Monsoon Raaga New Song: ಮಾನ್ಸೂನ್ ರಾಗದ ಮಧುರಾತಿ ಮಧುರ ಲಿರಿಕಲ್ ವಿಡಿಯೋ ಇಲ್ಲಿದೆ!

ಈ ಲಿರಿಕಲ್ ವೀಡಿಯೋದಲ್ಲಿ ಮೇಕಿಂಗ್ ವೀಡಿಯೋದ ಝಲಕ್ ಕೂಡ ಇದೆ. ನಿರ್ದೇಶಕ ಎಸ್. ರವೀಂದ್ರನಾಥ್ ಒಂದ್ ಒಳ್ಳೆ ಸಿನಿಮಾವನ್ನ ಕೊಟ್ಟಿದ್ದಾರೆ ಅನ್ನೋ ವಿಶ್ವಾಸವನ್ನೂ ಚಿತ್ರದ ಪಾತ್ರಗಳು ಮತ್ತು ಮೇಕಿಂಗ್ ವೀಡಿಯೋ ಈಗಲೇ ಮೂಡಿಸುತ್ತಿವೆ.

ಮಾನ್ಸೂನ್ ರಾಗದ ಮಧುರ ಗೀತೆ ರಿಲೀಸ್

ಮಾನ್ಸೂನ್ ರಾಗದ ಮಧುರ ಗೀತೆ ರಿಲೀಸ್

  • Share this:
    ಮಾನ್ಸೂನ್ ರಾಗ (Monsoon Raaga) ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಚಿತ್ರದ ಒಂದು ಮೆಲೋಡಿಯೆಸ್ (Melodies) ಹಾಡು ಕೂಡ ಈಗ ರಿಲೀಸ್ ಆಗಿದೆ. ಈ ಹಾಡಿನ ವಿಶೇಷತೆಗಳು ನಿಜಕ್ಕೂ ಸಾಕಷ್ಟು ಇವೆ. ಚಿತ್ರ ತಂಡ ಸದ್ಯ ಈ ಹಾಡಿನ ಲಿರಿಕಲ್ (Lyrical Video Release) ವಿಡಿಯೋ ಮಾತ್ರ ಬಿಟ್ಟಿದೆ. ಆದರೂ ಈ ಗೀತೆ ಪ್ರೇಕ್ಷಕರ ಹೃದಯ ಗೆಲ್ಲೋ ಎಲ್ಲ ಲಕ್ಷಣಗಳನ್ನು ಹೊಂದಿದೆ. ಅಷ್ಟು ಮಧುರಾತಿ ಮಧುರವಾಗಿಯೇ ಮೂಡಿ ಬಂದಿರೋ ಈ ಗೀತೆಯನ್ನ ಪ್ರೇಮ ಕವಿ ಕೆ.ಕಲ್ಯಾಣ್ (K.Kalyan) ಬರೆದಿದ್ದಾರೆ. ಸಂಗೀತ ನಿರ್ದೇಶಕ ಅನೂಪ್ ಸಿಳೀನ್ ಸಂಗೀತದಲ್ಲಿ ಹೊಸ ಮ್ಯಾಜಿಕ್ ಮೂಡಿ ಬಂದಿದೆ. ಇದನ್ನ ಹಾಡಿದ ಆ ಗಾಯಕನ ಕಂಠಸಿರಿ ಇಡೀ ಗೀತೆಗೆ ಹೊಸ ಭಾವವನ್ನೆ ತಂದುಕೊಟ್ಟಿದೆ.

    ಕನ್ನಡದ ಮಾನ್ಸೂನ್ ರಾಗ ಚಿತ್ರ ವಿಶೇಷವಾಗಿಯೇ ಗಮನ ಸೆಳೆಯುತ್ತಿದೆ. ಚಿತ್ರಕ್ಕೆ ಕೊಟ್ಟಿರೋ ಟ್ರೀಟ್​ಮೆಂಟ್, ಚಿತ್ರದ ಟಿಂಟ್, ಪಾತ್ರಗಳ ಪೋಷಣೆ ಎಲ್ಲವೂ ಇಲ್ಲಿ ವಿಶೇಷವಾಗಿಯೇ ಕಾಣುತ್ತವೆ. ಚಿತ್ರ ಪ್ರೇಮಿಗಳ ಹೃದಯದಲ್ಲಿ ಡಾಲಿ ಧನಂಜಯ್ ವಿಭಿನ್ನ ರೂಪದಲ್ಲಿಯೇ ಕಾಣಿಸಿಕೊಂಡು ಥ್ರಿಲ್ ಮೂಡಿಸುತ್ತಿದ್ದು ಬುಲ್ ಬುಲ್ ರಚಿತಾ ರಾಮ್ ವಿಶೇಷ ಪಾತ್ರದ ಮೂಲಕ ಬೇರೆ ರೀತಿಯಲ್ಲಿಯೇ ಪ್ರೇಕ್ಷಕರ ದಿಲ್ ಕದಿಯೋದು ಭರವಸೆ ಮೂಡಿಸಿದ್ದಾರೆ.



    ಮಾನ್ಸೂನ್ ರಾಗದಲ್ಲಿ ಕೆ.ಕಲ್ಯಾಣ್ ಬರೆದರು ಮಧುರ ಗೀತೆ
    ಇದರ ಮಧ್ಯೆ ಈಗ ಚಿತ್ರದ ಹಾಡೊಂದು ಹೊರಬಿದ್ದಿದೆ. ಸಂಗೀತ ಪ್ರೇಮಿಗಳಿಗೆ ಅತಿ ಹೆಚ್ಚು ಇಷ್ಟ ಆಗೋ ಹಾಗೇನೆ ಈ ಒಂದು ಹಾಡು ಇದೆ. ಅದಕ್ಕೂ ಹೆಚ್ಚಾಗಿ ಈ ಹಾಡನ್ನ ಅತೀ ಅದ್ಭುತ ಅನಿಸೋ ಪದಗಳಿಂದಲೇ ಕೆ.ಕಲ್ಯಾಣ್ ಮಳೆ ವರ್ಣಿಸಿ ಬರೆದುಕೊಟ್ಟಿದ್ದಾರೆ.
    ಹಾಗೆ ಬರೆದ ಈ ಹಾಡಿನ ಪಲ್ಲವಿ ತುಂಬಾ ಚೆನ್ನಾಗಿಯೇ ಇದೆ. ಮೇಘರಾಜನ ರಾಗ ಹನಿಗಳಾದಂತೆ, ಹೃಯದೊಳಗೆ ತೇರನೆಳೆದು ಪುಟಿಯಿತು ಕವಿತೆ ಅಂತಲೇ ಸಾಗೋ ಈ ಹಾಡು ಮಳೆ ಬಗೆಗಿನ ಇಲ್ಲಿವರೆಗಿನ ಕಲ್ಪನೆಗೆ ವಿಶೇಷ ಭಾವನೆಯನ್ನೆ ಮೂಡಿಸುತ್ತದೆ.

    ಮೇಘರಾಜನ ಹಾಡಿಗೆ ಅನೂಪ್ ಸಿಳೀನ್ ಸಂಗೀತದ ಸ್ಪರ್ಶ
    ಇದಕ್ಕೆ ಪೂರಕ ಅನ್ನೋ ಹಾಗೆ ಮಾನ್ಯೂನ್ ರಾಗ ಚಿತ್ರದ ಹಾಡುಗಳಿಗೆ ಅನೂಪ್ ಸಿಳೀನ್ ವಿಶೇಷವಾಗಿಯೇ ಸಂಗೀತ ಕೊಟ್ಟಂತಿದೆ. ಇಲ್ಲಿವರೆಗಿನ ಅವರ ಕೆಲಸವನ್ನ ಗಮನಸಿದರೇ ಅಲ್ಲಿ ರೆಟ್ರೋ ಟಚ್ ಇತ್ತು. ಇಲ್ಲೂ ಸಂಗೀತದ ಲೈವ್ ಇನ್​ಸ್ಟ್ರೂಮೆಂಟ್​ಗಳನ್ನೆ ಬಳಸಿದ್ದಾರೆ. ಅದರಲ್ಲೂ ವಯಲೀನ್ ಇಡೀ ಹಾಡಿಗೆ ಬೇರೆಯದ್ದೇ ಫೀಲ್ ಕೊಟ್ಟಿದೆ. ಇದಕ್ಕೆ ಗಾಯಕ ಅರವಿಂದ್ ವೇಣುಗೋಪಾಲ್ ಕಂಠಸಿರಿ ಮಧುರ ಟಚ್ ಕೊಟ್ಟಿದೆ.

    ಮಧುರ ಗೀತೆಯ ಲಿರಿಕಲ್ ವೀಡಿಯೋ ಮಾತ್ರ ರಿಲೀಸ್
    ಈ ಲಿರಿಕಲ್ ವೀಡಿಯೋದಲ್ಲಿ ಮೇಕಿಂಗ್ ವೀಡಿಯೋದ ಝಲಕ್ ಕೂಡ ಇದೆ. ನಿರ್ದೇಶಕ ಎಸ್. ರವೀಂದ್ರನಾಥ್ ಒಂದ್ ಒಳ್ಳೆ ಸಿನಿಮಾವನ್ನ ಕೊಟ್ಟಿದ್ದಾರೆ ಅನ್ನೋ ವಿಶ್ವಾಸವನ್ನೂ ಚಿತ್ರದ ಪಾತ್ರಗಳು ಮತ್ತು ಮೇಕಿಂಗ್ ವೀಡಿಯೋ ಈಗಲೇ ಮೂಡಿಸುತ್ತಿವೆ.

    ಮಾನ್ಸೂನ್ ರಾಗ್ ಚಿತ್ರ ಇದೇ 16 ಕ್ಕೆ ರಿಲೀಸ್
    ಚಿತ್ರದ ಒಂದಷ್ಟು ಕೆಲಸ ಬಾಕಿ ಇದ್ದವು.ಈ ಹಿನ್ನೆಲೆಯಲ್ಲಿಯೇ ಯುವ ನಿರ್ಮಾಪಕ ವಿಕ್ಯಾತ್ ಚಿತ್ರದ ರಿಲೀಸ್ ದಿನವನ್ನ ಮುಂದೂಡಿದರು. ಆದರೆ ಈಗ ಇದೇ ತಿಂಗಳು ರಿಲೀಸ್ ಮಾಡೋಕೆ ಪ್ಲಾನ್ ಮಾಡಿದ್ದಾರೆ. ಸೆಪ್ಟೆಂಬರ್ 16 ರಂದು ಚಿತ್ರ ರಿಲೀಸ್ ಆಗುತ್ತಿದೆ. ಇಷ್ಟು ಬಿಟ್ಟರೇ ಚಿತ್ರ ಹೇಗಿರಬಹುದು ಅನ್ನೋ ಕುತೂಹಲವನ್ನ ಚಿತ್ರದ ಹಾಡುಗಳ ಮೂಲಕ ಟ್ರೈಲರ್ ಮೂಲಕ ಹೆಚ್ಚಿಸುತ್ತಲೇ ಇದೆ.
    First published: