಯಾಕ್ ಟು ಬ್ಯಾಕ್ ಹಿಟ್ಸ್
ಬಾಲಿವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ಸ್ ನೀಡುತ್ತಾ ಸಿನಿಮಾಗಳಲ್ಲೇ ನಟ ರಣವೀರ್ ಸಿಂಗ್ ಹಾಗೂ ಪತ್ನಿ, ನಟಿ ದೀಪಿಕಾ ಬಿಜಿಯಾಗಿದ್ದಾರೆ. ಇತ್ತೀಚೆಗೆ ದೀಪಿಕಾ ಮತ್ತು ರಣವೀರ್ ಸಿಂಗ್ '83' ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದರು. ಇದಲ್ಲದೆ, ಜಾನ್ ಅಬ್ರಹಾಂ ನಟಿಸಿರುವ 'ಪಠಾಣ್' ಸಿನಿಮಾದಲ್ಲೂ ಶಾರುಖ್ ಖಾನ್ ಎದುರು ನಟಿ ಕಾಣಿಸಿಕೊಳ್ಳಲಿದ್ದಾರೆ. ಅದೇ ಸಮಯದಲ್ಲಿ, ರಣವೀರ್ ಸಿಂಗ್, ಕರಣ್ ಜೋಹರ್ ಅವರ ಮುಂಬರುವ ಪ್ರಾಜೆಕ್ಟ್‌ಗಳಾದ 'ರಾಕಿ' ಮತ್ತು 'ರಾಣಿ ಕಿ ಪ್ರೇಮ್ ಕಹಾನಿ' ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: Deepika Padukone: ಮದುವೆಗೂ 4 ವರ್ಷ ಮುನ್ನವೇ ಗುಟ್ಟಾಗಿ ರಿಂಗ್​ ಬದಲಿಸಿಕೊಂಡಿದ್ರಂತೆ ಡಿಪ್ಪಿ- ರಣವೀರ್​!

ದೀಪಿಕಾ ಮತ್ತು ರಣವೀರ್ ಸಿಂಗ್ ಯಾವಾಗಲೂ ಸುದ್ದಿ ಆಗುತ್ತಲೇ ಇರುವ ಜೋಡಿ. ಒಬ್ಬರಿಗೊಬ್ಬರು ಪರಸ್ಪರ ಜೊತೆಯಾಗಿ ಮಾದ್ಯಮಗಳ ಮುಂದೆ ಕಾಣಿಸಿಕೊಳ್ಳುವ ಜೋಡಿ., ಇವರ ಕಾಂಬಿನೇಷನ್‌ನಲ್ಲಿ ಬರುವ ಚಿತ್ರಗಳಿಗೆ ಅಭಿಮಾನಿಗಳು ಕಾಯುತ್ತಾ ಇರುತ್ತಾರೆ. ಸದ್ಯ ದೀಪಿಕಾ ಅಭಿನಯದ 'ಗೆಹರಾಯಿಯಾಂ' ಚಿತ್ರ ಅಮೇಜಾನ್ ಪ್ರೈಮ್‌ನಲ್ಲಿ ಹೇಗೆ ಕಮಾಲ್ ಮಾಡುತ್ತೆ ಎಂಬುದನ್ನು ಕಾದು ನೋಡಬೇಕು.
Published by:vanithasanjevani vanithasanjevani
First published: