ಮಲಯಾಳಂ ಸುಂದರಿ ಅನಸ್ವರಾ ರಾಜನ್ ಇತ್ತೀಚೆಗಷ್ಟೇ ಶಾರ್ಟ್ಸ್ ಧರಿಸಿದ್ದ ಫೋಟೋವೊಂದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಅದನ್ನು ನೋಡಿದ ಟ್ರೋಲರ್ಗಳು ರೊಚ್ಚಿಗೆದ್ದು ಬಿಟ್ಟರು. 18 ವರ್ಷದ ಸುಂದರಿಯ ಬೆನ್ನು ಬಿದ್ದರು. ಶಾರ್ಟ್ಸ್ ಧರಿಸಿದ್ದು ಯಾಕೆ? ಇದೆಲ್ಲ ಬೇಕಾ ನಿನಗೆ? ಅಂತೆಲ್ಲ ಟ್ರೋಲ್ ಮಾಡತೊಡಗಿದರು. ಅದೇ ಶಾರ್ಟ್ಸ್ನಲ್ಲಿರುವ ಇನ್ನೂ ಕೆಲ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅನಸ್ವರಾ ರಾಜನ್, ಟ್ರೋಲ್ ಮಾಡುವವರಿಗೆ ಸಖತ್ ಪ್ರತಿಕ್ರಿಯೆ ನೀಡಿದ್ದರು. ನಾನೇನು ಮಾಡುತ್ತಿದ್ದೇನೆ ಎಂಬುದರ ಬಗ್ಗೆ ನೀವು ತಲೆ ಕೆಡಿಸಿಕೊಳ್ಳಬೇಡಿ. ಬದಲಾಗಿ ನಾನೇನು ಮಾಡುತ್ತಿದ್ದೇನೆ ಎಂಬುದರ ಬಗ್ಗೆ ನೀವ್ಯಾಕೆ ತಲೆಬಿಸಿ ಮಾಡಿಕೊಳ್ಳುತ್ತಿದ್ದೀರಿ ಅಂತ ಯೋಚಿಸಿ ಎಂದು ಟ್ರೋಲರ್ಗಳಿಗೆ ಬುದ್ಧಿ ಹೇಳಿದ್ದರು. ಹೀಗೆ ಹೊಸ ನಟಿಯನ್ನು ಟ್ರೋಲ್ ಮಾಡುತ್ತಿರುವುದನ್ನು ಕಂಡ ಮಾಲಿವುಡ್ ಸುಂದರಿಯರು ನಟಿ ಅನಸ್ವರಾ ರಾಜನ್ ಪರ ನಿಂತಿದ್ದಾರೆ.
ನಟಿಯರು ಶಾರ್ಟ್ಸ್ ಅಥವಾ ಯಾವುದೇ ಮಾಡರ್ನ್ ಬಟ್ಟೆ ತೊಟ್ಟರೂ ಟ್ರೋಲಿಗರು ಟ್ರೋಲ್ ಮಾಡುವುದು ಕಾಮನ್ ಆಗಿ ಹೋಗಿದೆ. ಆದರೆ ಈಗ ಮಾಲಿವುಡ್ನ ಉದಯೋನ್ಮುಖ ನಟಿಯನ್ನು ಟ್ರೋಲ್ ಮಾಡಿದ್ದಕ್ಕೆ, ಮಲಯಾಳದ ಇತರೆ ನಟಿಯರೂ ಆಕೆಯ ಬೆಂಬಲಕ್ಕೆ ನಿಂತಿದ್ದಾರೆ.
ಮಲಯಾಳಂನ ನಟಿಯರು ಈಗ ಶಾರ್ಟ್ಸ್ ಹಾಗೂ ಬಿಕಿನಿಯಲ್ಲಿರುವ ಫೋಟೋಗಳನ್ನು ಶೇರ್ ಮಾಡಿ, ನಮಗೂ ಕಾಲುಗಳಿವೆ ಎಂದು ಬೆಂಬಲಕ್ಕೆ ನಿಂತಿದ್ದಾರೆ. ಅನಸ್ವರಾ ರಾಜನ್ ಅವರ ಬೆಂಬಲಕ್ಕೆ ನಿಂತಿರುವ ಮಲಯಾಳದ ಸುಂದರಿ ರೀಮಾ ಕಲ್ಲಿಂಗಲ್, ತಮ್ಮ ಬಿಕಿನಿ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ಸರ್ಪ್ರೈಸ್... ಸರ್ಪ್ರೈಸ್, ಮಹಿಳೆಯರಿಗೂ ಕಾಲುಗಳಿವೆ ಎಂದು ಟ್ರೋಲ್ರಗಳ ಕಾಲೆಳೆದಿದ್ದಾರೆ.
ಇನ್ನು, ಮತ್ತೊಬ್ಬ ನಟಿ ಅನಾರ್ಕಲಿ ಮರಿಕರ್ ಕೂಡ ಶಾರ್ಟ್ ಸ್ಕರ್ಟ್ ಧರಿಸಿ ಕಾರ್ ಮೇಲೆ ಕುಳಿತಿರುವ ಫೋಟೋ ಶೇರ್ ಮಾಡಿ, ಅನಸ್ವರಾ ರಾಜನ್ಗೆ ಬೆಂಬಲ ಸೂಚಿಸಿದ್ದಾರೆ. ಹಾಗೇ ಮತ್ತೊಬ್ಬ ಸುಂದರಿ ಅಹಾನಾ ಕೃಷ್ಣ ಕೂಡ ಶಾರ್ಟ್ ಡ್ರೆಸ್ನಲ್ಲಿರುವ ಫೋಟೋ ಶೇರ್ ಮಾಡಿ ಟ್ರೋಲ್ರಗಳ ಕಿವಿ ಹಿಂಡುವ ಕೆಲಸ ಮಾಡಿದ್ದಾರೆ.
ನಾನೇನು ಧರಿಸುತ್ತೇನೆ ಎಂಬುದು ಮಾತ್ರವಲ್ಲ, ಯಾರು ಏನು ಧರಿಸುತ್ತಾರೆ ಎಂಬುದಕ್ಕೂ ನಿಮಗೂ ಸಂಬಂಧವಿಲ್ಲ. ನಿಮ್ಮ ಆಲೋಚನೆಗಳನ್ನು ನೋಡಿಕೊಳ್ಳಿ, ನಾವು ಧರಿಸುವ ಬಟ್ಟೆಗಳನ್ನಲ್ಲ ಎಂದು ಕಿವಿಮಾತು ಹೇಳಿದ್ದಾರೆ. ಅದೇ ರೀತಿಯಾಗಿ ಕನ್ನಡದಲ್ಲೂ ಮಿಂಚಿರುವ ಪಾರ್ವತಿ ಮೆನನ್, ಅಪೂರ್ವ ಬೋಸ್, ಅಮೇಯಾ ಮ್ಯಾಥ್ಯೂ, ಸೇರಿದಂತೆ ಇನ್ನೂ ಹಲವಾರು ಚೆಲುವೆಯರು ಅನಸ್ವರಾ ರಾಜನ್ ಬೆಂಬಲಕ್ಕೆ ನಿಂತಿದ್ದಾರೆ. ಜೊತೆಗೆ ಮಾಲಿವುಡ್ ನಟ ಫಹಾದ್ ಫಾಸಿಲ್ ಕೂಡ ಟ್ರೋಲರ್ಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ