Money Heist: ಮನಿ ಹೈಸ್ಟ್ ನಿರ್ದೇಶಕ ಹೇಳಿದ್ರು ಪ್ರೊಫೆಸರ್ ಪಾತ್ರಕ್ಕೆ ದಳಪತಿ ವಿಜಯ್ ಬೆಸ್ಟ್!

Money Heist: ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಿರ್ದೇಶಕ ಅಲೆಕ್ಸ್​ ರೊಡ್ರಿಗೊ ಭಾರತದ ಕೆಲ ನಟರನ್ನು ‘ಮನಿ ಹೈಸ್ಟ್‘​ನಲ್ಲಿ ಬರುವ ಯಾವ ಪಾತ್ರಕ್ಕೆ ಸರಿಹೊಂದುತ್ತಾರೆ ಎಂಬುದನ್ನು ಹೇಳಿದ್ದಾರೆ. ತಮಿಳು ನಟ ದಳಪತಿ ವಿಜಯ್​​​ ಅಥವಾ ಆಯುಷ್ಮಾನ್​ ಖುರಾನಾ​ ಅವರನ್ನು ಪ್ರೊಫೆಸರ್​ ಪಾತ್ರಕ್ಕೆ ಅಲೆಕ್ಸ್​ ಆಯ್ಕೆ ಮಾಡಿದ್ದರೆ, ಅಜಿತ್​ ಕುಮಾರ್​ ಅವರು ಬೊಗೋಟಾ ಮತ್ತು ಬಾಲಿವುಡ್​ ನಟ ಶಾರುಖ್​ ಖಾನ್​ ಅವರನ್ನು​ ಬರ್ಲಿನ್​ ಪಾತ್ರಕ್ಕೆ ಸರಿಹೊಂದುತ್ತಾರೆ ಎಂದು ತಿಳಿಸಿದ್ದಾರೆ.

ಮನಿ ಹೈಸ್ಟ್

ಮನಿ ಹೈಸ್ಟ್

  • Share this:
    ಇತ್ತೀಚೆಗೆ ಸ್ಪಾನಿಷ್​​ ಕ್ರೈಮ್​ ಥ್ರಿಲ್ಲರ್ ಜಾನರ್​ನಲ್ಲಿ ​ ‘ಮನಿ ಹೈಸ್ಟ್‘ ಎಂಬ​ ವೆಬ್​ ಸಿರೀಸ್ ಬಿಡುಗಡೆಗೊಂಡು​ ದೊಡ್ಡ ಮಟ್ಟಿನಲ್ಲಿ ಸದ್ದು ಮಾಡಿತ್ತು. ಅನೇಕ ಭಾರತೀಯರಿಗೆ ‘ಮನಿ ಹೈಸ್ಟ್‘​ ಸಿರೀಸ್​ ಇಷ್ಟವಾಯಿತು. ಅದರಲ್ಲಿ ಬರುವ ಪ್ರೊಪೆಸರ್​ ಪಾತ್ರವಂತು ಸಾಕಷ್ಟು ಜನರ ಮನ ಸೆಳೆದಿತ್ತು. ಭಾರತದ ಅನೇಕ ನಟರು ಪ್ರೊಫೆಸರ್​ ಪಾತ್ರವನ್ನು ಇಷ್ಷವಾಗಿ ಆ ಪಾತ್ರವನ್ನು ನಿರ್ವಹಿಸಬೇಕೆಂಬ ಮಾತನ್ನು ಹೇಳಿದ್ದರು. ಇದೀಗ ‘ಮನಿ ಹೈಸ್ಟ್‘​ ನಿರ್ದೇಶಕರೇ ಭಾರತದ ಯಾವ ನಟರಿಗೆ ‘ಮನಿ ಹೈಸ್ಟ್‘​ನಲ್ಲಿ ಬರುವ ಪಾತ್ರಕ್ಕೆ ಸರಿಹೊಂದುತ್ತದೆ ಎಂದು ಹೇಳಿದ್ದಾರೆ.

    ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಿರ್ದೇಶಕ ಅಲೆಕ್ಸ್​ ರೊಡ್ರಿಗೊ ಭಾರತದ ಕೆಲ ನಟರನ್ನು ‘ಮನಿ ಹೈಸ್ಟ್‘​ನಲ್ಲಿ ಬರುವ ಯಾವ ಪಾತ್ರಕ್ಕೆ ಸರಿಹೊಂದುತ್ತಾರೆ ಎಂಬುದನ್ನು ಹೇಳಿದ್ದಾರೆ. ತಮಿಳು ನಟ ದಳಪತಿ ವಿಜಯ್​​​ ಅಥವಾ ಆಯುಷ್ಮಾನ್​ ಖುರಾನಾ​ ಅವರನ್ನು ಪ್ರೊಫೆಸರ್​ ಪಾತ್ರಕ್ಕೆ ಅಲೆಕ್ಸ್​ ಆಯ್ಕೆ ಮಾಡಿದ್ದರೆ, ಅಜಿತ್​ ಕುಮಾರ್​ ಅವರು ಬೊಗೋಟಾ ಮತ್ತು ಬಾಲಿವುಡ್​ ನಟ ಶಾರುಖ್​ ಖಾನ್​ ಅವರನ್ನು​ ಬರ್ಲಿನ್​ ಪಾತ್ರಕ್ಕೆ ಸರಿಹೊಂದುತ್ತಾರೆ ಎಂದು ತಿಳಿಸಿದ್ದಾರೆ.

    ಇನ್ನು ರನ್​ವೀರ್​​ ಸಿಂಗ್​ ಮತ್ತು ಮಹೇಶ್​​ ಬಾಬು ಅವರು ಡೆನ್ವರ್​​ ಮತ್ತು ತಮಾಯೋ ಪಾತ್ರಕ್ಕೆ ಸರಿಕಂಡರೆ, ಸೂರ್ಯ ಅವರನ್ನು ಸೌರೆಜ್​ ಪಾತ್ರದಲ್ಲಿ ಕಾಣಿಸಿಕೊಂಡರೆ ಚೆಂದ ಎಂದು ಹೇಳಿದ್ದಾರೆ.

    ಮನಿ ಹೈಸ್ಟ್​ ವೆಬ್​ ಸಿರೀಸ್​​ ನೆಟ್​​ಫ್ಲಿಕ್ಸ್​ನಲ್ಲಿ ಸಾಕಷ್ಟು ಸೌಂಡ್​ ಮಾಡಿತ್ತು. ಇನ್ನು ಸಾಮಾಜಿಕ ಜಾಲತಾಣದಲ್ಲಿ ಕೂಡ  ಮನಿ ಹೈಸ್ಟ್​ನಲ್ಲಿ ಬರುವ ಪಾತ್ರಗಳಿಗೆ ಭಾರತದ ಯಾವ ನಟರು ಸೂಕ್ತ ಎಂಬುದು ಕೆಳ ದಿನಗಳಿಂದ ಚರ್ಚೆ ಹುಟ್ಟಿಕೊಂಡಿತ್ತು. ಅನೇಕರು ತಮ್ಮ ಇಷ್ಟದ ನಟರು ಪ್ರೊಫೆಸರ್​ ಪಾತ್ರಕ್ಕೆ ಸರಿಹೊಂದುತ್ತಾರೆ ಎಂಬುದನ್ನು ಹೇಳಿದ್ದರು.

    Read Along App: ಮಕ್ಕಳ ಓದುವ ಕೌಶಲ್ಯ ಅಭಿವೃದ್ಧಿ ಪಡಿಸಬೇಕೆ?; ರೀಡ್​ ಅಲಾಂಗ್​​ ಆ್ಯಪ್ ​ಬಳಸಿ!
    First published: