Money Heist Season: ಮನಿ ಹೈಸ್ಟ್ ಮುಗಿಯಿತೇ..? 6ನೇ ಸರಣಿ ಬರಲಿದೆಯೇ..? ಇಲ್ಲಿದೆ ನೋಡಿ ವಿವರ..

Money Heist Season: ಮನಿ ಹೈಸ್ಟ್ ಸ್ಪಿನ್ ಅಫ್ ಟಿವಿ ಶೋ ಬರ್ಲಿನ್ ಪಾತ್ರದ ಸುತ್ತ ಕೇಂದ್ರಿಕೃತವಾಗಿದ್ದು, 2023ರಲ್ಲಿ ನೆಟ್‍ಫ್ಲಿಕ್ಸ್‌ನಲ್ಲಿ ಹಿಟ್ ಆಗುವ ನಿರೀಕ್ಷೆ ಇದೆ. ಅದರ ಕೊರಿಯನ್ ರಿಮೇಕನ್ನು ಕೂಡ ಮಾಡಲಾಗುತ್ತಿದ್ದು, ಸ್ಕ್ವಿಡ್ ಗೆಮ್ ನಟ ಪಾರ್ಕ್ ಹೆ ಸೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮನಿ ಹೈಸ್ಟ್ ಶೋನ ದೃಶ್ಯ

ಮನಿ ಹೈಸ್ಟ್ ಶೋನ ದೃಶ್ಯ

  • Share this:

ಮನಿ ಹೈಸ್ಟ್ ಸೀಸನ್ 5ರ (Money Heist Season)ಎರಡನೇ ಭಾಗವು 2021ರ ಡಿಸೆಂಬರ್ (December)3 ರಂದು , ನೆಟ್‍ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿದ್ದು, ಅದಕ್ಕಾಗಿ ವಿಶ್ವದಾದ್ಯಂತ ಉತ್ಸಾಹದಿಂದ ಕಾಯುತ್ತಿದ್ದ ಅಭಿಮಾನಿಗಳ(fans)  ಕುತೂಹಲವು ಅಂತಿಮವಾಗಿ ಕೊನೆಗೊಳ್ಳಲಿದೆ. ಈ ಎರಡನೇ ಭಾಗದಲ್ಲಿ(2nd part) ಅಂತಿಮವಾಗಿ ದರೋಡೆ ಕೊನೆಗೊಳ್ಳುತ್ತದೆ ಮತ್ತು ದರೋಡೆಯಲ್ಲಿ ಪ್ರೊಫೆಸರ್ (Professor )ಮತ್ತು ಅವರ ಗ್ಯಾಂಗ್ ಯಶಸ್ವಿಯಾಗುತ್ತಾರೆಯೇ ಅಥವಾ ಪೋಲಿಸ್ ಪಡೆಯಿಂದ ಸೊಲಿಸಲ್ಪಡುತ್ತಾರೆಯೇ ಎಂಬ ಅಭಿಮಾನಿಗಳ ಕುತೂಹಲಕ್ಕೂ (Conclusion) ತೆರೆ ಎಳೆದಂತಾಗುತ್ತದೆ.


ಮನಿ ಹೈಸ್ಟ್ ಅಥವಾ ಲಾ ಕಾಸಾ ಡೀ ಪೆಪೆಲ್ , ಒಂದು ಸ್ಪಾನಿಷ್ ಕ್ರೈಂ ಡ್ರಾಮಾ ಸರಣಿಯಾಗಿದ್ದು, ರಾಯಲ್ ಮಿಂಟ್ ಆಫ್ ಸ್ಪೇನ್‍ನಲ್ಲಿ ಮತ್ತು ಬ್ಯಾಂಕ್ ಆಫ್ ಸ್ಪೇನ್‍ನಲ್ಲಿ ಪ್ರೊಫೆಸರ್ ಒಬ್ಬರು ತಂಡವೊಂದನ್ನು ರಚಿಸಿ, 2 ಅತ್ಯಂತ ಯೋಜಿತ ದರೋಡೆಗಳನ್ನು ಮಾಡುವ ಕಥೆ ಹೊಂದಿದೆ. ಮೈನಿ ಹೈಸ್ಟ್ ಸರಣಿಗಳು ಭಾರತ ಮಾತ್ರವಲ್ಲ ಪ್ರಪಂಚದಾದ್ಯಂತ ವೀಕ್ಷಕರ ಮನಸ್ಸನ್ನು ಗೆದ್ದಿದ್ದವು.


ಇದನ್ನೂ ಓದಿ: Money Heist: ಮನಿ ಹೈಸ್ಟ್​ ಸೀಜನ್​ 5; ಈ ಪಾತ್ರ ಸಾಯಲಿ ಎಂದು ಭಯಸುತ್ತಿರುವ ಪ್ರೇಕ್ಷಕರು

ಮನಿ ಹೈಸ್ಟ್‌ನ 6ನೇ ಸರಣಿ ಬರಲಿದೆಯೇ?
2021ರ ಡಿಸೆಂಬರ್ 3ರಂದು ಮನಿ ಹೈಸ್ಟ್‌ನ 5 ಸರಣಿಯ ಎರಡನೇ ಭಾಗವು ಪ್ರಸಾರ ಆಗುತ್ತಿರುವುದರಿಂದ, ಮನಿ ಹೈಸ್ಟ್ ಮುಗಿಯುತ್ತದೆಯೇ ಅಥವಾ ಅದರ 6ನೇ ಸರಣಿ ಕೂಡ ಬರುತ್ತದೆಯೇ ಅಥವಾ ಇಲ್ಲವೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಆದರೆ, ಮನಿ ಹೈಸ್ಟ್ ಅಭಿಮಾನಿಗಳಿಗೊಂದು ಬೇಸರ ತರಿಸುವ ಸುದ್ದಿ ಇದೆ, ಅದೇನೆಂದರೆ ಈ ಸರಣಿ 6ನೇ ಸರಣಿಗೆ ಮುಂದುವರೆಯುವುದಿಲ್ಲ. ಮನಿ ಹೈಸ್ಟ್ 5ನೇ ಸರಣಿಯ ಎರಡನೇ ಭಾಗದ ಟ್ರೈಲರ್ ಮೂಲಕ, ಇದು ಅಂತಿಮ ಸೀಸನ್ ಎಂಬುದನ್ನು ಅದರ ತಯಾರಕರು ಸ್ಪಷ್ಟಗೊಳಿಸಿದ್ದಾರೆ.


ಮನಿ ಹೈಸ್ಟ್ ಮುಗಿಯಿತೇ?
ಮನಿ ಹೈಸ್ಟ್ 5ನೇ ಸರಣಿಯ ಎರಡನೇ ಭಾಗದ ಪ್ರಸಾರದ ನಂತರ ಅದು ಅಲ್ಲಿಗೆ ಅಂತ್ಯವಾಗುತ್ತದೆ ಅನ್ನುವುದು ನಿಜವಾದರೂ, ವೀಕ್ಷಕರು ನಿರಾಶರಾಗಬೇಕಿಲ್ಲ. ಏಕೆಂದರೆ, ಅದರ ತಯಾರಕರು ಶೀಘ್ರದಲ್ಲೇ, ನೆಟ್‍ಫ್ಲಿಕ್ಸ್‌ನಲ್ಲಿ ಒಂದು ಸ್ಪಿನ್ ಆಫ್ ಸರಣಿಯನ್ನು ತರಲಿದ್ದು, ಅದು ಶೋನಲ್ಲಿ ಪ್ರೊಫೆಸರ್ ಸಹೋದರನ ಪಾತ್ರ ನಿರ್ವಹಿಸುತ್ತಿದ್ದ ಬರ್ಲಿನ್ / ಆ್ಯಂಡ್ರೆಸ್ ಡಿ ಫೋನೊಲೋಸಾ ಸುತ್ತ ಸುತ್ತಲಿರುವ ಕಥೆಯನ್ನು ಹೊಂದಿರಲಿದೆ.


ಮನಿ ಹೈಸ್ಟ್ ಸ್ಪಿನ್ ಅಫ್ ಟಿವಿ ಶೋ ಬರ್ಲಿನ್ ಪಾತ್ರದ ಸುತ್ತ ಕೇಂದ್ರಿಕೃತವಾಗಿದ್ದು, 2023ರಲ್ಲಿ ನೆಟ್‍ಫ್ಲಿಕ್ಸ್‌ನಲ್ಲಿ ಹಿಟ್ ಆಗುವ ನಿರೀಕ್ಷೆ ಇದೆ. ಅದರ ಕೊರಿಯನ್ ರಿಮೇಕನ್ನು ಕೂಡ ಮಾಡಲಾಗುತ್ತಿದ್ದು, ಸ್ಕ್ವಿಡ್ ಗೆಮ್ ನಟ ಪಾರ್ಕ್ ಹೆ ಸೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


ಮನಿ ಹೈಸ್ಟ್ 5 ನೇ ಸರಣಿಯ ಭಾಗ 1 ಸಸ್ಪೆನ್ಸ್ ಮೂಲಕ ಮುಕ್ತಾಯವಾಗಿತ್ತು. ಅಂದರೆ, ಟೋಕಿಯೊ ಪಾತ್ರ ಸತ್ತಿದೆಯೇ ಮತ್ತು ಅದು ಹೌದಾಗಿದ್ದಲ್ಲಿ, ಎರಡನೇ ಭಾಗವನ್ನು ಯಾರು ನಿರೂಪಿಸಲಿದ್ದಾರೆ ಎಂಬ ಕುತೂಹಲ ವೀಕ್ಷಕರದ್ದು. ಮನಿ ಹೈಸ್ಟ್ 5 ನೇ ಸರಣಿಯ ಭಾಗ 2ನೇ ಭಾಗ ಬಿಡುಗಡೆ ಆಗುತ್ತಲೇ ತಮ್ಮ ಮೆಚ್ಚಿನ ವೆಬ್ ಸರಣಿಯ ಕುರಿತ ವೀಕ್ಷಕರ ಪ್ರತಿಯೊಂದು ಪ್ರಶ್ನೆಗಳಿಗೂ ಉತ್ತರ ಸಿಗಲಿದೆ.


ವಿಶ್ವಕ್ಕೇ ನಂ 1 ಸರಣಿ
ಸೋತವರೇ ಸೇರಿಕೊಂಡು ಮಾಡಿದ ಪ್ರಯತ್ನ ಮನಿ ಹೈಸ್ಟ್ ವಿಶ್ವಕ್ಕೇ ನಂ 1 ಆಗಿದ್ದು ನಿಜಕ್ಕೂ ರೋಚಕ, ಕನಿಷ್ಟ ನಿರೀಕ್ಷೆ ಇಟ್ಟು ಮಾಡಿದ್ದ ಧಾರಾವಾಹಿಯೊಂದು ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಪಡೆದಿದೆ. ಅದೇ 'ಮನಿ ಹೈಸ್ಟ್'. 2017 ಸ್ಪ್ಯಾನಿಷ್ ಭಾಷೆಯಲ್ಲಿ ತಯಾರಾದ 'ಲಾ ಕಾಸಾ ಡಿ ಪ್ಯಾಪೆಲ್' (ಇಂಗ್ಲಿಷ್‌ ನಲ್ಲಿ ಮನಿ ಹೈಸ್ಟ್) ಮೊದಲಿಗೆ ಆಂಟೆನಾ 3 ಎಂಬ ಚಾನೆಲ್‌ನಲ್ಲಿ ಧಾರಾವಾಹಿಯಾಗಿ ಪ್ರಸಾರವಾಯಿತು.ಮನಿ ಹೈಸ್ಟ್ ಅನ್ನು ನೆಟ್‌ಫ್ಲಿಕ್ಸ್‌ ಖರೀದಿ ಮಾಡಿತು.


ಇದನ್ನೂ ಓದಿ: Money Heist season 5: ಮನಿ ಹೈಸ್ಟ್ ಸೀಸನ್​ 5 ವೀಕ್ಷಿಸಲೆಂದು ಉದ್ಯೋಗಿಗಳಿಗೆ ರಜೆ ನೀಡಿದ ಕಂಪನಿ!

ಮೊದಲ ಪಾರ್ಟ್‌ ನ 13 ಎಪಿಸೋಡ್‌ಗಳು ನೆಟ್‌ಫ್ಲಿಕ್ಸ್‌ ಗೆ ಅಪ್‌ಲೋಡ್ ಆಗಿ ಕೆಲವೇ ದಿನಗಳಲ್ಲಿ ಈ ಶೋ ನಂ.1 ಶೋ ಆಗಿಬಿಟ್ಟಿತು. ಖ್ಯಾತ ಅಮೆರಿಕದ ಟಿವಿ ಶೋಗಳನ್ನೂ ಸಹ ಹಿಂದಿಕ್ಕಿತು ನಂ1 ಆಗಿ ಮೆರೆಯಿತು ಮನಿ ಹೈಸ್ಟ್. 5 ಸರಣಿಯ 2ನೇ ಭಾಗದಲ್ಲಿ ಮುಗಿಯುತ್ತಿರುವುದು ಅಭಿಮಾನಿಗಳಲ್ಲಿ ಭಾರಿ ನಿರಾಶೆಗೆ ಕಾರಣವಾಗಿದೆ.


Published by:vanithasanjevani vanithasanjevani
First published: