ಮಲಯಾಳಂನ (Malayalam) ಖ್ಯಾತ ನಟ ಮತ್ತು ನಿರ್ದೇಶಕ ಪ್ರತಾಪ್ ಪೋಥೆನ್ (Pratap Pothen) ಇಂದು ಚೆನ್ನೈ (Chennai) ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮನೆ ಕೆಲಸಕ್ಕೆ ಬಂದವರು ಪ್ರತಾಪ್ ಪೋಥೆನ್ ಅವರ ಮೃತ ದೇಹವನ್ನು ಬೆಡ್ ರೂಂ ನಲ್ಲಿ ನೋಡಿ ಪೊಲೀಸರಿಗೆ (Police) ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿಂತೆ ತನಿಖೆ ಆರಂಭಿಸಿದ್ದಾರೆ. ಪ್ರತಾಪ್ ಪೋಥೆನ್ ಅವರ ಸಾವು ಮಲಯಾಳಂ ಚಿತ್ರರಂಗಕ್ಕೆ ತುಂಬಲಾಗದ ನಷ್ಟವಾಗಿದೆ ಎಂದು ಗಣ್ಯರು ಹೇಳುತ್ತಿದ್ದು, ಇವರ ನಿಧನಕ್ಕೆ ಅನೇಕ ಸಿನಿ ಗಣ್ಯರು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸುತ್ತಿದ್ದಾರೆ. ಪ್ರತಾಪ್ ಪೋಥೆನ್ ಈವರೆಗೆ ಸುಮಾರು 12 ಸಿನಿಮಾಗಳನ್ನು (Movies) ನಿರ್ದೇಶನ ಮಾಡಿದ್ದಾರೆ.
ಖ್ಯಾತ ನಿರ್ದೇಶಕ-ನಟರಾಗಿದ್ದ ಪ್ರತಾಪ್ ಪೋಥೆನ್:
ಹೌದು, ಪ್ರತಾಪ್ ಪೋಥೆನ್ ಮೂಲತಃ ಕೇರಳದವರಾಗಿದ್ದಾರೆ. ಇವರು 100ಕ್ಕೂ ಹೆಚ್ಚು ಮಲಯಾಳಂ, ಹಿಂದಿ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಇವರು 12 ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. 1979ರಲ್ಲಿ ಆರವ್ ಸಿನಿಮಾ ಮೂಲಕ ಪ್ರತಾಪ್ ಪೋಥೆನ್ ತಮ್ಮ ಸಿನಿ ಜರ್ನಿಯನ್ನು ಆರಂಭಿಸಿದರು. ಇದಾದ ಬಳಿಕ ಅನೇಕ ಸಿನಿಮಾಗಳಲ್ಲಿ ನಟಿಸಿದ ಇವರಿಗೆ 1980ರಲ್ಲಿ ತೆರೆಕಂಡ ಲೋರಿ ಮತ್ತು ಚಮರಮ್ ಚಿತ್ರಗಳು ದೊಡ್ಡ ಮಟ್ಟದ ಯಶಸ್ಸನ್ನು ನೀಡಿತು.
Rest in peace uncle! I will miss you. 💔#PrathapPothen pic.twitter.com/bJcKNWpWgP
— Prithviraj Sukumaran (@PrithviOfficial) July 15, 2022
ಇದನ್ನೂ ಓದಿ: Rashmika Mandanna: ಮನೆಗೆ ಹೊಸ ಅತಿಥಿ ಕರೆ ತಂದ ರಶ್ಮಿಕಾ! ಸದ್ಯಕ್ಕೆ ಇದೇ ಈಕೆಯ ಕ್ರಶ್ ಅಂತೆ
ಪ್ರತಾಪ್ ಪೋಥೆನ್ ವೈಯಕ್ತಿಕ ಜೀವನ:
ಪ್ರತಾಪ್ ಪೋಥೆನ್ ಅವರು ಕೇರಳದ ತಿರುವನಂತಪುರಂನಲ್ಲಿ ಜನಿಸಿದರು. ಬಳಿಕ ಅಲ್ಲಿನ ಊಟಿ ಬೋರ್ಡಿಂಗ್ ಸ್ಕೂಲ್‌ನಲ್ಲಿ ತಮ್ಮ ವಿಧ್ಯಾಭ್ಯಾಸವನ್ನು ಮುಗಿಸಿದರು. ಇದಾದ ಬಳಿಕ ಮುಂಬೈನ ರಂಗಭೂಮಿಯಲ್ಲಿ ತಮ್ಮ ನಟನೆಯ ಆರಂಭಿಕ ಜೀವನವನ್ನು ಆರಂಭಿಸಿದರು. ಇಲ್ಲಿ ಅವರು 100ಕ್ಕೂ ಹೆಚ್ಚಿನ ನಾಟಕಗಳಲ್ಲಿ ಬಣ್ಣ ಹಚ್ಚಿದ್ದರು. ಇದಾದ ಬಳಿಕ ಅವರು ಸಿನಿಮಾ ರಂಗದತ್ತ ಮುಖ ಮಾಡಿದರು.
ಪ್ರತಾಪ್ ಪೋಥೆನ್ 1985ರಲ್ಲಿ ನಟಿ ರಾಧಿಕಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ ವಿವಾಹವಾಗಿ ಒಂದು ವರ್ಷಕ್ಕೆ ಇವರಿಬ್ಬರ ನಡುವಿನ ಭಿನ್ನಾಭಿಪ್ರಾಯದ ಕಾರಣ ವಿಚ್ಛೇದನ ಪಡೆದು ದೂರವಾದರು. ಇದಾದ ಬಳಿಕ ಪ್ರತಾಪ್ 1990ರಲ್ಲಿ ಅಮಲಾ ಸತ್ಯನಾಥ್ ಜೊತೆ 2ನೇ ವಿವಾಹವಾದರು. 1991ರಲ್ಲಿ ಈ ಜೋಡಿಗೆ ಹೆಣ್ಣು ಮಗು ಸಹ ಜನಿಸಿತು. ಆದರೆ ಮದುವೆಯಾಗಿ 22 ವರ್ಷಗಳ ಬಳಿಕ ಇವರಿಬ್ಬರೂ ವಿಚ್ಛೇದನ ಪಡೆದರು.
ಪ್ರತಾಪ್ ವೃತ್ತಿ ಜೀವನ:
ಇನ್ನು, ಪ್ರತಾಪ್ ಪೋಥೆನ್ ಅವರ ನಟನೆ ಮತ್ತು ನಿರ್ದೇಶನಕ್ಕಾಗಿ ಒಟ್ಟು 3 ಬಾರಿ ಫಿಲ್ಮ್ಫೇರ್ ಪ್ರಶಸ್ತಿ ದೊರಕಿದೆ. ಅದಲ್ಲದೇ ಅವರ ನಿರ್ದೇಶನದ ಮೀಂದು ಒರು ಕಾದಲ್ ಕಥೈ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಸಹ ಲಭಿಸಿತ್ತು. ಇವರು ಕೊನೆಯದಾಗಿ ಸಿಬಿಐ5 ದಿ ಬ್ರೇನ್ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಪ್ರತಾಪ್ ಅವರು, ಪಪ್ಪು, ಅರವಂ, ಕನಲ್, ಜೀವಾ, ವೇಗಂ, ಆಥಂ, ಪೋರೆನ್ಸಿಕ್ ಸೇರಿದಂತೆ 100ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ