ನಟಿ ಗೌಹರ್ ಖಾನ್ ಯಾರಿಗೆ ತಾನೇ ಗೊತ್ತಿರುವುದಿಲ್ಲ ಹೇಳಿ? ಒಬ್ಬ ರೂಪದರ್ಶಿ (Model) ಮತ್ತು ನಟಿಯಾಗಿದ್ದು (Actress) ಅವರು ಹಿಂದಿ ಚಲನಚಿತ್ರಗಳು (Hindi Movies) ಮತ್ತು ಸೀರಿಯಲ್ ಗಳಲ್ಲಿ (Serials) ಕಾಣಿಸಿಕೊಂಡಿದ್ದಾರೆ. ಬಾಲಿವುಡ್ (Bollywood)ನಲ್ಲಿ ಮೊದಲ ಬಾರಿಗೆ ಎಂಟ್ರಿ ಕೊಟ್ಟಿದ್ದು ಯಶ್ ರಾಜ್ ಫಿಲ್ಮ್ಸ್ ನ (Yash Raj Films) ‘ರಾಕೆಟ್ ಸಿಂಗ್’ ಚಿತ್ರದ ಮೂಲಕ ಎಂದು ಬಹುತೇಕರಿಗೆ ಗೊತ್ತಿದೆ. ನಂತರ ಆಕ್ಷನ್ ಥ್ರಿಲ್ಲರ್ ‘ಗೇಮ್’, ಇಶ್ಕ್ಜಾದೆ, ಸಸ್ಪೆನ್ಸ್ ಥ್ರಿಲ್ಲರ್ ‘ಫೀವರ್’, ರೊಮ್ಯಾಂಟಿಕ್ ಕಾಮಿಡಿ ‘ಬದ್ರಿನಾಥ್ ಕೀ ದುಲ್ಹನಿಯಾ’ ಮತ್ತು ‘ಬೇಗಂ ಜಾನ್’ ನಂತಹ ಅನೇಕ ಚಿತ್ರಗಳಲ್ಲಿ ಗೌಹರ್ ತಮ್ಮ ನಟನೆಯ (Acting) ಮೂಲಕ ಗುರುತಿಸಿಕೊಂಡರು.
ಅಷ್ಟೇ ಅಲ್ಲದೆ, ನಟಿ ಗೌಹರ್ 2013 ರಲ್ಲಿ, ಬಿಗ್ಬಾಸ್ ಸೀಸನ್ 7 ರಲ್ಲಿ ಭಾಗವಹಿಸಿದ್ದರು ಮತ್ತು ಅದರಲ್ಲಿ ವಿಜೇತರಾಗಿ ಸಹ ಹೊರ ಹೊಮ್ಮಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ.
ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾರಂತೆ ಗೌಹರ್-ಜೈದ್ ದಂಪತಿ
ಈ ನಟಿ ಡಿಸೆಂಬರ್ 25, 2020 ರಂದು ಜೈದ್ ದರ್ಬಾರ್ ಅವರನ್ನು ಮದುವೆಯಾಗಿದ್ದು, ಈಗ ಗರ್ಭಿಣಿಯಾಗಿದ್ದಾರಂತೆ ಎಂದು ಹೇಳಲಾಗಿದೆ. ಈ ದಂಪತಿ ಶೀಘ್ರದಲ್ಲಿಯೇ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾರೆ. ಈ ದಂಪತಿ ಈ ಶುಭ ಸುದ್ದಿಯನ್ನು ತಮ್ಮ ಹಿತೈಷಿಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ನಡುವೆ ದಂಪತಿಗಳು ಅನಿಮೇಟೆಡ್ ವೀಡಿಯೋ ಸಹ ಹಂಚಿಕೊಳ್ಳುವ ಮೂಲಕ ತಮ್ಮ ಗರ್ಭಧಾರಣೆಯನ್ನು ಘೋಷಿಸಿದ್ದಾರೆ. ಗೌಹರ್ ಈ ವೀಡಿಯೋಗೆ ಮುದ್ದಾದ ಸಂದೇಶದೊಂದಿಗೆ ಶೀರ್ಷಿಕೆ ಸಹ ನೀಡಿದ್ದಾರೆ.
ದಂಪತಿಗಳ ಎರಡನೇ ವಿವಾಹ ವಾರ್ಷಿಕೋತ್ಸವಕ್ಕೂ ಮುಂಚೆ ಸಿಹಿ ಸುದ್ದಿ
ಈ ದಂಪತಿಗಳ ಎರಡನೇ ವಿವಾಹ ವಾರ್ಷಿಕೋತ್ಸವಕ್ಕೆ ಕೆಲವು ದಿನಗಳ ಮೊದಲು ಈ ಒಳ್ಳೆಯ ಸುದ್ದಿ ಬಂದಿದೆ. ಅವರು ಡಿಸೆಂಬರ್ 25 ರಂದು ತಮ್ಮ ಮೂರನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಲಿದ್ದಾರೆ. ಅವರು ತಮ್ಮ ಬದುಕಿನ ಹೊಸದಾದ ಒಂದು ಹಂತವನ್ನು ಪ್ರವೇಶಿಸುತ್ತಿದ್ದು, ದಂಪತಿಗಳು ಇದರ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ.
ಇದನ್ನೂ ಓದಿ: Alia Bhatt: ಎದೆಹಾಲುಣಿಸುವ ಫೋಟೋ ವೈರಲ್! ತಾಯ್ತನದ ಸಂಪೂರ್ಣ ಖುಷಿಯಲ್ಲಿ ಆಲಿಯಾ ಭಟ್
ಹಿಂದಿನ ವರ್ಷ ನಾನು ತುಂಬಾನೇ ಬ್ಯುಸಿಯಾಗಿದ್ದೆ, ಆ ವರ್ಷದಲ್ಲಿ ನಾನು ಜೈದ್ ನ ಜೊತೆ ಹೆಚ್ಚು ಸಮಯ ಕಳೆಯಲು ಆಗಲಿಲ್ಲ. ನಾನು ನಿರಂತರವಾಗಿ ಶೂಟಿಂಗ್ ಗಳಲ್ಲಿ ಬ್ಯುಸಿಯಾಗಿದ್ದೆ. ಈಗ ನಾವು ನಮ್ಮ ಕುಟುಂಬವನ್ನು ಪ್ರಾರಂಭಿಸುತ್ತಿದ್ದೇವೆ.
ಮುಂದಿನ ಎರಡು ಮೂರು ವರ್ಷಗಳವರೆಗೆ ನಾವು ಯಾವುದೇ ಯೋಜನೆಗಳನ್ನು ನಾವು ಹೊಂದಿಲ್ಲ, ಜೊತೆಗೆ ನನಗೆ ಅತ್ತೆ-ಮಾವ ಅಥವಾ ನನ್ನ ತಾಯಿಯಿಂದ ಯಾವುದೇ ಒತ್ತಡವಿಲ್ಲ. ದೇವರು ಕರುಣಿಸಿದಾಗ ನಾವು ಮಗುವನ್ನು ಪಡೆಯುತ್ತೇವೆ." ಎಂದು ಹೇಳಿದ್ದರು.
ವಿವಾಹಿತ ಮಹಿಳೆ ಮತ್ತು ತಾಯಂದಿರಿಗಾಗಿ ಚಿತ್ರೋದ್ಯಮವು ಬದಲಾಗುತ್ತಿದೆ
"ಈ ಪ್ರವೃತ್ತಿಯು ಭಾರತೀಯ ಮನರಂಜನಾ ಉದ್ಯಮದಲ್ಲಿ ಬಹಳ ತಡವಾಗಿ ಬಂದಿದೆ ಎಂದು ನಾನು ಭಾವಿಸುತ್ತೇನೆ, ಆದರೆ ಹಾಲಿವುಡ್ ನಟಿಯರು ಮಗುವಿಗೆ ಜನ್ಮ ನೀಡಿದ ನಂತರ ಸಹ ಕೆಲಸ ಮಾಡುತ್ತಿದ್ದಾರೆ. ಅವರ 50 ಮತ್ತು 60 ರ ವಯಸ್ಸಿನಲ್ಲಿ ಅಂತಹ ನಟಿಯರಿಗಾಗಿಯೇ ಪ್ರಮುಖ ಪಾತ್ರಗಳನ್ನು ವಿಶೇಷವಾಗಿ ಬರೆಯಲಾಗುತ್ತಿತ್ತು, ಆದ್ದರಿಂದ ಭಾರತದಲ್ಲಿಯೂ ಏಕೆ ಬರೆಯಬಾರದು" ಎಂದು ಅವರು ಪ್ರಶ್ನಿಸಿದ್ದಾರೆ.
ಅಂತೂ ನಟಿಯೊಬ್ಬರು ಗುಡ್ನ್ಯೂಸ್ ಕೊಟ್ಟಿದ್ದು ಅವರ ಅಭಿಮಾನಿಗಳಿಗೆ ಖುಷಿಕೊಟ್ಟಿದ್ದು ಎಲ್ಲರೂ ದಂಪತಿಗೆ ಶುಭ ಹಾರೈಸಿದ್ದಾರೆ. ತಾಯಿಯಾಗುತ್ತಿರುವ ನಿಮಗೆ ಶುಭಾಶಯ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ