ಮಾಲಿವುಡ್‌ನ ಸೂಪರ್ ಸ್ಟಾರ್ (Super Star Mohanlal New Movie) ಮೋಹನ್‌ಲಾಲ್ ಹೊಸ ಪ್ರಯೋಗ ಮಾಡ್ತಾನೇ ಇರ್ತಾರೆ. ಕನ್ನಡದ ಶಿವರಾಜ್ ಕುಮಾರ್ ರೀತಿನೇ ಇವರೂ ಆ್ಯಕ್ಟಿವ್ ಆಗಿದ್ದಾರೆ. ವಯಸ್ಸು 62 ಆಗಿದೆ. ಆದರೂ (Mollywood Super Star Mohanlal) ಅದರ ಹಂಗೂ ಇಲ್ಲದೇ ಮೋಹನ್ ಲಾಲ್ ಭಾರೀ ಸಾಹಸವನ್ನೂ ಮಾಡ್ತಾನೆ ಇದ್ದಾರೆ. ಮೋಹನ್‌ಲಾಲ್ ಸಿನಿಮಾ ಜೀವನದಲ್ಲಿ ಇದೀಗ ಕುಸ್ತಿ ಪೈಲ್ವಾನ್ (Malaikottai Vaaliban Cinema) ಆಗಿರೋದು ವಿಶೇಷ ಆಗಿದೆ. ಮಲೈಕೋಟೈ ವಾಲಿಬನ್ ಹೆಸರಿನ ಈ ಚಿತ್ರದ ಆ ಒಂದೇ ಪೋಸ್ಟರ್ ಎಲ್ಲರೂ ಹುಬ್ಬೇರಿಸೋ ಹಾಗೆ ಮಾಡಿದೆ. ಅದೆಷ್ಟೋ ಜನ (Malaikottai Vaaliban Poster Viral) ಈ ಫೋಸ್ಟರ್ ಅನ್ನ ಶೇರ್ ಕೂಡ ಮಾಡಿದ್ದಾರೆ. ಹಾಗಾಗಿಯೇ ಈ ಒಂದು ಪೋಸ್ಟರ್ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಮಲೈಕೋಟೈ ವಾಲಿಬನ್ ಮೂಲ ಮೋಹನ್‌ಲಾಲ್ ಹೊಸ ಸಾಹಸ
ಮಲೈಕೋಟೈ ವಾಲಿಬನ್ ಸಿನಿಮಾ ಒಬ್ಬ ಕುಸ್ತಿಪಟು ಕಥೆ ಆಗಿದೆ. ತನ್ನ 60 ರ ದಶಕದಲ್ಲಿ ಚಿತ್ರದ ನಾಯಕ ಇಲ್ಲಿ ಕುಸ್ತಿಪಟು ಆಗಿರುತ್ತಾನೆ. ಭಾರೀ ಹೆಸರುವಾಸಿಯಾದ ಈ ಕುಸ್ತಿಪಟು ತನ್ನ ಆ ದಿನಗಳನ್ನ ಇಲ್ಲಿ ರಿಕಾಲ್ ಮಾಡಿಕೊಳ್ತಾರೆ.
ಹಾಗೆ ಸಾಗೋ ಈ ಕಥೆ ಇಂದು-ನಿನ್ನೆಯದಲ್ಲ. ಇದು ಪಿರಿಯೋಡಿಕಲ್ ಸಿನಿಮಾ ಆಗಿದೆ. ಇದಕ್ಕಾಗಿಯೇ ಮಲೆಯಾಳಂ ಸೂಪರ್ ಸ್ಟಾರ್ ಮೋಹನ್‌ಲಾಲ್ ಸಿಕ್ಕಾಪಟ್ಟೆ ತಯಾರಿ ಮಾಡಿಕೊಂಡಿದ್ದಾರೆ. ಹಾಗಾಗಿಯೇ 62 ರ ಮೋಹನ್‌ಲಾಲ್ ಇಲ್ಲಿ ವಿಭಿನ್ನವಾಗಿಯೇ ಕಾಣಿಸುತ್ತಿದ್ದಾರೆ.
ಮಲೈಕೊಟೈ ವಾಲಿಬನ್ ಚಿತ್ರದ ಪೋಸ್ಟರ್ ವೈರಲ್
ಮಲೈಕೋಟೈ ವಾಲಿಬನ್ ಸಿನಿಮಾದ ಆ ಒಂದೇ ಒಂದು ಪೋಸ್ಟರ್ ಗಮನ ಸೆಳೆಯುತ್ತಲೇ ಇದೆ. ಹಾಗೆ ಹೊರ ಬಂದ ಈ ಪೋಸ್ಟರ್‌ನಲ್ಲಿ ಮೋಹನ್‌ಲಾಲ್ ತಮ್ಮ ಎರಡೂ ಕೈಗಳಿಂದ ದಪ್ಪ ಹಗ್ಗ ಹಿಡಿದು ಎಳೆಯೋ ದೃಶ್ಯ ಇದೆ. ಅದನ್ನ ನೋಡಿದ ಜನ ಥ್ರಿಲ್ ಆಗುವಂತೇನೂ ಇದೆ.
ಮಲೈಕೋಟೈ ಸಿನಿಮಾದ ಚಿತ್ರೀಕರಣ ಈಗಾಗಲೇ ಶುರು ಆಗಿದೆ. ಜನವರಿ-18 ರಂದು ಚಿತ್ರದ ಚಿತ್ರೀಕರಣ ಕೂಡ ಶುರು ಆಗಿದೆ. ರಾಜಸ್ಥಾನ್ ಮತ್ತು ಜೈಸಲ್ಮೇರ್‌ನಲ್ಲೂ ಚಿತ್ರೀಕರಣ ನಡೆಯುತ್ತಲೇ ಇದೆ.
ಅದ್ಭುತ ಸೆಟ್‌ನಲ್ಲಿ ಮೋಹನ್‌ಲಾಲ್ ಸಿನಿಮಾ ಶೂಟಿಂಗ್
ಪಿರಿಯೋಡಿಕಲ್ ಕಥೆ ಹೊಂದಿರೋ ಈ ಚಿತ್ರಕ್ಕಾಗಿಯೇ ಅದ್ಭುತ ಸೆಟ್‌ಗಳನ್ನ ಕೂಡ ಹಾಕಲಾಗಿದೆ. ಅದೇ ಸೆಟ್‌ನಲ್ಲಿಯೇ ಚಿತ್ರದ ಶೂಟಿಂಗ್ ಕೂಡ ಮಾಡಲಾಗಿದೆ. ಚಿತ್ರದ ಒಂದು ವಿಶೇಷ ಟೀಸರ್ ಕೂಡ ರಿಲೀಸ್ ಆಗಿದೆ. ಈ ಟ್ರೈಲರ್‌ನಲ್ಲಿ ಸಿನಿಮಾದ ಒಂದಷ್ಟು ಝಲಕ್ ಸಿಗುತ್ತದೆ.
ಅಂದ್ಹಾಗೆ ಈ ಚಿತ್ರವನ್ನ ಲಿಜೋ ಜೋಸ್ ಪೆಲ್ಲಿಸೆರಿ ನಿರ್ದೇಶನ ಮಾಡಿದ್ದು, ಮೂಲ ಮಲೆಯಾಳಂ ಭಾಷೆಯಲ್ಲಿಯೇ ಈ ಚಿತ್ರ ತಯಾರಾಗುತ್ತದೆ. ಆದರೆ ಇದನ್ನ ಕನ್ನಡ, ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ ಡಬ್ ಕೂಡ ಮಾಡಲಾಗುತ್ತಿದೆ.
ಮಲೈಕೋಟೈ ವಾಲಿವನ್ ಚಿತ್ರದಲ್ಲಿ ಮೋಹನ್‌ಲಾಲ್ ಕುಸ್ತಿಪಟು
ಮಲೈಕೋಟೈ ವಾಲಿಬನ್ ಸಿನಿಮಾದಲ್ಲಿ ಒಬ್ಬ ಕುಸ್ತಿಪಟು ಕಥೆ ಇರೋದರಿಂದ ಇಲ್ಲಿ ಥ್ರಿಲ್ಲಿಂಗ್ ಕುಸ್ತಿಗಳನ್ನು ನೋಡಬಹುದಾಗಿದೆ. ಸಿನಿಮಾ ಪಿರಿಯೋಡಿಕಲ್ ಚಿತ್ರವೇ ಆಗಿರೋದ್ರಿಂದ, ಆ ಕಾಲದ ಕುಸ್ತಿಯ ಪಟ್ಟುಗಳನ್ನೂ ಇಲ್ಲಿ ಕಾಣಬಹುದಾಗಿದೆ.
ಸಿನಿಮಾದ ಪೋಸ್ಟರ್ ಮತ್ತು ಪುಟ್ಟ ಟೀಸರ್ ಈಗಾಗಲೇ ಗಮನ ಸೆಳೆದಿವೆ. ಮೋಹನ್‌ಲಾಲ್ ಜೊತೆಗೆ ಸೋನಾಲಿ ಕುಲಕರ್ಣಿ ಜೋಡಿ ಆಗಿದ್ದಾರೆ. ಇನ್ನು ಚಿತ್ರಕ್ಕೆ ಪ್ರಶಾಂತ್ ಪಿಲೈ ಸಂಗೀತ ನಿರ್ದೇಶನದ ಮಾಡಿದ್ದಾರೆ.
ಮಧು ನೀಲಕಂದನ್ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಇನ್ನುಳಿದಂತೆ ಚಿತ್ರದ ಪೋಸ್ಟರ್ ವೈರಲ್ ಆಗುತ್ತಲೇ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ