VIDEO: ಸದ್ದಿಲ್ಲದೇ ಶುರುವಾಗಿದೆ ಇಬ್ಬರು ಸಲಿಂಗಿಗಳ ಚಿತ್ರ..!

ಈ ಹಿಂದೆ ಮಂಜು ಕಪೂರ್ ಅವರ ಕಸ್ಟಡಿ ಕೃತಿಯನ್ನು ಏಕ್ತಾ ಕಪೂರ್ ಎ ಹೈ ಮೊಹಬ್ಬತೇ ಹೆಸರಿನಲ್ಲಿ ತೆರೆಗೆ ತಂದಿದ್ದರು. ಇದೀಗ ಮತ್ತೊಮ್ಮೆ ವಿಭಿನ್ನ ಕಥೆಯನ್ನು ಪ್ರೇಕ್ಷಕರ ಮುಂದಿಡಲು ಮುಂದಾಗಿದ್ದಾರೆ.

news18-kannada
Updated:January 17, 2020, 7:51 AM IST
VIDEO: ಸದ್ದಿಲ್ಲದೇ ಶುರುವಾಗಿದೆ ಇಬ್ಬರು ಸಲಿಂಗಿಗಳ ಚಿತ್ರ..!
A-married-Woman
  • Share this:
ಖ್ಯಾತ ಕಾದಂಬರಿ 'ಎ ಮ್ಯಾರೀಡ್ ವುಮನ್' ಆಧರಿಸಿ ಬಾಲಿವುಡ್​ನಲ್ಲೊಂದು ವೆಬ್​ ಸಿರೀಸ್ ತಯಾರಾಗುತ್ತಿದೆ. 1992 ರ ಕೋಮುಗಲಭೆಯೊಂದಿಗೆ ಶುರುವಾಗುವ ಈ ಕಥೆಯಲ್ಲಿ ಇಬ್ಬರು ಸಲಿಂಗಿಗಳ ಪ್ರೇಮಕಥೆ ಇರಲಿದೆ.

ತಮ್ಮ ಹೊಸ ವೆಬ್​ ಸಿರೀಸ್ ಬಗ್ಗೆ ನಿರ್ಮಾಪಕಿ ಏಕ್ತಾ ಕಪೂರ್ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಈ ಚಿತ್ರದಲ್ಲಿ ಸಲಿಂಗಿ ಜೋಡಿಯಾಗಿ ರಿಧಿ ಧೋಗ್ರಾ ಹಾಗೂ ಮೋನಿಕಾ ಧೋಗ್ರಾ ಅವರು ನಟಿಸುತ್ತಿದ್ದಾರೆ ಎಂದು ತಿಳಿಸಲಾಗಿದೆ.

ಧಾರ್ಮಿಕ, ಲೈಂಗಿಕ ಮತ್ತು ಸಾಮಾಜಿಕ ಗಡಿಗಳನ್ನು ದಾಟಿನಿಂತ ಎರಡು ಸುಂದರ ಆತ್ಮಗಳು ಪರಸ್ಪರ ಒಂದಾಗುವ ಕಥೆಯೂ ಎ ಮ್ಯಾರೀಡ್ ವುಮನ್​ನಲ್ಲಿರಲಿದ್ದು, ವಿವಾಹಿತೆಯೊಬ್ಬಳು ತನಗಿಂತ ಕಿರಿಯ ವಯಸ್ಸಿನ ಯುವತಿಯೊಂದಿಗೆ ಸಂಬಂಧದ ವಿವಿಧ ಮಜಲುಗಳನ್ನು ಈ ವೆಬ್​ ಸಿರೀಸ್ ತೆರೆದಿಡಲಿದೆ ಎಂದು ಏಕ್ತಾ ಕಪೂರ್ ತಿಳಿಸಿದ್ದಾರೆ.

ಕಾದಂಬರಿಕಾರ್ತಿ ಮಂಜು ಕಪೂರ್ ಅವರ 'ಎ ಮ್ಯಾರೀಡ್ ವುಮನ್' ಪುಸ್ತಕವು 1992ರಲ್ಲಿ ಬಾಬ್ರಿ ಮಸೀದಿ ಧ್ವಂಸ ಸಂದರ್ಭದಲ್ಲಿ ದೇಶಾದ್ಯಂತ ಕಾಣಿಸಿಕೊಂಡ ಕೋಮುಗಲಭೆಯೊಂದಿಗಿನ ಪ್ರೇಮ ಕಥೆ ಹೊಂದಿದೆ. ಅದರಲ್ಲಿ ಬರುವ ಸಲಿಂಗಿಗಳ ಕಹಾನಿಯನ್ನು ಚಿತ್ರವಾಗಿಸಲು ಏಕ್ತಾ ಕಪೂರ್ ಮುಂದಾಗಿದ್ದಾರೆ.
ಈ ಹಿಂದೆ ಮಂಜು ಕಪೂರ್ ಅವರ ಕಸ್ಟಡಿ ಕೃತಿಯನ್ನು ಏಕ್ತಾ ಕಪೂರ್ 'ಎ ಹೈ ಮೊಹಬ್ಬತೇ' ಹೆಸರಿನಲ್ಲಿ ತೆರೆಗೆ ತಂದಿದ್ದರು. ಇದೀಗ ಮತ್ತೊಮ್ಮೆ ವಿಭಿನ್ನ ಕಥೆಯನ್ನು ಪ್ರೇಕ್ಷಕರ ಮುಂದಿಡಲು ಮುಂದಾಗಿದ್ದಾರೆ.


ಇದನ್ನೂ ಓದಿ: ರಶ್ಮಿಕಾ ಕುಟುಂಬ ಇಷ್ಟೊಂದು ದೊಡ್ಡ ಶ್ರೀಮಂತರಾ? ನಟಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೆ?
First published:January 17, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ