ಮಲಯಾಳಂ (Malayalam ) ಸ್ಟಾರ್ ಹೀರೋ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಅವರ ಇತ್ತೀಚಿನ ಚಿತ್ರ ‘ಕಡುವ‘ (Kaduva) ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಇದರ ನಡುವೆ ಈ ಚಿತ್ರ ವಿವಾದಕ್ಕೆ ಸಿಲುಕಿದೆ. ಹೌದು, ಚಿತ್ರದಲ್ಲಿ ವಿಶೇಷ ಚೇತನ ಮಕ್ಕಳಿಗೆ ಅವಮಾನ ಆಗಿದೆ ಎಂದು ಚಿತ್ರದ ವಿರುದ್ಧ ರಾಜ್ಯ ಅಂಗವಿಕಲ ಮಕ್ಕಳ ಆಯುಕ್ತರಿಗೆ ದೂರು ನೀಡಿದ್ದಾರೆ. ಈ ದೂರನ್ನು ಸ್ವೀಕರಿಸಿದ ಆಯುಕ್ತರು ನಿರ್ದೇಶಕ ಶಾಜಿ ಕೈಲಾಶ್ ಜೊತೆಗೆ ಚಿತ್ರ ನಿರ್ಮಾಪಕರಿಗೆ ನೋಟಿಸ್ ಕಳುಹಿಸಿ ವಿವರಣೆ ಕೇಳಿದ್ದಾರೆ. ಈ ವಿಚಾರವಾಗಿ ನಿರ್ದೇಶಕ ಶಾಜಿ ಕೈಲಾಶ್ (Shaji Kailas) ಹಾಗೂ ಚಿತ್ರದ ನಾಯಕ ಪೃಥ್ವಿರಾಜ್ ಸುಕುಮಾರನ್ ಕ್ಷಮೆ ಯಾಚಿಸಿದ್ದಾರೆ. ನಟ ಪೃಥ್ವಿರಾಜ್ ಸುಕುಮಾರನ್ ಬಹಿರಂಗವಾಗಿ ಸಾಮಾಜಿಕ ಜಾಲತಾಣದ ಮೂಲಕ ಕ್ಷಮೆಯಾಚಿಸಿದ್ದಾರೆ. ಪೃಥ್ವಿರಾಜ್ ಸುಕುಮಾರನ್ ಕ್ಷಮೆ ಕೇಳಿರುವುದಕ್ಕೆ ನೆಟ್ಟಿಗರು ಮೆಚ್ಚಿಕೊಂಡಿದ್ದು, ಮುಂದಿನ ದಿನಗಳಲ್ಲಿ ನಿಮ್ಮ ಸಿನಿಮಾಗಳಲ್ಲಿ ಈ ರೀತಿ ತಪ್ಪಾಗದಂತೆ ಎಚ್ಚರವಹಿಸಿ ಎಂದು ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.
ಅಷ್ಟಕ್ಕೂ ಏನಾಯಿತು?:
ಹೌದು, ಪೃಥ್ವಿರಾಜ್ ಸುಕುಮಾರನ್ ಅಭಿನಯದ ‘ಕಡುವ‘ ಚಿತ್ರ ಕೆಲ ದಿನಗಳ ಹಿಂದೆ ಅಷ್ಟೇ ಬಿಡುಗಡೆ ಆಗಿತ್ತು. ರಿಲೀಸ್ ಆದ ಎಲ್ಲಡೆ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆಗಳು ದೊರೆಯುತ್ತಿವೆ. ಇದರ ನಡುವೆ ಚಿತ್ರದ ಒಂದು ದೃಶ್ಯ ಕೆವಲರಿಗೆ ಬೇಸರ ಉಂಟುಮಾಡಿದೆ. ಹೀಗಾಗಿ ಚಿತ್ರವು ವಿವಾದಲ್ಲಿ ಸಿಲುಕಿಕೊಂಡಿತು. ಅಷ್ಟಕ್ಕೂ ಅಂತಹ ದೃಶ್ಯ ಏನಿದೆ ಎಂದು ನೊಡುವುದಾದರೆ, ಈ ಸಿನಿಮಾದಲ್ಲಿ ವಿಶೇಷ ಚೇತನ ಮಕ್ಕಳಿಗೆ ಅವಮಾನಿಸುವ ಹಾಗೂ ಅವರ ಸಾಮರ್ಥ್ಯವನ್ನು ಕೀಳಾಗಿ ಕಾಣುವಂಥ ಕೆಲವು ಡೈಲಾಗ್‌ಗಳಿದ್ದು, ಕೂಡಲೇ ಅವುಗಳನ್ನು ತೆಗೆದುಹಾಕಬೇಕು ಎಂದು ಆಗ್ರಹಿಸಲಾಗಿದೆ.
ಸಿನಿಮಾದ ದೃಶ್ಯವೊಂದಲ್ಲಿ ವಿಶೇಷ ಚೇತನ ಮಕ್ಕಳ ಪೋಷಕರ ವಿರುದ್ಧ ಮಾತನಾಡಿರುವುದಾಗಿ ಕಂಡುಬಂದಿದೆ. ಆ ಒಂದು ಪ್ರಮುಖ ದೃಶ್ಯದಲ್ಲಿ ‘ ತಂದೆ-ತಾಯಿ ಮಾಡಿದ ತಪ್ಪಿನಿಂದಾಗಿ ಅಂಗವಿಕಲ ಮಕ್ಕಳು ಜನಿಸುತ್ತಾರೆ‘ ಎಂದು ಹೇಳಾಗಿದೆ. ಈ ಸಂಭಾಷಣೆ ಕುರಿತು ಇದೀಗ ವಿರೋಧ ವ್ಯಕ್ತವಾಗಿದೆ. ಹೀಗಾಗಿ ನಟ ಪ್ರಥ್ವಿರಾಜ್ ಸುಕುಮಾರನ್ ಹಾಗೂ ನಿರ್ದೇಶಕ ಶಾಜಿ ಕೈಲಾಸ್ ಕ್ಷಮೆಯಾಚಿಸಿದ್ದಾರೆ.
ಇದನ್ನೂ ಓದಿ: Anveshi Jain: ಟಾಲಿವುಡ್ಗೆ ಎಂಟ್ರಿ ಕೊಡ್ತಿದ್ದಾರೆ ಹಾಟ್ ಬ್ಯೂಟಿ, ಅಬ್ಬಾ ಇವಳ ನೋಟಕ್ಕೆ ಪಡ್ಡೆ ಹೈಕ್ಳು ಫುಲ್ ಸುಸ್ತು!
ತಮ್ಮ ತಪ್ಪಿನ ಅರಿವಾಗಿದ್ದು ಕ್ಷಮೆಯಾಚಿಸುತ್ತಿದ್ದೇವೆ:
ಈ ವಿವಾದ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಬೆನ್ನಲ್ಲೇ ನಟ ಪೃಥ್ವಿರಾಜ್ ಸುಕುಮಾರನ್ ಕ್ಷಮೆ ಕೇಳಿದ್ದು, ‘ತಮ್ಮ ತಪ್ಪಿನ ಅರಿವಾಗಿದ್ದು, ಕ್ಷಮೆಯಾಚಿಸುತ್ತಿದ್ದೇವೆ. ನಮ್ಮ ತಪ್ಪಿನ ಅರಿವಾಗಿದೆ‘ ಎಂದು ಬರೆದುಕೊಂಡಿದ್ದಾರೆ. ಆದರೆ ವಿಲನ್ ಪಾತ್ರ ಮತ್ತು ಅವನ ಕ್ರೂರತನವನ್ನು ಆ ಭಾವನೆಯನ್ನು ಬೆಳೆಸಲು ಈ ಸಂಭಾಷಣೆಯನ್ನು ಬಳಸಬೇಕಾಗಿತ್ತು ಮತ್ತು ಬೇರೇನೂ ಇಲ್ಲ ಎಂದು ತಿಳಿಸಿದ್ದಾರೆ. ಇದಲ್ಲದೇ ನಿರ್ದೇಶಕ ಶಾಜಿ ಕೈಲಾಸ್ ಸಹ ಸಂಪೂರ್ಣ ವಿವರಣೆಯನ್ನು ನೀಡಿ ಕ್ಷಮೆ ಕೇಳಿದ್ದು, ‘ಅಂಗವಿಕಲ ಮಕ್ಕಳ ಪೋಷಕರ ನೋವು ಏನು ಎಂಬುದು ನನಗೆ ಅರ್ಥ ಆಗುತ್ತದೆ. ನಮ್ಮಿಂದ ಆದ ತಪ್ಪಿಗೆ ನಾವು ಕ್ಷಮೆ ಕೇಳುತ್ತಿದ್ದೇವೆ‘ ಎಂದು ಹೇಳಿದ್ದಾರೆ. ಅಲ್ಲದೇ ಇವರು ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗವಾಗಿ ಬಂದು ಕ್ಷಮೆ ಕೇಳಿದ್ದಾರೆ.
Sorry. It was a mistake. We acknowledge and accept it. 🙏 pic.twitter.com/fl5zweAUIe
— Prithviraj Sukumaran (@PrithviOfficial) July 10, 2022
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ