Mollywood: ಮೈ ಕೊಡವಿ ಎದ್ದು ನಿಂತ ಮಲಯಾಳಂ ಸಿನಿರಂಗ​​​.. 3 ತಿಂಗಳಲ್ಲಿ 50 ಸಿನಿಮಾಗಳು ರಿಲೀಸ್​!

ದುಲ್ಕರ್ ಸಲ್ಮಾನ್ ಅಭಿನಯದ 'ಕುರುಪ್' ದೊಡ್ಡ ಕಲೆಕ್ಷನ್‌ನೊಂದಿಗೆ ಥಿಯೇಟರ್‌ಗಳಿಗೆ ಮರಳಿ ಜೀವಕಳೆ ತಂದುಕೊಟ್ಟತ್ತು. ಜೊತೆಗೆ ಒಟಿಟಿ ಪ್ಲಾಟ್​ಫಾರ್ಮ್​ಗಳ್ಲಿ ಬಿಡುಗಡೆಯಾದ ಚಲಚಿತ್ರಗಳು ಮಲಯಾಳಂ ಸಿನಿರಂಗಕ್ಕೆ ಆರ್ಥಿಖ ಲಾಭ ತಂದುಕೊಟ್ಟಿದೆ. 'ಮರಕ್ಕರ್' ಮತ್ತು 'ಕುರುಪ್' ನಂತಹ ದೊಡ್ಡ-ಬಜೆಟ್ ಚಲನಚಿತ್ರಗಳ ಜೊತೆಗೆ, 'ಜಾನ್-ಇ-ಮ್ಯಾನ್' ನಂತಹ ಸಣ್ಣ ಬಜೆಟ್​ನ ಚಲನಚಿತ್ರಗಳು ಸಹ ಚಿತ್ರಮಂದಿರಗಳಲ್ಲಿ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದಿವೆ.

ಕುರುಪ್​, ಮಿನ್ನಲ್​ ಮುರುಳಿ ಚಿತ್ರದ ಪೋಸ್ಟರ್​

ಕುರುಪ್​, ಮಿನ್ನಲ್​ ಮುರುಳಿ ಚಿತ್ರದ ಪೋಸ್ಟರ್​

  • Share this:
ಕೊರೋನಾ(Corona) ಇನ್ನೂ ನಮ್ಮನ್ನು ಬಿಟ್ಟು ತೊಲಗಿಲ್ಲ. ನಮ್ಮ ಜೊತೆಯೆ ಇದೆ. ನಮ್ಮ ಜೊತೆಯೆ ಇರುತ್ತೆ. ನಾವು ಮುಂಜಾಗೃತ ಕ್ರಮಗಳನ್ನು ಕೈಗೊಂಡು ಹುಷಾರಾಗಿ ಇರಬೇಕು. ಈ ಕಿಲ್ಲರ್​ ಕೊರೋನಾದಿಂದ ಆದ ನಷ್ಟವನ್ನು ಯಾರು ಭರಿಸುತ್ತಾರೆ. ಎಲ್ಲ ಬ್ಯುಸಿನೆಸ್​ಗಳಿಗೆ ಕೊರೋನಾ ಕಾಟ ಕೊಟ್ಟಿತ್ತು. ಅದರಲ್ಲೂ ಕೇರಳದಲ್ಲಿ ಕೊರೋನಾ ಮರಣ ಮೃದಂಗ ಭಾರಿಸುತ್ತು. ಇದಾದ ಬಳಿಕ ಅಲ್ಲಿ ಈಗ ಕೊರೋನಾ ಪ್ರಕರಣಗಳು ಸದ್ಯಕ್ಕೆ ಕಡಿಮೆಯಾಗಿವೆ. ಕೊರೋನಾ ಹೊಡೆತಕ್ಕೆ ಸಿಲುಕಿ ಇಡೀ ಭಾರತೀಯ ಚಿತ್ರರಂಗವೇ ನಲುಗಿಹೋಗಿತ್ತು. ಈಗಲೂ ಕೊರೋನಾ ಹೊಡೆತದಿಂದ ಅದೆಷ್ಟೋ ಸಿನಿಮಾ(Movie)ಗಳು ತನ್ನ ರಿಲೀಸ್​ ದಿನಾಂಕವನ್ನು ಮೂಂದೂಡುತ್ತಿವೆ. ಜನವರಿ 7ರಂದು ವಿಶ್ವಾದಾದ್ಯಂತ ತೆರೆಕಾಣಬೇಕಿದ್ದ ಆರ್​​ಆರ್​ಆರ್(RRR)​​ ಸಿನಿಮಾ ಕೂಡ ತನ್ನ ರಿಲೀಸ್​ ದಿನಾಂಕವನ್ನು ಮುಂದೂಡಿಕೆ ಮಾಡಿದ್ದಾರೆ, ಆದರೆ, ಕೊರೋನಾದಿಂದ ಬಳಲಿ ಬೆಂಡಾಗಿದ್ದ ಮಲಾಯಳಂ ಚಿತ್ರರಂಗ(Malayalam Film Industry)ದಲ್ಲಿ ಈಗ ಹೊಸ ಆಶಯ ಮೂಡಿದೆ. ಕಿಕ್​ ಸ್ಟಾರ್ಟ್(Kick Start) ಸಿಕ್ಕಿದೆ. ಸಾಲು ಸಾಲು ಮಲಯಾಳಂ ಸಿನಿಮಾಗಳು ಜನರಿಗೆ ಇಷ್ಟವಾಗುತ್ತಿದೆ. ಜೊತೆಗೆ ಸಾಲು ಸಾಲು ಸಿನಿಮಾಗಳು ರಿಲೀಸ್​ಗೆ ಸಜ್ಜಾಗಿ ನಿಂತಿವೆ. ಇತ್ತೀಚೆಗೆ ತೆರೆಕಂಡ ಮಲಯಾಳಂ ಸಿನಿಮಾಗಳು ಸೂಪರ್​ ಹಿಟ್​ ಎನಿಸಿಕೊಂಡಿದೆ. ಜೊತೆಗೆ ಒಟಿಟಿ ಪ್ಲಾಟ್​ಫಾರ್ಮ್(OTT Platform)​ಗಳಲ್ಲೂ ಒಳ್ಳೆಯ ಅಭಿಪ್ರಾಯ ಪಡೆದುಕೊಂಡಿದೆ. ಮಲಯಾಳಂ ಸಿನಿರಂಗ ಮೈ ಕೊಡವಿ ಎದ್ದು  ನಿಂತಿದೆ. 

ಸಖತ್​ ಸೌಂಡ್ ಮಾಡಿದ್ದ ಕುರುಪ್​ ಸಿನಿಮಾ!

ದುಲ್ಕರ್ ಸಲ್ಮಾನ್ ಅಭಿನಯದ 'ಕುರುಪ್' ದೊಡ್ಡ ಕಲೆಕ್ಷನ್‌ನೊಂದಿಗೆ ಥಿಯೇಟರ್‌ಗಳಿಗೆ ಮರಳಿ ಜೀವಕಳೆ ತಂದುಕೊಟ್ಟತ್ತು. ಜೊತೆಗೆ ಒಟಿಟಿ ಪ್ಲಾಟ್​ಫಾರ್ಮ್​ಗಳ್ಲಿ ಬಿಡುಗಡೆಯಾದ ಚಲಚಿತ್ರಗಳು ಮಲಯಾಳಂ ಸಿನಿರಂಗಕ್ಕೆ ಆರ್ಥಿಖ ಲಾಭ ತಂದುಕೊಟ್ಟಿದೆ. 'ಮರಕ್ಕರ್' ಮತ್ತು 'ಕುರುಪ್' ನಂತಹ ದೊಡ್ಡ-ಬಜೆಟ್ ಚಲನಚಿತ್ರಗಳ ಜೊತೆಗೆ, 'ಜಾನ್-ಇ-ಮ್ಯಾನ್' ನಂತಹ ಸಣ್ಣ ಬಜೆಟ್​ನ ಚಲನಚಿತ್ರಗಳು ಸಹ ಚಿತ್ರಮಂದಿರಗಳಲ್ಲಿ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದಿವೆ. ದುಲ್ಕರ್​ ಅಭಿನಯದ ಕುರುಪ್​, ಮೋಹನ್​ ಲಾಲ್​ ಅಭಿನಯದ ಮರಕ್ಕರ್​ ಸಿನಿಮಾಗಳಿಂದ ಮಲಾಯಳಂ ಮತ್ತೆ ಪುರ್ನಜನ್ಮ ಬಂದಹಾಗೇ ಆಗಿದೆ.

ಇದನ್ನು ಓದಿ : ಅದೊಂದು ಪೂಜೆ ಮಾಡಿಸಿ ಅದೃಷ್ಟ ಲಕ್ಷ್ಮೀಯನ್ನು ಪಕ್ಕದಲ್ಲೇ ಕೂರಿಸಿಕೊಂಡ ರಶ್ಮಿಕಾ: ಈಕೆ ಮುಟ್ಟಿದ್ದೆಲ್ಲ ಚಿನ್ನವಂತೆ!

ಮುಂದಿನ 3 ತಿಂಗಳಲ್ಲಿ 50 ಸಿನಿಮಾಗಳು ರಿಲೀಸ್​!

ಫಿಲ್ಮ್ ಎಕ್ಸಿಬಿಟರ್ಸ್ ಯುನೈಟೆಡ್ ಆರ್ಗನೈಸೇಶನ್ ಆಫ್ ಕೇರಳ (FEUOK)  ಅಧ್ಯಕ್ಷ ಕೆ ವಿಜಯಕುಮಾರ್ ಮಾತನಾಡಿ, ಸಾಂಕ್ರಾಮಿಕ ರೋಗದ ನಂತರ ಕೇರಳದಲ್ಲಿ ಥಿಯೇಟರ್‌ಗಳಿಗೆ ಜೀವ ಕಳೆ ಬಂದಿವೆ. ಮುಂದಿನ ಮೂರು ತಿಂಗಳೊಳಗೆ ಸುಮಾರು 50 ಚಲನಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಫ್ಯೂಕ್ ಯೋಜಿಸುತ್ತಿದೆ. ಎಂದು ಅವರು ಹೇಳಿದ್ದಾರೆ. ಹೀಗಾಗಿ ಮಲಯಾಳಂ ಸಿನಿಮಾ ನೋಡುವವರಿಗೆ ಸಂತಸ ಮೂಡಿಸಿದೆ. ಹೌಸ್​ಫುಲ್ ಪ್ರದರ್ಶನಕ್ಕೆ ಅಲ್ಲಿನ ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು, ಈ ಬೆನ್ನಲ್ಲೇ ಮೋಹನ್​ ಲಾಲ್​ ಅಭಿನಯದ ಮರ್​ಕ್ಕರ್​​ ಸಿನಿಮಾ ಮೊದಲು ಬಿಡುಗಡೆಯಾಗಿತ್ತು. ಕಲೆಕ್ಷನ್​ ಕೂಡ ಭರ್ಜರಿಯಾಗಿ ಮಾಡಿತ್ತು.

ಇದನ್ನು ಓದಿ: Rashmika Mandanna-Vijay Deverakonda ನಡುವೆ ಸಂಥಿಂಗ್.. ಸಂಥಿಂಗ್​? ಒಟ್ಟಿಗೆ ಗೋವಾದಲ್ಲಿ ಇವ್ರು ಮಾಡಿದ್ದೇನು ನೀವೇ ನೋಡಿ...!

ಮತ್ತಷ್ಟು ಬೂಸ್ಟ್​ ಕೊಟ್ಟ ‘ಮಿನ್ನಲ್​ ಮುರುಳಿ’!

ಬಾಸಿಲ್ ಜೋಸೆಫ್ ನಿರ್ದೇಶನದ ಟೊವಿನೋ ಥಾಮಸ್ ಅಭಿನಯದ 'ಮಿನ್ನಲ್ ಮುರಳಿ' ಚಿತ್ರವು OTT ಪ್ಲಾಟ್‌ಫಾರ್ಮ್‌ನಲ್ಲಿ ಭಾರಿ ಹಿಟ್ ಆಗಿದೆ. ಸೂಪರ್​ ಹೀರೋ ಕಾನ್ಸೆಪ್ಟ್​ನಲ್ಲಿ ಬಂದಿರುವ ಈ ಸಿನಿಮಾ ಸಿನಿರಸಿಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಎಲ್ಲ ಭಾಷೆಗಳಲ್ಲೂ ಈಊ ಮಿನ್ನಲ್​ ಮುರುಳಿ ಸಿನಿಮಾ ಲಭ್ಯವಿದೆ. ಈ ಸಿನಿಮಾ ಇದೀಗ ನೆಟ್​ಫ್ಲಿಕ್ಸ್​ನಲ್ಲಿ ಸಿಗಲಿದೆ. ನೆಟ್​ಫ್ಲಿಕ್ಸ್​ನಲ್ಲೇ ಅತೀ ಹೆಚ್ಚು ವೀಕ್ಷಿಸಲ್ಪಟ್ಟ ಇಂಗ್ಲೀಷ್​ ಅಲ್ಲದ ನಾಲ್ಕನೇ ಚಿತ್ರವಾಗಿದೆ.
Published by:Vasudeva M
First published: